For Quick Alerts
ALLOW NOTIFICATIONS  
For Daily Alerts

ಕಣ್ಣೀರು ತರಿಸುವ ಕಥೆ: ಕ್ಯಾನ್ಸರ್ ರೋಗಿಯೊಬ್ಬರ ಅಂತಿಮ ಇಚ್ಛೆ

ಜೀವನದಲ್ಲಿ ಸಾಧಿಸಬೇಕಾದುದನ್ನು ಸಾಧಿಸಿಯೇ ಈ ಲೋಕವನ್ನು ತೊರೆಯುತ್ತಾರೆ. ಯಾವ ಸಾಧನೆ ಮಾಡಬೇಕು ಎಂಬುದನ್ನು ’ಅಂತಿಮ ಇಚ್ಛೆ’ಯ ರೂಪದಲ್ಲಿ ಅವರು ಪ್ರಕಟಿಸುತ್ತಾರೆ, ಆದರೆ.....

By Arshad
|

ನಮ್ಮ ಮನಸ್ಸಿಗೊಪ್ಪುವ ಜೀವನಸಂಗಾತಿಯೊಂದಿಗೆ ಜೀವನ ಕಳೆಯಬೇಕೆಂಬುದು ಎಲ್ಲರ ಕನಸು. ಇದಕ್ಕಾಗಿ ನಾವು ಏನು ಮಾಡಲೂ ಸಿದ್ಧ. ಇತಿಹಾಸದಲ್ಲಿ ಪ್ರೀತಿಗಾಗಿ ಸಾಮ್ರಾಜ್ಯವನ್ನೇ ತ್ಯಜಿಸಿದ, ಅಸಾಧ್ಯವಾದುದನ್ನೆಲ್ಲಾ ಸಾಧಿಸಿದ ನಿದರ್ಶನಗಳು ಕಂಡುಬರುತ್ತವೆ. ಪ್ರೀತಿಯನ್ನು ಪಡೆದುಕೊಳ್ಳುವ ಪ್ರಯತ್ನದ ಹಂತದಲ್ಲಿನ ದಿನಗಳಲ್ಲಿ ಒಂದು ದಿನ ಬೆಳಿಗ್ಗೆದ್ದಾಗ ನಿಮ್ಮ ವೈದ್ಯರು 'ನಿಮ್ಮ ಜೀವಿತಾವಧಿ ಕೆಲವೇ ದಿನಗಳು ಮಾತ್ರ' ಎಂದರೆ ಹೇಗಾಗಬೇಡ!

ಈ ವಿಷಯ ತಿಳಿದಾಕ್ಷಣ ಹೆಚ್ಚಿನವರು ಜೀವನ ಆ ಕ್ಷಣವೇ ಕೊನೆಗೊಂಡಂತೆ ವರ್ತಿಸುತ್ತಾರೆ. ವೈದ್ಯರು ಹೇಳಿದ್ದು ಸುಳ್ಳಿರಬಹುದು, ಇನ್ನೊಬ್ಬ ವೈದ್ಯರ ಬಳಿ ಹೋಗೋಣ ಎಂದು ಒತ್ತಡ ಹೇರಲು ತೊಡಗುತ್ತಾರೆ. ಆದರೆ ವೈದ್ಯರು ಹೇಳಿದ್ದು ಸತ್ಯ ಎಂದು ಗೊತ್ತಾದ ಬಳಿಕ ದುಃಖದ ಮಡುವಿನಲ್ಲಿ ಮುಳುಗುತ್ತಾರೆ. ಇವರಿಗೆ ಇವರ ಜೊತೆಯಲ್ಲಿದ್ದವರೂ ತಮ್ಮ ರಾಗಪ್ರಲಾಪನೆಯಿಂದ ಮುಂದೆ ಬರಬೇಕಾಗಿದ್ದ ಸಾವನ್ನು ಇಂದೇ ಬಂತು ಎಂಬಂತೆ ಪ್ರಲೋಭಿಸತೊಡಗುತ್ತಾರೆ. ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್

ಆದರೆ ಇಂತಹ ಪರಿಸ್ಥಿತಿಯಲ್ಲಿಯೂ ಕೆಲವರು ಉತ್ತಮ ಕಾರ್ಯಗಳನ್ನು ನಡೆಸಿ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳುತ್ತಾರೆ. ಜೀವನದಲ್ಲಿ ಸಾಧಿಸಬೇಕಾದುದನ್ನು ಸಾಧಿಸಿಯೇ ಈ ಲೋಕವನ್ನು ತೊರೆಯುತ್ತಾರೆ. ಯಾವ ಸಾಧನೆ ಮಾಡಬೇಕು ಎಂಬುದನ್ನು 'ಅಂತಿಮ ಇಚ್ಛೆ'ಯ ರೂಪದಲ್ಲಿ ಅವರು ಪ್ರಕಟಿಸುತ್ತಾರೆ. ಶ್ವಾಸಕೋಶದ ಕ್ಯಾನ್ಸರ್-ನೀವು ತಿಳಿಯಲೇ ಬೇಕಾದ ಸತ್ಯಾಸತ್ಯತೆ

ಇವರ ಮಾನಸಿಕ ಸ್ಥೈರ್ಯವನ್ನು ಕಂಡವರು ಮಾತ್ರ ಇವರ ಸಾಧನೆಗೆ ಎಲ್ಲಾ ಬೆಂಬಲ ನೀಡುತ್ತಾರೆ. "ರಾವುಲ್ ಹಿನೋಜೋಸಾ" ಎಂಬ ವ್ಯಕ್ತಿಗೂ ಇದೇ ಪರಿಸ್ಥಿತಿ ಎದುರಾಗಿತ್ತು. ಇವರ ಅಂತಿಮ ಬಯಕೆಯನ್ನು ಪೂರೈಸಲು ಅವರ ಸುಂದರ ಪತ್ನಿ ಹೇಗೆ ನೆರವಾದರು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ......


ಇವರಿಗೆ ರಕ್ತದ ಕ್ಯಾನ್ಸರ್ ಆಗಿತ್ತು

ಇವರಿಗೆ ರಕ್ತದ ಕ್ಯಾನ್ಸರ್ ಆಗಿತ್ತು

chronic lymphocytic leukaemia ಅಥವಾ ಬಿಳಿರಕ್ತಕಣಗಳು ಅತಿವೇಗವಾಗಿ ಮತ್ತು ಅನಿಯಂತ್ರಿತವಾಗಿ ಬೆಳೆಯುವ ರಕ್ತದ ಕ್ಯಾನ್ಸರ್ ಬಾಧಿತರಾಗಿದ್ದ ಇವರು ಅಮೇರಿಕಾದ ಟೆಕ್ಸಸ್ ರಾಜ್ಯದ ಅಮಾರಿಲ್ಲೋ ನಗರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಾ ಪರಿಸ್ಥಿತಿ ಕೈಮೀರಿ ಹೋದ ಬಳಿಕ ವೈದ್ಯರು ಸತ್ಯ ಸಂಗತಿಯನ್ನು ತಿಳಿಸಿದರು. ತಮ್ಮ ಸಾವಿನ ವಿಷಯ ತಿಳಿದರೂ ಧೃತಿಗೆಡದ ಇವರು ತಮ್ಮ ಅಂತಿಮ ಇಚ್ಛೆಯನ್ನು ಪ್ರಕಟಿಸಿದರು.

ಇವರು ತಮ್ಮ ಅತಿ ದೀರ್ಘಕಾಲದ ಪ್ರೇಯಸಿಯನ್ನು ಮದುವೆಯಾಗಬಯಸಿದರು

ಇವರು ತಮ್ಮ ಅತಿ ದೀರ್ಘಕಾಲದ ಪ್ರೇಯಸಿಯನ್ನು ಮದುವೆಯಾಗಬಯಸಿದರು

ಇವರು Yvonne Lamas (ಯುವ್ನೇ ಲಮಾಸ್) ಎಂಬ ಯುವತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದು ಕಳೆದ ಹನ್ನೊಂದು ವರ್ಷಗಳಿಂದ ಇವರ ಸ್ನೇಹ ಮುಂದುವರೆದಿತ್ತು. ಒಂಬತ್ತು ವರ್ಷಗಳ ಹಿಂದೆ ಇವರು ಮದುವೆಯ ಪ್ರಸ್ತಾಪವಿಟ್ಟಿದ್ದರು. ಈಗ ಸಾವಿನ ದವಡೆಯಲ್ಲಿದ್ದಾಗ ಅವರು ಪ್ರಕಟಿಸಿದ ಅಂತಿಮ ಇಚ್ಛೆ "ನಾನು ಆಕೆಯನ್ನು ಮದುವೆಯಾಗಬೇಕು, ಆಕೆ ತನ್ನವಳಾಗಬೇಕು"

ಎಲ್ಲರೂ ತಕ್ಷಣ ಇವರ ಮನವಿಗೆ ಸ್ಪಂದಿಸಿದರು

ಎಲ್ಲರೂ ತಕ್ಷಣ ಇವರ ಮನವಿಗೆ ಸ್ಪಂದಿಸಿದರು

ಇವರ ಬಳಿ ಸಮಯ ಅತ್ಯಲ್ಪವಿದೆ ಎಂದು ಆಸ್ಪತ್ರೆಯ ಸಿಬ್ಬಂದಿಗೆ ಸ್ಪಷ್ಟವಾಗಿ ಅರಿವಿತ್ತು. ಆದ್ದರಿಂದ ಯಾವುದೇ ವಿಳಂಬ ಮಾಡದೇ ಇವರ ಅಂತಿಮ ಇಚ್ಛೆಯನ್ನು ಪೂರೈಸುವತ್ತ ಎಲ್ಲರೂ ತಮ್ಮ ನೆರವಿನ ಕೈ ಚಾಚಿದರು. ಥಟ್ ಅಂದ ಮದುವೆ ಮಾಡಲು ಸಾಧ್ಯವೇ? ಸಮಯದ ಆಭಾವ ಥಟ್ ಅಂತ ಮದುವೆ ಮಾಡಲಿಕ್ಕೂ ಕಾರಣವಾಯ್ತು.

ಪ್ರತಿಯೊಬ್ಬರೂ ಔದಾರ್ಯ ಮೆರೆದರು

ಪ್ರತಿಯೊಬ್ಬರೂ ಔದಾರ್ಯ ಮೆರೆದರು

'ತಕ್ಷಣ ಮದುವೆ ಮಾಡಬೇಕಂತೆ' ಎಂದು ವೈದ್ಯರು ಅಪ್ಪಣೆ ನೀಡಿದ್ದೇ ತಡ, ಇಡಿಯ ಆಸ್ಪತ್ರೆಯಲ್ಲಿ ಸಂಚಲನ ಪ್ರಾರಂಭವಾಯಿತು. ಆಸ್ಪತ್ರೆಯ ಅಡುಗೆ ಮನೆಯಲ್ಲಿಯೇ ಬಾಣಸಿಗರು ತಕ್ಷಣವೇ ಕೇಕ್ ಒಂದನ್ನು ತಯಾರಿಸಿದರು. ಅಮೇರಿಕಾದ ಕಾನೂನಿನ ಪ್ರಕಾರ ಯಾವುದೇ ಮದುವೆಗೆ ಕನಿಷ್ಟ 72 ಘಂಟೆಗಳ ಕಾಲಾವಕಾಶದ ಬಳಿಕವೇ ಮದುವೆಯ ಲೈಸನ್ಸ್ ದೊರಕುತ್ತದೆ. ಆದರೆ ಜಡ್ಜ್ ಸಾಹೇಬರು ಇದನ್ನು ಮೊಟಕುಗೊಳಿಸಿ ಔದಾರ್ಯ ಮೆರೆದರು. ಮದುಮಗನಿಗೆ ಬೇಕಾದ ಸೂಟ್, ಉಂಗುರ, ಹೂಗುಚ್ಛ ಮೊದಲಾದ ಎಲ್ಲಾ ಪರಿಕರಗಳನ್ನು ಯಾವುದೋ ಮಾಯೆಯಲ್ಲಿ ತಕ್ಷಣವೇ ಹೊಂದಿಸಲಾಯ್ತು.

ಪ್ರತಿಯೊಬ್ಬರೂ ಔದಾರ್ಯ ಮೆರೆದರು

ಪ್ರತಿಯೊಬ್ಬರೂ ಔದಾರ್ಯ ಮೆರೆದರು

ತನ್ನ ಮದುವೆಯನ್ನು ಮಕ್ಕಳ ಕಟ್ಟುಕತೆಯಲ್ಲಿ ಬರುವಂತೆ ನೆರವೇರಿಸಬೇಕೆಂದು ಅವರ ಇಚ್ಛೆಯಾಗಿತ್ತು.ಎಲ್ಲರಿಗೂ ತಮ್ಮ ಮದುವೆಯಲ್ಲಿ ವಿಶೇಷತೆ ಇರಬೇಕೆಂಬ ಬಯಕೆ ಇರುತ್ತದೆ. ಇವರಿಗೆ ತಮ್ಮ ಮದುವೆಯನ್ನು ಮಕ್ಕಳ ಕಟ್ಟುಕತೆಯಲ್ಲಿ ಬರುವ ಮದುವೆಗಳ ರೀತಿಯಲ್ಲಿ ಆಗಬೇಕೆಂಬ ಇಚ್ಛೆಯಿತ್ತು. ಇವರಿಗೆ ಕ್ಯಾನ್ಸರ್ ಇದೆ ಎಂದು ಖಚಿತವಾಗಿ ಗೊತ್ತಾಗುವ ಕೆಲವೇ ದಿನಗಳ ಮುನ್ನ ಇವರ ನಿಶ್ಚಿತಾರ್ಥವೂ ನೆರವೇರಿತ್ತು. ಆದರೆ ರಕ್ತದ ಕ್ಯಾನ್ಸರ್ ನಿಧಾನವಾಗಿ ಹೆಚ್ಚುತ್ತಾ ಹೋಗಿ ಸಾವು ಅನಿವಾರ್ಯ ಎಂದಾಗ ಈ ಮದುವೆ ನಡೆಯುವುದೇ ಇಲ್ಲ ಎಂದು ಎಲ್ಲರೂ ಭಾವಿಸಿದ್ದರು.

ಹೊಸ್ತಿಲಿಗೆ ಆಗಮಿಸಿದ ಸಾವು

ಹೊಸ್ತಿಲಿಗೆ ಆಗಮಿಸಿದ ಸಾವು

ಅಂತೂ ಎಲ್ಲರ ಸಹಕಾರದಿಂದ ಇವರ ಮದುವೆಯೂ ಇವರು ಅಂದುಕೊಂಡಂತೆಯೇ ನಡೆಯಿತು. ಮದುಮಗಳೂ ತನ್ನ ದುಃಖವನ್ನು ತೋಡಲಾರದೇ ನಗುಮೊಗದಿಂದಲೇ ಮದುವೆಯಲ್ಲಿ ಭಾಗವಹಿಸಿ ಕಾನೂನುಬದ್ಧ ಪತ್ನಿಯಾದಳು. ವಿವಾಹವಾದ ಕೇವಲ ಮೂವತ್ತಾರು ಗಂಟೆಗಳ ಬಳಿಕ ರಾವುಲ್ ಸಾವನ್ನಪ್ಪಿದರು. ಅವರ ಸಾವಿಗೆ ಮರುಗದವರಂತೂ ಅಂದು ಯಾರೂ ಇರಲಿಲ್ಲ. ಅಷ್ಟೇ ಅಲ್ಲ, ಹಿತೈಷಿಗಳು ಇವರ ಮದುವೆಯ ವೀಡಿಯೋ ರೆಕಾರ್ಡಿಂಗ್ ಮಾಡಿ ಫೇಸ್ ಬುಕ್ ಮೂಲಕ ಪ್ರಕಟಿಸಿದ ಬಳಿಕವಂತೂ ವಿಶ್ವವೇ ಇವರ ಸಾವಿಗೆ ಮರುಗಿತು. ಈ ವೀಡಿಯೋವನ್ನು ಕೆಳಗಿನ ಕೊಂಡಿಯ ಮೂಲಕ ನೋಡೋಣ, ರಾವುಲ್ ರವರ ಅಂತಿಮ ಇಚ್ಛೆಯನ್ನು ಪೂರೈಸಿದ ಅವರ ಪತ್ನಿ ಹಾಗೂ ಮನೆಯವರಿಗೆ ದುಃಖವನ್ನು ಭರಿಸುವ ಶಕ್ತಿ ಭಗವಂತನು ನೀಡಲಿ ಎಂದು ಪ್ರಾರ್ಥಿಸೋಣ.

English summary

The Last Wish Of A Cancer Patient!

Here is an inspirational story of a man named "Raul Hinojosa" who was suffering from cancer for a long time. Check out his beautiful wife who made his last wish come true! We bet Raul would have left this earth with a smiling face after his last wish was fulfilled.....
X
Desktop Bottom Promotion