Latest Updates
-
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಇದು ನಿಜ ಜೀವನದ ಕಥೆ: ಈಕೆ ನಿತ್ಯವೂ ಗಂಡನ ರಕ್ತವನ್ನೇ ಹೀರುತ್ತಿದ್ದಳಂತೆ!
ನಮ್ಮ ದೇಶವು ವಿವಿಧ ಬಗೆಯ ಜಾತಿ ಹಾಗೂ ಧರ್ಮದವರು ಇರುವುದನ್ನು ನಾವು ಕಾಣಬಹುದು. ಜಾತಿ ಧರ್ಮಗಳಿಗೆ ಹೆಸರಾದಂತೆ ವಿವಿಧ ಕುರುಡು ಆಚರಣೆಯು ಚಾಲ್ತಿಯಲ್ಲಿರುವುದನ್ನು ನಾವು ಕಾಣಬಹುದು. ದುರಾದೃಷ್ಟ ಎನ್ನುವ ಹಾಗೆ ಅದೆಷ್ಟೇ ವೈಜ್ಞಾನಿಕ ಬೆಳವಣಿಗೆ ಹೊಂದಿದ್ದರೂ ನಮ್ಮಲ್ಲಿ ಇನ್ನೂ ಮೂಢನಂಬಿಕೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿರುವುದು ಆಶ್ಚರ್ಯಕರ ಸಂಗತಿ ಎನಿಸುತ್ತದೆ.
ಅಂತಹ ಒಂದು ಆಶ್ಚರ್ಯ ಮೂಡಿಸುವಂತಹ ಪ್ರಕರಣ ಇಲ್ಲಿದೆ. ಈ ಮಹಿಳೆ ಪ್ರತಿ ರಾತ್ರಿಯೂ ತನ್ನ ಪತಿಯ ರಕ್ತವನ್ನು ಹೀರುತ್ತಾಳೆ. ಇಂತಹ ಒಂದು ವಿಲಕ್ಷಣ ಪದ್ಧತಿಯನ್ನು ಏಕೆ ಆಚರಿಸುತ್ತಾಳೆ? ಇದರ ಹಿಂದೆ ಯಾವೆಲ್ಲಾ ಕಾರಣಗಳಿವೆ? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಈ ಮುಂದೆ ಇರುವ ವಿವರಣೆಯನ್ನು ಪರಿಶೀಲಿಸಿ...

ಅವಳು ಯಾರು?
ಆಕೆ ಬಂಗಾಳದ ಬರ್ಬಮ್‌ನ ಸೈರೈಪುರದಿಂದ ಬಂದ ಮಹಿಳೆ. ಆರಂಭದಲ್ಲಿ ಆಕೆ ತನ್ನ ಗಂಡನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಳು. ಆದರೆ ಬರಬರುತ್ತ ಸಂಬಂಧವು ಬೇರೆಯತ್ತ ತಿರುಗಲು ಪ್ರಾರಂಭವಾಯಿತು. ಅದು ಒಂದು ಆಘಾತವನ್ನುಂಟು ಮಾಡುವಂತಹ ಸಂಗತಿಯಾಗಿತ್ತು. ಅದೇನೆಂದರೆ ಗಂಡನ ರಕ್ತವನ್ನೇ ಆಕೆ ಹೀರುತ್ತಿದ್ದಳು!

ಇದು ಪ್ರತಿದಿನ ನಡೆಯುತ್ತಿತ್ತು
ಆಕೆಯು ಪ್ರತಿ ಅಮವಾಸ್ಯೆಯ ದಿನ ರಾತ್ರಿ ಪತಿಯ ರಕ್ತವನ್ನು ಹೀರುತ್ತಿದ್ದಳು. ಇದೊಂದು ಅವಳ ನಿಗೂಢವಾದ ಆಚರಣೆಯಾಗಿತ್ತು. ಆಕೆಯು ತನ್ನ ಪತಿಗೆ ತ್ರಿಶೂಲದಿಂದ ಚುಚ್ಚಿ ರಕ್ತವನ್ನು ತೆಗೆಯುತ್ತಿದ್ದಳು. ಆ ಸ್ಥಳದಲ್ಲಿ ತನ್ನ ಬಾಯನ್ನು ಇಟ್ಟು ಹೀರುತ್ತಿದ್ದಳು.

ಆ ವಿಶೇಷವಾದ ರಾತ್ರಿಯಲ್ಲಿ ಏನಾಗುತ್ತದೆ
ಆಕೆಯ ಅತ್ತೆ ಹೇಳುವ ಪ್ರಕಾರ ಪ್ರತಿ ಅಮವಾಸ್ಯೆಯ ರಾತ್ರಿ ಮಹಿಳೆ ಪತಿಯ ಎದೆಯಮೇಲೆ ಕುಳಿತು ಆತನ ದೇಹದಿಂದ ರಕ್ತ ಹೀರುತ್ತಾಳೆ ಎಂದು.

ನೆರೆಹೊರೆಯರು ಹೇಳುವಂತೆ
ಆಕೆಯ ವರ್ತನೆ ಬಹಳ ಭಯಾನಕವಾಗಿರುತ್ತದೆ. ಆಕೆಯ ಗಂಡ ಸಾವನ್ನಪ್ಪಲು ಆಕೆಯೇ ಕಾರಣ. ಅವಳೊಂದು ಬಗೆಯ ಮಾಟಗಾತಿ ಇದ್ದಂತೆ ಎಂದು ಆರೋಪಿಸುತ್ತಾರೆ.

ಆತನ ಸಾವು
ಆಕೆಯ ವಿಲಕ್ಷಣವಾದ ಪದ್ಧತಿ ಹಾಗೂ ಮಾಟಗಾತಿಯಂತೆ ತೋರುತ್ತಿದ್ದ ವರ್ತನೆಯಿಂದ ಆತನ ಆರೋಗ್ಯ ಗಣನೀಯವಾಗಿ ಹಾಳಾಗಿತ್ತು. ಅವಳ ವಿಲಕ್ಷಣ ಪದ್ಧತಿಯಿಂದ ರಕ್ತ ಹೀರುವ ಪ್ರಕ್ರಿಯೆಯು ಅವನ ದೇಹದಲ್ಲಿ ರಕ್ತಹೀನತೆಗೆ ಕಾರಣವಾಯಿತು. ಅವಳು ಮಾಟಗಾತಿಯ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಳು ಎನ್ನಲಾಗುತ್ತದೆ.

ಆಕೆ ನಿಜವಾಗಲೂ ಅವನ ರಕ್ತ ಹೀರುತ್ತಿದ್ದಳಾ?
ಮಹಿಳೆ ಕಪ್ಪು ಜಾದೂವನ್ನು ಅಭ್ಯಾಸ ಮಾಡುತ್ತಿದ್ದಳು ಎಂದು ಕಾನೂನು ಹೇಳಿಕೆಯಲ್ಲಿ ಹೇಳಲಾಗಿದೆ. ಆದರೆ ಆಕೆ ಜಾದೂ ಮಾಡುತ್ತಿದ್ದಳು ಎನ್ನುವುದಕ್ಕೆ ಯಾವುದೇ ಪುರಾವೆಗಳು ದೊರೆತಿಲ್ಲ. ಆಕೆಯ ಪಾಲಕರು ಹೇಳುವ ಪ್ರಕಾರ ಆಕೆಯ ಗಂಡ ಬೇರೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ. ಆ ಕಾರಣದಿಂದಲೇ ಆತ ಸಾವನ್ನಪಿದ ಎಂದು ಹೇಳುತ್ತಾರೆ. ಈ ವಿಚಾರ ನಿಜವೇ ಆಗಿರಬಹುದೇ? ಕಪ್ಪು ಜಾದೂ ನಿಜವಾಗಿಯೂ ಇಂದಿಗೂ ಅಸ್ತಿತ್ವದಲ್ಲಿದೆಯೇ ಎನ್ನುವುದು ನೀವೇ ಯೋಚಿಸಬೇಕಷ್ಟೆ...



Click it and Unblock the Notifications