ಮಂಗಳಮುಖಿಯರ ಆ ಗೋಳು, ಕೇಳುವವರು ಯಾರು?

By: manu
Subscribe to Boldsky

ಸಾಮಾನ್ಯವಾಗಿ ಮಂಗಳಮುಖಿಯರು ಲೈಂಗಿಕ ಕಾರ್ಯಕರ್ತೆಯರು ವಾಸಿಸುವ ಸ್ಥಳದ ಆಸುಪಾಸಿನಲ್ಲಿಯೇ ತಮ್ಮ ಭಿಕ್ಷಾಟನೆಯನ್ನು ನಡೆಸುವುದನ್ನು ಗಮನಿಸಬಹುದು. ಆದರೆ ಏಕೆ ಎಂದು ಎಂದಾದರೂ ನೀವು ಯೋಚಿಸಿದ್ದೀರೋ? ಮಂಗಳಮುಖಿಯರಿಗೂ ಇತರರಂತೆ ದುಡಿಯುವ ಸಾಮರ್ಥ್ಯ ಮತ್ತು ಬುದ್ಧಿಮತ್ತೆ ಇದ್ದು ಇವರು ಇದನ್ನೇಕೆ ಉಪಯೋಗಿಸುವುದಿಲ್ಲ? ಈ ಪ್ರಶ್ನೆಗೆ ಉತ್ತರ ಕೊಂಚ ನಿರಾಶಾಜನಕವಾಗಿದೆ.

ಇವರಿಗೆ ದುಡಿಯುವ ಹುಮ್ಮಸ್ಸು ಮತ್ತು ಅಪೇಕ್ಷೆ ಇದ್ದರೂ ಸಮಾಜದಲ್ಲಿ ಇವರು ಇತರರಂತೆ ಬಾಳಲು ಜನರೇ ಅವಕಾಶ ಮಾಡಿಕೊಡುವುದಿಲ್ಲ. ಸಮಾಜವೇ ಇವರಿಗೆ ಉದ್ಯೋಗ ದೊರಕದಿರಲು ಪ್ರತ್ಯಕ್ಷ ಕಾರಣವಾಗಿದೆ. ಇವರಿಗೆ ಎಲ್ಲಿಯೂ ಮೀಸಲಾತಿ ಇಲ್ಲ. ಇವರಿಗಾಗಿ ಪ್ರತ್ಯೇಕವಾದ ಉದ್ಯೋಗಗಳೂ ಇಲ್ಲ. ಏನಾದರೂ ಮಾಡಹೊರಟರೆ ಇವರ ಗ್ರಾಹಕರೇ ಇವರ ಎದುರಿಗೆ ಒಂದು ಹಿಂದಿನಿಂದ ಚುಚ್ಚು ಮಾತನ್ನಾಡಿ ಇವರ ಮನ ನೋಯಿಸುತ್ತಾರೆ. ತರ್ಕಕ್ಕೆ ನಿಲುಕದ್ದು-ಮಂಗಳಮುಖಿ ವ್ಯಕ್ತಿಗಳು ಗರ್ಭ ಧರಿಸಬಲ್ಲರೇ?

ಬೇರೆ ದಾರಿಯೇ ಇಲ್ಲದೆ, ತಮ್ಮ ಬಳಗದವರು ಎಲ್ಲಿ ಹೆಚ್ಚಾಗಿ ಇರುತ್ತಾರೋ, ಅಲ್ಲಿಯೇ ತಮ್ಮವರ ನಡುವೆ ಸಮಾನತೆಯನ್ನು ಪಡೆಯುತ್ತಾರೆ. ಉಳಿದವರು ಹೇಗೆ ಜೀವನ ನಡೆಸುತ್ತಿದ್ದಾರೋ ಅದೇ ಉದ್ಯೋಗಗಳನ್ನು ಅನಿವಾರ್ಯವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗೇ ಸುಮ್ಮನೆ- ಒಂದು ವೇಳೆ ವೇಶ್ಯಾವಾಟಿಕೆ ಕಾನೂನು ಬದ್ಧವಾದರೇ?

ಬನ್ನಿ, ಇವರು ಈ ಪರಿಯ ತಾತ್ಸಾರಕ್ಕೆ ಏಕೆ ಒಳಗಾಗಿದ್ದಾರೆ ಎಂಬ ವಿಷಯದ ಬಗ್ಗೆ ಕೆಲವು ಅಮೂಲ್ಯ ಮಾಹಿತಿಗಳನ್ನು ಅರಿಯೋಣ...

ಇವರಿಗೆ ಸಮಾಜದಲ್ಲಿ ಸ್ಥಾನವಿಲ್ಲ

ಇವರಿಗೆ ಸಮಾಜದಲ್ಲಿ ಸ್ಥಾನವಿಲ್ಲ

ಸಾಮಾನ್ಯವಾಗಿ ಸಮಾಜದಲ್ಲಿ ಇವರಿಗೆ ಸಮಾನಸ್ಕಂದತೆ ಸಿಗುವುದಿಲ್ಲ. ಶಾಲೆಯಲ್ಲಿ ದಾಖಲಾತಿ ಪಡೆಯುವುದರಿಂದ ಹಿಡಿದು, ವಿವಾಹವಾಗುವುದು, ಮಕ್ಕಳನ್ನು ಪಡೆಯುವುದು, ಅಷ್ಟೇ ಏಕೆ, ಇವರ ಸ್ನೇಹವನ್ನೂ ಯಾರು ಬಯಸುವುದಿಲ್ಲ. ಇವರನ್ನು ಒಂದು ರೀತಿಯ ತಿರಸ್ಕೃತ ಭಾವನೆಯಿಂದ ನೋಡುವ ಮೂಲಕ ಇವರಿಗೆ ಸಾಮಾನ್ಯ ಜೀವನ ನಡೆಸುವುದು ಕಷ್ಟ.

ಇವರ ಇರುವಿಕೆಯನ್ನು ಮೊಗಲರ ಕಾಲದಿಂದಲೂ ಗಮನಿಸಲಾಗಿದೆ

ಇವರ ಇರುವಿಕೆಯನ್ನು ಮೊಗಲರ ಕಾಲದಿಂದಲೂ ಗಮನಿಸಲಾಗಿದೆ

ಸಾಮಾನ್ಯವಾಗಿ ಮಂಗಳಮುಖಿಯರು ದೈಹಿಕವಾಗಿ ಸಬಲರೂ, ಇತರರಿಗಿಂತ ಎತ್ತರವುಳ್ಳವರೂ ಆಗಿರುವ ಕಾರಣ ಇವರನ್ನು ಮೊಗಲರ ಕಾಲದಲ್ಲಿ ಅಂಗರಕ್ಷಕರನ್ನಾಗಿ, ಸೇನೆಯಲ್ಲಿ ಅಧಿಪತಿಗಳನ್ನಾಗಿ ನೇಮಿಸಲಾಗುತ್ತಿತ್ತು. ಆದರೆ ಇಂದು ಇವರು ಸಮಾಜದಲ್ಲಿ ಉದ್ಯೋಗ ಪಡೆಯುವಲ್ಲಿ ಅತಿ ಹೆಚ್ಚು ತಿರಸ್ಕೃತ ವ್ಯಕ್ತಿಗಳಾಗಿದ್ದಾರೆ.

ಕೇವಲ ಹಣ, ಪ್ರೀತಿ ಇಲ್ಲ!

ಕೇವಲ ಹಣ, ಪ್ರೀತಿ ಇಲ್ಲ!

ಇವರಿಗೆ ಸಮಾಜದಲ್ಲಿ ಶಿಕ್ಷಣವಾಗಲೀ, ಸೂಕ್ತ ಉದ್ಯೋಗವಾಗಲೀ ಸಿಗದೇ ಇರುವ ಕಾರಣ ಇವರು ಅನಿವಾರ್ಯವಾಗಿ ಭಿಕ್ಷಾಟನೆಗೆ ಇಳಿಯುತ್ತಾರೆ. ಸಾಮಾನ್ಯವಾಗಿ ಟ್ರಾಫಿಕ್ ಸಿಗ್ನಲ್ ಕಂಭಗಳ ಬಳಿ ಹಾಗೂ ವೇಶ್ಯಾವೃತ್ತಿಯ ಮೂಲಕ ಇವರು ತಮ್ಮ ಹೊಟ್ಟೆಯನ್ನು ಹೊರೆದುಕೊಳ್ಳುತ್ತಾರೆ. ಈ ಉದ್ಯೋಗಗಳಲ್ಲಿ ಹಣವಿದೆಯಾದರೂ ಪ್ರೀತಿಯೇ ಇಲ್ಲದ ಜೀವನ ಇವರದ್ದಾಗಿದೆ.

ಈ ವೃತ್ತಿಯಲ್ಲಿ ಭಾರೀ ದುಷ್ಪರಿಣಾಮದ ಸಾಧ್ಯತೆ ಇದೆ

ಈ ವೃತ್ತಿಯಲ್ಲಿ ಭಾರೀ ದುಷ್ಪರಿಣಾಮದ ಸಾಧ್ಯತೆ ಇದೆ

ಈ ವೃತ್ತಿಯಲ್ಲಿ ಮಾರಣಾಂತಿಕ ರೋಗಗಳು ಅಂಟಿಕೊಳ್ಳುವ ಸಾಧ್ಯತೆ ಇದೆ. ಇವರಿಗೆ ಈ ಅಪಾಯಗಳ ಬಗ್ಗೆ ಅರಿವು ಇಲ್ಲದ ಕಾರಣ ಇವರು ಸುರಕ್ಷತೆಯನ್ನು ಕಾಪಾಡದೇ ರೋಗಗಳಿಗೆ ಸುಲಭವಾಗಿ ತುತ್ತಾಗುತ್ತಾರೆ.

ಅಪಾಯವಿದೆ ಎಂದು ಗೊತ್ತಾದರೂ, ಅವರಿಗೆ ಅದೇ ದಾರಿ!

ಅಪಾಯವಿದೆ ಎಂದು ಗೊತ್ತಾದರೂ, ಅವರಿಗೆ ಅದೇ ದಾರಿ!

ಒಂದು ವೇಳೆ ಈ ವೃತ್ತಿಯಲ್ಲಿ ಈ ಅಪಾಯವಿದೆ ಎಂದು ಗೊತ್ತಾದರೂ ಇವರು ಈ ವೃತ್ತಿಯ ಬದಲಿಗೆ ಬೇರೆ ಏನನ್ನೂ ಮಾಡುವ ಮನಃಸ್ಥಿತಿಯಲ್ಲಿರದೇ ಇರುವ ಕಾರಣ ಅನಿವಾರ್ಯವಾಗಿ ಹಾಗೇ ಮುಂದುವರೆಯುತ್ತಾರೆ.

ಕಡೆಗೂ, ಈಗ ಜಗತ್ತು ಬದಲಾಗುತ್ತಿದೆ

ಕಡೆಗೂ, ಈಗ ಜಗತ್ತು ಬದಲಾಗುತ್ತಿದೆ

ಆದರೆ ಇಂದು ಜಗತ್ತಿನಲ್ಲಿ ಬದಲಾವಣೆಯ ಅಲೆ ಹರಿದಾಡುತ್ತಿದೆ. ಸರ್ಕಾರದ ವತಿಯಿಂದ ಲಿಂಗ ಎಂದಿರುವ ಸ್ಥಳದಲ್ಲಿ 'E' ಎಂಬ ಅಯ್ಕೆಯನ್ನು ನೀಡಿರುವ ಮೂಲಕ ಈ ಮಕ್ಕಳೂ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ.

ಕಡೆಗೂ, ಈಗ ಜಗತ್ತು ಬದಲಾಗುತ್ತಿದೆ

ಕಡೆಗೂ, ಈಗ ಜಗತ್ತು ಬದಲಾಗುತ್ತಿದೆ

ಸೂಕ್ತ ಶಿಕ್ಷಣ ಪಡೆಯುವ ಮೂಲಕ ಈ ಮಕ್ಕಳು ಮುಂದಿನ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಿ ಸ್ವಾಭಿಮಾನದಿಂದ ಬದುಕಲು ಸಾಧ್ಯ ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯವನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.

 
English summary

Why Do Transgenders Become Prostitutes

Here, we are about to share the actual reasons as to why transgenders turn into prostitutes to earn their livings. Check out their heartbreaking stories/reasons as to what pushes them into this business of flesh trade.
Subscribe Newsletter