ಇಂತಹ ಜನರೂ ಇದ್ದಾರೆ-ನಾಯಿಯೊಂದಿಗೂ ಮದುವೆ ಮಾಡಿಕೊಳ್ಳುತ್ತಾರೆ!

By: Deepu
Subscribe to Boldsky

ಮದುವೆ ಎಂದರೆ ಒಂದು ಹಬ್ಬದ ಸಡಗರ, ಸಂಭ್ರಮದ ವಾತಾವರಣ. ಪ್ರತಿ ಧರ್ಮದಲ್ಲಿಯೂ ವಿವಾಹಗಳಿಗೆ ತಮ್ಮದೇ ಆದ ಶಾಸ್ತ್ರಗಳಿವೆ. ಆದರೆ ಕೆಲವು ಶಾಸ್ತ್ರಗಳು ಅ ಪಂಗಡದ ಹೊರಗಿನವರಿಗೆ ಅತಿ ವಿಚಿತ್ರ ಎನ್ನಿಸುತ್ತದೆ. ಈ ಚಿತ್ರವಿಚಿತ್ರ ಸಂಪ್ರದಾಯಗಳನ್ನು ಆಚರಿಸಿದ ಬಳಿಕವೇ ದಂಪತಿಗಳನ್ನು ಸಮಾಜ ಸ್ವಾಗತಿಸುತ್ತದೆ.

ಉದಾಹರಣೆಗೆ ಭಾರತದ ಕೆಲವು ಕಡೆಗಳಲ್ಲಿ ಇಂದಿಗೂ ಮಹಿಳೆಯರನ್ನು ಮರಗಳಿಗೆ ಮತ್ತು ಪ್ರಾಣಿಗಳಿಗೆ ಮದುವೆ ಮಾಡಿಕೊಡುವ ವಿಚಿತ್ರ ಸಂಪ್ರದಾಯವಿದೆ. ಬಳಿಕವೇ ಅವರನ್ನು ಪುರುಷರಿಗೆ ವಿವಾಹ ಮಾಡಿಕೊಡಲಾಗುತ್ತದೆ. ಮರಕ್ಕೆ ಮದುವೆ ಮಾಡಿಕೊಡುವ ಈ ಸಂಪ್ರದಾಯಕ್ಕೆ ಕುಂಭ ವಿವಾಹವೆಂದು ಕರೆಯುತ್ತಾರೆ. ಖ್ಯಾತ ತಾರೆ ಐಶ್ವರ್ಯಾ ರೈ ಸಹಾ ಅಭಿಶೇಕ್ ಬಚ್ಚನ್‪ ರೊಂದಿಗೆ ವಿವಾಹವಾಗುವ ಮೊದಲು ಅರಳಿ ಮರವನ್ನು ಮದುವೆಯಾಗಿದ್ದರು. ಇದರಿಂದ ಅವರು ಮಾಂಗಳಿಕ ದೋಷದಿಂದ ಮುಕ್ತರಾದರು ಎಂದು ಅವರಿಗೆ ಮದುವೆ ಮಾಡಿಸಿದ ಅರ್ಚಕರು ತಿಳಿಸುತ್ತಾರೆ.

ಇನ್ನೂ ಸ್ವಾರಸ್ಯಕರ ಸಂಗತಿಗಳು ಏನೆಂದರೆ ಪ್ರಾಣಿಗಳೊಂದಿಗೆ ಮದುವೆಯಾಗುವ ಸಂಪ್ರದಾಯ ಈಗಲೂ ಇದೆ, ಎಂದರೆ ನೀವೂ ನಂಬಲೇಬೇಕು! ಅರೆ ಇದೇನಿದು? ಯಾರಾದರೂ ಪ್ರಾಣಿಯನ್ನು ಮದುವೆಯಾಗಲು ಸಾಧ್ಯವೇ ಎನ್ನುವ ಪ್ರಶ್ನೆ ಬರುವುದು. ಆದರೆ ಈ ಲೇಖನ ಓದಿದರೆ ಸತ್ಯ ಘಟನೆ ಬಗ್ಗೆ ತಿಳಿಯಬಹುದು....

ಬೀದಿ ನಾಯಿಯನ್ನು ಮದುವೆಯಾದ ಯುವತಿ

ಬೀದಿ ನಾಯಿಯನ್ನು ಮದುವೆಯಾದ ಯುವತಿ

ಜಾರ್ಖಂಡದಲ್ಲಿ 18ರ ಹರೆಯದ ಯುವತಿಯೊಬ್ಬಳು ಮಂಗಳಿಕಳಾಗಿದ್ದ ಕಾರಣದಿಂದ ಸಂಪ್ರದಾಯಬದ್ಧವಾಗಿ ಬೀದಿನಾಯಿಯನ್ನು ಮದುವೆಯಾಗುತ್ತಾಳೆ. ಶೇರು ಎನ್ನುವ ಹೆಸರಿನ ನಾಯಿ ಮಂಟಪಕ್ಕೆ ಕಾರಿನಲ್ಲಿ ಬರುತ್ತದೆ ಮತ್ತು ಅತಿಥಿಗಳು ಅದನ್ನು ಸ್ವಾಗತಿಸುತ್ತಾರೆ. ಸುಮಾರು 70 ಮಂದಿ ಅತಿಥಿಗಳು ಮದುವೆ ಸಮಾರಂಭಕ್ಕೆ ಹಾಜರಾಗಿ ನೃತ್ಯದಲ್ಲಿ ಪಾಲ್ಗೊಂಡು ಭರ್ಜರಿ ಭೋಜನ ಆನಂದಿಸಿದ್ದಾರೆ.

ಮದುವೆಗೆ ಕಾರಣ

ಮದುವೆಗೆ ಕಾರಣ

ಹುಡುಗಿಗೆ ಮಂಗಳಿಕ ಸಮಸ್ಯೆಯಿದೆ. ಇದರಿಂದ ಸಂಪೂರ್ಣ ಕುಟುಂಬ ಮತ್ತು ಸಮುದಾಯ ನಾಶವಾಗಬಹುದು. ಮನುಷ್ಯರನ್ನು ಮದುವೆಯಾಗುವ ಮೊದಲು ನಾಯಿಯನ್ನು ಮದುವೆಯಾಗಬೇಕೆಂದು ಸ್ಥಳೀಯ ಜ್ಯೋತಿಷ್ಯರೊಬ್ಬರು ಹುಡುಗಿಯ ಹೆತ್ತವರಿಗೆ ಹೇಳಿದ್ದರಂತೆ. ಮದುವೆಯಲ್ಲಿ ಭಾಗಿಯಾಗಲು ಹುಡುಗಿ ಶಾಲೆಗೆ ರಜೆ ಹಾಕಬೇಕಾಯಿತು. ಆಕೆಗೆ ಈ ಮದುವೆಯಿಂದ ತುಂಬಾ ದುಃಖವಾಗಿದೆ. ಹಳ್ಳಿಯ ಜನರ ಪ್ರಕಾರ ನನ್ನಂತೆ ಹಲವಾರು ಮಂದಿ ಈ ಸಂಪ್ರದಾಯ ಪಾಲಿಸಿದ್ದಾರೆ. ಅವರು ದುಷ್ಟಶಕ್ತಿಯಿಂದ ಮುಕ್ತರಾಗಿ ಸುಖಮಯ ಜೀವನ ಸಾಗಿಸುತ್ತಿದ್ದಾರೆ ಎಂದು ಆಕೆ ಹೇಳುತ್ತಾಳೆ.

ಹೆಣ್ಣು ನಾಯಿಯನ್ನು ಮದುವೆಯಾದ ಭೂಪ!

ಹೆಣ್ಣು ನಾಯಿಯನ್ನು ಮದುವೆಯಾದ ಭೂಪ!

2007ರಲ್ಲಿ ಶಿವಗಂಗಾ ಜಿಲ್ಲೆಯ 33ರ ಹರೆಯದ ಸೇಲ್ವ ಕುಮಾರ್ ಎನ್ನುವಾತ ಹೆಣ್ಣು ನಾಯಿಯನ್ನು ಮದುವೆಯಾಗುತ್ತಾನೆ. ಆತ ಬಾಲ್ಯದಲ್ಲಿ ಎರಡು ನಾಯಿಗಳು ಜತೆಗೂಡುವ ವೇಳೆ ಕಲ್ಲು ಬಿಸಾಕಿ ಅವುಗಳನ್ನು ಕೊಂದಿದ್ದ. ಇದರ ಬಳಿಕ ನಡೆದ ಘಟನೆ ಮಾತ್ರ ನಂಬಲು ಅಸಾಧ್ಯವಾಗಿರುವಂತದ್ದು.

ಸೇಲ್ವ ಎಂಬ ಯುವಕನ ಮದುವೆಯ ಕಥೆ

ಸೇಲ್ವ ಎಂಬ ಯುವಕನ ಮದುವೆಯ ಕಥೆ

ಸೇಲ್ವನ ಕೈ ಹಾಗೂ ಅಂಗಾಂಗಗಳು ಪಾರ್ಶ್ವವಾಯುವಿಗೆ ತುತ್ತಾದವು. ಒಂದು ಕಿವಿ ಕೇಳಿಸಲೇ ಇಲ್ಲ. ನಾಯಿಯ ಶಾಪದಿಂದ ಹೀಗೆ ಆಗಿದೆ ಎಂದು ಜ್ಯೋತಿಷಿಗಳು ಹೇಳಿದರು. ಶಾಪದಿಂದ ಮುಕ್ತನಾಗಲು ಹೆಣ್ಣು ನಾಯಿಯನ್ನು ಮದುವೆಯಾಗಬೇಕೆಂದರು. ಅದರಂತೆ ಸೇಲ್ವ ಮಂದಿರದವೊಂದರಲ್ಲಿ ಹೆಣ್ಣುನಾಯಿಯನ್ನು ಮದುವೆಯಾಗುತ್ತಾನೆ. ಹೆಣ್ಣು ನಾಯಿಯನ್ನು ಸೀರೆ ಹಾಗೂ ಒಡವೆ ಹಾಕಿ ಮದುಮಗಳಂತೆ ಶೃಂಗರಿಸಲಾಗಿರುತ್ತದೆ.

ದುರಾದೃಷ್ಟ ಹೋಗಲಾಡಿಸಲು...

ದುರಾದೃಷ್ಟ ಹೋಗಲಾಡಿಸಲು...

ಮೇಲ್ಭಾಗದ ದವಡೆಯಲ್ಲಿ ಮೊದಲ ಹಲ್ಲು ಬಂದ 9ರ ಹರೆಯದ ಬಾಲಕಿಯು ಆಕೆಯ ಕುಟುಂಬಕ್ಕೆ ದುರಾದೃಷ್ಟವೆಂದು ಜ್ಯೋತಿಷಿಗಳು ಹೇಳಿದರು. ದುರಾದೃಷ್ಟ ಹೋಗಲಾಡಿಸಬೇಕಾದರೆ ಆಕೆ ನಾಯಿಯನ್ನು ಮದುವೆಯಾಗಬೇಕೆಂದು ಪರಿಹಾರ ಸೂಚಿಸಲಾಯಿತು.

ವಿದೇಶದಲ್ಲಿಯೂ ಇಂತಹ ಸಂಪ್ರದಾಯವಿದೆ!

ವಿದೇಶದಲ್ಲಿಯೂ ಇಂತಹ ಸಂಪ್ರದಾಯವಿದೆ!

ಇಂತಹ ಮೂಢನಂಬಿಕೆಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಇದೆ. ಅಲ್ಲಿ ಕೂಡ ಮನುಷ್ಯರು ಪ್ರಾಣಿಗಳನ್ನು ಮದುವೆಯಾದ ಹಲವಾರು ಘಟನೆಗಳು ನಡೆದಿದೆ. 2005ರಲ್ಲಿ ಬ್ರಿಟನ್ ನ ಕೋಟ್ಯಾಧಿಪತಿ ಶಾರೋನ್ ಟೆಂಡ್ಲರ್ ಇಸ್ರೇಲ್ ನ ರೆಸಾರ್ಟ್ ಒಂದರಲ್ಲಿ ಡಾಲ್ಫಿನ್ ನ್ನು ಮದುವೆಯಾಗುತ್ತಾಳೆ. ಮದುವೆಯ ಬಿಳಿ ಬಟ್ಟೆ ಧರಿಸಿದ ಮದುಮಗಳು ಸಾವಿರಾರು ಮಂದಿ ಅತಿಥಿಗಳೊಂದಿಗೆ ಬರುತ್ತಾಳೆ. ಮೊಣಕಾಲೂರಿ ನೀರಿನಲ್ಲೇ ಇದ್ದ ಡಾಲ್ಫಿನ್ ಜತೆ ಆಕೆ ಮದುವೆಯ ವಿಧಿವಿಧಾನಗಳನ್ನು ಪೂರೈಸುತ್ತಾಳೆ.

2006ರಲ್ಲಿ ಸುಡಾನ್ ನ ವ್ಯಕ್ತಿ

2006ರಲ್ಲಿ ಸುಡಾನ್ ನ ವ್ಯಕ್ತಿ

2006ರಲ್ಲಿ ಸುಡಾನ್ ನ ವ್ಯಕ್ತಿಯೊಬ್ಬ ಮೇಕೆಯನ್ನು ಮದುವೆಯಾಗುತ್ತಾನೆ ಮತ್ತು ವಧುದಕ್ಷಿಣೆಯಾಗಿ 75 ಡಾಲರ್ ಗಳನ್ನು ಮೇಕೆಯ ಮಾಲಿಕನಿಗೆ ನೀಡುತ್ತಾನೆ. ಪ್ರಾಣಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದ ಕಾರಣ ಆತನಿಗೆ ಈ ಶಿಕ್ಷೆ ನೀಡಲಾಯಿತು.

All Image Courtesy

English summary

weird human animal marriage around the world

Today we will present you some real life examples where human-animal marriages are not only common, but also celebrated with pomp and show, not just in India but around the world.. have a look
Story first published: Wednesday, June 14, 2017, 23:31 [IST]
Subscribe Newsletter