For Quick Alerts
ALLOW NOTIFICATIONS  
For Daily Alerts

ಎಡ ಅಂಗೈ ತುರಿಸುತ್ತಿದೆಯೇ? ಹಾಗಾದರೆ ಕೈಯಲ್ಲಿ ಹಣ ನಿಲ್ಲುವುದಿಲ್ಲ ಎಂದರ್ಥ!!

By Manu
|

ಕೆಲವು ನಂಬಿಕೆಗಳು ಮೂಢನಂಬಿಕೆ ಎಂದು ಗೊತ್ತಿದ್ದರೂ ಹೆಚ್ಚಿನವರು ಇದನ್ನು ನಂಬುವುದನ್ನೇ ಇಷ್ಟಪಡುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ನೂರಾರು ನಂಬಿಕೆಗಳಿದ್ದು ಕೆಲವು ನಂಬಿಕೆಗಳಿಗೆ ಯಾವುದೇ ಆಧಾರವಿಲ್ಲದಿದ್ದರೂ ಇವುಗಳು ಮನಸ್ಸಿಗೆ ನೆಮ್ಮದಿ ನೀಡುವ ಕಾರಣ ಇದನ್ನು ನಂಬುವುದರಲ್ಲಿ ತಪ್ಪೇನೂ ಇಲ್ಲ ಎಂದು ನಂಬುವವರ ವಾದವಾಗಿದೆ. ಬೆಳಿಗ್ಗೆದ್ದ ತಕ್ಷಣ ಏನನ್ನು ನೋಡಿದಿರಿ? ನೀವು ಪ್ರಾರ್ಥನೆಯ ಸಮಯದಲ್ಲಿ ಯಾರನ್ನು ಆರಾಧಿಸುತ್ತೀರಿ, ಯಾವ ಕಣ್ಣು ಅದುರುತ್ತದೆ, ಯಾವ ಕೈ ತುರಿಸುತ್ತದೆ ಎಂಬ ಸೂಚನೆಗಳೆಲ್ಲಾ ನಮಗೆ ಧನಾಗಮನವಾಗುವ ಸೂಚನೆಗಳಾಗಿವೆ.

ಅಂಗೈಯಲ್ಲಿ 'H' ಅಕ್ಷರ ಇದೆಯೇ ಎಂದು ಹುಡುಕಿ, ಇದ್ದರೆ ನೀವು ಅದೃಷ್ಟವಂತರು!

ಬೆಕ್ಕು ದಾರಿಗಡ್ಡ ಹಾದು ಹೋದರೆ, ಏಣಿಯ ಕೆಳಗಿನಿಂದ ಹಾದು ಹೋಗುವುದು, ಬೆಳಿಗ್ಗೆದ್ದ ಬಳಿಕ ಪ್ರಥಮವಾಗಿ ಹಾಲು ಮಾರುವವನನ್ನು ನೋಡುವುದು, ಯಾರಾದರೂ ಹೊರಡುವಾಗ ಸೀನುವುದು ಮೊದಲಾದವುಗಳನ್ನೆಲ್ಲಾ ಅಪಶಕುನಗಳು ಎಂದು ನಂಬಲಾಗಿದೆ. ಇವುಗಳಲ್ಲೆಲ್ಲಾ ಹೆಚ್ಚಿನ ಜನರು ನಂಬುವ ಅಥವಾ ನಂಬಲು ಇಷ್ಟಪಡುವ ನಂಬಿಕೆ ಎಂದರೆ ಕೈ ತುರಿಸುವುದು. ಏಕೆಂದರೆ ಕೈ ತುರಿಸಿದರೆ ಹಣ ಬರುತ್ತದೆ ಎಂಬ ನಂಬಿಕೆಯೇ ಇದಕ್ಕೆ ಕಾರಣ...

ಎಡ ಹಸ್ತ ತುರಿಸಿದರೆ ಏನು ಅರ್ಥ?

ಎಡ ಹಸ್ತ ತುರಿಸಿದರೆ ಏನು ಅರ್ಥ?

ಎಡವೇ ಆಗಲಿ, ಬಲವೇ ಆಗಲಿ ಹಸ್ತ ತುರಿಸತೊಡಗಿದರೆ ಹೆಚ್ಚಿನವರು ಉದ್ವಿಗ್ನತೆಗೆ ಒಳಗಾಗುತ್ತಾರೆ. ಇದು ಬಲವೋ ಎಡವೋ ಎಂಬ ಮಾಹಿತಿಯನ್ನು ಆಧರಿಸಿ ಹಣ ಬರುತ್ತದೆಯೋ ಅಥವಾ ಕೈಯಿಂದ ಹೋಗುತ್ತದೆಯೋ ಎಂದು ನಿರ್ಧರಿಸಬಹುದು. ಎಡಹಸ್ತ ತುರಿಸಿದರೆ ಹಣ ಕೈಯಿಂದ ಹೋಗುತ್ತದೆ ಎಂದರ್ಥ. ಅಂದರೆ ಧನದ ದೇವತೆಯಾದ ಲಕ್ಷ್ಮಿ ನಿಮ್ಮನ್ನು ಬಿಟ್ಟು ಹೋಗುತ್ತಿದ್ದಾಳೆ ಎಂದು ತಿಳಿದುಕೊಳ್ಳಬೇಕು.

ಎಡ ಹಸ್ತ ತುರಿಸಿದರೆ ಏನು ಅರ್ಥ?

ಎಡ ಹಸ್ತ ತುರಿಸಿದರೆ ಏನು ಅರ್ಥ?

ಇದು ನಿಮ್ಮ ಆರ್ಥಿಕ ಸ್ಥಿತಿ ಹಠಾತ್ತನೆ ಕುಸಿಯುವುದು, ಶೇರು ಮಾರುಕಟ್ಟೆ ಕುಸಿಯುವುದು, ಹಣ ಕಳುವಾಗುವುದು, ದರೋಡೆಗೆ ಒಳಗಾಗುವುದು, ಥಟ್ಟನೇ ಎದುರಾಗುವ ಖರ್ಚುವೆಚ್ಚಗಳು, ಪರೋಕ್ಷ ವ್ಯಯಗಳು ಮೊದಲಾದವು ಎದುರಾಗಬಹುದು.

ಬಲಹಸ್ತ ತುರಿಸಿದರೆ ಏನು ಅರ್ಥ?

ಬಲಹಸ್ತ ತುರಿಸಿದರೆ ಏನು ಅರ್ಥ?

ಬಲಹಸ್ತ ತುರಿಸಿದರೆ ಹೆಚ್ಚಿನವರು ಇದಕ್ಕಾಗಿಯೇ ಕಾದಿರುವಂತೆ ಹರ್ಷಚಿತ್ತರಾಗುತ್ತಾರೆ. ಏಕೆಂದರೆ ಇದು ಧನಾಗಮನದ ಸೂಚನೆಯಾಗಿದೆ. ಮುಂದಿನ ದಿನಗಳಲ್ಲಿ ಥಟ್ಟನೇ ದೊಡ್ಡ ಮೊತ್ತದ ಹಣ ಅಥವಾ ಪರೋಕ್ಷವಾದ ಆದಾಯ ಲಭಿಸಬಹುದು. ಇದು ಲಾಟರಿಯಲ್ಲಿ ಹಣ ಗೆಲ್ಲುವುದು, ದಾರಿಯಲ್ಲಿ ಹಣ ಸಿಗುವುದು, ಹಿರಿಯರು ಬಿಟ್ಟು ಹೋದ ಹಣ ಲಭಿಸುವುದು, ನಿಮ್ಮ ಮನೆಯಲ್ಲಿಯೇ ನೀವೇ ಹಿಂದೆಂದೋ ಇಟ್ಟು ಮರೆತಿದ್ದ ಹಣ ಥಟ್ಟನೇ ಸಿಗುವುದು ಅಥವಾ ಬೇರಾವುದೋ ರೂಪದಲ್ಲಿ ಹಣ ಅಥವಾ ಸಮಾನವಾದ ಇತರ ಯಾವುದೋ ನಿಧಿ ದಕ್ಕುವ ಸೂಚನೆಯಾಗಿದೆ.

ಈ ಬಗ್ಗೆ ಭಿನಾಭಿಪ್ರಾಯಗಳು

ಈ ಬಗ್ಗೆ ಭಿನಾಭಿಪ್ರಾಯಗಳು

ಕೆಲವು ಸಂಪ್ರದಾಯಗಳಲ್ಲಿ ಮೇಲಿನ ಸೂಚನೆ ಯಥಾವತ್ತಾಗಿ ನಂಬುವುದಿಲ್ಲ. ಬದಲಿಗೆ ಈ ತುರಿಕೆ ಯಾರಿಗೆ ಆಯಿತು ಎಂಬ ಮಾಹಿತಿಯನ್ನು ಆಧರಿಸುತ್ತದೆ. ಒಂದು ವೇಳೆ ಪುರುಷನ ಎಡಗೈ ತುರಿಸಿದರೆ ಧನದ ನಿರ್ಗಮನ ಹಾಗೂ ಬಲಗೈ ತುರಿಸಿದರೆ ಧನದ ಆಗಮನದ ಸೂಚನೆಯಾಗಿದೆ.

ಈ ಬಗ್ಗೆ ಭಿನಾಭಿಪ್ರಾಯಗಳು

ಈ ಬಗ್ಗೆ ಭಿನಾಭಿಪ್ರಾಯಗಳು

ಇದೇ ವೇಳೆಗೆ ಮಹಿಳೆಯರಲ್ಲಿ ಇದು ತದ್ವಿರುದ್ಧವಾಗಿರುತ್ತದೆ. ಅಂದರೆ ಎಡಗೈ ತುರಿಸಿದರೆ ಧನಾಗಮನ ಹಾಗೂ ಬಲಗೈ ತುರಿಕಿಸಿದರೆ ಧನದ ನಿರ್ಗಮನದ ಸೂಚನೆಯಾಗಿದೆ.

ಅಷ್ಟಕ್ಕೂ ಹಸ್ತಗಳೇಕೆ ತುರಿಸುತ್ತವೆ?

ಅಷ್ಟಕ್ಕೂ ಹಸ್ತಗಳೇಕೆ ತುರಿಸುತ್ತವೆ?

ಧನ ಆಗಮನ ಅಥವಾ ನಿರ್ಗಮನ ಯಾವುದೇ ಆಗಿರಲಿ, ಇದಕ್ಕೆ ನಮ್ಮ ನಂಬಿಕೆಗಳೇ ಪ್ರಮುಖ ಕಾರಣ. ನಮ್ಮ ದೇಹದಲ್ಲಿ ಪ್ರವಹಿಸುತ್ತಿರುವ ಶಕ್ತಿಗಳೇ ಈ ತುರಿಕೆಗೂ ಕಾರಣವಾಗಿವೆ. ನಮ್ಮ ಎಡಗೈ ಸಾಮಾನ್ಯವಾಗಿ ಎರಡನೆಯದಾಗಿ ಬಳಸುವ ಅಂಗವಾಗಿದ್ದು ಈ ಕೈಗಳಿಂದ ನಡೆಸುವ ಕ್ರಿಯೆಗಳು ಕೊಂಚ ಅನುಮಾನಾಸ್ಪದವಾಗಿರುತ್ತವೆ. ಒಂದು ವೇಳೆ ಹಣ ಹೋಗುವುದೇ ಇದ್ದರೆ ಇದು ನಿಮಗೆ ಲಭಿಸುತ್ತಿರುವ ಯಾವುದೋ ವಸ್ತು ಅಥವಾ ಸೇವೆಯ ಬದಲಾಗಿಯೇ ಇರಬಹುದು.

ಅಷ್ಟಕ್ಕೂ ಹಸ್ತಗಳೇಕೆ ತುರಿಸುತ್ತವೆ?

ಅಷ್ಟಕ್ಕೂ ಹಸ್ತಗಳೇಕೆ ತುರಿಸುತ್ತವೆ?

ಆದ್ದರಿಂದ ಹಣದ ನಿರ್ಗಮನವಾದರೂ ಬೇರಾವುದೋ ರೂಪದಲ್ಲಿ ಸಂಪತ್ತು ಅಥವಾ ಸಂತೋಷ ಆಗಮನವಾಗಿರುತ್ತದೆ. ಆದ್ದರಿಂದ ಎಡಹಸ್ತ ತುರಿಸಿದರೆ ಕೆಟ್ಟದ್ದೇ ಆಗಬೇಕೆಂದೇನಿಲ್ಲ, ಒಳ್ಳೆಯದೂ ಆಗಬಹುದು. ನೀವು ಈ ಮೂಲಕ ನಿಮ್ಮ ನೆಮ್ಮದಿಗೆ ಏನಾದರೂ ಪಡೆದುಕೊಳ್ಳುತ್ತಿರಬಹುದು ಅಥವಾ ಹೊಸ ವಿದ್ಯೆಯೊಂದನ್ನು ಕಲಿಯುತ್ತಿರಬಹುದು.

ಹಸ್ತ ತುರಿಸಿದರೆ ಶಮನಗೊಳಿಸುವುದು ಹೇಗೆ?

ಹಸ್ತ ತುರಿಸಿದರೆ ಶಮನಗೊಳಿಸುವುದು ಹೇಗೆ?

ಎಡಹಸ್ತ ತುರಿಸಿದರೆ ಹಸ್ತವನ್ನು ಮರದ ತುಂಡಿಗೆ ಉಜ್ಜಿಕೊಳ್ಳುವ ಮೂಲಕ ಶಮನ ದೊರಕುತ್ತದೆ ಎಂದು ನಂಬಲಾಗಿದೆ. ಕೆಲವರು ಇದರ ದುಷ್ಪರಿಣಾಮದಿಂದ ಅಥವಾ ಶಾಪದಿಂದ ತಪ್ಪಿಸಿಕೊಳ್ಳಲು ಉಪ್ಪುನೀರಿನಿಂದ ಹಸ್ತವನ್ನು ತೊಳೆದುಕೊಳ್ಳುತ್ತಾರೆ. ಕೆಲವರು ಬೇರೆ ಆಯ್ಕೆಯೇ ಇಲ್ಲದೆ ಬಲಗೈಯಿಂದ ತುರಿಸಿಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ತುರಿಸುವ ಹಸ್ತಗಳನ್ನು ತಮ್ಮ ಜೇಬುಗಳ ಒಳಗೆ ಹಾಕಿ ಉಜ್ಜಿಕೊಳ್ಳುವ ಮೂಲಕ ಶಮನ ಪಡೆದುಕೊಳ್ಳುತ್ತಾರೆ. ಇದರಿಂದ ಹಣ ಒಂದು ವೇಳೆ ಕೈ ತಪ್ಪಿ ಹೋದರೂ ಜೇಬಿನೊಳಗೇ ಇರುತ್ತದೆ ಎಂದು ಇವರ ನಂಬಿಕೆಯಾಗಿದೆ.

ಮರಕ್ಕೆ ಉಜ್ಜುವುದರಿಂದ ನೆರವಾಗುತ್ತದೆಯೇ?

ಮರಕ್ಕೆ ಉಜ್ಜುವುದರಿಂದ ನೆರವಾಗುತ್ತದೆಯೇ?

ಈ ವಿಧಾನದಿಂದ ನಿಜವಾಗಿಯೂ ಉತ್ತಮ ಪರಿಣಾಮ ದೊರಕುತ್ತದೆ. ಏಕೆಂದರೆ ನಮ್ಮ ದೇಹದ ಋಣಾತ್ಮಕ ಶಕ್ತಿಗಳು ಮರಕ್ಕೆ ಉಜ್ಜುವ ಮೂಲಕ ಮರದ ಮೂಲಕ ನೆಲಕ್ಕೆ ವರ್ಗಾವಣೆಯಾಗಿ ನಿಷ್ಕ್ರಿಯಗೊಳ್ಳುತ್ತದೆ. ಮರವನ್ನು ಮುಟ್ಟುವ ನಂಬಿಕೆಯೂ ಈ ರೂಪದಲ್ಲಿಯೇ ಬೆಳೆದು ಬಂದಿರಬೇಕು.

English summary

What does it mean when your left hand is itching?

There are many superstitions that abound in our culture but perhaps, the most number are related to money. What you see when you wake up, who you worship when you pray, which eye twitches and which hand itches pretty much decide how money will influence our lives. Cats crossing path, walking under stairs, seeing milkman in the morning, sneezing when someone is leaving- all these are seemingly connected to our fortunes. One of the most famous of these superstitions is about the itchy palms.
X
Desktop Bottom Promotion