For Quick Alerts
ALLOW NOTIFICATIONS  
For Daily Alerts

  ಈ ಗ್ರಾಮದ ಪ್ರತಿ ಗ್ರಾಮಸ್ಥರ ಖಾತೆಯಲ್ಲಿಯೂ 85 ಲಕ್ಷ ರೂ ಜಮೆ ಇದೆಯಂತೆ!

  By Arshad
  |

  ಹಣವೆಂದರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಗಾದೆಯೇ ಇದೆ. ಸಾಕಷ್ಟು ಹಣವನ್ನು ಹೊಂದಿರುವುದು ಹಾಗೂ ಶ್ರೀಮಂತಿಕೆಯ ಜೀವನ ನಡೆಸುವುದು ನಮ್ಮೆಲ್ಲರ ಕನಸು. ಒಂದು ವೇಳೆ ನಿಮ್ಮ ಬ್ಯಾಂಕಿನ ಖಾತೆಯಲ್ಲಿ ಸರ್ಕಾರವೇ ಎಂಭತ್ತೈದು ಲಕ್ಷ ರೂ ಭರ್ತಿ ಮಾಡುವುದೇ ಅಲ್ಲದೇ ನಿಮಗೊಂದು ಸುಂದರ ಫ್ಲ್ಯಾಟ್, ಒಂದು ಕಾರು ಹಾಗೂ ಇತರ ಅಮೂಲ್ಯ ಉಡುಗೊರೆಗಳನ್ನು ನೀಡಿದರೆ? ಎಂಥಾ ಸುಂದರ ಕನಸು, ಆದರೆ ಇದು ಅಸಾಧ್ಯ ಎಂದಿರಾ?

  ಈ ಗ್ರಾಮದ ಕಥೆ ಕೇಳಿದರೆ ಕಟುಕನ ಕಣ್ಣಲ್ಲೂ ಕಣ್ಣೀರು ಸುರಿಯುತ್ತೆ

  ನಮ್ಮ ದೇಶದ ನಾಗರಿಕರಿಗೆ ಇಂತಹ ಕನಸೊಂದು ನನಸಾಗುವುದಿರಲಿ, ಹೀಗೊಂದು ಕನಸು ಬಿದ್ದಿತ್ತು ಎಂದೂ ನೆನಪಿರಲಾರದು. ಆದರೆ ನೆರೆಯ ಚೀನಾ ದೇಶದಲ್ಲಿ ಹುವಾಕ್ಸಿ ಎಂಬ ಗ್ರಾಮವಿದೆ. ಈ ಗ್ರಾಮದ ಪ್ರತಿ ನಾಗರಿಕರಿಗೂ ಅಲ್ಲಿನ ಸರ್ಕಾರ ಈ ಎಲ್ಲಾ ಸೌಲಭ್ಯಗಳನ್ನು ನಿಜವಾಗಿ ಒದಗಿಸಿದ್ದು ಪ್ರತಿ ನಾಗರಿಕನ ಖಾತೆಯಲ್ಲಿಯೂ ಸುಮಾರು ಎಂಭತ್ತೈದು ಲಕ್ಷಕ್ಕೂ ಹೆಚ್ಚು ರೂಪಾಯಿಗಳಿವೆ ($250,000) ಈ ಗ್ರಾಮದಲ್ಲಿ ವಿಶ್ವದಲ್ಲಿ ಲಭ್ಯವಿರುವ ಯಾವುದೇ ಐಷಾರಾಮಗಳಿವೆ ಹಾಗೂ ನಾವು ಕೇವಲ ಊಹಿಸಬಹುದಾದ ಸಕಲ ಸೌಲಭ್ಯಗಳಿವೆ. ಪ್ರಾಯಶಃ ಇದು ವಿಶ್ವದ ಅತಿ ಶ್ರೀಮಂತ ಗ್ರಾಮವಾಗಿರಬಹುದು. ಈ ಹಳ್ಳಿಯ ಬಗ್ಗೆ ತಿಳಿದುಕೊಂಡರೆ ಇಲ್ಲಿಗೊಮ್ಮೆ ಭೇಟಿ ನೀಡಬೇಕೆಂದು ನಿಜಕ್ಕೂ ಮನಸ್ಸಾಗದೇ ಇರದು. ಬನ್ನಿ, ಈ ಗ್ರಾಮದ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳೋಣ...

  ಚೀನಾದ ಅತಿ ಶ್ರೀಮಂತ ಗ್ರಾಮ

  ಚೀನಾದ ಅತಿ ಶ್ರೀಮಂತ ಗ್ರಾಮ

  1951ರಲ್ಲಿ ಸ್ಥಳೀಯ ಕಮ್ಯೂನಿಸ್ಟ್ ಪಾರ್ಟಿಯ ಕಾರ್ಯದರ್ಶಿಯಾಗಿದ್ದ ವೂ ರೆನಾಬೋ ಎಂಬುವರು ಈ ಹಳ್ಳಿಯನ್ನು ಸ್ಥಾಪಿಸಿದರು. ಈ ಗ್ರಾಮದ ಪ್ರತಿಯೊಬ್ಬರ ಖಾತೆಯಲ್ಲಿಯೂ ಕನಿಷ್ಟ ಎಂಭತ್ತೈದು ಲಕ್ಷ ರೂಪಾಯಿಗಳಿವೆ. ಅಲ್ಲದೇ ಪ್ರತಿ ನಾಗರಿಕನ ಬಳಿ ಒಂದು ಬಂಗಲೆ ಹಾಗೂ ಕನಿಷ್ಟ ಒಂದು ಕಾರು ಇದೆ. ಈ ಗ್ರಾಮದಲ್ಲಿ ಸುಮಾರು ಕೇವಲ ಎರಡು ಸಾವಿರ ಜನರಿದ್ದಾರೆ.

  ಶ್ರೀಮಂತರಾಗಲು ಇವರೇನು ಮಾಡಿದ್ದರು?

  ಶ್ರೀಮಂತರಾಗಲು ಇವರೇನು ಮಾಡಿದ್ದರು?

  ಈ ಗ್ರಾಮದಲ್ಲಿ ನೆಲೆಸಿದ ಮಾತ್ರಕ್ಕೆ ಇಷ್ಟು ಹಣವೇನೂ ಬರುವುದಿಲ್ಲ. ಅಲ್ಲದೇ ಅಷ್ಟು ಸುಲಭವಾಗಿ ಈ ಗ್ರಾಮದಲ್ಲಿ ನೆಲೆಸಲು ಸಾಧ್ಯವೂ ಇಲ್ಲ. ಇಲ್ಲಿ ನೆಲೆಸಲು ಕನಿಷ್ಠ ಅಗತ್ಯವಾಗಿ ಒಂದು ಉದ್ಯೋಗವಿರಬೇಕು, ಇದೂ ಈ ಗ್ರಾಮದಲ್ಲಿರುವ ಯಾವುದಾದರೊಂದು ಸಂಸ್ಥೆಯಲ್ಲಿಯೇ ಆಗಬೇಕು. ಈ ಗ್ರಾಮದಲ್ಲಿ ನೆಲೆಸಲು ಸೂಕ್ತವಾದ ಉದ್ಯೋಗ ದೊರಕಿತೋ, ಅದೃಷ್ಟ ಖುಲಾಯಿಸಿತೆಂದೇ ಲೆಕ್ಕ. ಉಳಿದ ಗ್ರಾಮಸ್ಥರಿಗೆ ಸಿಗುವಂತಹ ಎಲ್ಲಾ ಅನುಕೂಲಗಳು ಸಿಗುತ್ತವೆ. ದಿನೇ ದಿನೇ ಹೆಚ್ಚುವ ಈ ಶ್ರೀಮಂತಿಕೆಯನ್ನು ಹೇಗೆ ಖರ್ಚು ಮಾಡಬೇಕೆಂದೇ ಗೊತ್ತಾಗದೇ ಹಳೆಯ ಗ್ರಾಮಸ್ಥರೆಲ್ಲಾ ಮನೆಯಿಂದ ಕೊಂಚ ದೂರ ಹೋಗಲೂ ಹೆಲಿಕಾಪ್ಟರುಗಳನ್ನು ಟ್ಯಾಕ್ಸಿಯ ರೂಪದಲ್ಲಿ ಬಳಸುತ್ತಾರೆ.

  ಈ ಗ್ರಾಮದಲ್ಲಿರುವವರಿಗೆ ಮಾತ್ರವೇ ಈ ಹಣ

  ಈ ಗ್ರಾಮದಲ್ಲಿರುವವರಿಗೆ ಮಾತ್ರವೇ ಈ ಹಣ

  ಹಣ ಸಿಕ್ಕಿತೆಂದು ತಮಗೆ ಮನಬಂದಂತೆ ಇವರು ಹಣವನ್ನು ಖರ್ಚು ಮಾಡುವಂತಿಲ್ಲ ಹಾಗೂ ಹಳ್ಳಿಯನ್ನು ತ್ಯಜಿಸುವಂತೆಯೂ ಇಲ್ಲ. ಕರಾರು ಪತ್ರದಲ್ಲಿ ಖಚಿತಪಡಿಸಿದಂತೆ ಯಾವಾಗ ಈ ವ್ಯಕ್ತಿಗಳು ಗ್ರಾಮವನ್ನು ತೊರೆಯುತ್ತಾರೆಯೋ ಆಗ ಇವರಿಗೆ ನೀಡಿದ ಸೌಲಭ್ಯಗಳೂ ಕೊನೆಗೊಳ್ಳುತ್ತವೆ. ಇವರಿಗೆ ನೀಡಿದ ಹಣವನ್ನೂ ವಾಪಸ್ಸು ಪಡೆದುಕೊಳ್ಳಲಾಗುತ್ತದೆ.

  ಈ ಹಳ್ಳಿಗರೇನು ಕೆಲಸ ಮಾಡುತ್ತಾರೆ?

  ಈ ಹಳ್ಳಿಗರೇನು ಕೆಲಸ ಮಾಡುತ್ತಾರೆ?

  ಈ ಗ್ರಾಮದ ಪ್ರತಿಯೊಬ್ಬರೂ ಮಿಲಿಯನ್ನುಗಳಷ್ಟು ವಾರ್ಷಿಕ ವರಮಾನವನ್ನು ಪಡೆಯುವ ಮೂಲಕ ಈ ಗ್ರಾಮ ಚೀನಾದ ಅತಿ ಶ್ರೀಮಂತ ಗ್ರಾಮವಾಗಿದೆ. ಈ ಗ್ರಾಮದ ನಿಜವಾದ ಶ್ರೀಮಂತಿಕೆ ಇರುವುದು ಈ ಗ್ರಾಮದಲ್ಲಿ ಉತ್ಪತ್ತಿಯಾಗುವ ಉಕ್ಕು, ಜವಳಿ ಹಾಗೂ ಸಿದ್ಧ ಉಡುಪುಗಳ ವ್ಯಾಪಾರದಿಂದ.

  ಈ ಗ್ರಾಮ ಒಂದು ಚದರ ಕಿ,ಮೀ ಯಷ್ಟೇ ವಿಸ್ತಾರವಾಗಿದೆ

  ಈ ಗ್ರಾಮ ಒಂದು ಚದರ ಕಿ,ಮೀ ಯಷ್ಟೇ ವಿಸ್ತಾರವಾಗಿದೆ

  ಬರೆಯ ಎರಡು ಸಾವಿರ ಜನರಿರುವ ಈ ಗ್ರಾಮ ಕೇವಲ ಒಂದು ಚದರ ಕಿ.ಮೀ. ವಿಸ್ತಾರವಾಗಿದೆ. ಅಂದರೆ ಸರಿಸುಮಾರು ನಮ್ಮ ಕೆ.ಎಸ್.ಆರ್.ಟಿ.ಸಿ.ಯ ದೊಡ್ಡ ಡಿಪೋದಷ್ಟು ಮಾತ್ರ. ಅಂದರೆ ಈ ಗ್ರಾಮದಲ್ಲಿ ಕಡಿಮೆ ಸ್ಥಳದಲ್ಲಿ ಹೆಚ್ಚಿನ ಜನರು ವಾಸವಿರುವಂತೆ ಬ್ಯಾರಕ್ ಶೈಲಿಯ ಶಯನಮಂದಿರ, ಪಗೋಡಾ ಮಾದರಿಯಲ್ಲಿ ಕಟ್ಟಿರುವ ಕಟ್ಟಡಗಳಲ್ಲಿ ಕಾರ್ಖಾನೆಗಳು ಹಾಗೂ ಮನೆಗಳಿವೆ. ಆದರೆ ಇವರಿಗೆ ಲಭ್ಯವಿರುವ ಸೌಲಭ್ಯಗಳನ್ನು ಪರಿಗಣಿಸಿದರೆ ಭವ್ಯ ದುಬೈ ನಗರಿಯ ವೈಭವ ಹೃಸ್ವರೂಪ ಪಡೆದಂತೆ ಕಾಣುತ್ತದೆ.

  ಈ ಗ್ರಾಮದ ಅತಿ ವೈಭವದ ಇಂಟರ್ ನ್ಯಾಶನ ಲಕ್ಷುರಿ ಲಾಂಗ್ ವಿಶ್ ಹೋಟೆಲ್

  ಈ ಗ್ರಾಮದ ಅತಿ ವೈಭವದ ಇಂಟರ್ ನ್ಯಾಶನ ಲಕ್ಷುರಿ ಲಾಂಗ್ ವಿಶ್ ಹೋಟೆಲ್

  ಈ ಗ್ರಾಮದಲ್ಲಿ ಎಲ್ಲವೂ ಇದ್ದು ಭವ್ಯ ಹೋಟೆಲೊಂದು ಇಲ್ಲದಿದ್ದರೆ ಹೇಗೆ? ಅದೂ ಇದೆ. ಪ್ರಸ್ತುತ ದಿನದ ಅತ್ಯಾಧುನಿಕ ಸೌಲಭ್ಯಗಳೆಲ್ಲವೂ ಇರುವ 826 ಕೋಣೆಗಳಿದ್ದು ಇದರಲ್ಲಿ ಹದಿನಾರು ಪ್ರೆಸಿಡೆನ್ಶಿಯಲ್ ಸ್ವೀಟ್ ಎಂಬ ಅತಿ ದುಬಾರಿ ಕೋಣೆಗಳಿವೆ. ದುಬಾರಿಯಲ್ಲಿ ಇನ್ನೂ ದುಬಾರಿಯಾಗಿರುವ ಗೋಲ್ಡ್ ಪ್ರೆಸಿಡೆನ್ಷಿಯಲ್ ಸ್ವೀಟ್ ಎಂಬ ಕೋಣೆಯ ಒಂದು ರಾತ್ರಿಯ ಬಾಡಿಗೆ ಸುಮಾರು ಹತ್ತು ಲಕ್ಷ ರೂಪಾಯಿ!

  ಹುವಾಕ್ಸಿ ಗ್ರಾಮದ ನೇತಾಡುವ ಗೋಪುರ

  ಹುವಾಕ್ಸಿ ಗ್ರಾಮದ ನೇತಾಡುವ ಗೋಪುರ

  ಈ ಗ್ರಾಮ ಕೇವಲ ಒಂದು ಚದರ ಕಿ.ಮೀ ಇದ್ದರೂ ಇಲ್ಲಿಯ ಆಕರ್ಷಣೆಗಳೇನೂ ಕಡಿಮೆಯಿಲ್ಲ. ಈ ಆಕರ್ಷಣೆಗಳು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇದರಲ್ಲಿ ಪ್ರಮುಖವಾದುದು Hanging Village of Huaxi ಎಂಬ ಎಪ್ಪತ್ತನಾಲ್ಕು ಮಹಡಿಗಳ ಭಾರೀ ಕಟ್ಟಡ. 328ಮೀಟರ್ ಎತ್ತರದ ಅಂದರೆ ಐಫೆಲ್ ಗೋಪುರಕ್ಕಿಂತ ಕೇವಲ ನಾಲ್ಕು ಮೀಟರ್ ಎತ್ತರದ ಈ ಗೋಪುರ ಸರಿಸಮಾನವಾಗಿಲ್ಲ. ಫಿಫಾ ವಿಶ್ವಕಪ್ ಫುಟ್ಬಾಲ್ ಟ್ರೋಫಿಯನ್ನು ಹೋಲುವ ವಿನ್ಯಾಸದ ಈ ಕಟ್ಟಡ ಕೊಂಚ ಅಸಮರ್ಪಕವಾಗಿರುವುದೇ ಇದರ ವಿಶೇಷವಾಗಿದೆ. ಅಲ್ಲದೇ 260,03,68,175.೦೦ ರೂ (೨೬೦ ಕೋಟಿ) ರೂ ಬೆಲೆಯ ಚಿನ್ನದ ಗೂಳಿಯೊಂದನ್ನು ಆಕರ್ಷಣೆಗಾಗಿ ಅರವತ್ತನೆಯ ಮಹಡಿಯಲ್ಲಿರಿಸಲಾಗಿದೆ. ವಿಶೇಷವೆಂದರೆ ಈ ಕಟ್ಟಡ ನಿರ್ಮಾಣಕ್ಕೆ ಪ್ರತಿ ಗ್ರಾಮಸ್ಥನೂ ನೂರು ಮಿಲಿಯನ್ ಯುವಾನ್ (9,50,97,672.00) ನಷ್ಟು ಹಣವನ್ನು ದೇಣಿಗೆ ನೀಡಿದ್ದು ಸರಿಸಮನಾದ ಪಾಲುದಾರರೂ ಆಗಿದ್ದಾರೆ.

  Images Source: Reuters

  English summary

  Villagers Here Have Rs 85 Lakhs In Their Accounts!

  There is a village named Huaxi in China that offers all these facilities to the residents of this village. Each resident has over 85 lakhs or more money than this! This village is full of world class luxuries and facilities which seem only possible in the realm of imagination.Wondering how to get there? Read on to find out about the mysterious richest village of China and know the clause of living here!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more