ವಿಚಿತ್ರ ಕಾಯಿಲೆ: ಬಾಲಕನ ಕಣ್ಣಿನಿಂದ ಬರುತ್ತಿದೆ ರಕ್ತ ಕಣ್ಣೀರು!

By: manu
Subscribe to Boldsky

ಇತ್ತೀಚೆಗೆ ಡಿಸ್ಕವರಿ ಚಾನೆಲ್‌ನಲ್ಲಿ ಭಾರತದ ಮುಂಬೈ ನಿವಾಸಿ ಟ್ವಿಂಕಲ್ ದ್ವಿವೇದಿ ಎಂಬ ಬಾಲಕಿಯ ಬಗ್ಗೆ ವಿಶೇಷ ಕಾರ್ಯಕ್ರಮ ಮೂಡಿಬಂದಿತ್ತು. ಈಕೆ ಅತ್ತಾಗ ರಕ್ತ ಕಣ್ಣೀರಿನ ಮೂಲಕ ಹರಿಯುವುದನ್ನು ಕಂಡುಕೊಳ್ಳಲು ಹಲವು ತಜ್ಞರು ಆಗಮಿಸಿ ಪರೀಕ್ಷಿಸಿ ವಿಫಲರಾಗಿದ್ದರು.   ಈ ಗ್ರಾಮದಲ್ಲಿದೆ ವಿಚಿತ್ರ ಕಾಯಿಲೆ-ಇಲ್ಲಿನ ಜನ ವಾರಗಟ್ಟಲೇ ಮಲಗಿರುತ್ತಾರೆ!!

ಇದೇ ರೀತಿಯ ಪ್ರಕರಣವೊಂದು ಭಾರತದ ಅಸ್ಸಾಮ್‌ನಲ್ಲಿ ಕಂಡು ಬಂದಿದೆ. ಸಾಗರ್ ದೋರ್ಜಿ ಎಂಬ ಕೇವಲ ನಾಲ್ಕು ವರ್ಷದ ಹುಡುಗನ ಕಣ್ಣೀರು ರಕ್ತದಿಂದ ಕೂಡಿರುವುದು ಕಂಡುಬಂದಿದೆ. ಈತನಿಗೆ ಆವರಿಸಿದ ಅತ್ಯಪರೂಪದ ಕಾಯಿಲೆಯ ಕಾರಣ ಇದು ಸಂಭವಿಸುತ್ತಿದ್ದು ಕಣ್ಣೀರನ್ನು ಸುರಿಸುವ ನಾವು ಎಷ್ಟು ಧನ್ಯವಂತರು ಎಂಬ ಅರಿವಾಗುತ್ತದೆ. ಬಲು ಅಪರೂಪದ ಕಾಯಿಲೆವಿದು, ಇದರಿಂದ ಆತ ಪಟ್ಟ ಕಷ್ಟ ಅಷ್ಟಿಷ್ಟಲ್ಲ...

ಆದರೆ ಈತ ಅಳುವಾಗ ಈತನ ಮುಖವನ್ನು ನೋಡಲು ದುರ್ಬಲ ಹೃದಯಿಗಳಿಗೆ ಸಾಧ್ಯವೇ ಇಲ್ಲ. ಏಕೆಂದರೆ ರಕ್ತದ ಕಣ್ಣೀರು ತುಂಬಿಕೊಂಡು ಕಣ್ಣುಗುಡ್ಡೆಯನ್ನು ಕೊಂಚ ಮುಂದೆ ತಳ್ಳುವ ಮೂಲಕ ಈತ ಭಯಾನಕನಾಗಿ ಕಾಣುತ್ತಾನೆ. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ.  ಕಣ್ಣೀರು ತರಿಸುವ ಕಥೆ: ಕ್ಯಾನ್ಸರ್ ರೋಗಿಯೊಬ್ಬರ ಅಂತಿಮ ಇಚ್ಛೆ

ವಿಶೇಷ ಸೂಚನೆ: ಒಂದು ವೇಳೆ ನೀವು ದುರ್ಬಲ ಹೃದಯಿಯಾಗಿದ್ದರೆ ಮುಂದಿನ ಲೇಖನವನ್ನು ಓದಬೇಡಿ. ಏಕೆಂದರೆ ಈ ಪುಟ್ಟ ಬಾಲಕ ಅತ್ತಾಗೆಲ್ಲಾ ಆತನ ಕಣ್ಣಿನಿಂದ ಕಣ್ಣೀರ ಬದಲು ರಕ್ತ ಹರಿಯುವುದು ಕಂಡುಬಂದಿದ್ದು ಇದನ್ನು ಕೆಲವರು ಸಹಿಸಲಾರರು... 

ಈತನಿಗೆ ಬಂದಿರುವ ಕಾಯಿಲೆ ಅತಿ ಅಪರೂಪದೂ, ವಿಚಿತ್ರದ್ದೂ ಹೌದು

ಈತನಿಗೆ ಬಂದಿರುವ ಕಾಯಿಲೆ ಅತಿ ಅಪರೂಪದೂ, ವಿಚಿತ್ರದ್ದೂ ಹೌದು

'Acute Myeloid Leukemia' ಎಂಬ ಹೆಸರಿನ ಕಾಯಿಲೆ ಇದ್ದವರ ಕಣ್ಣುಗಳ ಹಿಂಭಾಗದಲ್ಲಿ ರಕ್ತ ತುಂಬಿಕೊಂಡು ಕಣ್ಣುಗುಡ್ಡೆಯನ್ನು ಹೆಚ್ಚೂ ಕಡಿಮೆ ಇನ್ನೇನು ಕಳಚಿ ಬಿದ್ದೇ ಬಿಡುತ್ತದೆ ಎನ್ನುವಷ್ಟು ಹೊರಗೆ ತಳ್ಳುತ್ತದೆ. ಕಣ್ಣುಗುಡ್ಡೆಗಳ ಬದಿಯಿಂದ ರಕ್ತ ಹರಿಯತೊಡಗುತ್ತದೆ. ಅಳು ನಿಂತರೂ ರಕ್ತದ ಕಣ್ಣೀರು ಬಹಳ ಹೊತ್ತಿನವರೆಗೆ ಹರಿಯುತ್ತಲೇ ಇರುತ್ತದೆ.

ಈತನ ಕಥೆ ವೈರಲ್ ಆಯಿತು

ಈತನ ಕಥೆ ವೈರಲ್ ಆಯಿತು

ಯಾವಾಗ ಈತನ ಬಗ್ಗೆ ವಿವರಗಳು ಅಂತರ್ಜಾಲದಲ್ಲಿ ಪ್ರಕಟಗೊಂಡಿತೋ ಆಗ ಬೆಂಕಿಯಂತೆ ದೇಶಾದ್ಯಂತ ಹರಡಿತು. ಎಷ್ಟರ ಮಟ್ಟಿಗೆ ಎಂದರೆ ರಾಜ್ಯ ಸರ್ಕಾರವೇ ಈತನ ಯೋಗಕ್ಷೇಮವನ್ನು ಅರಿಯಲು ಬರಬೇಕಾಯಿತು. ಪರಿಣಾಮವಾಗಿ ಈತನಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ನೆರವನ್ನು ನೀಡುವ ಭರವಸೆ ನೀಡಲಾಯಿತು. ಚಿಕಿತ್ಸೆಗೆ ಈಗ ಈತ ಬಂದಿರುವುದೆಲ್ಲಿ ಗೊತ್ತೇ? ನಮ್ಮ ಬೆಂಗಳೂರಿಗೆ.

ಈತನ ಕಾಯಿಲೆ ಒಂದು ರೀತಿಯ ಕ್ಯಾನ್ಸರ್

ಈತನ ಕಾಯಿಲೆ ಒಂದು ರೀತಿಯ ಕ್ಯಾನ್ಸರ್

ಬೆಂಗಳೂರಿನಲ್ಲಿರುವ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮುಜುಂದಾರ್ ಶಾ ಕ್ಯಾನ್ಸರ್ ಸೆಂಟರ್‌ನಲ್ಲಿ ಈತನ ಆರೋಗ್ಯವನ್ನು ಪರೀಕ್ಷಿಸಿದ ತಜ್ಞರು ಈತನಿಗೆ Acute Myeloid Leukaemia ಎಂಬ ಅಪರೂಪದ ಕ್ಯಾನ್ಸರ್ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಈ ರೋಗ ವಿಶೇಷವಾಗಿ ಕಣ್ಣಿಗೇ ಹೆಚ್ಚಾಗಿ ಬಾಧಿಸುತ್ತದೆ. ಕಣ್ಣುಗುಡ್ಡೆ ಹೊರಬರುವ ಸ್ಥಿತಿಯನ್ನು ವೈದ್ಯರು bilateral proptosis ಎಂದು ಕರೆಯುತ್ತಾರೆ. ಇದರಿಂದ ಕ್ರಮೇಣವಾಗಿ ದೃಷ್ಟಿ ಶಾಶ್ವತವಾಗಿ ನಷ್ಟಗೊಳ್ಳುವ ಸಂಭವವಿದೆ.

ಈತನ ಚಿಕಿತ್ಸೆ ಮುಂದುವರೆದಿದೆ

ಈತನ ಚಿಕಿತ್ಸೆ ಮುಂದುವರೆದಿದೆ

ಸುಮಾರು ಐದು ತಿಂಗಳವರೆಗೆ ಸತತವಾಗಿ ಚಿಕಿತ್ಸೆ ನೀಡಿದ ಬಳಿಕ ಈತ ಈ ಸ್ಥಿತಿಯಿಂದ ಪಾರಾಗಿದ್ದಾನೆ. ಚಿಕ್ಕ ವಯಸ್ಸಿನಲ್ಲಿಯೇ ಚಿಕಿತ್ಸೆ ಪಡೆದ ಕಾರಣ ಬಾಲಕನ ಕಣ್ಣು ಉಳಿಯುವಂತಾಗಿದೆ. ಚಿಕಿತ್ಸೆಗೆ ಈತನನ್ನು ಆಸ್ಪತ್ರೆಗೆ ತಂದಾಗ ಕ್ಯಾನ್ಸರ್ ಆವರಿಸಲು ಈಗಾಗಲೇ ಪ್ರಾರಂಭಿಸಿಯಾಗಿತ್ತು. ಆದರೆ ನಮ್ಮ ವೈದ್ಯರು ಈತನ ಕಣ್ಣು ಮತ್ತು ಜೀವವನ್ನು ಉಳಿಸಿ ಈತನ ತಂದೆ ತಾಯಿಯರ ಸಹಿತ ಲಕ್ಷಾಂತರ ಸಹೃದಯಿಗಳಿಗೆ ಸಾಂತ್ವಾನ ಒದಗಿಸಿದ್ದಾರೆ.

ಈತನ ಸಹೋದರಿಯ ತ್ಯಾಗ ಇನ್ನಷ್ಟು ದೊಡ್ಡದು

ಈತನ ಸಹೋದರಿಯ ತ್ಯಾಗ ಇನ್ನಷ್ಟು ದೊಡ್ಡದು

ಈ ರೋಗದ ಚಿಕಿತ್ಸೆಗೆ ರಕ್ತಸಂಬಂಧಿಯೊಬ್ಬರ ಅಸ್ತೆಮಜ್ಜೆಯ ಅಗತ್ಯವಿತ್ತು. ಏಕೆಂದರೆ ಅಸ್ತಿಮಜ್ಜೆಯನ್ನು ದೇಹ ಸ್ವೀಕರಿಸುವ ಸಾಧ್ಯತೆ ಅತಿ ಕಡಿಮೆ ಇದ್ದು ರಕ್ತಸಂಬಂಧಿಗಳಿಂದ ಪಡೆದ ಮಜ್ಜೆಯನ್ನು ಸ್ವೀಕರಿಸುವ ಸಾಧ್ಯತೆ ಗರಿಷ್ಠ 30% ಮಾತ್ರ. ಆದರೂ ಈ ಸಾಧ್ಯತೆಯನ್ನೇ ಪರಿಗಣಿಸಿ ಈತನ ಸಹೋದರಿಯಿಂದ ಅಸ್ತಿಮಜ್ಜೆ ಪಡೆದು ಚಿಕಿತ್ಸೆ ಮುಂದುವರೆಸಿದ ವೈದ್ಯರು ಯಶಸ್ಸು ಪಡಿದಿದ್ದಾರೆ.

ಈಗ ಈತ ಎಲ್ಲರಂತೆ ಸಾಮಾನ್ಯ ಕಣ್ಣೀರು ಸುರಿಸುತ್ತಾನೆ

ಈಗ ಈತ ಎಲ್ಲರಂತೆ ಸಾಮಾನ್ಯ ಕಣ್ಣೀರು ಸುರಿಸುತ್ತಾನೆ

ಇಂದು ಈತ ಸಂಪೂರ್ಣವಾಗಿ ಗುಣಮುಖನಾಗಿದ್ದು ಆಸ್ಪತ್ರೆಯಿಂದ ಆರೋಗ್ಯವಂತ ಬಾಲಕನಾಗಿ ಹೊರಬಂದಿದ್ದಾನೆ. BMT ಅಥವಾ bone marrow tranasplanat (ಅಸ್ತಿಮಜ್ಜೆ ಅಳವಡಿಕಾ ಚಿಕಿತ್ಸೆ) ಯ ಮೂಲಕ ಈ ಅತ್ಯಪರೂಪದ ಕಾಯಿಲೆಗೆ ಅತ್ಯಪರೂಪದ ಚಿಕಿತ್ಸೆ ನೀಡುವ ಮೂಲಕ ವೈದ್ಯರು ಪ್ರಶಂಸಾರ್ಹ ಕಾರ್ಯ ನಡೆಸಿದ್ದು ಕರ್ನಾಟಕದ ಹೆಮ್ಮೆಯನ್ನು ವಿಶ್ವಮಟ್ಟಕ್ಕೇರಿಸಿದ್ದಾರೆ. ಈ ಒಳ್ಳೆಯ ಕಾರ್ಯದಲ್ಲಿ ನೆರವಾದ ಎಲ್ಲರಿಗೂ ಬೋಲ್ಡ್ ಸ್ಕೈ ತಂಡ ಅಭಿನಂದನೆಗಳನ್ನು ಸಲ್ಲಿಸುತ್ತಿದೆ. All Image source

 
English summary

This Kid Had A Rare Disease Of Bleeding Eyes

This is the story of a young boy from Assam named Sagar Dorji who is just 4 years old. His sufferings make us realise how lucky we are, as we do not suffer from any such condition and it also makes us realise what a strong little fighter this boy is! Read his interesting story on how he has overcome this rare condition!
Please Wait while comments are loading...
Subscribe Newsletter