For Quick Alerts
ALLOW NOTIFICATIONS  
For Daily Alerts

ಮುಟ್ಟಿನ ರಕ್ತದಿಂದ ಮುಖಕ್ಕೆ ರಂಗು ಹಚ್ಚಿಕೊಳ್ಳುತ್ತಾಳೆ ಈ ’ರಕ್ತ ಮಾಟಗಾತಿ’!!

|

ಮಾಸಿಕ ಸ್ರಾವದ ಬಗ್ಗೆ ಕೇಳಿದಾಗ ನಾವು ಈ ಬಗ್ಗೆ ಅಸಹ್ಯ ಹಾಗೂ ಯಾರಿಗೂ ತೋರಬಾರದ ಕೆಟ್ಟರಕ್ತವೆಂದೇ ಪರಿಗಣಿಸುತ್ತೇವೆ ಹಾಗೂ ಸಾಧ್ಯವಾದಷ್ಟು ಯಾರ ಕಣ್ಣಿಗೂ ಬೀಳದಂತೆ ಎಚ್ಚರ ವಹಿಸುತ್ತೇವೆ. ಆದರೆ ಈ ರಕ್ತ ಅಪವಿತ್ರವಲ್ಲ ಎಂದು ಸಾಬೀತುಗೊಳಿಸಲು ಕೆಲವು ವ್ಯಕ್ತಿಗಳು ಚಿತ್ರವಿಚಿತ್ರ ಪ್ರಯತ್ನಗಳನ್ನು ನಡೆಸುತ್ತಾರೆ. ಆದರೆ ವಿಶ್ವದ ಗರಿಷ್ಠ ಪ್ರಮಾಣದ ಮಹಿಳೆಯರು ಈ ಬಗ್ಗೆ ಗೌಪ್ಯತೆಯನ್ನು ಕಾಪಾಡಲು ಬಯಸುತ್ತಾರೆ! ಆದರೆ ಈ ಸ್ರಾವವನ್ನು ಅಪವಿತ್ರ ಎನ್ನುವ ಬದಲು ಇತರರನ್ನು ಹೆದರಿಸಲು ಬಳಸಿದರೆ?

ಹೌದು, 'ಯಾಜ್ಮೀನಾ ಜೇಡ್' ಎಂಬ ಹೆಸರಿನ ಈ ಮಹಿಳೆ ತನ್ನ ಮಾಸಿಕ ಸ್ರಾವದ ರಕ್ತವನ್ನು ಸಂಗ್ರಹಿಸಿ ತನ್ನ ತ್ವಚೆಯ ಮೇಲೆ ಕಲಾತ್ಮಕವಾಗಿ ಹಚ್ಚಿಕೊಂಡು ಪ್ರಕಟಿಸುತ್ತಾಳೆ ಹಾಗೂ ಈ ಕ್ರಿಯೆಯನ್ನು 'ಪವಿತ್ರ ಆಚರಣೆ'ಯನ್ನಾಗಿ ಪರಿಗಣಿಸುತ್ತಾಳೆ. ಈ ಮೂಲಕ ತನ್ನ ದೇಹವನ್ನು ಮತ್ತೆ ಮರುಸಂಪರ್ಕಕ್ಕೆ ಒಳಪಡಿಸಬಹುದಂತೆ. ಅರ್ಥವಾಗಲಿಲ್ಲವೇ? ನಿಮಗೆ ಮಾತ್ರವಲ್ಲ, ಹೆಚ್ಚಿನವರಿಗೆ ಯಾರಿಗೂ ಅರ್ಥವಾಗದ ಈ ಕ್ರಿಯೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ನೀಡಲಾಗಿದೆ....

’ಯಾಜ್ಮೀನಾ ಜೇಡ್’ ರನ್ನು ಭೇಟಿಯಾಗಿ

’ಯಾಜ್ಮೀನಾ ಜೇಡ್’ ರನ್ನು ಭೇಟಿಯಾಗಿ

ಈಕೆ ಹಿಂದೆ ಓರ್ವ ಕೇಶಶೃಂಗಾರದ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ವೃತ್ತಿ ಪರಳಾಗಿದ್ದಳು. ಈಕೆ ತನ್ನದೇ ಮಾಸಿಕ ಸ್ರಾವದ ರಕ್ತವನ್ನೆಲ್ಲಾ ಸಂಗ್ರಹಿಸಿ ತನ್ನದೇ ಮುಖಕ್ಕೆ ಹಚ್ಚಿಕೊಳ್ಳುವ ಮೂಲಕ ತಾನು 'ಪವಿತ್ರ ಆಚರಣೆ'ಯನ್ನು ಅನುಸರಿಸುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಾಳೆ.

ರಕ್ತವನ್ನು ತನ್ನ ಮುಖಕ್ಕೆಲ್ಲಾ ಹಚ್ಚಿಕೊಳ್ಳುತ್ತಾಳೆ

ರಕ್ತವನ್ನು ತನ್ನ ಮುಖಕ್ಕೆಲ್ಲಾ ಹಚ್ಚಿಕೊಳ್ಳುತ್ತಾಳೆ

ಈಕೆ ತನ್ನದೇ ರಕ್ತವನ್ನು ಮುಖಕ್ಕೆಲ್ಲಾ ಹಚ್ಚಿಕೊಳ್ಳುತ್ತಾಳೆ. ಈ ವಿಧಾನದ ಮೂಲಕ ತನ್ನದೇ ದೇಹವನ್ನು ಮರುಸಂಪರ್ಕಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಾಳೆ.

ತನ್ನ ಕ್ರಿಯೆಯನ್ನು ವೀಡಿಯೋ ಮಾಡಿ ಪ್ರಕಟಿಸಿದ್ದಾಳೆ

ತನ್ನ ಕ್ರಿಯೆಯನ್ನು ವೀಡಿಯೋ ಮಾಡಿ ಪ್ರಕಟಿಸಿದ್ದಾಳೆ

ಸ್ವಘೋಷಿತ 'ರಕ್ತ ಮಾಟಗಾತಿ'ಯಾದ ಈಕೆ ತನ್ನನ್ನು ತಾನು 'ಸ್ತ್ರೀ ವೈದ್ಯೆ' ಎಂದೂ ಹೇಳಿಕೊಳ್ಳುತ್ತಾಳೆ ಹಾಗೂ ತನ್ನ ಈ ಕ್ರಿಯೆಯನ್ನು ಒಂದು ಪವಿತ್ರ ಕಾರ್ಯದಂತೆ ಬಣ್ಣಿಸಿ ವೀಡಿಯೋ ಕೂಡಾ ಚಿತ್ರೀಕರಿಸಿ ಪ್ರಕಟಿಸಿದ್ದಾಳೆ. ಈ ಮೂಲಕ ಮಾಸಿಕ ಸ್ರಾವ ಅಪವಿತ್ರವಲ್ಲ, ಈ ಬಗ್ಗೆ ಯಾರೂ ನಾಚಿಕೆಪಡಬೇಕಾಗಿಲ್ಲ ಎಂದು ಸಾಬೀತುಪಡಿಸಲು ಯತ್ನಿಸುತ್ತಿದ್ದಾಳೆ.

ಆಕೆಯ ನಂಬಿಕೆ

ಆಕೆಯ ನಂಬಿಕೆ

ಆಕೆಯ ಪ್ರಕಾರ ಮಾಸಿಕ ಸ್ರಾವ ನೈಸರ್ಗಿಕವಾಗಿದ್ದು ಇದಕ್ಕೆ ಯಾರೂ ನಾಚಿಕೆ ಪಡಬೇಕಾಗಿಲ್ಲ. ಇಂದಿನ ದಿನಗಳಲ್ಲಿ ಈ ಬಗ್ಗೆ ಹಲವರಲ್ಲಿ ಗೊಂದಲವಿದೆ ಹಾಗೂ ಈ ಕ್ರಿಯೆಯನ್ನು ಮಹಿಳೆಯರ 'ಗೌಪ್ಯ ಕಾರ್ಯ' ಎಂದೇ ಪರಿಗಣಿಸಲಾಗುತ್ತಿದೆ.

ಈಕೆಯ ಪ್ರಕಟಣೆ

ಈಕೆಯ ಪ್ರಕಟಣೆ

ಮಾಧ್ಯಮಗಳಲ್ಲಿ ನೀಡಿರುವ ಪ್ರಕಟಣೆ ಹೀಗಿದೆ: "ಈ ಪವಿತ್ರ ಆಚರಣೆಯ ಮೂಲಕ ನಾನು ನನ್ನದೇ ದೇಹದೊಂದಿಗೆ ಮರುಸಂಪರ್ಕ ಪಡೆಯುತ್ತಿದ್ದೇನೆ. ಓರ್ವ ಮಹಿಳೆಯಾಗಿ, ಸಾಮಾಜಿಕ ನಾಚಿಕೆಯ ಕಾರಣ ನಾವು ನಮ್ಮದೇ ದೇಹದಿಂದ ಬೇರ್ಪಟ್ಟಿದ್ದೇವೆ. ನನ್ನ ಸ್ರಾವವನ್ನು ನಾನು ಮುಖಕ್ಕೆ ಹಚ್ಚಿಕೊಳ್ಳುವ ಮೂಲಕ ಹಾಗೂ ಇದರ ರುಚಿ ನೋಡುವ ಮೂಲಕ ನನ್ನದೇ ದೇಹದ ಭಾಗವನ್ನು ಮತ್ತೆ ಪಡೆದುಕೊಳ್ಳುತ್ತಿದ್ದೇನೆ. ಈ ಮೂಲಕ ನನ್ನ ದೇಹ ಪರಿಪೂರ್ಣವಾಗಿ ನನ್ನದೇ ಆಗಿದೆ ಎಂಬ ಅನುಭೂತಿಯನ್ನು ಅನುಭವಿಸುತ್ತೇನೆ" ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? ನಿಮ್ಮ ಅನಿಸಿಕೆಗಳು ನಮಗೆ ಅಮೂಲ್ಯವಾಗಿದ್ದು ನಮ್ಮೊಂದಿಗೆ ದಯವಿಟ್ಟು ಹಂಚಿಕೊಳ್ಳಿ.

Image Courtesy

English summary

“Blood Witch” Who Paints Her Face With Menstrual Blood!

The moment we hear the term menstrual blood, we feel disgusted. Though there are so many people out there who come out and show the world that menstrual blood is not impure in different ways, it does make most of us still uncomfortable! But what happens when somebody dares to show the world about their menstrual blood being sacred instead of impure? Check out this bizarre incident where the world is going crazy with her stint.
X
Desktop Bottom Promotion