ರಾಶಿ ಭವಿಷ್ಯ: ನಿಮ್ಮವರ ಮುಂದೆ ನಿಮ್ಮ ವರ್ತನೆ ಹೀಗಿದ್ದರೆ ಒಳಿತು

By: Divya pandith
Subscribe to Boldsky

ಸ್ನೇಹಿತರು, ಬಂಧುಗಳು, ಆಪ್ತರು ಹಾಗೂ ತಂದೆ ತಾಯಿಗಳು ಹೀಗೆ ವಿಭಿನ್ನ ವ್ಯಕ್ತಿಗಳು ಎದುರಾದಾಗ ನಮ್ಮ ವರ್ತನೆ ಹಾಗೂ ಮಾತಿನ ಪರಿಗಳು ವಿಭಿನ್ನವಾಗಿಯೇ ಇರುತ್ತವೆ. ನಾವು ತೋರಿಸುವ ಪ್ರೀತಿ, ಕಾಳಜಿ ಹಾಗೂ ಸಂಭಾಷಣೆ ಎಲ್ಲವೂ ವಿಭಿನ್ನವಾಗಿರುತ್ತವೆ. ಸ್ನೇಹಿತರು ಸಿಕ್ಕಾಗ ಬಲು ಸಲುಗೆಯಿಂದ, ಬಂದು ಬಾಂಧವರು ಸಿಕ್ಕಾಗ ಪ್ರೀತಿ ವಾತ್ಸಲ್ಯದಿಂದ ಹಾಗೂ ತಂದೆ ತಾಯಿಗಳು ಬಂದಾಗ ಗೌರವದಿಂದ ವರ್ತಿಸುತ್ತೇವೆ.

ಈ ಐದು ಜನ್ಮರಾಶಿಗಳಲ್ಲಿ ಜನಿಸಿದವರು-ಎಲ್ಲರಂತೆ ಆಲೋಚಿಸುವುದಿಲ್ಲವಂತೆ!

ಪಾಲಕರು/ತಂದೆ ತಾಯಿಯರ ಮನಸ್ಸು ನೋವಾಗದಂತೆ ವರ್ತಿಸುವುದು ಸಹಜ. ಆದರೆ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಪಾಲಕರ ಎದುರು ವರ್ತಿಸುವಾಗ ಅವರ ವರ್ತನೆಯಲ್ಲಿ ರಾಶಿ ಚಕ್ರದ ಪ್ರಭಾವ ಇರುತ್ತದೆ ಎಂದು ಹೇಳಲಾಗುತ್ತದೆ. ಇದೊಂದು ಬಗೆಯ ಆಶ್ಚರ್ಯಕರ ವಿಷಯ ಎನಿಸಿದರೂ ಇದು ನಿಜ. ರಾಶಿಗಳಿಗೆ ಅನುಗುಣವಾಗಿ ತಮ್ಮ ಪಾಲಕರನ್ನು ಮತ್ತು ಪ್ರೇಮಿಗಳನ್ನು ಮೊದಲ ಬಾರಿಗೆ ಭೇಟಿಯಾಗುತ್ತಿದ್ದರೆ ಯಾವ ರೀತಿ ವರ್ತಿಸಬೇಕು ಎನ್ನುವುದನ್ನು ನಾವಿಲ್ಲಿ ತಿಳಿಸಿದ್ದೇವೆ. ನಿಮಗೂ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದಿನ ವಿವರಣೆಯನ್ನು ಓದಿ... 

ಮೇಷ

ಮೇಷ

ಸ್ಪರ್ಧಾತ್ಮಕ ಭಾವನೆಯನ್ನು ನೀವು ಹೊಂದಿದ್ದರೆ ಉತ್ತಮವಾದದ್ದನ್ನು ನೀವು ಪಡೆದುಕೊಳ್ಳದೆ, ಹುರುಪು ಮತ್ತು ಉತ್ಸಾಹ ಮತ್ತು ಪ್ರಕಾಶವನ್ನು ಪ್ರದರ್ಶಿಸಲು ಕೆಲಸ ಮಾಡಬೇಕಾಗುತ್ತದೆ. ನಿಮಗೆ ಒಪ್ಪಿಗೆ ಇಲ್ಲದ ವಿಚಾರದ ಬಗ್ಗೆ ಸಂಪೂರ್ಣವಾಗಿ ಒಪ್ಪಿಕೊಳ್ಳುವ ಅಗತ್ಯವಿರುರುವುದಿಲ್ಲ. ಆಗದ ಕೆಲಸವನ್ನು ಇನ್ನೊಂದು ಬಾರಿಗಾಗಿ ಬಿಟ್ಟುಬಿಡಿ.

ವೃಷಭ

ವೃಷಭ

ಈ ರಾಶಿಯವರು ಸೊಗಸಾದ ರುಚಿ ಮತ್ತು ಅಲಂಕಾರಿ, ಫ್ಯಾಷನ್‍ಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ನೀವು ಮಾಡಬೇಕಾದ ಕೆಲಸಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ. ಮುಂದೆ ಏನಾಗುತ್ತದೆ ಎನ್ನುವುದರ ಬಗ್ಗೆ ಹೆಚ್ಚು ಚಿಂತಿಸದೆ ಋಣಾತ್ಮಕ ಭಾವದಿಂದ ಇರಿ.

ಮಿಥುನ

ಮಿಥುನ

ಈ ರಾಶಿಚಕ್ರದವರು ಸಂಭಾಷಣೆ ನಡೆಸುವಾಗ ಯಾವುದೇ ಅಡೆಚಣೆ ಇಲ್ಲದೆ ಮುಂದುವರಿಸಬಹುದು. ಮೊದಲ ಭೇಟಿಯಲ್ಲಿ ನಿಮಗೆ ಸದಾ ಯಶಸ್ಸು ದೊರೆಯುತ್ತದೆ. ನೀವು ಮೊದಲು ಎದುರಿನವರು ಏನು ಹೇಳುತ್ತಾರೆ ಎನ್ನುವುದನ್ನು ಕೇಳಿಸಿಕೊಂಡು ನಂತರ ಮಾತನಾಡಿ.

ಕರ್ಕ

ಕರ್ಕ

ಇವರು ಕುಟುಂಬವನ್ನು ಪೂಜಿಸುತ್ತಾರೆ. ಹೊಸದನ್ನು ಪಡೆದುಕೊಳ್ಳಲು ಆತುರ ಬೇಡ. ನಿಮ್ಮ ಪೋಷಣೆಯ ಸ್ವಭಾವವನ್ನು ತೋರಿಸಿಕೊಳ್ಳಲು ಹೋಗಿ ಎಡವದಿರಿ. ನಿಮ್ಮ ಪ್ರೇಮಿಗಳು ಸ್ಪರ್ಧಾತ್ಮಕ ಗುಣವನ್ನು ಹೊಂದಿರುವುದಿಲ್ಲ. ನೀವು ಅವರನ್ನು ಸಂದರ್ಶನದುದ್ಧಕ್ಕೂ ಅವರೆಡೆಗೆ ಗಮನ ನೀಡಬೇಕು.

ಸಿಂಹ

ಸಿಂಹ

ಇವರು ಸದಾ ಉತ್ತಮ ಪ್ರದರ್ಶನ ನೀಡಲು ಬುಸುತ್ತಾರೆ. ಜೊತೆಗೆ ಮನರಂಜನೆಗೆ ಸದಾ ಸಿದ್ಧರಾಗಿರುತ್ತಾರೆ. ಆದರೆ ಪೋಷಕರು ನಿಮ್ಮ ಪ್ರದರ್ಶನವನ್ನು ಇಷ್ಟ ಪಡುವುದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಅವರು ನಿಮ್ಮ ತನವನ್ನು ನೋಡಲು ಇಷ್ಟಪಡುತ್ತಾರೆ. ಹೃದಯದ ಮಾತನ್ನು ಕೇಳಿ. ಪಾಲಕರನ್ನು ಗೌರವಿಸಿ.

ಕನ್ಯಾ

ಕನ್ಯಾ

ಇವರು ತಾವೇ ಕಿರೀಟ ಧರಿಸಿರುವವರಂತೆ ವರ್ತಿಸುತ್ತಾರೆ. ಇವರು ಆಹಾರ ಹಾಗೂ ಪಾನೀಯಗಳ ತಯಾರಿಕೆಯಲ್ಲಿ ಸಹಾಯ ಮಾಡಲು ಉತ್ಸುಕರಾಗಿರುತ್ತಾರೆ. ಇದಕ್ಕಾಗಿ ಅಡುಗೆ ಮನೆಯಲ್ಲಿ ಅಡಗಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

ತುಲಾ

ತುಲಾ

ಆಕರ್ಷಕ ಹಾಗೂ ರಾಜತಾಂತ್ರಿಕ ಗುಣವನ್ನು ಹೊಂದಿರುವ ನೀವು ಎಲ್ಲರನ್ನೂ ಪ್ರೀತಿಯಿಂದ ಕಾಣಲು ಪ್ರಯತ್ನಿಸುತ್ತೀರಿ. ಕೆಲವು ವಿಚಾರಗಳಿಗೆ ನೀವು ಪರಿಪೂರ್ಣರಾಗಿರುವುದು ಅಥವಾ ಎಲ್ಲಾ ಸಂಗತಿಗಳನ್ನು ಒಪ್ಪಿಕೊಳ್ಳಬೇಕಾದ ಅಗತ್ಯವಿಲ್ಲ. ಹೀಗೆ ಮಾಡಿದರೆ ನೀವು ಪ್ರಾಮಾಣಿಕರಾಗಿ ಕಾಣಿಸಿಕೊಳ್ಳಲು ಕಷ್ಟ.

ಧನು

ಧನು

ಸದಾ ಹಾಸ್ಯ ಪ್ರವೃತ್ತಿಯಲ್ಲಿರುವ ನೀವು ಉತ್ಸಾಹದಿಂದಲೇ ಎಲ್ಲ ಕೆಲಸವನ್ನು ನಿರ್ವಹಿಸುತ್ತೀರಿ. ಹಾಗಾಗಿ ಸಂಭಾಷಣೆ ನಡೆಸಲು ನಿಮಗೆ ಯಾವುದೇ ತೊಂದರೆ ಉಂಟಾಗದು. ಆದರೆ ವೈಯಕ್ತಿಕವಾಗಿ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಸ್ವಲ್ಪ ಯೋಚಿಸಿ ಮಾತನಾಡಬೇಕು. ನಿಮ್ಮ ನೇರ ನುಡಿಯನ್ನು ಎಲ್ಲರೂ ಇಷ್ಟ ಪಡುವುದಿಲ್ಲ.

ಮಕರ

ಮಕರ

ನಿಮ್ಮ ವರ್ತನೆಯು ನಿಮಗೆ ಸಾಮಾಜಿಕ ಆಸ್ತಿ ಎಂಬುದನ್ನು ನೀವು ಹೇಗೆ ಪರಿಗಣಿಸುತ್ತೀರಿ ಎನ್ನುವುದರ ಆಧಾರದ ಮೇಲೆ ವರ್ತನೆ ಅವಲಂಬಿತವಾಗಿರುತ್ತದೆ. ಧನಾತ್ಮಕ ಚಿಂತನೆಯಿಂದ ಕೂಡಿದ್ದರೆ ಮಾತ್ರ ನೀವು ಆಕರ್ಷಿತರಾಗಿರುತ್ತೀರಿ. ಇಲ್ಲದಿದ್ದರೆ ನೀವು ಮುಗ್ಗರಿಸುವ ಸಾಧ್ಯತೆಯೇ ಹೆಚ್ಚು.

ಕುಂಬ

ಕುಂಬ

ನಿಮ್ಮ ವಯಸ್ಸಿಗೆ ಸಂಬಂಧಿಸದ ಕೆಲಸವಾಗಿದ್ದರೂ, ವೃತ್ತಿಯಲ್ಲಿ ಮುಂದೆ ಸಾಗಲು ಬಯಸುತ್ತೀರಿ. ನಿಮ್ಮ ಮುಂದಿನ ಜೀವನಕ್ಕೆ ನಿಮ್ಮ ಮಾರ್ಗವನ್ನು ಇತರರೊಂದಿಗೆ ಹಂಚಿಕೊಳ್ಳುತ್ತೀರೋ ಇಲ್ಲವೋ ಎನ್ನುವುದನ್ನು ಕಂಡು ಹಿಡಿಯುವವರೆಗೂ ನಿಧಾನವಾಗಿ ಚಲಿಸುತ್ತಲೇ ಇರುತ್ತೀರಿ.

ಮೀನ

ಮೀನ

ನಿಮ್ಮ ಸಂಗಾತಿಯ ಹೆತ್ತವರು ಏನಾಗಿರಬೇಕು ಎನ್ನುವುದನ್ನು ನೀವು ಮನಸ್ಸಿನಲ್ಲೇ ಚಿತ್ರಣವನ್ನು ಹೊಂದಿರುತ್ತೀರಿ. ನಿಮ್ಮ ನಿರೀಕ್ಷೆಯಂತೆ ಇರದಿದ್ದರೆ ಅಸಮಧಾನಕ್ಕೆ ಒಳಗಾಗಬಾರದು ಎನ್ನುವುದನ್ನು ಕಚಿತಪಡಿಸಿಕೊಳ್ಳಿ. ನಿಮ್ಮಿಂದ ಉತ್ತರವನ್ನು ಬಯಸುತ್ತಿರುವಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸದಿರಿ. ಸರಿಯಾದ ಹೊಂದಾಣಿಕೆ ಹಾಗೂ ಸರಳ ಮಾರ್ಗದಲ್ಲಿ ಹೋಗಲು ಚಿಂತಿಸಿ.

English summary

zodiac-sign-needs-to-do-when-they-meet-parents-of-their-partners

There is a moment that comes in all our lives when we meet the parents of our partners for the first time. From wearing our best dress to working on our weaknesses, we take the utmost care to not disappoint our partner or the parents.
Subscribe Newsletter