ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿದರೆ, ಯಶಸ್ಸು ನಿಮ್ಮ ಹಿಂದೆಯೇ ಬರಲಿದೆ!

By: Arshad
Subscribe to Boldsky

ಬೆಳಗ್ಗಿನ ಸುಖನಿದ್ದೆಯನ್ನು ಕಳೆದುಕೊಳ್ಳಲಿಚ್ಛಿಸುವ ವ್ಯಕ್ತಿಗಳು ತುಂಬಾ ಕಡಿಮೆ. ಈ ನಿದ್ದೆಯಿಂದ ಎಬ್ಬಿಸುವ ಅಲಾರಾಂ ಗಡಿಯಾರದ ಮೇಲೆ ನಮಗೆಲ್ಲಾ ಇನ್ನಿಲ್ಲದ ಕೋಪ ಬರುತ್ತದೆ. ಕೆಲವರು ತಮ್ಮ ಜೀವನಸಂಗಾತಿಯ ಸಹಸ್ರನಾಮ ಕೇಳಿ ಏಳುತ್ತಾರೆ. ಇನ್ನೂ ಕೆಲವರು ರಾತ್ರಿಯ ಭಯಾನಕ ಸ್ವಪ್ನದ ಬಳಿಕ ಎಚ್ಚರಾಗಿರುತ್ತದೆ.  'ಯಶಸ್ಸು, ಸಮೃದ್ಧಿ, ಏಳಿಗೆಗಾಗಿ'-ಈ ಸಿಂಪಲ್ ಟಿಪ್ಸ್ ಅನುಸರಿಸಿ

ಇವುಗಳಲ್ಲಿ ಯಾವುದೇ ರೀತಿಯಾಗಿ ಬೆಳಿಗ್ಗೆ ಎಚ್ಚರಾಗಿರಲಿ, ಅಂದಿನ ದಿನವಿಡೀ ಋಣಾತ್ಮಕ ಶಕ್ತಿ ನಿಮ್ಮನ್ನು ಕಾಡುತ್ತದೆ. ದಿನದ ಮುಂದಿನ ಕ್ಷಣಗಳಲ್ಲಿ ಏನಾಗುತ್ತದೆ ಎಂಬುದನ್ನು ನಾವು ಬದಲಿಸಲು ಸಾಧ್ಯವಿಲ್ಲ. ಆದರೆ ಬೆಳಿಗ್ಗೆ ಏಳುವಾಗ ನಮ್ಮ ದೇಹವನ್ನು ಧನಾತ್ಮಕ ಶಕ್ತಿ ಆವರಿಸಿರುವಂತೆ ನೋಡಿಕೊಳ್ಳುವ ಮೂಲಕ ದಿನದ ಮುಂದಿನ ಅವಧಿ ಸುಗಮವಾಗಿ, ಫಲದಾಯಿಕವಾಗಿರುವಂತೆ ನೋಡಿಕೊಳ್ಳಬಹುದು.ಗುರಿ ಸಾಧನೆಯ ಛಲ ನಿಮ್ಮಲ್ಲಿದ್ದರೆ-ಯಶಸ್ಸು ಕಟ್ಟಿಟ್ಟ ಬುತ್ತಿ

ಒಂದು ವೇಳೆ ನಿಮ್ಮ ಪ್ರತಿದಿನವೂ ಉತ್ತಮವಾಗಿರಬೇಕೆಂದು ನೀವು ಬಯಸುವುದಾದರೆ ಇದಕ್ಕಾಗಿ ಸುಲಭ ಮತ್ತು ಸರಳವಾದ ಮೂರು ಕ್ರಿಯೆಗಳಿವೆ. ಇವುಗಳನ್ನು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ನಿರ್ವಹಿಸುವುದು ಅಗತ್ಯ. ಅಷ್ಟೇ ಅಲ್ಲ, ಬರೆಯ ಒಂದು ದಿನ ಅನುಸರಿಸಿ ಮರುದಿನ ಬಿಟ್ಟರೂ ಆಗದು, ಇದು ನಿತ್ಯಕರ್ಮವಾಗಬೇಕು. ಆಗಲೇ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಇದು ಕೇವಲ ಬೊಗಳೆಯಲ್ಲ, ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಬನ್ನಿ, ಇವುಗಳ ಬಗ್ಗೆ ಈಗ ಅರಿಯೋಣ...

ಮನೆಯಿಂದ ಹೊರಡುವ ಮುನ್ನ ಬೆಲ್ಲ ತಿಂದು ನೀರು ಕುಡಿಯಿರಿ

ಮನೆಯಿಂದ ಹೊರಡುವ ಮುನ್ನ ಬೆಲ್ಲ ತಿಂದು ನೀರು ಕುಡಿಯಿರಿ

ಕಾರಣ: ಇದಕ್ಕೆ ರಕ್ತಪರಿಚಲನೆ ಪ್ರಮುಖ ಕಾರಣ. ಬೆಲ್ಲಕ್ಕೆ ಸಿಹಿ ನೀಡುವುದು ಸುಕ್ರೋಸ್ ಎಂಬ ಸಕ್ಕರೆಯಾಗಿದ್ದು ಈ ಸಕ್ಕರೆಯನ್ನು ನೀರಿನೊಂದಿಗೆ ಬೆರೆಸಿ ಕುಡಿಯುವ ಮೂಲಕ ರಕ್ತದಲ್ಲಿ ಹೆಚ್ಚಿನ ಶಕ್ತಿ ಲಭ್ಯವಾಗುತ್ತದೆ ಹಾಗೂ ನಿಮ್ಮ ದಿನದ ಪ್ರಾರಂಭವನ್ನು ಪೂರ್ಣ ಸಾಮರ್ಥ್ಯದೊಂದಿಗೆ ನಡೆಸಬಹುದು.

ಮನೆಯಿಂದ ಹೊರಡುವ ಮುನ್ನ ತಂದೆತಾಯಿಯರ ಕಾಲು ಮುಟ್ಟಿ ಹೊರಡಿ

ಮನೆಯಿಂದ ಹೊರಡುವ ಮುನ್ನ ತಂದೆತಾಯಿಯರ ಕಾಲು ಮುಟ್ಟಿ ಹೊರಡಿ

ಪ್ರತಿ ವ್ಯಕ್ತಿಯಲ್ಲಿ ಶಕ್ತಿಯ ಪ್ರವಾಹವೊಂದು ತಲೆಯಿಂದ ಕಾಲುಬೆರಳುಗಳವರೆಗೆ ಹಾಗೂ ಅಲ್ಲಿಂದ ಮತ್ತೆ ತಲೆಯವರೆಗೆ ಪ್ರವಹಿಸುತ್ತಿರುತ್ತದೆ. ನೀವು ತಂದೆತಾಯಿಯರ ಪಾದ ಮುಟ್ಟಲು ಬಗ್ಗಿದಾಗ ರಕ್ತಪರಿಚಲನೆ ತಲೆಯಲ್ಲಿ ಅತಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ತಂದೆತಾಯಿಯರ ದೇಹದ ಶಕ್ತಿ ನಿಮ್ಮಲ್ಲಿ ಪ್ರವಹಿಸುತ್ತದೆ.

ತಂದೆತಾಯಿಯರ ಕಾಲು ಮುಟ್ಟಿ ಹೊರಡಿ

ತಂದೆತಾಯಿಯರ ಕಾಲು ಮುಟ್ಟಿ ಹೊರಡಿ

ಅಂದರೆ ಮನೆಯಿಂದ ಹೊರಹೋದಾದ ನಿಮಗೆ ಹೆಚ್ಚಿನ ಶಕ್ತಿಯ ಪ್ರವಾಹ ಲಭ್ಯವಾದಂತಾಯಿತು. ಅಷ್ಟೇ ಅಲ್ಲ, ಈ ಕ್ರಿಯೆಯಿಂದ ಪಿತೃದೋಷವನ್ನು ಪೂರ್ಣವಾಗಿ ನಿವಾರಿಸಬಹುದು. ಇದರಿಂದ ನಿಮಗೆ ಆವರಿಸಬಹುದಾಗಿದ್ದ ದುರಾದೃಷ್ಟ ಇಲ್ಲವಾಗುತ್ತದೆ ಎಂದು ಜ್ಯೋತಿಷಿಗಳು ತಿಳಿಸುತ್ತಾರೆ.

ನಿಧಾನವಾಗಿ ಎರಡೂ ಕೈಗಳನ್ನು ಜೋಡಿಸಿ ಹಸ್ತವನ್ನು ಚುಂಬಿಸಿ

ನಿಧಾನವಾಗಿ ಎರಡೂ ಕೈಗಳನ್ನು ಜೋಡಿಸಿ ಹಸ್ತವನ್ನು ಚುಂಬಿಸಿ

ಕಾರಣ: ಧನದ ಅಧಿದೇವತೆ ಲಕ್ಷ್ಮಿ ಬೆರಳುಗಳ ತುದಿಯಲ್ಲಿ ಆವಾಸವಾಗಿದ್ದಾಳೆ, ವಿದ್ಯಾದೇವತೆ ಸರಸ್ವತಿ ಬೆರಳುಗಳ ಮಧ್ಯೆ ಮತ್ತು ಸೃಷ್ಟಿಕರ್ತ ಬ್ರಹ್ಮ ಬೆರಳುಗಳ ಬುಡದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ.

ನಿಧಾನವಾಗಿ ಎರಡೂ ಕೈಗಳನ್ನು ಜೋಡಿಸಿ ಹಸ್ತವನ್ನು ಚುಂಬಿಸಿ

ನಿಧಾನವಾಗಿ ಎರಡೂ ಕೈಗಳನ್ನು ಜೋಡಿಸಿ ಹಸ್ತವನ್ನು ಚುಂಬಿಸಿ

ಆದ್ದರಿಂದ ಬೆಳಿಗ್ಗೆದ್ದ ತಕ್ಷಣ ಬೆರಳುಗಳನ್ನು ನೋಡುವುದು ಮತ್ತು ಚುಂಬಿಸುವುದು ಅದೃಷ್ಟಕರ ಎಂದು ಹೇಳಲಾಗುತ್ತದೆ.

ಕನ್ನಡಿ ನೋಡಬೇಡಿ

ಕನ್ನಡಿ ನೋಡಬೇಡಿ

ವಾಸ್ತುಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿರುವ ಕನ್ನಡಿಯಲ್ಲಿ ಹಾಸಿಗೆಯನ್ನು ನೋಡುವುದು ದುರಾದೃಷ್ಟಕರವಾಗಿದೆ.

ಕನ್ನಡಿ ನೋಡಬೇಡಿ

ಕನ್ನಡಿ ನೋಡಬೇಡಿ

ಒಂದು ವೇಳೆ ದಂಪತಿಗಳಲ್ಲಿ ಒಬ್ಬರಾದರೂ ಕನ್ನಡಿಯಲ್ಲಿ ಹಾಸಿಗೆಯನ್ನು ಬೆಳಿಗ್ಗೆ ನೋಡಿದರೆ ಇಬ್ಬರ ನಡುವೆ ಮೂರನೆಯ ವ್ಯಕ್ತಿಯ ಪ್ರವೇಶದ ಸಾಧ್ಯತೆ ಹೆಚ್ಚುತ್ತದೆ, ಇದು ಸಂಸಾರದಲ್ಲಿ ಹುಳಿಹಿಂಡಲು ಕಾರಣವಾಗಬಹುದು.

ಖಿನ್ನತೆಯ ವ್ಯಕ್ತಿಗಳಿಗೆ ಕನ್ನಡಿ ತರವಲ್ಲ

ಖಿನ್ನತೆಯ ವ್ಯಕ್ತಿಗಳಿಗೆ ಕನ್ನಡಿ ತರವಲ್ಲ

ಒಂದು ವೇಳೆ ನೀವು ಖಿನ್ನತೆಯಿಂದ ಬಳಲುತ್ತಿದ್ದು ರಾತ್ರಿ ಸರಿಯಾಗಿ ನಿದ್ದೆ ಬರದೇ ಇರುವಂತಹ ವ್ಯಕ್ತಿಯಾಗಿದ್ದರೆ ನಿಮ್ಮ ಹಾಸಿಗೆಯ ಪಕ್ಕದಲ್ಲಿ ಕನ್ನಡಿ ಇರದಂತೆ ನೋಡಿಕೊಳ್ಳಿ. ಏಕೆಂದರೆ ಕನ್ನಡಿಯಲ್ಲಿ ಬೆಳಿಗ್ಗೆ ಪ್ರತಿಬಿಂದ ನೋಡಿದರೆ ನಿಮ್ಮ ನಿದ್ದೆ ಇನ್ನಷ್ಟು ಕೆಡುವ ಸಂಭವವಿದೆ.

English summary

Things You Should Give Up If You Want To Be Successful

Most people wake up to the sound of a loud alam, feeling angry; or shouting at their spouse; or dreading over a horrifying dream. Such a start of the day brings no positivity in your day. Although we can't prevent the bad days, we can definitely try and set the right mood in the morning so that the rest of the day goes productively.
Subscribe Newsletter