For Quick Alerts
ALLOW NOTIFICATIONS  
For Daily Alerts

ಅಚ್ಚರಿ ಜಗತ್ತು: ಮರಣ ಹೊಂದಿದ ಮಹಿಳೆ, ಮತ್ತೆ ಎದ್ದು ಕೂತಳು!!

By Manu
|

ಎಷ್ಟೋ ಬಾರಿ ಸಾವಿನ ಸ್ಪಷ್ಟ ಸೂಚನೆಗಳನ್ನು ನೀಡಿ ಇನ್ನೇನು ಅಂತ್ಯಸಂಸ್ಕಾರಗಳನ್ನು ನಡೆಸಬೇಕು ಎಂದಿರುವಾಗ ರೋಗಿ ಮತ್ತೆ ಎದ್ದು ನಿಂತ ಘಟನೆಗಳು ವರದಿಯಾಗಿವೆ. ನಾವು ಸೀನುವಾಗಲೂ ನಮ್ಮ ಹೃದಯದ ಒಂದು ಕ್ಷಣದ ಕೊಂಚ ಅವಧಿಯಷ್ಟು ಸಮಯ ನಿಂತಿರುತ್ತದೆ. ಇದೇ ಪರಿಯನ್ನು ಕೆಲವು ಕೋಮಾ ಅವಸ್ಥೆಗೆ ತಲುಪಿರುವ ರೋಗಿಗಳಲ್ಲಿಯೂ ಕಾಣಬಹುದು. ಆದರೆ ಸತ್ತೇ ಹೋಗಿದ್ದಾರೆ ಎಂದು ಶೈತ್ಯಾಗಾರದಲ್ಲಿರಿಸಿ ಶವಾಗಾರದಲ್ಲಿ ಕಾಪಾಡಿಡಲಾಗಿದ್ದ ಮಹಿಳೆಯ ಶರೀರ ಮತ್ತೆ ಜೀವ ಪಡೆದುಕೊಂಡ ಲಕ್ಷಣ ತೋರಿದರೆ? ಅತ್ಯಂತ ಭಯಾನಕವಾಗಿರುವ ಈ ವಾಸ್ತವ ಭಾರತದಲ್ಲಿಯೇ ವರದಿಯಾಗಿದೆ.

ಮಹಿಳೆಯೊಬ್ಬರು ತೀರಿ ಹೋದರೆಂದು ಭಾವಿಸಿ ಅವರ ಶರೀರವನ್ನು ಶವಾಗಾರದ ಶೈತ್ಯಾಗಾರದಲ್ಲಿ ಇರಿಸಲಾಗಿತ್ತು. ಆಕೆಯ ಸಂಬಂಧಿಕರು ಮುಂದಿನ ಕಾರ್ಯಗಳಿಗೆ ಅಣಿಯಾಗುತ್ತಿದ್ದರೂ ಶೈತ್ಯಾಗಾರದಲ್ಲಿ ಯಾವ ಶಕ್ತಿ ಆಕೆಯ ಜೀವವನ್ನು ಮತ್ತೆ ಹಿಂದೆ ತಂದಿತ್ತೋ ಗೊತ್ತಿಲ್ಲ, ಬದಲಿಗೆ ಆಕೆ ಜೀವಂತ ಬಂದಳು. ಬನ್ನಿ, ಈ ಘಟನೆಯ ಬಗ್ಗೆ ನೋಡೋಣ;

ಈಕೆ ಐವತ್ತೊಂದು ವಯಸ್ಸಿನ ಮಹಿಳೆಯಾಗಿದ್ದಳು. ಕೇರಳ ರಾಜ್ಯದ ನಿವಾಸಿಯಾಗಿದ್ದ ಐವತ್ತೊಂದು ವರ್ಷದ ರತ್ನಂ ಎಂಬ ಮಹಿಳೆಯನ್ನು ಕಾಮಾಲೆ ರೋಗದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗ ಉಲ್ಬಣಗೊಂಡ ಕಾರಣ ವೈದ್ಯರು ಈ ಮಹಿಳೆ ಇನ್ನು ಉಳಿಯುವುದು ಸಾಧ್ಯವಿಲ್ಲ, ಆದ್ದರಿಂದ ಸಹಜವಾಗಿಯೇ ಸಾವನ್ನಪ್ಪಲು ಮನೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ಮಾಡಿದ್ದರು....

ಭಾರವಾದ ಹೃದಯದಿಂದ ಮನೆಗೆ ವಾಪಸ್

ಭಾರವಾದ ಹೃದಯದಿಂದ ಮನೆಗೆ ವಾಪಸ್

ಯಾವುದೇ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ನಾವೆಲ್ಲರೂ ಈ ರೋಗಿ ಬದುಕಿ ಬರಲಿ ಎಂಬ ಆಶಾವಾದದಲ್ಲಿಯೇ ಇರುತ್ತೇವೆ. ಆದರೆ ವೈದ್ಯರೇ ಹೀಗೆ ಹೇಳಿದರೆ? ಅಲ್ಲದೇ ಈ ಮಹಿಳೆ ಜೀವವಿರುವ ಯಾವುದೇ ಸೂಚನೆಗಳನ್ನು ತೋರದಿದ್ದ ಕಾರಣ ಈಕೆ ಸತ್ತೇ ಹೋಗಿದ್ದಾಳೆ ಎಂದು ಭಾವಿಸಿದ ಮನೆಯವರು ಬಳಿಕ ಮನೆಯಿಂದ ಪಾರ್ಥವ ಶರೀರವನ್ನು ಅಂತಿಮ ಸಂಸ್ಕಾರಕ್ಕಾಗಿ ಹತ್ತಿರದ ಶವಾಗಾರಕ್ಕೆ ಕೊಂಡು ಹೋಗಿ ಶೈತ್ಯಾಗಾರದಲ್ಲಿರಿಸಿ ಹಿಂದಿರುಗಿದರು.

ಭಾರವಾದ ಹೃದಯದಿಂದ ಮನೆಗೆ ವಾಪಸ್

ಭಾರವಾದ ಹೃದಯದಿಂದ ಮನೆಗೆ ವಾಪಸ್

ಬಳಿಕ ಅಂತಿಮ ಸಂಸ್ಕಾರಕ್ಕಾಗಿ ಉಳಿದ ಬಂಧು ಬಳಗದವರನ್ನು ಕರೆದುಕೊಂಡು ಧಾರ್ಮಿಕ ಕ್ರಿಯೆಗಳ ಸಿದ್ಧತೆಯೊಂದಿಗೆ ಒಂದು ಗಂಟೆಯ ಬಳಿಕ ಹಿಂದಿರುಗಿದರು.

ಆದರೆ ಅಲ್ಲಿ ನಡೆದಿದ್ದೇ ಬೇರೆ..!!

ಆದರೆ ಅಲ್ಲಿ ನಡೆದಿದ್ದೇ ಬೇರೆ..!!

ಶವಾಗಾರದ ಶೈತ್ಯಾಗಾರದಲ್ಲಿ ಒಂದು ಗಂಟೆ ಇರಿಸಿದ್ದ ಪಾರ್ಥವ ಶರೀರವನ್ನು ಪಡೆಯಲು ಬಂದ ಮನೆಯವರಿಗೆ ಜೀವಮಾನದ ಆಘಾತ ಕಾದಿತ್ತು. ಈಕೆ ಈಗ ಜೀವವಿರುವ ಸೂಚನೆಗಳನ್ನು ಪ್ರಕಟಿಸುತ್ತಿದ್ದಳು. ಅಂತಿಮ ದರ್ಶನ ಪಡೆಯಲು ಬಂದ ಬಂಧುವೊಬ್ಬರು ಈ ಶರೀರ ಕ್ಷೀಣವಾಗಿ ಉಸಿರಾಡುತ್ತಿರುವುದನ್ನು ಗಮನಿಸಿದರು! ತಕ್ಷಣವೇ ಇವರನ್ನು ಮತ್ತೊಮ್ಮೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ!

ಆದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ!

ಉಸಿರಾಟದ ಇರುವಿಕೆಯನ್ನು ಗಮನಿಸಿದ ವೈದ್ಯರು ಮತ್ತೊಮ್ಮೆ ಅಗತ್ಯವಿರುವ ಎಲ್ಲಾ ಚಿಕಿತ್ಸೆಗಳನ್ನು ನೀಡಿ ಬದುಕಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಆದರೆ ಕಾಮಾಲೆ ರೋಗದಿಂದ ಈಗಾಗಲೇ ವಿಫಲಗೊಂಡಿದ್ದ ಆಕೆಯ ಇತರ ಅಂಗಗಳು ಯಾವುದೇ ಚಿಕಿತ್ಸೆಗೆ ಸ್ಪಂದಿಸದೇ ಕಡೆಗೂ ಸಂಜೆಯ ವೇಳೆ ಆಕೆ ಇಹಲೋಕ ತ್ಯಜಿಸಿದಳು.

ಹೀಗೂ ನಡೆಯುತ್ತದೆಯೇ?

ಹೀಗೂ ನಡೆಯುತ್ತದೆಯೇ?

ಬಳಿಕ ನಡೆದ ವಿಚಾರ ವಿನಿಯಮದಲ್ಲಿ ಒಂದು ವೇಳೆ ಈಕೆಯನ್ನು ಇನ್ನೂ ಹೆಚ್ಚು ಕಾಲ ಮನೆಯಲ್ಲಿಯೇ ಇರಿಸಿದ್ದರೆ ಆಕೆ ಬದುಕುವ ಸಾಧ್ಯತೆಯನ್ನು ಪಡೆಯುತ್ತಿದ್ದಳೋ, ಶೈತ್ಯಾಗಾರದಲ್ಲಿನ ಶೈತ್ಯವೇ ಆಕೆಯ ಯಾವುದೋ ಅಂಗವವನ್ನು ಪ್ರಚೋದಿಸಿ ಉಸಿರಾಡಲು ಪ್ರಾರಂಭವಾಯಿತೋ? ಉತ್ತರ ಸಿಗದ ಪ್ರಶ್ನೆಗಳಿಗೆ 'ಎಲ್ಲಾ ವಿಧಿಯಾಟ' ಎಂದು ಉತ್ತರಿಸುವುದು ಮಾತ್ರವೇ ಸಾಧ್ಯವಾಗುತ್ತಿದೆ.

English summary

Woman, Presumed Dead, Wakes Up Alive From A Mortuary

Can you imagine of being alive and living in a mortuary freezer and assumed to be dead? Well, this can be the worst nightmare a person can ever have and this is something that actually happened in India. A woman who was believed to be dead was kept in the freezer of a mortuary. Her family members assumed her to be dead, wherein she was still alive while in the mortuary freezer. Check out the details of this sad incident.
X
Desktop Bottom Promotion