ಶ್ವಾಸಕೋಶಗಳಿಲ್ಲದೇ ಏಳು ದಿನಗಳ ಕಾಲ ಬದುಕಿದ ಮಹಿಳೆ!

By Arshad
Subscribe to Boldsky

ಈ ಜಗತ್ತಿನಲ್ಲಿ ಹಣ ಕೊಟ್ಟರೆ ಏನು ಬೇಕಾದರೂ ಸಿಗುತ್ತದೆ, ಹಣ ಕೊಟ್ಟರೆ! ಒಂದು ಕಾಲದಲ್ಲಿ ಅಸಂಭವವೆನಿಸಿದ್ದ ಹಲವು ಸಾಧ್ಯತೆಗಳನ್ನು ಇಂದು ತಂತ್ರಜ್ಞಾನ ಸಾಧ್ಯವಾಗಿಸಿದೆ. ಅದರಲ್ಲೂ ಇಪ್ಪತ್ತೊಂದನೆಯ ಶತಮಾನದ ತಂತ್ರಜ್ಞಾನದ ನಾಗಾಲೋಟ ಕಲ್ಪನೆಗೂ ಮೀರಿದ ಸಾಧನೆಗಳನ್ನು ಸಾಧಿಸಿದೆ.

ಆದರಲ್ಲೂ ಆರೋಗ್ಯ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಗಳು ಪವಾಡವನ್ನೇ ಸೃಷ್ಟಿಸಿವೆ. ಆಗಾಗ ಪತ್ರಿಕೆಗಳಲ್ಲಿ ಕಾಣಬಂದಂತೆ ಹೃದಯವನ್ನು ಓರ್ವ ವ್ಯಕ್ತಿಯಿಂದ ಇನ್ನೋರ್ವ ವ್ಯಕ್ತಿಗೆ ಕಸಿ ಮಾಡಲು ದಾಖಲೆ ಸಮಯದಲ್ಲಿ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸಾಗಿಸಲು ಇಡಿಯ ನಗರದ ಜನ ದಾರಿಬಿಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ.  ಇಂತಹ ಜನರೂ ಜಗತ್ತಿನಲ್ಲಿ ಇದ್ದಾರೆಯೇ? ಅಚ್ಚರಿಯಾಗುತ್ತಿದೆ!!

ಇನ್ನೂ ಒಂದು ಹಂತ ಮುಂದಕ್ಕೆ ಹೋಗಿ ರೋಗಿಯೊಬ್ಬರ ಅತಿ ಮುಖ್ಯ ಅಂಗವೇ ವಿಫಲಗೊಂಡಾಗ ಯಂತ್ರಗಳ ಮೂಲಕ ಜೀವವನ್ನು ಉಳಿಸಿಕೊಂಡಿರುವುದೂ ಇದೆ. ಇಂತಹ ಒಂದು ಪ್ರಕರಣದಲ್ಲಿ ಮಹಿಳೆಯೊಬ್ಬರು ತಮ್ಮ ಶ್ವಾಸಕೋಶಗಳಿಲ್ಲದೇ ಏಳು ದಿನಗಳ ಕಾಲ ಬದುಕಿದ್ದ ಸತ್ಯಸಂಗತಿ ಈಗ ವರದಿಯಾಗಿದೆ.  ಬಲು ಅಪರೂಪದ ಕಾಯಿಲೆವಿದು, ಇದರಿಂದ ಆತ ಪಟ್ಟ ಕಷ್ಟ ಅಷ್ಟಿಷ್ಟಲ್ಲ...

ವಿಶ್ವದಲ್ಲಿಯೇ ಇದೊಂದು ಪವಾಡವಾಗಿದ್ದು ಬದಲೀ ಶ್ವಾಸಕೋಶವನ್ನು ಪಡೆದು ಈಗ ಗುಣಮುಖರಾಗುತ್ತಿದ್ದಾರೆ. "ಮೆಲಿಸಾ ಬೆನೋಯಿಟ್" ಎಂಬ ಹೆಸರಿನ ಈ ಯುವತಿ ಓರ್ವ ತಾಯಿಯೂ ಆಗಿದ್ದು ಶ್ವಾಸಕೋಶಗಳ ದಾನಿಗಾಗಿ ಏಳು ದಿನಗಳ ಕಾಲ ಯಂತ್ರದ ಮೂಲಕ ಉಸಿರಾಡಿ ದಾಖಲೆಯನ್ನೇ ಸೃಷ್ಟಿಸಿದ್ದಾರೆ. ಬನ್ನಿ, ಈಕೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಅರಿಯೋಣ...

ಈಕೆ ಚಿಕ್ಕ ವಯಸ್ಸಿನ ತಾಯಿಯಾಗಿದ್ದಾಳೆ

ಈಕೆ ಚಿಕ್ಕ ವಯಸ್ಸಿನ ತಾಯಿಯಾಗಿದ್ದಾಳೆ

ಕೆನಡಾ ದೇಶದ ನಿವಾಸಿಯಾಗಿರುವ ಮೆಲಿಸ್ಸಾ ಬೆನೋಯಿಟ್ ರವರು ಹುಟ್ಟಿನಿಂದಲೇ cystic fibrosis ಎಂಬ ಕಾಯಿಲೆಗೆ ತುತ್ತಾಗಿದ್ದರು. ಅನುವಂಶಿಕವಾಗಿ ಬರುವ ಈ ಕಾಯಿಲೆಯ ಮೂಲಕ ಕಫ ವಿಪರೀತ ಗಟ್ಟಿಯಾಗಿ ಇದರಿಂದ ಕರುಳು, ಬಾಡಲಿ (pancreas) ಮೊದಲಾದ ಮುಖ್ಯ ಅಂಗಗಳು ನಿಧಾನವಾಗಿ ನಿಷ್ಫಲಗೊಳುತ್ತಾ ಕಡೆಗೆ ಶ್ವಾಸಕೋಶಗಳ ಕವಲುಗಳು ತೀರಾ ಚಿಕ್ಕದಾಗಿ ಶ್ವಾಸನಾಳಗಳಲ್ಲಿ ಭಾರೀ ಸೋಂಕುಕಾಣಿಸಿಕೊಳ್ಳುತ್ತದೆ. ಈ ಸೋಂಕು ಶ್ವಾಸಕೋಶದ ಕ್ಷಮತೆಯನ್ನು ಉಡುಗಿಸುತ್ತಾ ಕಡೆಗೊಮ್ಮೆ ಸಾವಿಗೆ ಕಾರಣವಾಗುತ್ತದೆ. ಈ ಸೋಂಕು ನಿಧಾನವಾಗಿ ಇಡಿಯ ದೇಹಕ್ಕೆ ಹರಡುತ್ತಾ ಸಾವು ಬರುವ ದಿನವನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತವೆ. ಈ ಮಹಿಳೆಗೆ ಈ ಸೋಂಕು ಎಚ್ಚರಿಕೆ ಮಟ್ಟಕ್ಕೇರಿದಾಗ ಈಕೆಯ ವಯಸ್ಸು ಕೇವಲ 32.

ತಕ್ಷಣ ಈಕೆಯನ್ನು ಟೊರೊಂಟೋದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು

ತಕ್ಷಣ ಈಕೆಯನ್ನು ಟೊರೊಂಟೋದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು

ಈಕೆಯ ಪರಿಸ್ಥಿತಿಯನ್ನು ಪರೀಕ್ಷಿಸಿದ ವೈದ್ಯರು ಈಕೆಯ ಶ್ವಾಸಕೋಶ ಸೋಂಕು ತಗಲುವ ಅಂತಿಮ ಹಂತದಲ್ಲಿದ್ದು ಇನ್ನೇನು ಕೆಲವೇ ಗಂಟೆಗಳ ಕಾಲ ಆಕೆಯ ಉಸಿರು ಸಾವನ್ನು ತಡೆಯಬಹುದಿತ್ತು. ತಕ್ಷಣವೇ ಕೆನಾಡದ ಪ್ರಮುಖ ನಗರವಾದ ಟೊರೊಂಟೋದಲ್ಲಿರುವ ಪ್ರಮುಖ ಆಸ್ಪತ್ರೆಗೆ ತುರ್ತಾಗಿ ಕರೆದೊಯ್ದು ದಾಖಲಿಸಲಾಯಿತು.

ಈಕೆಯ ಪರಿಸ್ಥಿತಿ ವಿಷಮಗೊಳ್ಳುತ್ತಾ ಹೋಯಿತು

ಈಕೆಯ ಪರಿಸ್ಥಿತಿ ವಿಷಮಗೊಳ್ಳುತ್ತಾ ಹೋಯಿತು

ಆಸ್ಪತ್ರೆಗೆ ಕರೆತಂದಾಗ ಈಕೆಯ ಶ್ವಾಸಕೋಶವೆಲ್ಲಾ ಕಫ ಮತ್ತು ರಕ್ತದಿಂದ ತುಂಬಿತ್ತು. ಕಫ ಗಟ್ಟಿಯಾಗಿದ್ದು ಕೆಮ್ಮು ಎಡೆಬಿಡದೇ ಬರುತ್ತಿದ್ದು ಇದರಿಂದ ಒಂದು ತೆರನಾದ ಫಿಟ್ಸ್ ಸಹಾ ಕಾಣಿಸಿಕೊಂಡಿತ್ತು. ಈ ಕ್ಷಣದಲ್ಲಿ ಆಕೆಗೆ ನೀಡುವ ಯಾವುದೇ ಚಿಕಿತ್ಸೆಗೆ ಸ್ಪಂದಿಸದ ಮಟ್ಟಕ್ಕೆ ಆಕೆಯ ಶ್ವಾಸಕೋಶಗಳು ಹಾಳಾಗಿದ್ದವು.

ತಕ್ಷಣ ವೆಂಟಿಲೇಟರ್ ನಲ್ಲಿ ಈಕೆಯನ್ನು ಮಲಗಿಸಲಾಯಿತು

ತಕ್ಷಣ ವೆಂಟಿಲೇಟರ್ ನಲ್ಲಿ ಈಕೆಯನ್ನು ಮಲಗಿಸಲಾಯಿತು

ಪರಿಸ್ಥಿತಿಯನ್ನು ಅರಿತ ವೈದ್ಯರು ತಕ್ಷಣವೇ ಈಕೆಯನ್ನು ವೆಂಟಿಲೇಟರ್ ಅಥವಾ ವಾಯು ಸಂಚಾರಕ ಸಲಕರಣೆಯೊಂದರಲ್ಲಿ ಮಲಗಿಸಲು ಸಲಹೆ ನೀಡಿದರು. ಈ ವ್ಯವಸ್ಥೆಯಲ್ಲಿಯೂ ಈಕೆಯ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗದ ಕಾರಣ ಜೀವ ಉಳಿಸಲು ವೈದ್ಯರು ಹಿಂದೆಂದೂ ಯಾರೂ ಕೈಗೊಳ್ಳದ ನಿರ್ಧಾರವನ್ನು ಕೈಗೊಂಡರು.

ಈಕೆಯ ಶ್ವಾಸಕೋಶಗಳನ್ನು ನಿವಾರಿಸಲಾಯಿತು

ಈಕೆಯ ಶ್ವಾಸಕೋಶಗಳನ್ನು ನಿವಾರಿಸಲಾಯಿತು

ಈಕೆಯ ಶ್ವಾಸಕೋಶಗಳು ಇನ್ನೆಂದೂ ಸರಿಪಡಿಸಲಾಗದಷ್ಟು ಹಾಳಾದ ಕಾರಣ ಇವನ್ನು ತಕ್ಷಣವೇ ನಿವಾರಿಸಲು ಶಸ್ತ್ರಚಿಕಿತ್ಸೆ ಮಾಡುವ ನಿರ್ಧಾರವನ್ನು ವೈದ್ಯರು ಕೈಗೊಂಡರು. ಇವರ ನಿರ್ಧಾರವನ್ನು ಅನುಮೋದಿಸಿದ ಇತರ ವೈದ್ಯರ ತಂಡ ತಕ್ಷಣವೇ ಕಾರ್ಯೋನ್ಮುಖರಾಗಿ ಶಸ್ತ್ರಚಿಕಿತ್ಸೆಯ ಮೂಲಕ ಆಕೆಯ ಶ್ವಾಸಕೋಶಗಳನ್ನು ನಿವಾರಿಸಿದರು. ಈ ಶ್ವಾಸಕೋಶಗಳು ಸರಿಸುಮಾರು ಒಂದು ಫುಟ್ ಬಾಲ್ ಇರುವಷ್ಟೇ ಗಟ್ಟಿಯಾಗಿತ್ತು.

ಶ್ವಾಸಕೋಶದ ಕೆಲಸವನ್ನು ಯಂತ್ರಕ್ಕೆ ನೀಡಲಾಯಿತು

ಶ್ವಾಸಕೋಶದ ಕೆಲಸವನ್ನು ಯಂತ್ರಕ್ಕೆ ನೀಡಲಾಯಿತು

ಶ್ವಾಸಕೋಶದ ಮುಖ್ಯ ಕೆಲಸವೆಂದರೆ ಕೆಟ್ಟರಕ್ತವನ್ನು ಶೋಧಿಸಿ ಗಾಳಿಯಿಂದ ಆಮ್ಲಜನಕವನ್ನು ಪಡೆದು ರಕ್ತಕ್ಕೆ ನೀಡಿ ಹೃದಯಕ್ಕೆ ಒದಗಿಸುವುದು. ಈ ಕೆಲಸವನ್ನು ಯಂತ್ರವೊಂದಕ್ಕೆ ವಹಿಸಿ ಆಕೆಯ ಹೃದಯ ನಿಲ್ಲದಂತೆ ನೋಡಿಕೊಳ್ಳಲಾಯಿತು. ಪರಿಣಾಮವಾಗಿ ದೇಹವಿಡೀ ರಕ್ತಪರಿಚಲನೆಗೊಂಡು ಈಕೆ ಜೀವಂತವಾಗಿರಲು ಸಾಧ್ಯವಾಯಿತು. ಆದರೆ ಎಷ್ಟು ಸಮಯ? ದಾನಿಯೊಬ್ಬರಿಂದ ಶ್ವಾಸಕೋಶಗಳನ್ನು ಎರವಲು ಪಡೆದು ಅಳವಡಿಸುವ ತನಕ. ಮುಂದಿನ ಆರು ದಿನಗಳ ಕಾಲ ಆಕೆ ಇದೇ ಸ್ಥಿತಿಯಲ್ಲಿ ಯಂತ್ರದ ನೆರವಿನಿಂದ ಜೀವಂತವಾಗಿದ್ದಳು. ಆರು ದಿನಗಳ ಬಳಿಕ ದಾನಿಯೊಬ್ಬರು ಸಿಕ್ಕ ಸಂದೇಶವನ್ನು ವೈದ್ಯರು ಸಂಬಂಧಿಕರಿಗೆ ನೀಡಿದರು.

ಏಳನೆಯ ದಿನ ದಾನಿಯಿಂದ ಪಡೆದ ಶ್ವಾಸಕೋಶಗಳನ್ನು ಅಳವಡಿಸಲಾಯಿತು

ಏಳನೆಯ ದಿನ ದಾನಿಯಿಂದ ಪಡೆದ ಶ್ವಾಸಕೋಶಗಳನ್ನು ಅಳವಡಿಸಲಾಯಿತು

ದಾನಿಯಿಂದ ಪಡೆದ ಶ್ವಾಸಕೋಶಗಳು ಲಭ್ಯವಾಗುತ್ತಿದ್ದಂತೆಯೇ ವೈದ್ಯರ ತಂಡ ಮತ್ತೊಮ್ಮೆ ಸಮಯ ವ್ಯಯಿಸದೇ ಕಾರ್ಯೋನ್ಮುಖರಾಗಿ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಿ ಶ್ವಾಸಕೋಶಗಳನ್ನು ಈಕೆಯ ಎದೆಗೂಡಿನಲ್ಲಿ ಅಳವಡಿಸಿದರು. ಈಕೆಯ ದೇಹ ಶ್ವಾಸಕೋಶವನ್ನು ಯಶಸ್ವಿಯಾಗಿ ಸ್ವೀಕರಿಸಿದ ಸೂಚನೆಗಳನ್ನು ನೀಡುತ್ತಿದ್ದಂತೆಯೇ ನಿಧಾನವಾಗಿ ಯಂತ್ರವನ್ನು ಹೊರತೆಗೆದು ಶ್ವಾಸಕೋಶಗಳು ಸ್ವಸಾಮರ್ಥ್ಯದಿಂದ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಯಿತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಇಡಿಯ ಆಸ್ಪತ್ರೆಯಲ್ಲಿ ಹರ್ಷದ ಹೊನಲೇ ಹರಿಯಿತು. ಪ್ರಸ್ತುತ ಈ ಮಹಿಳೆ ಇನ್ನೂ ಆಸ್ಪತ್ರೆಯಲ್ಲಿಯೇ ಇದ್ದು ಗುಣಮುಖರಾಗುತ್ತಿದ್ದಾಳೆ. ಇನ್ನೂ ಕೆಲವು ದಿನ ಆಸ್ಪತ್ರೆಯಲ್ಲಿಯೇ ಇದ್ದು ಪೂರ್ಣಗುಣಮುಖಹೊಂದಿದ ಬಳಿಕ ಶೀಘ್ರವೇ ಮರಳಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

All ImagesSource

 

All Images Source

For Quick Alerts
ALLOW NOTIFICATIONS
For Daily Alerts

    English summary

    Woman Who Survived Without Lungs For 7 Days!

    Check out the inspiring story of this young mother "Melissa Benoit", who is currently on the road to recovery after she had a complete lung transplant surgery, after she waited for 7 long days for the right donor.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more