ಜನ್ಮ ನಕ್ಷತ್ರಕ್ಕೆ ತಕ್ಕಂತೆ 'ಬರ್ತ್ ಸ್ಟೋನ್' ಧರಿಸಿ-ಕಷ್ಟ ದೂರವಾಗುತ್ತದೆ

By: Jaya subramanya
Subscribe to Boldsky

ಒಬ್ಬ ವ್ಯಕ್ತಿಯು ಜನನ ಹೊಂದಿದಾಗ ಅವರ ಜನನ ದಿನಾಂಕ, ಹುಟ್ಟಿದ ಸಮಯ, ನಿಮಿಷ ಮೊದಲಾದವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ. ವೇದಗಳು ತಿಳಿಸಿರುವಂತೆ ಈ ಆಧಾರವನ್ನು ಇಟ್ಟುಕೊಂಡು ಅವರ ವ್ಯಕ್ತಿತ್ವವನ್ನು ಅರಿತುಕೊಳ್ಳಬಹುದಾಗಿದೆ. ಇದಕ್ಕೆ ಅನುಗುಣವಾಗಿ ಜನನ ಕಲ್ಲುಗಳೂ ಇದ್ದು ಇದನ್ನು ಬರ್ತ್ ಸ್ಟೋನ್ ಎಂದು ಕರೆಯಲಾಗುತ್ತದೆ.

ಈ ಬರ್ತ್ ಸ್ಟೋನ್‌ಗಳನ್ನು ವ್ಯಕ್ತಿಯು ತನ್ನ ಜನ್ಮ ದಿನಾಂಕ ನಕ್ಷತ್ರಕ್ಕೆ ಅನುಸಾರವಾಗಿ ಆಯ್ಕೆಮಾಡಿಕೊಂಡು ಧರಿಸಿದಾಗ ಅವರಲ್ಲಿದ್ದ ದೋಷಗಳು ಪರಿಹಾರವಾಗಿ ಸಾರ್ಥಕ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ನಿಮ್ಮ ರಾಶಿಗೆ ಯಾವ ಹರಳು ಅದೃಷ್ಟ?

ಅಂತೆಯೇ ಅವರ ಕಷ್ಟಗಳು ದೂರಗೊಂಡು ಅದೃಷ್ಟ ಅವರನ್ನು ಹುಡುಕಿಕೊಂಡು ಬರುತ್ತವೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ಬರ್ತ್ ಸ್ಟೋನ್‌ಗಳನ್ನು ಕುರಿತಾದ ವಿವರವಾದ ದಾಖಲೆಗಳನ್ನು ತಿಳಿಯೋಣ....

ಗಾರ್ನೆಟ್ - ಜನವರಿ

ಗಾರ್ನೆಟ್ - ಜನವರಿ

ಜನವರಿ ಮಾಸದಲ್ಲಿ ಹುಟ್ಟಿದವರಿಗೆ ಈ ಕಲ್ಲು ಅತ್ಯಂತ ಪ್ರಾಶಸ್ತ್ಯವಾದುದಾಗಿದೆ. ರಾತ್ರಿಯಲ್ಲಿ ಬೀಳುವ ಕೆಟ್ಟ ಕನಸು ಮತ್ತು ಹಾವಿನ ಕಡಿತದಿಂದ ಇದು ಅವರನ್ನು ರಕ್ಷಿಸುತ್ತದೆ. ಕತ್ತಲೆಯಲ್ಲಿ ನಿಮಗೆ ಮಾರ್ಗದರ್ಶನವಾಗಿ ಈ ಕಲ್ಲು ಪರಿಣಮಿಸಲಿದೆ. ನಿಮ್ಮ ವ್ಯಕ್ತಿತ್ವವನ್ನು ಇದು ಅಭಿವೃದ್ಧಿಪಡಿಸಲಿದ್ದು, ನಿಮಗೆ ಸಾಮರ್ಥ್ಯ ಮತ್ತು ಶಕ್ತಿಯನ್ನು ಒದಗಿಸಲಿದೆ.

ಅಮೆಥಿಸ್ಟ್ - ಫೆಬ್ರವರಿ

ಅಮೆಥಿಸ್ಟ್ - ಫೆಬ್ರವರಿ

ಫೆಬ್ರವರಿಯಲ್ಲಿ ಜನಿಸಿದವರಿಗೆ ಈ ಕಲ್ಲು ಅತ್ಯಂತ ಪ್ರಾಶಸ್ತ್ಯವಾದುದಾಗಿದೆ. ಈ ಕಲ್ಲನ್ನು ಧರಿಸಿದವರು ಸುಖ ಸಂಪತ್ತನ್ನು ತಮ್ಮದಾಗಿಸಿಕೊಳ್ಳುತ್ತಾರೆ.

ಅಕ್ವಾಮರಿನ್ - ಮಾರ್ಚ್

ಅಕ್ವಾಮರಿನ್ - ಮಾರ್ಚ್

ನಿಮ್ಮ ಆರೋಗ್ಯವನ್ನು ಅಭಿವೃದ್ಧಿಪಡಿಸಲು ನಿಮ್ಮ ಸುಖ ಸಂತೋಷಕ್ಕಾಗಿ ಈ ಬರ್ತ್ ಸ್ಟೋನ್ ಅತ್ಯುತ್ತಮವಾದುದಾಗಿದೆ. ಪ್ರೀತಿ, ಯುವತ್ವ ಮತ್ತು ಭರವಸೆಯನ್ನು ಇದು ಸಂಪರ್ಕಪಡಿಸುತ್ತದೆ.

ವಜ್ರ - ಏಪ್ರಿಲ್

ವಜ್ರ - ಏಪ್ರಿಲ್

ಹುಡುಗಿಯರ ಆತ್ಮೀಯ ಸ್ನೇಹಿತನೆಂದೇ ವಜ್ರವನ್ನು ಕರೆಯುತ್ತಾರೆ. ಇದು ಪ್ರೀತಿಯನ್ನು ಜೊತೆಗೂಡಿಸುತ್ತದೆ. ಈ ಸ್ಟೋನ್ ಧರಿಸಲು ಆಯ್ದುಕೊಂಡ ವ್ಯಕ್ತಿಗೆ ಭವಿಷ್ಯವನ್ನು ಉಜ್ವಲಗೊಳಿಸಲು ಇದು ಸಹಕಾರವನ್ನು ನೀಡಲಿದೆ.

ಎಮರಾಲ್ಡ್ - ಮೇ

ಎಮರಾಲ್ಡ್ - ಮೇ

ಈ ಹಸಿರು ಕಲ್ಲುಗಳು ಈ ತಿಂಗಳಿನಲ್ಲಿ ಜನಿಸಿದವರ ಅದೃಷ್ಟವನ್ನು ತಿಳಿಸುತ್ತದೆ. ಈ ಕಲ್ಲು ಆರೋಗ್ಯ, ಸುಧಾರಿತ ಕಣ್ಣಿನ ದೃಷ್ಟಿ, ಧೈರ್ಯ ಮತ್ತು ಫಲವತ್ತೆತನ್ನು ಒದಗಿಸಲಿದೆ.

ಅಲೆಕ್ಸಾಂಡ್ರೈಟ್ - ಜೂನ್

ಅಲೆಕ್ಸಾಂಡ್ರೈಟ್ - ಜೂನ್

ಇದು ನ್ಯಾಯ ನಿಷ್ಟಗೆ ಹೆಸರುವಾಸಿಯಾಗಿದೆ. ಸಂಬಂಧದಲ್ಲಿ ಯಾವುದೇ ರೀತಿಯ ದೋಷಗಳನ್ನು ಇದು ಪರಿಹರಿಸಲಿದೆ. ಕಲ್ಲಿನ ಬಣ್ಣ ಕೂಡ ಆಗಾಗ್ಗೆ ಕ್ರೀಮ್ ವೈಟ್, ಬ್ಲ್ಯಾಕ್, ಗ್ರೇ, ಅಥವಾ ಚಾಕಲೇಟ್‌ಗೂ ಮಾರುತ್ತದೆ.

ರೂಬಿ - ಜುಲೈ

ರೂಬಿ - ಜುಲೈ

ಶಾಂತಿ ಮತ್ತು ಸಮಾಧಾನದ ಸಂಕೇತವಾಗಿದೆ ಈ ಹರಳು. ಇದು ಧೈರ್ಯ ಸ್ಥೈರ್ಯದೊಂದಿಗೆ ಒಗ್ಗೂಡಿದೆ. ಈ ಹರಳನ್ನು ಧರಿಸಿದವರು ಅದೃಷ್ಟವಂತರು ಎಂಬ ಮಾತಿದೆ.

ಪೆರಿಡಾಟ್ - ಆಗಸ್ಟ್

ಪೆರಿಡಾಟ್ - ಆಗಸ್ಟ್

ಈ ಹರಳನ್ನು ಧರಿಸಿದವರು ಖಿನ್ನತೆಯಿಂದ ಹೊರಬರುತ್ತಾರೆ. ವ್ಯಕ್ತಿಯಲ್ಲಿರುವ ಋಣಾತ್ಮಕ ಅಂಶಗಳನ್ನು ಹೊರಹಾಕುವಲ್ಲಿ ಇದು ಸಹಕಾರಿಯಾಗಲಿದೆ.

ಸಫಾಯರ್ಸ್ - ಸಪ್ಟೆಂಬರ್

ಸಫಾಯರ್ಸ್ - ಸಪ್ಟೆಂಬರ್

ಇದು ನ್ಯಾಯ, ನಿಷ್ಟೆ, ಶಾಂತಿ ಮತ್ತು ಸಮಾಧಾನದ ಸಂಕೇತ ಎಂದೆನಿಸಿದೆ. ಇದು ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ಪ್ರತಿಪಾದಿಸುತ್ತದೆ. ಈ ಹರಳಿನ ನೈಜ ಬಣ್ಣ ನೀಲಿಯಾಗಿದೆ.

ಪಿಂಕ್ ಟರ್ಮಾಲಿನ್ - ಅಕ್ಟೋಬರ್

ಪಿಂಕ್ ಟರ್ಮಾಲಿನ್ - ಅಕ್ಟೋಬರ್

ಈ ಹರಳನ್ನು ಧರಿಸುವುದರಿಂದ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ಕ್ರಿಯಾತ್ಮಕತೆ, ಭರವಸೆ ಮತ್ತು ಮುಗ್ಧತೆಯ ಸಂಕೇತ ಇದಾಗಿದೆ.

ಟೋಪಾಸ್ - ನವೆಂಬರ್

ಟೋಪಾಸ್ - ನವೆಂಬರ್

ವ್ಯಕ್ತಿಯಲ್ಲಿ ಧೈರ್ಯವನ್ನು ಉಂಟುಮಾಡುವಲ್ಲಿ ಈ ಹರಳು ಉತ್ತಮ ಎಂದೆನಿಸಿದ್ದು ಮಾನಸಿಕ ಅಸ್ಥಿರತೆಯಿಂದ ನಿಮ್ಮನ್ನು ದೂರವಿರಿಸುತ್ತದೆ. ಪ್ರಯಾಣವನ್ನು ಇಷ್ಟಪಡುವವರು ತಮ್ಮೊಂದಿಗೆ ಈ ಹರಳನ್ನು ಯಾವಾಗಲೂ ಇಟ್ಟುಕೊಳ್ಳಬೇಕು ಇದು ಪ್ರಯಾಣ ಕಾಲದಲ್ಲಿ ಬಂದೊದಗುವ ಆಪತ್ತಿನಿಂದ ನಿಮ್ಮನ್ನು ರಕ್ಷಿಸಲಿದೆ.

ಜಿರ್ಕಾನ್ - ಡಿಸೆಂಬರ್

ಜಿರ್ಕಾನ್ - ಡಿಸೆಂಬರ್

ನಿಮ್ಮ ಅದೃಷ್ಟವನ್ನು ಅತ್ಯುತ್ತಮಗೊಳಿಸುವಲ್ಲಿ ಈ ಹರಳು ಸಹಕಾರಿಯಾಗಲಿದೆ. ಇದು ತಲೆನೋವಿನಿಂದ ನಿಮ್ಮನ್ನು ರಕ್ಷಿಸಲಿದೆ ಮತ್ತು ಇತರ ಕಾಯಿಲೆಗಳಿಗೆ ಸೂಕ್ತ ಔಷಧವಾಗಿದೆ.

 

 

English summary

which Birthstone Suits Your Sun Sign The Best

Check out on how these different birthstones play a major role in increasing the luck of a person as well as can define the personality of the person. Read on to find out which is your gemstone according to the month of your birth and how is it useful.
Subscribe Newsletter