ಬಲು ಅಪರೂಪದ ಕಾಯಿಲೆವಿದು, ಇದರಿಂದ ಆತ ಪಟ್ಟ ಕಷ್ಟ ಅಷ್ಟಿಷ್ಟಲ್ಲ...

By: manu
Subscribe to Boldsky

ಹಿಂದಿನ ಕಾಲದಲ್ಲಿ ವೃಕ್ಷ ದೇವತೆ ಇದ್ದಳು ಎನ್ನುವ ಕಥೆಗಳನ್ನು ನಾವು ಕೇಳಿದ್ದೇವೆ. ವೃಕ್ಷಕ್ಕೂ ಜೀವವಿರುತ್ತದೆ. ಅದು ಕೂಡ ಮಾನವರಂತೆ ಎಂದು ಭಾರತೀಯ ವಿಜ್ಞಾನಿಯೊಬ್ಬರು ಹೇಳಿದ್ದರು. ಆದರೆ ಆಧುನಿಕ ಯುಗದಲ್ಲಿ ಮನುಷ್ಯನೊಬ್ಬನು ವೃಕ್ಷದ ಆಕಾರವನ್ನು ಪಡೆದರೆ ಆಗ ಎಲ್ಲರೂ ನಿಬ್ಬೆರಗಾಗುವುದು ಖಚಿತ.

ಇಂತಹ ವೃಕ್ಷ ಮಾನವ ಕಂಡು ಬಂದಿರುವುದು ನಮ್ಮ ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ. ಆದರೆ ಈತನ ದೇಹ ಸಂಪೂರ್ಣವಾಗಿ ವೃಕ್ಷವಾಗಿಲ್ಲ. ಕೈಗಳು ಮರದ ಆಕಾರದಂತೆ ಬೆಳೆಯುತ್ತಿದೆ. ಇದು ಅಪರೂಪದಲ್ಲಿ ಅಪರೂಪವೆನ್ನಲಾಗುತ್ತದೆ. ಈ ಗ್ರಾಮದಲ್ಲಿದೆ ವಿಚಿತ್ರ ಕಾಯಿಲೆ-ಇಲ್ಲಿನ ಜನ ವಾರಗಟ್ಟಲೇ ಮಲಗಿರುತ್ತಾರೆ!!

ಆದರೆ ಬೆಳೆಯುತ್ತಿರುವ ವೈದ್ಯಕೀಯ ಕ್ಷೇತ್ರ ಹಾಗೂ ತಂತ್ರಜ್ಞಾನದಿಂದಾಗಿ ಈ ವೃಕ್ಷ ಮಾನವ ಕೂಡ ಸಾಮಾನ್ಯ ಜೀವನ ಸಾಗಿಸುವಂತಾಗಿದೆ. ಕೋಟಿಗೊಬ್ಬರಲ್ಲಿ ಕಂಡುಬರುವಂತಹ ಈ ಅನುವಂಶೀಯತೆಯ ಲಕ್ಷಣವನ್ನು ಎಪಿಡೆರ್ಮೊಡ್ಯಸ್ಪ್ಲಸಿಯಾ ವೆರ್ರುಸಿಫೊರ್ಮಿಸ್ ಎಂದು ಕರೆಯಲಾಗುತ್ತದೆ. ಈ ಚರ್ಮದ ಕಾಯಿಲೆಯಿಂದಾಗಿ ವಿಶ್ವದೆಲ್ಲೆಡೆಯಲ್ಲಿ ಸುದ್ದಿ ಮಾಡಿದ್ದ ಬಾಂಗ್ಲಾದೇಶದ ಅಬ್ದುಲ್ ಬಜಾಂದಾರ್ ತನಗೆ ಸಾಮನ್ಯ ಜೀವನ ಕೊಟ್ಟ ವೈದ್ಯಕೀಯ ಲೋಕಕ್ಕೆ ಸಲಾಂ ಹೇಳಿದ್ದಾನೆ....  

ಏನಿದು ಅಪರೂಪದ ಅನುವಂಶೀಯತೆಯ ಲಕ್ಷಣ?

ಏನಿದು ಅಪರೂಪದ ಅನುವಂಶೀಯತೆಯ ಲಕ್ಷಣ?

ಎಪಿಡೆರ್ಮೊಡ್ಯಸ್ಪ್ಲಸಿಯಾ ವೆರ್ರುಸಿಫೊರ್ಮಿಸ್ ಎಂದು ಕರೆಯಲ್ಪಡುವ ಈ ಅಪರೂಪದ

ಅನುವಂಶೀಯತೆಯ ಲಕ್ಷಣದಲ್ಲಿ ಮಾನವನ ದೇಹದ ಮೇಲೆ ಮರದ ರೀತಿಯ ಗಂಟುಗಳು ಮೂಡಲು ಆರಂಭವಾಗುತ್ತದೆ. ಅಬ್ದುಲ್ ಬಜಾಂದರ್ ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ.

ಸರಕಾರವೇ ಚಿಕಿತ್ಸೆ ವೆಚ್ಚ ಭರಿಸಿತು

ಸರಕಾರವೇ ಚಿಕಿತ್ಸೆ ವೆಚ್ಚ ಭರಿಸಿತು

ಇದು ಅಪರೂಪದ ಕಾಯಿಲೆಯಾಗಿರುವ ಕಾರಣದಿಂದ ಸುದ್ದಿ ಕಾಡ್ಗಿಚ್ಚಿನಂತೆ ವಿಶ್ವದೆಲ್ಲೆಡೆ ಹಬ್ಬಿತ್ತು. ಇದನ್ನು ನೋಡಿದ ಬಾಂಗ್ಲಾದೇಶ ಸರಕಾರವು ಆತನಿಗೆ ಉಚಿತ ಚಿಕಿತ್ಸೆ ನೀಡಲು ಮುಂದೆ ಬಂದಿದೆ. ಕಳೆದ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿರುವ ಅಬ್ದುಲ್ ಜತೆಯಲ್ಲಿ ಆತನ ಪತ್ನಿ ಹಾಗೂ ಮಗು ಜತೆಗಿದೆ.

ಸರಿಸುಮಾರು 16 ಶಸ್ತ್ರಚಿಕಿತ್ಸೆ ಮಾಡಲಾಯಿತು

ಸರಿಸುಮಾರು 16 ಶಸ್ತ್ರಚಿಕಿತ್ಸೆ ಮಾಡಲಾಯಿತು

ಈ ಅಪರೂಪದ ಕಾಯಿಲೆಗೆ ತುತ್ತಾಗಿದ್ದ ಅಬ್ದುಲ್‌ಗೆ ಸುಮಾರು 16 ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಈ ಎಲ್ಲಾ ಶಸ್ತ್ರ ಚಿಕಿತ್ಸೆ ಬಳಿಕ ಆತ ತನ್ನ ಸಣ್ಣ ಮಗುವನ್ನು ಕೈಯಲ್ಲಿ ಹಿಡಿಯಲು ಸಮರ್ಥನಾಗಿದ್ದಾನೆ.

ಇನ್ನೆರಡು ಸಣ್ಣ ಶಸ್ತ್ರಚಿಕಿತ್ಸೆ ಬೇಕಾಗಿದೆ

ಇನ್ನೆರಡು ಸಣ್ಣ ಶಸ್ತ್ರಚಿಕಿತ್ಸೆ ಬೇಕಾಗಿದೆ

ಇಂತಹ ಅಪರೂಪದ ಕಾಯಿಲೆಗೆ ತುತ್ತಾಗಿರುವ ವ್ಯಕ್ತಿಯನ್ನು ಗುಣಪಡಿಸಿರುವುದು ವೈದ್ಯಕೀಯ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿದೆ ಎಂದು ಹೇಳಿರುವ ವೈದ್ಯರು ಅಬ್ದುಲ್ ಸಂಪೂರ್ಣವಾಗಿ ಗುಣಮುಖವಾಗಲು ಇನ್ನೂ ಎರಡು ಸಣ್ಣ ಶಸ್ತ್ರಚಿಕಿತ್ಸೆಗಳು ಬೇಕಾಗಿದೆ ಎಂದು ಹೇಳಿದ್ದಾರೆ.

ಸಾಮಾನ್ಯ ಜೀವನ ಸಾಗಿಸುವ ಭರವಸೆ

ಸಾಮಾನ್ಯ ಜೀವನ ಸಾಗಿಸುವ ಭರವಸೆ

ಅಬ್ದುಲ್ ಅಪರೂಪದ ಕಾಯಿಲೆ ಬಗ್ಗೆ ವಿಶ್ವದೆಲ್ಲೆಡೆ ಸುದ್ದಿ ಹಬ್ಬಿದಾಗ ಆತನಿಗೆ ವಿಶ್ವದೆಲ್ಲೆಡೆಯಿಂದ ದಾನಿಗಳು ನೆರವಿನ ಹಸ್ತ ಚಾಚಿದ್ದಾರೆ. ಸಾಮಾನ್ಯ ಜೀವನ ಸಾಗಿಸುವ ವಿಶ್ವಾಸ ಹೊಂದಿರುವ ಅಬ್ದುಲ್ ಚಿಕಿತ್ಸೆ ಬಳಿಕ ಉಳಿದಿರುವ ಹಣದಲ್ಲಿ ಯಾವುದಾದರೂ ವ್ಯಾಪಾರ ಮಾಡುತ್ತೇನೆಂದು ಹೇಳಿದ್ದಾನೆ.

Image courtesy

 
English summary

Tree Man Who Got Cured Of His Rare Condition!

Check out the interesting story of this guy named "Abul Bajandar" who had a tough time to lead a normal life due to this rare condition, which had restricted his life....
Please Wait while comments are loading...
Subscribe Newsletter