ವ್ಯಕ್ತಿಯ ಹುಬ್ಬುಗಳನ್ನು ನೋಡಿದರೆ ಸಾಕು ಎಲ್ಲವೂ ಅರ್ಥವಾಗುತ್ತೆ!

By: manu
Subscribe to Boldsky

ಹುಬ್ಬು ಅಂದರೆ ಕಣ್ಣುಗಳ ಮೇಲಿನ ಕಮಾನಿನಾಕೃತಿಯಲ್ಲಿರುವ ಕೂದಲ ಗುಂಪು. ಇವುಗಳ ಆಕಾರ ಮತ್ತು ದಟ್ಟತೆ ವ್ಯಕ್ತಿಯ ವ್ಯಕ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಒಂದು ವೇಳೆ ಕಣ್ಣುಗಳು ನಿಮ್ಮ ಆತ್ಮದ ಕನ್ನಡಿಯಾಗಿದ್ದರೆ ಹುಬ್ಬುಗಳು ಈ ಕನ್ನಡಿಯ ಚೌಕಟ್ಟಿನಂತೆ. ಸಾಮಾನ್ಯವಾಗಿ ವ್ಯಕ್ತಿಯ ಹೊರನೋಟವನ್ನು ಪರಿಗಣಿಸಿಯೇ ನಾವೆಲ್ಲಾ ಇವರು ಗಣ್ಯರೋ ಅಲ್ಲವೋ ಎಂದು ತೀರ್ಮಾನಿಸಿಬಿಡುತ್ತೇವೆ. ಈ ಪರಿಯಲ್ಲಿ ಪರಿಚಯ ಮಾಡಿಕೊಳ್ಳುವುದು ನಾಯಿಗಳಿಗೂ, ಮಂಗಗಳಿಗೂ ಸಿದ್ಧಿಸಿದೆ.

ಆದ್ದರಿಂದ ಕೊಳಕು ಬಟ್ಟೆ ಧರಿಸಿ ಬಂದ ಭಿಕ್ಷುಕರಿಗೆ ಬೊಗಳುವ ನಾಯಿ ಒಳ್ಳೆಯ ಠಾಕುಠೀಕಾದ ಬಟ್ಟೆ ಧರಿಸಿ ಬಂದವರಿಗೆ ಬೊಗಳುವುದಿಲ್ಲ! ಆದರೆ ಕೆಲವು ಬಾಹ್ಯ ಚಹರೆಗಳು ವ್ಯಕ್ತಿಯ ಅಂತರ್ಯದ ಬಗ್ಗೆ ಕೆಲವು ಸುಳಿವುಗಳನ್ನು ನೀಡುತ್ತವೆ. ಈ ಸೂಕ್ಷ್ಮತೆಯನ್ನು ಗಮನಿಸಲೆಂದೇ ಒಂದು ವಿದ್ಯೆಯಿದೆ. physiognomic theory ಎಂದು ಕರೆಯಲ್ಪಡುವ ಈ ವಿದ್ಯೆ "physis" ಎಂದರೆ ಸ್ವಭಾವ ಮತ್ತು "gnomon" ಅಂದರೆ ತೀರ್ಮಾನಿಸುವುದು ಎಂದಾಗಿದೆ.  ಕಣ್ರೆಪ್ಪೆ ದಪ್ಪಗಾಗಿಸಲು ಕೆಲವೊಂದು ವಿಧಾನಗಳು

ಆದರೆ ಈ ವಿದ್ಯೆಯ ವಿಶ್ವಾಸಾರ್ಹತೆಯ ಬಗ್ಗೆ ವಿವಾದಗಳಿದ್ದು ವಿಶ್ವದಾದ್ಯಂತ ಹೆಚ್ಚಿನವರು ಈ ವಿದ್ಯೆಯ ಮೂಲಕ ಕಂಡುಕೊಂಡ ವಿಚಾರಗಳು ಸತ್ಯವೆಂದು ನಂಬುತ್ತಾರೆ. ಆದರೆ ಈ ತರ್ಕ ನೂರು ಶೇಖಡಾ ಸರಿ ಎಂದು ತೀರ್ಮಾನಿಸಲು ವೈಜ್ಞಾನಿಕವಾದ ಪುರಾವೆಯೇನೂ ಇಲ್ಲ. ಆದರೆ ಇತ್ತೀಚಿನ ಸಂಶೋಧನೆಗಳಿಂದ ಕಂಡುಕೊಂಡ ಪ್ರಕಾರ ವ್ಯಕ್ತಿಯ ಬಾಹ್ಯ ನೋಟಕ್ಕೂ ಆತನ ವ್ಯಕ್ತಿತ್ವಕ್ಕೂ ನಿಜವಾಗಿಯೂ ಸಂಬಂಧ ಇರುವುದನ್ನು ಗಮನಿಸಲಾಗಿದೆ.  ದಪ್ಪನೆಯ ಹುಬ್ಬು ನಿಮ್ಮದಾಗಬೇಕಾ..? ಹೀಗೆ ಮಾಡಿ ನೋಡಿ

ವ್ಯಕ್ತಿಯೊಬ್ಬರ ವ್ಯಕ್ತಿತ್ವ ಮತ್ತು ಶಾರೀರವನ್ನು ರೂಪಿಸುವಲ್ಲಿ ವಂಶವಾಹಿನಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದೇನೋ ನಿಜ, ಆದರೆ ಇದು ಪ್ರತಿ ವ್ಯಕ್ತಿಯಲ್ಲಿಯೂ ಬದಲಾಗುತ್ತದೆ. ಒಂದೇ ರೂಪದ ಅವಳಿ ಮಕ್ಕಳ ವ್ಯಕ್ತಿತ್ವದಲ್ಲಿಯೂ ಭಾರೀ ಭಿನ್ನತೆ ಕಂಡುಬರಬಹುದು. ಆದರೂ ಸ್ಥೂಲನೋಟದಲ್ಲಿ ಕಂಡುಕೊಂಡಾಗ physiognomy ವಿದ್ಯೆಯಲ್ಲಿ ಕಂಡುಕೊಂಡ ಅಂಶಗಳು ಸ್ಥೂಲವಾಗಿಯೇ ನಿಜವೆಂದು ಕಂಡುಬರುತ್ತವೆ. ಈ ವಿದ್ಯೆಯಲ್ಲಿ ಕಣ್ಣಿನ ಹುಬ್ಬುಗಳ ಆಕಾರ ಏನು ಹೇಳುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ. ಇದು ನಿಜವೋ ಅಲ್ಲವೋ ಎಂಬುದನ್ನು ನಿಮ್ಮ ಸ್ನೇಹಿತರ, ಮನೆಯವರ ಕಣ್ಣುಗಳ ಜೊತೆಗೇ ಕಣ್ಣಿನ ಹುಬ್ಬುಗಳನ್ನು ಗಮನಿಸುವ ಮೂಲಕ ನೀವೇಕೆ ಪ್ರಯತ್ನಿಸಬಾರದು?

ಸಾಮಾನ್ಯ ಹುಬ್ಬುಗಳು

ಸಾಮಾನ್ಯ ಹುಬ್ಬುಗಳು

ಅತಿ ದಟ್ಟನೆಯೂ ಅಲ್ಲದ, ಅತಿ ತೆಳ್ಳನೆಯೂ ಅಲ್ಲದ ಸಾಮಾನ್ಯ ಉದ್ದದ ಹುಬ್ಬುಗಳಿರುವ ವ್ಯಕ್ತಿಗಳು ಪ್ರಾಮಾಣಿಕರೂ ಯಾವುದೇ ಸಂಬಂಧದಲ್ಲಿ ಕೃತ್ರಿಮತೆಯನ್ನು ಬಯಸದ ಸಾದಾ ಜೀವನವನ್ನು ಒಪ್ಪುವ ವ್ಯಕ್ತಿಗಳಾಗಿದ್ದಾರೆ.

ಹೆಚ್ಚಿನ ಉದ್ದದ ಹುಬ್ಬುಗಳು

ಹೆಚ್ಚಿನ ಉದ್ದದ ಹುಬ್ಬುಗಳು

ಈ ಪರಿಯ ಹುಬ್ಬುಗಳನ್ನು ಹೊಂದಿರುವ ವ್ಯಕ್ತಿಗಳು ಹೆಚ್ಚಿನ ಮಾನಸಿಕ ಸ್ಥೈರ್ಯ ಹೊಂದಿರುವ ವ್ಯಕ್ತಿಗಳಾಗಿದ್ದು ಕೌಟುಂಬಿಕ ಅಥವಾ ಉದ್ಯೋಗದ ಒತ್ತಡವನ್ನು ಸುಲಭವಾಗಿ ನಿಭಾಯಿಸಬಲ್ಲರು. ಇವರ ಆಸಕ್ತಿ ಮತ್ತು ಹವ್ಯಾಸಗಳ ವ್ಯಾಪ್ತಿ ವಿಶಾಲವಾಗಿದ್ದು ಹೊಸ ವಿಷಯಗಳನ್ನು ಅರಿತುಕೊಳ್ಳಲು ಇವರು ಸದಾ ಉತ್ಸುಕರಾಗಿರುತ್ತಾರೆ. ಇವರು ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳಲು ಸಮರ್ಥರಿರುತ್ತಾರೆ.

ಹೆಚ್ಚಿನ ಉದ್ದದ ಹುಬ್ಬುಗಳು

ಹೆಚ್ಚಿನ ಉದ್ದದ ಹುಬ್ಬುಗಳು

ಈ ಬಗೆಯ ಹುಬ್ಬುಗಳಿರುವ ವ್ಯಕ್ತಿಗಳು ಅತಿ ಹೆಚ್ಚಿನ ಆತ್ಮವಿಶ್ವಾಸವುಳ್ಳ ವ್ಯಕ್ತಿಗಳಾಗಿದ್ದು ಇವರು ಏನೇ ಕೆಲಸ ಮಾಡಲಿ, ಇದರ ಪರಿಣಾಮ ಎಂದೂ ಧನಾತ್ಮಕವೇ ಆಗಿರುತ್ತದೆ. ಇವರು ಕಲಹವನ್ನು ಸುಲಭವಾಗಿ ನಿಭಾಯಿಸಬಲ್ಲ ವ್ಯಕ್ತಿಗಳಾಗಿದ್ದು ಸಂಬಂಧಗಳಲ್ಲಿ ಸಮತೋಲನವಿರುವಂತೆ ನೋಡಿಕೊಳ್ಳುತ್ತಾರೆ. ಇವರು ಸ್ವಾತಂತ್ರ್ಯಕ್ಕೆ ಹೆಚ್ಚಿನ ಮಹತ್ವ ನೀಡುವವರಾಗಿದ್ದು ಉಳಿದವರು ತಮ್ಮ ಬಗ್ಗೆ ಏನು ಯೋಚುಸುತ್ತಾರೆ ಎಂಬ ಬಗ್ಗೆ ನಿರ್ಲಕ್ಷ್ಯ ತಾಳುವ ವ್ಯಕ್ತಿಗಳಾಗಿರುತ್ತಾರೆ.

ಕಮಾನಿನಂತೆ ಬಾಗಿರುವ ಹುಬ್ಬುಗಳು

ಕಮಾನಿನಂತೆ ಬಾಗಿರುವ ಹುಬ್ಬುಗಳು

ಈ ವ್ಯಕ್ತಿಗಳು ತಾವಿರುವ ಗುಂಪಿನಲ್ಲಿನ ಅತಿ ಸೂಕ್ಷ್ಮಗ್ರಾಹಿ ವ್ಯಕ್ತಿಯಾಗಿದ್ದು ತಾವು ಮೆಚ್ಚಿದ ಅಥವಾ ತಮ್ಮ ಮನಸ್ಸಿಗೆ ಒಪ್ಪಿದ ವ್ಯಕ್ತಿಗಳೊಂದಿಗೆ ಮಾತ್ರವೇ ಸ್ನೇಹವನ್ನು ಹೊಂದಿರಲು ಇಷ್ಟಪಡುತ್ತಾರೆ. ಈ ವ್ಯಕ್ತಿಗಳು ಸಾಮಾನ್ಯವಾಗಿ ಸ್ವಾರ್ಥಪರರಾಗಿದ್ದರೂ ತಮ್ಮ ಆತ್ಮೀಯರೊಂದಿಗೆ ಮಾತ್ರ ತೆರೆದ ಹೃದಯದಿಂದ ನಡೆದುಕೊಳ್ಳುತ್ತಾರೆ.

ತ್ರಿಕೋಣಾಕಾರದ ಹುಬ್ಬುಗಳು

ತ್ರಿಕೋಣಾಕಾರದ ಹುಬ್ಬುಗಳು

ತ್ರಿಕೋಣವೆಂದರೆ ಅಪ್ಪಟ ತ್ರಿಕೋಣವಲ್ಲ, ಬದಲಿಗೆ ಚೂಪಾದ ಕತ್ತಿಯಂತೆ ತುದಿಗಳು ಚೂಪಾಗಿದ್ದು ಮಧ್ಯಭಾಗದಲ್ಲಿ ದಪ್ಪನಾಗಿರುವ ಹುಬ್ಬುಗಳಿರುವ ವ್ಯಕ್ತಿಗಳು ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದು ಪ್ರತಿ ಚಿಕ್ಕ ವಿಷಯವನ್ನೂ ಗಂಭೀರವಾಗಿ ಪರಿಗಣಿಸಿ ಅತ್ಯಂತ ಸೂಕ್ತವಾದ ಮತ್ತು ತಿಳಿವಳಿಕೆಯ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಇವರು ತಮ್ಮ ಸುತ್ತಮುತ್ತಲಿನವರನ್ನು ರಂಜಿಸುತ್ತಾ ಇರುತ್ತಾರೆ ಹಾಗೂ ಸಹಾಯ ಕೋರಿ ಬಂದವರಿಗೆ ಹೃದಯದಾಳದಿಂದ ನೆರವು ನೀಡುತ್ತಾರೆ.

ನೇರವಾದ ಹುಬ್ಬುಗಳು

ನೇರವಾದ ಹುಬ್ಬುಗಳು

ಅತಿ ಕಡಿಮೆ ವಕ್ರಾಕಾರವಿದ್ದು ಹೆಚ್ಚೂ ಕಡಿಮೆ ನೇರವಾಗಿಯೇ ಇರುವ ಹುಬ್ಬುಗಳ ಒಡೆಯರು ತರ್ಕಸಮ್ಮತವಾಗಿ ಯೋಚಿಸುವ ವ್ಯಕ್ತಿತ್ವದವರಾಗಿದ್ದಾರೆ. ಇವರು ನೋಡುವ ಪ್ರತಿಯೊಂದು ವಿಷಯದಲ್ಲಿಯೂ ಧನಾತ್ಮಕ ಮತ್ತು ಋಣಾತ್ಮಕ ವಿಷಯಗಳ ತುಲನೆ ಇವರ ಮನಸ್ಸಿನಲ್ಲಿ ನಡೆಯುತ್ತಿರುತ್ತದೆ. ಯಾವುದೇ ವ್ಯಕ್ತಿಯ ಅಥವಾ ವಿಷಯದ ಬಗ್ಗೆಯೂ ಆಗಲಿ, ಋಣಾತ್ಮಕ ವಾಸ್ತವಾಂಶಗಳನ್ನು ನೇರವಾಗಿ ಪ್ರಕಟಿಸುವಲ್ಲಿ ಇವರು ಹಿಂದೆಮುಂದೆ ನೋಡುವುದಿಲ್ಲ.

ಇದ್ದೂ ಇಲ್ಲದಂತಿರುವ ಹುಬ್ಬುಗಳು

ಇದ್ದೂ ಇಲ್ಲದಂತಿರುವ ಹುಬ್ಬುಗಳು

ಕೆಲವರಿಗೆ ಹುಬ್ಬುಗಳಲ್ಲಿ ಕೂದಲೇ ಇಲ್ಲವೆನ್ನುವಷ್ಟು ತೆಳ್ಳಗಾಗಿದ್ದು ದೂರದಿಂದ ಥಟ್ಟನೇ ನೋಡಿದಾದ ಇಲ್ಲವೇ ಇಲ್ಲ ಎನ್ನುವಷ್ಟಿರುತ್ತದೆ. ಇವುಗಳಿಗೆ ಸ್ಪಷ್ಟವಾದ ಆಕಾರವೂ ಇರುವುದಿಲ್ಲ. ಈ ವ್ಯಕ್ತಿಗಳು ಸಾಮಾನ್ಯವಾಗಿ ಹಿಂಜರಿಯುವ ಮತ್ತು ಸಂಕೋಚದ ಸ್ವಭಾವದವರಾಗಿದ್ದು ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ಪ್ರಕಟಿಸಲು ಹಿಂದೇಟು ಹಾಕುತ್ತಾರೆ. ಇವರಿಗೆ ತಮ್ಮ ಸಾಮರ್ಥ್ಯದ ಬಗ್ಗೆಯೇ ಕೀಳರಿಮೆ ಇರುತ್ತದೆ.

ಪುಟ್ಟ ಹುಬ್ಬುಗಳು

ಪುಟ್ಟ ಹುಬ್ಬುಗಳು

ಈ ವ್ಯಕ್ತಿಗಳು ತಮ್ಮ ಎಲ್ಲಾ ಕೆಲಸಗಳಲ್ಲಿ ಉತ್ಕೃಷ್ಟತೆಯನ್ನು ಬಯಸುವ ವ್ಯಕ್ತಿಗಳಾಗಿದ್ದು ಪ್ರವಿ ವಿಷಯದ ಅತಿ ಚಿಕ್ಕ ಭಾಗವನ್ನೂ ಗಮನಿಸುವ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ಯಾವ ಕೆಲಸ ಹೇಗೆ ಆಗಬೇಕಿತ್ತೋ ಹಾಗೇ ಆಗುವುದು ಅತ್ಯಂತ ಪ್ರಮುಖ ವಿಷಯವಾಗಿದೆ. ಇವರು ಸಮಸ್ಯೆಗಳ ಪರಿಹಾರದ ಬಗ್ಗೆಯೇ ಚರ್ಚಿಸುತ್ತಾರೆಯೇ ಹೊರತು ಸಮಸ್ಯೆಗಳಿಂದಾಗುವ ತೊಂದರೆಗಳಿಗೆ ಕಡಿಮೆ ಪ್ರಾಮುಖ್ಯತೆ ನೀಡುತ್ತಾರೆ.

  
English summary

Your Eyebrows Can Reveal Your Personality!

Explaining the character of a person by taking their physical appearance into account is a very popular method. This is called physiognomic theory, with "physis" meaning "nature" and "gnomon" meaning "judge". The credence of this this type of studies is always controversial. However, this is widely accepted all around the globe. There is no scientific proof to claim that physiognomic theory works 100 percent perfect. But, some of the recent studies point out that facial features do have something to tell about the personality of a person.
Subscribe Newsletter