For Quick Alerts
ALLOW NOTIFICATIONS  
For Daily Alerts

ನಾಯಕತ್ವ ಗುಣ ಹೊಂದಿರುವ ರಾಶಿಗಳು-ಇವರು ಖಂಡಿತ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ

By Hemu
|

ನಾಯಕತ್ವದ ಗುಣಗಳು ಪ್ರತಿಯೊಬ್ಬರಲ್ಲೂ ಇರುವುದಿಲ್ಲ. ಕೆಲವರಿಗೆ ಇದು ಹುಟ್ಟಿನಿಂದಲೇ ಬಂದರೆ ಇನ್ನು ಕೆಲವರು ಇದನ್ನು ತಾವಾಗಿಯೇ ಬೆಳೆಸಿಕೊಳ್ಳುತ್ತಾರೆ. ನಾಯಕತ್ವವೆಂದು ಒಂದು ಸಮೂಹ ಅಥವಾ ಗುಂಪನ್ನು ಮುನ್ನಡೆಸುವುದು. ಇದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಪ್ರತಿಯೊಬ್ಬರಿಗೂ ತಮ್ಮ ನಾಯಕನ ಬಗ್ಗೆ ಒಮ್ಮತ ಮೂಡಬೇಕು. ಆದರೆ ಕೆಲವರು ಜನ್ಮತಃ ನಾಯಕತ್ವದ ಗುಣಗಳನ್ನು ಪಡೆದುಕೊಂಡು ಬಂದಿರುವರು. ಅಂತಹ ಗುಣಗಳನ್ನು ಪಡೆದುಕೊಂಡಿರುವ ರಾಶಿಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿದುಕೊಳ್ಳುವ..

ಮೇಷ

ಮೇಷ

ನೀವು ಈಗಷ್ಟೇ ಮೇಷ ರಾಶಿಯವರನ್ನು ಭೇಟಿಯಾಗಿದ್ದರೂ ಸಹಿತ ಅವರು ನಿಮ್ಮೊಂದಿಗೆ ತುಂಬಾ ಸ್ನೇಹಪರ ಹಾಗೂ ಹತ್ತಿರವಾಗುವಂತೆ ಮಾತನಾಡಬಲ್ಲರು. ಜನರು ತಮ್ಮ ಕೆಟ್ಟ ಹಾಗೂ ಒಳ್ಳೆಯ ಸಮಯದಲ್ಲಿ ತಮ್ಮನ್ನು ನೆನೆಸಿಕೊಳ್ಳುವುದು ಗೌರವವೆಂದು ಇವರು ಭಾವಿಸುವರು. ಇದರಿಂದಾಗಿ ಅವರು ವೈಯಕ್ತಿಕವಾಗಿ ನಾಯಕರಾಗುವರು. ಅವರ ಆತ್ಮವಿಶ್ವಾಸ ಮತ್ತು ಜನಪ್ರಿಯತೆಯು ಇನ್ನೊಬ್ಬರನ್ನು ಸೆಳೆಯುವುದು ಮತ್ತು ತುಂಬಾ ಸುಗಮವಾಗಿ ಸಾಗುವುದು. ಇದು ನಾಯಕತ್ವದ ಅತ್ಯುತ್ತಮ ಗುಣಗಳಾಗಿವೆ.

ವೃಷಭ

ವೃಷಭ

ವೃಷಭ ರಾಶಿಯ ನಾಯಕತ್ವವೇ ತುಂಬಾ ಭಿನ್ನ. ಈ ರಾಶಿಯವರು ಸ್ನೇಹಿತ ಹಾಗೂ ಬದಲಾವಣೆ ತರುವ ವ್ಯಕ್ತಿ. ಅವರಲ್ಲಿ ರಕ್ಷಣೆ ಮತ್ತು ಹಕ್ಕಿನ ಬಗ್ಗೆ ಜ್ಞಾನವಿರುವ ಕಾರಣದಿಂದಾಗಿ ನಾಯಕತ್ವದ ಗುಣಗಳು ತನ್ನಿಂದ ತಾನೇ ಅವರಲ್ಲಿ ಬರುವುದು. ಅವರು ಜವಾಬ್ದಾರಿಯಿದೆ ಎಂದು ಭಾವಿಸಿದಾಗ ಜನರ ಕಾಳಜಿ ಮತ್ತು ವಿಚಾರಗಳನ್ನು ಪರಿಗಣಿಸುವರು. ಇವರಲ್ಲಿ ಕೇವಲ ನಾಯಕತ್ವದ ಗುಣಗಳು ಮಾತ್ರವಲ್ಲ, ಇವರು ಒಳ್ಳೆಯ ಸಲಹೆಗಾರರಾಗಿರುವರು. ಇದರಿಂದಾಗಿ ಅವರ ಸುತ್ತ ಜನರಿರುವರು.

 ಸಿಂಹ

ಸಿಂಹ

ಸಿಂಹ ರಾಶಿಯವರು ಕಾಡಿನ ರಾಜ ಸಿಂಹದಂತೆ ಹುಟ್ಟಿನಿಂದಲೇ ನಾಯಕತ್ವ ಗುಣ ಹೊಂದಿರುವರು. ಅವರು ಯಾರು ಹೇಳದೇ ಮತ್ತು ಯಾರಿಗೂ ಕೇಳದೆ ನಾಯಕತ್ವ ವಹಿಸಿಕೊಳ್ಳುವರು. ಯಾವುದೂ ಸರಿಯಾಗಿಲ್ಲ ಮತ್ತು ಎಲ್ಲವೂ ಹಳಿ ತಪ್ಪುತ್ತಿದೆ ಎನ್ನುವಾಗ ಸಿಂಹ ರಾಶಿಯವರ ನೆರವು ಬೇಕು. ಅವರು ಎಲ್ಲವನ್ನು ಮತ್ತೆ ಹಳಿಗೆ ತರುವರು. ಸಿಂಹ ರಾಶಿಯವರು ನಿಮ್ಮ ಜೀವನವನ್ನು ಸರಿಯಾದ ದಿಕ್ಕಿಗೆ ಕೊಂಡೊಯ್ಯಬಲ್ಲರು. ಅವರು ಯಾವಾಗಲೂ ರಕ್ಷಣಾತ್ಮಕವಾಗಿರುವುದು ಒಂದು ಹಿನ್ನಡೆ..

 ಮಕರ

ಮಕರ

ರಾಶಿಗಳಲ್ಲಿ ಮಕರ ರಾಶಿಯವರು ಒಳ್ಳೆಯ ನಾಯಕರಾಗಬಲ್ಲರು. ಯಾಕೆಂದರೆ ಇವರಲ್ಲಿ ಸ್ವನಿಯಂತ್ರಣವು ಅದ್ಭುತವಾಗಿರುವುದು. ಇತರರು ತಮ್ಮಿಂದ ಏನಾದರೂ ಬಯಸುವಾಗ ಮಕರ ರಾಶಿಯವರಲ್ಲಿ ಏನಾದರೂ ಹೊಸ ಆಲೋಚನೆಗಳು ಇರುವುದು. ಈ ರಾಶಿಯವರು ನಿಮಗೆ ಹಿನ್ನಡೆಯಾಗದಂತೆ ನೋಡಿಕೊಳ್ಳುವರು. ಅವರ ಸಮಚಿತ್ತತೆಯು ನಿಮಗೆ ಯಾವಾಗಲೂ ಪ್ರೇರಣೆಯಾಗುವುದು ಮತ್ತು ಇದು ಅವರನ್ನು ಜೀವನದಲ್ಲಿ ತುಂಬಾ ಮುಂದಕ್ಕೆ ಕೊಂಡೊಯ್ಯುವುದು. ಅವರು ಯಾವಾಗಲು ನಿಮ್ಮನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು ಬಯಸುವ ಕಾರಣದಿಂದ ನಿಮ್ಮ ಕಾಳಜಿ ವಹಿಸುವರು.

ಇತರ ರಾಶಿಗಳು

ಇತರ ರಾಶಿಗಳು

ನಾಲ್ಕು ರಾಶಿಗಳಲ್ಲಿನ ಜನರು ಒಳ್ಳೆಯ ನಾಯಕತ್ವದ ಗುಣಗಳನ್ನು ಹೊಂದಿರುವುದು ಈಗಾಗಲೇ ತಿಳಿದುಬಂದಿದೆ. ಇತರ ರಾಶಿಗಳಲ್ಲಿರುವವರು ಯಾವ ರೀತಿಯ ನಾಯಕತ್ವ ಗುಣಗಳನ್ನು ಹೊಂದಿದ್ದಾರೆ ಎಂದು ತಿಳಿದುಕೊಳ್ಳುವ. ಇನ್ನು ಕೆಲವು ರಾಶಿಯವರಲ್ಲಿ ಅದ್ಭುತವಾಗಿರುವಂತಹ ನಾಯಕತ್ವದ ಗುಣಗಳು ಇವೆ. ಇದನ್ನು ಓದದೇ ಇದ್ದರೆ ನೀವು ಇದುವರೆಗೆ ಓದಿರುವುದು ಅಪೂರ್ಣವೆನಿಸುವುದು. ಅದಕ್ಕೆ ಮುಂದಕ್ಕೆ ಓದಿ....

ಮಿಥುನ

ಮಿಥುನ

ಇದು ರಾಶಿಗಳಲ್ಲಿ ತುಂಬಾ ಬಹುಮುಖ ಹೊಂದಿರುವ ರಾಶಿಯಾಗಿದೆ. ಈ ರಾಶಿಯು ಎಲ್ಲದಕ್ಕೂ ಮೂಲ ಮತ್ತು ತುಂಬಾ ಜಾಣ್ಮೆಯವರು. ಉಭಯ ದೃಷ್ಟಿಕೋನದಿಂದ ಯೋಚಿಸುವ ಹಾಗೂ ಓದುವ ಗುಣವನ್ನು ಹೊಂದಿರುವರು. ಇದರಿಂದಾಗಿ ಅವರು ಜೀವನದಲ್ಲಿ ತುಂಬಾ ಯಶಸ್ಸು ಪಡೆಯುವರು. ಮಿಥುನ ರಾಶಿಯವರು ನಾಣ್ಯದ ಎರಡು ಮುಖ ತೋರಿಸುವ ನೈಸರ್ಗಿಕ ಗುಣ ಹೊಂದಿರುವರು.

ಕರ್ಕಾಟಕ

ಕರ್ಕಾಟಕ

ಕರ್ಕಾಟಕ ರಾಶಿಯವರು ತುಂಬಾ ಆರೈಕೆ ಹಾಗೂ ಕಾಳಜಿ ಮಾಡುವಂತಹವರು. ಇವರ ನಾಯಕತ್ವದಲ್ಲೂ ಇದು ಕಂಡುಬರುವುದು. ಇವರು ಮನೆಯಲ್ಲೇ ನಾಯಕತ್ವದ ಗುಣಗಳನ್ನು ಪಡೆದುಕೊಳ್ಳುವರು. ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಿಕೊಳ್ಳಬಹುದು ಎಂದು ಅವರು ಭಾವಿಸಿರುವರು. ವೃತ್ತಿಪರವಾಗಿ ಕರ್ಕಾಟಕ ರಾಶಿಯವರು ತಮ್ಮ ಭಾವನೆಯನ್ನು ನಿಯಂತ್ರಣದಲ್ಲಿ ಇಟ್ಟರೆ ಇವರಂತಹ ನಾಯಕರು ಬೇರೆ ಯಾರು ಸಿಗುವುದಿಲ್ಲ. ತಾಯಿಯಂತಹ ಗುಣ ಇವರಲ್ಲಿ ಇರುವುದರಿಂದ ಇವರನ್ನು ಹಿಂಬಾಲಿಸಲು ಹಲವಾರು ಮಂದಿ ಇರುವರು.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರಲ್ಲಿ ಆಯೋಜನೆಯ ಅದ್ಭುತ ಗುಣ ಹಾಗೂ ತಂಡದ ಸ್ಫೂರ್ತಿ ಶ್ರೇಷ್ಠ ಮಟ್ಟದಲ್ಲಿದೆ. ಕನ್ಯಾ ರಾಶಿಯವರು ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಯಾವುದೇ ಪರಿಸ್ಥಿತಿಯನ್ನು ಸರಿಯಾಗಿ ತಮ್ಮನ್ನು ಎಲ್ಲರೂ ಹಿಂಬಾಲಿಸುವಂತೆ ಮಾಡುವರು. ಒಬ್ಬ ನಾಯಕ ಉತ್ತಮ ಕೆಲಸ ಮಾಡಬೇಕಾದರೆ ಅದರ ಹಿಂದೆ ಕನ್ಯಾ ರಾಶಿಯವರ ಕೆಲಸವಿದೆ. ಇವರಲ್ಲಿ ಜನರು ಮತ್ತು ತಂಡವನ್ನು ಜತೆಯಾಗಿಸಿಕೊಂಡು ಹೋಗುವಂತ ಗುಣಗಳು ಇವೆ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರು ವ್ಯವಹರಿಸಲು ತುಂಬಾ ಒಳ್ಳೆಯ ಹಾಗೂ ಸರಿಯಾದ ವ್ಯಕ್ತಿ. ಅವರ ನ್ಯಾಯ ಹಾಗೂ ಒಳ್ಳೆಯತನ ಎಷ್ಟರಮಟ್ಟಿಗೆ ಇರುವುದೆಂದರೆ ಅವರು ಅನ್ಯಾಯವಾಗಲು ಬಿಡುವುದಿಲ್ಲ. ಇವರು ಒಳ್ಳೆಯ ಶಾಂತಿಸಂಧಾನಕಾರರು ಮತ್ತು ತಮ್ಮ ತಲೆ ಓಡಿಸಿದರೆ ಉತ್ತಮ ನಾಯಕರಾಗುವರು. ತುರ್ತು ಸಂದರ್ಭದಲ್ಲಿ ಬರುವಂತಹ ತಂಡದಂತೆ ಅವರು ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವರು. ಇವರು ತುಂಬಾ ರಕ್ಷಣಾತ್ಮಕ ಜನರು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಈ ರಾಶಿಯ ಜನರು ಹುಟ್ಟು ನಾಯಕರಾಗಿರುವರು. ಆದರೆ ಅತೀ ಅಗತ್ಯದ ಸಂದರ್ಭದಲ್ಲಿ ಮಾತ್ರ ನಾಯಕತ್ವವನ್ನು ಸ್ವೀಕರಿಸುವರು. ಇವರು ತುಂಬಾ ಶ್ರಮಶೀಲ ಸ್ವಭಾವದವರು ಮತ್ತು ಕಡಿಮೆ ನಿರ್ವಹಣೆಯವರು. ಇವರಲ್ಲಿ ಇರುವಂತಹ ಬಲವಾದ ಸಮಚಿತ್ತ ಭಾವವು ಯಾವುದೇ ಕೆಲಸವನ್ನು ಪೂರ್ಣಗೊಳಿಸುವರು. ಇವರು ಮಾತಿಗಿಂತಹ ಹೆಚ್ಚು ಕೃತಿಯಲ್ಲಿ ತೋರಿಸಲು ಬಯಸುವರು. ಮನೆ ಹಾಗೂ ಕೆಲಸದ ಕಡೆ ಕೂಡ ಮೌನವಾಗಿರುವರು.

ಧನು

ಧನು

ಧನು ರಾಶಿಯವರು ತುಂಬಾ ತಾತ್ವಿಕವಾಗಿರುವವರು. ಅವರು ತಮ್ಮ ಗುರಿಯನ್ನು ಇರಿಸಿಕೊಳ್ಳುವಾಗ ದೊಡ್ಡ ಮಟ್ಟದ ಕನಸನ್ನು ಕಂಡಿರುವರು. ಧನು ರಾಶಿಯವರು ಸ್ವಲ್ಪ ಮೊಂಡು ಹಾಗೂ ಉದಾಸೀನದವರು. ಇವರು ಸಹಕೆಲಸಗಾರರಾಗಿ ಉತ್ತಮವಾಗಿರುವರು ಮತ್ತು ತುಂಬಾ ರಕ್ಷಣಾತ್ಮಕವಾಗಿರುವರು. ಇವರಿಗೆ ಸ್ವತಂತ್ರ್ಯ ಬೇಕಿರುವುದು ಮತ್ತು ಕಟ್ಟುಪಾಡಿನ ಜೀವನವನ್ನು ಇವರು ಎಂದೂ ಇಷ್ಟಪಡುವುದಿಲ್ಲ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರು ಹೆಚ್ಚು ಯೋಜಿಸುವವರಾಗಿರುವ ಕಾರಣದಿಂದಾಗಿ ಅವರು ತಾಂತ್ರಿಕವಾಗಿ ಒಬ್ಬ ಒಳ್ಳೆಯ ಸಲಹೆಗಾರರಾಗಿರುವರು. ಇವರು ವೃತ್ತಿಪರ ಹಾಗೂ ವೈಯಕ್ತಿಕವಾಗಿ ತುಂಬಾ ಯೋಚಿಸಬಲ್ಲರು. ತಂತ್ರಜ್ಞಾನದಲ್ಲಿ ಇವರು ತುಂಬಾ ಚಾತುರ್ಯವನ್ನು ಹೊಂದಿರುವರು. ಇದರಿಂದಾಗಿ ಅವರು ಇತರ ಜನರಿಂದ ಒಂದು ಕೈ ಮೇಲಿರುವರು ಮತ್ತು ಇಂತಹ ವಿಷಯಗಳಲ್ಲಿ ಕುಂಭ ರಾಶಿಯವರಿಂದ ಸಲಹೆ ಪಡೆಯುವರು.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರಲ್ಲಿ ಯಾವಾಗಲೂ ಮುಕ್ತ ನೀತಿಗಳಿರುವ ಕಾರಣದಿಂದ ಇವರು ಶ್ರೇಷ್ಠ ನಾಯಕರಾಗಬಲ್ಲರು. ಇವರು ತುಂಬಾ ಆಕರ್ಷಕ ಮತ್ತು ಜನರಿಂದ ಇಷ್ಟಪಡುವವರಾಗಿರುವರು. ತುಂಬಾ ಸರಳ ಹಾಗೂ ಜನರನ್ನು ತುಂಬಾ ಸುಲಭವಾಗಿ ಮುನ್ನಡೆಸಬಲ್ಲರು. ಅವರು ಆಲೋಚಿಸುವಂತಹ ಯಾವುದೇ ಕೆಲಸದಲ್ಲೂ ಅವರು ಯಶಸ್ಸನ್ನು ಪಡೆಯಬಲ್ಲರು.

English summary

These Zodiac that are so good at leadership

These Zodiacs are a natural at leadership qualities - like a boss, really. This one quality makes them unforgettable. Their magnetism is such, you cannot ignore them in a crowd. Here are the four Zodiacs that are so good at leadership qualities, it hurts. Click on to know more...
X
Desktop Bottom Promotion