ಕನಸಿನಲ್ಲಿ ದೇವಸ್ಥಾನ ಕಂಡರೆ ಅದರ ಅರ್ಥ ಹೀಗೂ ಇರಬಹುದು...

Posted By: Hemanth
Subscribe to Boldsky

ಮನಸ್ಸಿನಲ್ಲಿರುವ ಆಸೆ, ಆಕಾಂಕ್ಷೆಗಳು, ದುಃಖ ರಾತ್ರಿ ಕನಸಿನಲ್ಲಿ ಬಂದು ಕಾಡುವುದು ಎನ್ನಲಾಗುತ್ತದೆ. ಇದನ್ನು ಕೆಲವರು ಒಪ್ಪಿಕೊಳ್ಳಬಹುದು. ಮುಂಜಾನೆ ವೇಳೆ ಕಂಡ ಕನಸು ನನಸಾಗುತ್ತದೆ ಎನ್ನುವ ಮೂಢನಂಬಿಕೆಯು ನಮ್ಮಲ್ಲಿದೆ. ಆದರೆ ಕನಸುಗಳು ನಿಜವಾಗುವುದು ಕಡಿಮೆ.

ಕೆಲವೊಮ್ಮೆ ಕನಸುಗಳಲ್ಲಿ ದೇವರು ಪ್ರತ್ಯಕವಾಗಬಹುದು ಅಥವಾ ಇಹಲೋಕ ತ್ಯಜಿಸಿರುವಂತಹ ಹಿರಿಯರು ನಿಮಗೆ ಕಾಣಬಹುದು. ಇದೆಲ್ಲವೂ ನಾವು ಅವರ ಬಗ್ಗೆ ಇಟ್ಟುಕೊಂಡಿರುವ ಪ್ರೀತಿ ಮತ್ತು ನೆನಪಿನಿಂದ ಹೀಗೆ ಆಗುತ್ತದೆ. ಕನಸಿನಲ್ಲಿ ಭವಿಷ್ಯದ ಬಗ್ಗೆ ಅತೀಂದ್ರೀಯ ಶಕ್ತಿಗಳು ನಮಗೆ ಸೂಚನೆ ನೀಡುತ್ತವೆ ಎನ್ನುತ್ತಾರೆ.

ವಿಸ್ಮಯ ನಗರಿ: ದೇವಸ್ಥಾನದ ಹಿಂದಿರುವ 'ಧನಾತ್ಮಕ ಶಕ್ತಿ'

ಮುಂದೆ ಹೇಗೆ ಸಾಗಬೇಕು ಎನ್ನುವ ಸೂಚನೆ ಈ ಕನಸಿನಲ್ಲಿ ಇರುತ್ತದೆ ಎನ್ನಲಾಗುತ್ತದೆ. ಕನಸುಗಳಿಗೆ ಕೂಡ ಅರ್ಥವಿರುತ್ತದೆ. ಪ್ರತಿಯೊಂದು ಕನಸಿಗೂ ಒದೊಂದು ಅರ್ಥವಿದೆ. ಕನಸಿನಲ್ಲಿ ದೇವಸ್ಥಾನ ಕಂಡರೆ ಅದರ ಅರ್ಥವೇನು ಎಂದು ಬೋಲ್ಡ್ ಸ್ಕೈ ಈ ಲೇಖನ ಮೂಲಕ ನಿಮಗೆ ತಿಳಿಸಿಕೊಡಲಿದೆ..... 

ದೇವಸ್ಥಾನದ ಕನಸಿನ ಅರ್ಥವೇನು?

ದೇವಸ್ಥಾನದ ಕನಸಿನ ಅರ್ಥವೇನು?

ದೇವಸ್ಥಾನದ ಕನಸಿನ ಬಗ್ಗೆ ಸರಿಯಾದ ಅರ್ಥ ಕಂಡುಕೊಳ್ಳಬೇಕಾದರೆ ನಿಮ್ಮ ಜೀವನದಲ್ಲಿ ಈಗ ಆಗುವತಹ ಕೆಲವೊಂದು ಘಟನೆಗಳ ಬಗ್ಗೆ ಗಮನಹರಿಸಬೇಕು. ನೀವು ಎದುರಿಸುತ್ತಿರುವ ಮಾನಸಿಕ ಅನುಭವವೇ ಈ ದೇವಸ್ಥಾನದ ಕನಸಾಗಿದೆ. ಇದು ಸರಿಯಾದರೆ ದೇವಾಲಯದ ಕನಸಿನ ಒಳಗಿನ ಅರ್ಥ ತಿಳಿಯಬಹುದು.

ಮನಸ್ಸಿಗೆ ಶಾಂತಿ ಬೇಕೆಂದು ಅರ್ಥ!

ಮನಸ್ಸಿಗೆ ಶಾಂತಿ ಬೇಕೆಂದು ಅರ್ಥ!

ಮನುಷ್ಯರಿಗೆ ರಕ್ಷಿತಾರಣ್ಯ ಮತ್ತು ದೇವರು ನೆಲೆಸುವ ಜಾಗವೇ ದೇವಾಲಯ. ಪ್ರತಿಯೊಬ್ಬ ಮನುಷ್ಯ ಕೂಡ ತನ್ನ ಪ್ರಾರ್ಥನೆ, ಪ್ರಶ್ನೆ ಮತ್ತು ಕೋರಿಕೆ ಇಟ್ಟುಕೊಂಡು ದೇವಸ್ಥಾನಕ್ಕೆ ಹೋಗುತ್ತಾನೆ. ಮನುಷ್ಯರಿಗೆ ಸಂಕಷ್ಟಗಳು ಎದುರಾದಾಗ ಅವರು ದೇವಸ್ಥಾನಗಳಿಗೆ ಭೇಟಿ ನೀಡಿ ಮನಸ್ಸಿಗೆ ಶಾಂತಿ ಬಯಸುತ್ತಾರೆ. ಗೌರವ ಸೂಚಿಸಲು ಮತ್ತು ಧನ್ಯವಾದ ಸಲ್ಲಿಸಲು ಮನುಷ್ಯರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ದೇವಸ್ಥಾನದ ಕನಸು ಬಿದ್ದರೆ ನಿಮ್ಮ ಮನಸ್ಸಿಗೆ ಶಾಂತಿ ಬೇಕೆಂದು ಅರ್ಥ.

ಹರಕೆ ಬಾಕಿಯಿದೆ ಎಂದರ್ಥ!

ಹರಕೆ ಬಾಕಿಯಿದೆ ಎಂದರ್ಥ!

ಮನುಷ್ಯರಿಗೆ ಸರಿಯಾದ ಮಾರ್ಗ ತೋರಿಸಲು ಮತ್ತು ಕೆಟ್ಟದ್ದನ್ನು ತಿಳಿಸಲು ದೇವರು ಹಾಗೂ ಅತೀಂದ್ರೀಯ ಶಕ್ತಿಗಳಿಗೆ ಕನಸು ಎನ್ನುವುದು ಒಂದು ವೇದಿಕೆ. ಈ ಮೂಲಕ ಒಳ್ಳೆಯದು ಹಾಗೂ ಕೆಟ್ಟದನ್ನು ಮನುಷ್ಯರಿಗೆ ತಿಳಿಸುತ್ತಾರೆ. ದೇವಸ್ಥಾನವು ಕನಸಿನಲ್ಲಿ ಬಂದರೆ ನಿಮ್ಮ ಹರಕೆ ಬಾಕಿಯಿದೆ ಎಂದರ್ಥ.

ಹರಕೆ ಬಾಕಿಯಿದೆ ಎಂದರ್ಥ!

ಹರಕೆ ಬಾಕಿಯಿದೆ ಎಂದರ್ಥ!

ನಿಮ್ಮ ಪ್ರಾರ್ಥನೆ ಈಡೇರಿದರೆ ಹರಕೆ ಸಲ್ಲಿಸುತ್ತೇನೆಂದು ನೀವು ಹಿಂದೆ ಯಾವತ್ತಾದರೂ ಹೇಳಿದ್ದೀರಾ ಎಂದು ಮೊದಲು ನೆನಪು ಮಾಡಿಕೊಳ್ಳಿ. ಯಾವುದೇ ಹರಕೆ ಬಾಕಿ ಉಳಿದಿದ್ದರೆ ನೀವು ತಕ್ಷಣ ಅದನ್ನು ತೀರಿಸಿಕೊಳ್ಳಿ ಮತ್ತು ಮುಂದೆ ದೇವರ ಆಶೀರ್ವಾದ ನಿಮಗೆ ಸಿಗುವುದು.

ದೇವರ ಭರವಸೆ

ದೇವರ ಭರವಸೆ

ಕನಸಿನಲ್ಲಿ ದೇವಾಲಯ ಕಾಣುವುದು ದೇವರ ಭರವಸೆ ಹಾಗೂ ರಕ್ಷಣೆಯಾಗಿದೆ. ನೀವು ತುಂಬಾ ಸಂಕಷ್ಟದಲ್ಲಿ ಇರುವಾಗ ದೇವರಿಗೆ ಮೊರೆ ಹೋಗಿ ನಿಮ್ಮ ಸಂಕಷ್ಟಗಳು ದೂರವಾಗಲಿ ಎಂದು ಬೇಡಿದ್ದರೆ ಆಗ ದೇವಸ್ಥಾನವು ಕನಸಿನಲ್ಲಿ ಬರುವ ಅರ್ಥವೆಂದರೆ ದೇವರು ನಿಮಗೆ ರಕ್ಷಣೆ ನೀಡುತ್ತಾನೆ ಹಾಗೂ ಸಂಕಷ್ಟ ದೂರ ಮಾಡುವ ಭರವಸೆ ನೀಡುತ್ತಾನೆ. ನಿಮಗೆ ಇಷ್ಟದ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ ಈ ಕನಸನ್ನು ನನಸು ಮಾಡಬಹುದು.

ಅಂತಿಮ ಸಂದೇಶ!

ಅಂತಿಮ ಸಂದೇಶ!

ಯಾವುದೇ ಕನಸುಗಳಿಗೆ ಸರಿಯಾದ ಉತ್ತರ ಹಾಗೂ ಅರ್ಥವನ್ನು ಕಂಡುಕೊಳ್ಳುವುದು ತುಂಬಾ ಕಷ್ಟಕರ. ಆಯಾಯ ವ್ಯಕ್ತಿಯ ಜೀವನ ಸ್ಥಿತಿಗೆ ಅನುಸಾರವಾಗಿ ಕನಸುಗಳ ಅರ್ಥದಲ್ಲಿ ಬದಲಾವಣೆ ಆಗುತ್ತಾ ಇರುತ್ತದೆ.

ಅಂತಿಮ ಸಂದೇಶ!

ಅಂತಿಮ ಸಂದೇಶ!

ದೇವಸ್ಥಾನದ ಕನಸು ನಿಮ್ಮ ಧರ್ಮದ ನಂಬಿಕೆ ಮೇಲೆ ನಿರ್ಭರವಾಗಿರುತ್ತೆ. ನೀವು ತುಂಬಾ ಧಾರ್ಮಿಕವಾಗಿದ್ದರೆ ಮತ್ತು ದೇವಸ್ಥಾನಗಳ ಮೇಲೆ ಅತಿಯಾದ ನಂಬಿಕೆಯನ್ನಿಟ್ಟುಕೊಂಡಿದ್ದರೆ ನಿಮ್ಮ ಜೀವನದ ಆಗುಹೋಗುಗಳ ಬಗ್ಗೆ, ಕನಸಿನಲ್ಲಿ ಬಂದ ವಿಷಯದ ಬಗ್ಗೆ ಪರಿಶೀಲಿಸಿ. ನಿಮ್ಮ ಉಪಪ್ರಜ್ಞೆ ಮನಸ್ಸು ಏನು ಹೇಳುತ್ತಿದೆ ಎಂದು ತಿಳಿದುಬರುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    What do dreams about visiting temples mean?

    Often, dreams are the faithful emanations of what is happening in your subconscious mind. Different cultures view dreams differently. The interpretations to dreams are of diverse kinds. While some view it in terms of understanding human psychology, some even view it as a way of supernatural forces talking to man to indicate him of certain future events or guide him to take a particular course of action. Visiting temple in dream could be viewed differently and interpreted in a variety of ways.
    Story first published: Wednesday, June 28, 2017, 8:31 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more