Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಪಾಪ, ಮೋಸದಿಂದ ಆಕೆಯನ್ನು ವೇಶ್ಯಾವೃತ್ತಿಗೆ ತಳ್ಳಲಾಯಿತು!
ಈ ಮಹಿಳೆಯ ಹೆಸರು ಟೀನಾ. ಈಕೆ ಕೇವಲ ಹದಿನೈದು ವರ್ಷದವಳಿದ್ದಾಗ ಮನೆಯಿಂದ ಓಡಿಹೋಗಿದ್ದ ಒಂದೇ ತಪ್ಪಿನಿಂದ ಆಕೆ ಹೊರಜಗತ್ತಿನ ಭಯಾನಕ ರೂಪವನ್ನು ಕಂಡುಕೊಳ್ಳುವಂತಾಯಿತು.
ವೇಶ್ಯಾವೃತ್ತಿಯನ್ನು ಯಾವುದೇ ಮಹಿಳೆ ತನ್ನ ಇಚ್ಛೆಯಿಂದ ಆರಿಸಿಕೊಳ್ಳುವುದಿಲ್ಲ. ಹೆಚ್ಚಿನವರು ಬಲವಂತವಾಗಿ ದೂಡಲ್ಪಟ್ಟವರಾಗಿದ್ದಾರೆ. ಇಂದಿನ ಕಥೆ ಭಾರತೀಯ ಮಹಿಳೆಯೊಬ್ಬರದ್ದಾಗಿದ್ದು ಉದ್ಯೋಗದ ಆಮಿಷ ಒಡ್ಡಿ ಬಳಿಕ ಮೋಸದಿಂದ ಈ ವೃತ್ತಿಗೆ ದೂಡಲಾಗಿದೆ. ಆ ದಿನದಿಂದ ಆಕೆ ಎಷ್ಟು ನೋವು ಅನುಭವಿಸಿದ್ದಾರೆ ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಇದು ವೇಶ್ಯಾವೃತ್ತಿಯಲ್ಲಿ ತೊಡಗಿದ್ದ ವೇಶ್ಯೆಯ ಕಣ್ಣೀರ ಕಥೆ
ಈ ಮಹಿಳೆಯ ಹೆಸರು ಟೀನಾ. ಈಕೆ ಕೇವಲ ಹದಿನೈದು ವರ್ಷದವಳಿದ್ದಾಗ ಮನೆಯಿಂದ ಓಡಿಹೋಗಿದ್ದ ಒಂದೇ ತಪ್ಪಿನಿಂದ ಆಕೆ ಹೊರಜಗತ್ತಿನ ಭಯಾನಕ ರೂಪವನ್ನು ಕಂಡುಕೊಳ್ಳುವಂತಾಯಿತು. ಭಾರತದ ರೆಡ್ ಲೈಟ್ ಏರಿಯಾದ ಹಿಂದಿರುವ ಸತ್ಯಾಸತ್ಯತೆ
ಈಕೆಗೆ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ಈಕೆಯನ್ನು ವೇಶ್ಯಾವೃತ್ತಿಗೆ ತಳ್ಳಿದ ಯುವಕನ ನಯವಂಚನೆಯ ಬಗ್ಗೆ, ಹಾಗೂ ಇದರಿಂದ ಹೊರಬರಲು ಆಕೆ ಪಡುತ್ತಿರುವ ಬವಣೆಯನ್ನು ನೋಡೋಣ...

ಟೀನಾ ಆಗ ಕೇವಲ ಹದಿನೈದು ವರ್ಷದವಳಾಗಿದ್ದಳು
ಯಾವುದೇ ಹದಿಹರೆಯದ ಹುಡುಗಿಗೆ ಇರುವಂತೆ ಟೀನಾಳಿಗೂ ತನ್ನ ಗೊಂಬೆಗಳೊಂದಿಗೆ ಮತ್ತು ಅಕ್ಕಪಕ್ಕದ ಮನೆಗಳ ಮಕ್ಕಳೊಂದಿಗೆ ಆಡುವುದು ವ್ಯಾಸಾಂಗಕ್ಕಿಂತಲೂ ಹೆಚ್ಚು ಇಷ್ಟವಾಗಿತ್ತು. ಆಕೆಯ ಪರೀಕ್ಷೆಯ ಅಂಕಗಳು ಎಂದಿಗೂ ಉತ್ತಮವಾಗಿರಲಿಲ್ಲ. ಇದು ಆಕೆಯ ತಾಯಿಗೆ ಸಹಿಸಲಾರದ ತುತ್ತಾಗಿತ್ತು. ಒಮ್ಮೆ ಹೋಂ ವರ್ಕ್ ಮಾಡಿಲ್ಲವೆಂದು ಆಕೆಯ ತಾಯಿಯಿಂದ ಏಟನ್ನೂ ತಿಂದಿದ್ದಳು. ಈ ಏಟು ಆಕೆಯನ್ನು ಮನೆಯಿಂದ ಓಡಿಹೋಗಲು ಪ್ರೇರೇಪಿಸಿತು.

ಆಕೆ ಬೇರೊಂದು ನಗರಕ್ಕೆ ಪಯಣಿಸಿದಳು
ಕೈಯಲ್ಲಿ ಕೊಂಚವೇ ಹಣವನ್ನಿರಿಸಿಕೊಂಡು ಇನ್ನೊಂದು ನಗರಕ್ಕೆ ಧಾವಿಸಿದ ಈಕೆ ಆ ನಗರದ ಗಲ್ಲಿಗಲ್ಲಿಗಳಲ್ಲಿ ತಿರುಗುತ್ತಾ, ಫುಟ್ ಪಾತ್ ಮೇಲೆ ಮಲಗಿ ಕಾಲ ಕಳೆದಳು. ಒಂದು ದಿನ ಪೋಲೀಸ್ ಅಧಿಕಾರಿಯೊಬ್ಬರು ಈಕೆಗೆ ನೆರವಾಗಲು ಮುಂದಾದರು.

ಆದರೆ ಈ ಅಧಿಕಾರಿಯ ನಿಯತ್ತು ಸರಿ ಇರಲಿಲ್ಲ
ಈಕೆಗೆ ನೆರವು ನೀಡುವೆನೆಂದು ಪೋಲೀಸ್ ಠಾಣೆಗೆ ಕರೆದುಕೊಂಡು ಬಂದ ಈ ಅಧಿಕಾರಿ ನರರೂಪದ ರಾಕ್ಷಸನಾಗಿದ್ದ. ಕಾರಾಗೃದ ಕೋಣೆಯೊಂದರಲ್ಲಿ ಇಡಿಯ ರಾತ್ರಿ ಸತತವಾಗಿ ಬಲಾತ್ಕರಿಸಿದ. ಇದರ ಪರಿಣಾಮವಾಗಿ ಆಕೆ ಗರ್ಭಿಣಿಯೂ ಆದಳು.

ಅಲ್ಲಿಂದ ಓಡಿಬಂದ ಈಕೆ ಹೆಣ್ಣುಮಗುವಿಗೆ ಜನ್ಮ ನೀಡಿದಳು
ಹೇಗೋ ಈ ರಾಕ್ಷಸನ ಬಂಧನದಿಂದ ಓಡಿಬಂದ ಈಕೆ ದೇವಸ್ಥಾನದ ಬಾಗಿಲಿನಲ್ಲಿಯೇ ಸುರಕ್ಷತೆಯ ಭಾವವನ್ನು ಅನುಭವಿಸುತ್ತಾ, ಭಿಕ್ಷೆ ಬೇಡುತ್ತಾ ಕಾಲ ಕಳೆದಳು. ನವಮಾಸ ಕಳೆದ ಬಳಿಕ ಹೆಣ್ಣುಮಗುವೊಂದಕ್ಕೆ ಜನ್ಮ ನೀಡಿದಳು.

ಕಡೆಗೂ ಆಕೆಗೊಂದು ಉದ್ಯೋಗ ಸಿಕ್ಕಿತು
ಈ ದೇವಸ್ಥಾನಕ್ಕೆ ನಿಯಮಿತವಾಗಿ ಬರುತ್ತಿದ್ದ ಭಕ್ತರೊಬ್ಬರು ಈಕೆಯ ಬಗ್ಗೆ ಕರುಣೆ ತೋರಿ ಈಕೆಗೊಂದು ಕೆಲಸವನ್ನು ನೀಡುವ ಭರವಸೆ ನೀಡಿದರು. ಪಕ್ಕದ ಊರಿನಲ್ಲಿರುವ ದೇವಸ್ಥಾನದ ಪಕ್ಕದಲ್ಲಿಯೇ ಇರುವ ತನ್ನ ಸಹೋದರಿಯ ಮನೆಯಲ್ಲಿ ಕೆಲಸವಿದೆ ಎಂದು ತಿಳಿಸಿದ. ಈ ವ್ಯಕ್ತಿ ದೇವಸ್ಥಾನಕ್ಕೆ ನಿಯಮಿತವಾಗಿ ಬರುತ್ತಿರುವ ಕಾರಣ ಇವರ ದೈವಭಕ್ತಿಯನ್ನು ನಂಬಿದ ಈಕೆ ಈ ವ್ಯಕ್ತಿಯ ಮಾತುಗಳನ್ನು ನಂಬಿ ಭರವಸೆ ಇಟ್ಟಳು.

ಆದರೆ ಈತ ಆಕೆಯನ್ನು ಮಾರಿದ್ದ
ವಾಸ್ತವವಾಗಿ ಈ ವ್ಯಕ್ತಿಯೂ ದೇವಸ್ಥಾನದ ಭಕ್ತನ ಸೋಗಿನಲ್ಲಿ ಮಾನವ ಮಾರಾಟಗಾರನಾಗಿದ್ದ. ಆತನ ಸಹೋದರಿಯ ಮನೆ ಎಂದು ಆತ ಕಳಿಸಿದ್ದು ನೇರವಾಗಿ ಒಂದು ವೇಶ್ಯಾವಾಟಿಕೆಗೆ. ಈಕೆಯನ್ನು ಆತ ಕೇವಲ ಒಂದು ಲಕ್ಷ ರೂಪಾಯಿಗೆ ಮಾರಿದ್ದ. ಆ ಮನೆಗೆ ಅಡಿಯಿಟ್ಟ ಬಳಿಕ ಮನೆಯೊಳಗೆ ಇನ್ನೂ ಹಲವಾರು ವ್ಯಕ್ತಿಗಳಿದ್ದು ಇವರು ಆಕೆಯನ್ನು ಬಲವಂತವಾಗಿ ವೇಶ್ಯಾವೃತ್ತಿಗೆ ಇಳಿಸಿದರು.

ಅಂದಿನಿಂದ ಆಕೆಯ ಪ್ರತಿರಾತ್ರಿಯೂ ನರಕವಾಯಿತು
ಆ ಮನೆಯಲ್ಲಿ ಆಕೆಯನ್ನು ಕಾಮತೃಷೆಗಾಗಿ ಬಳಸಲಾಯಿತು. ಪ್ರತಿರಾತ್ರಿಯೂ ಆಕೆ ಹಲವು ಗ್ರಾಹಕರಿಗೆ ಸೇವೆ ನೀಡಬೇಕಿತ್ತು. ಇದಕ್ಕೆ ವಿರೋಧಿಸಿದರೆ ಎಳೆದಾಡಿ ಬಲವಂತವಾಗಿ ಸೇವೆ ನೀಡಿಸಲಾಗುತ್ತಿತ್ತು. ಈಕೆಗೆ ಯಾರಿಂದಲೂ ಮೇಹರೋಗಗಳೂ, ಏಡ್ಸ್ ರೋಗವೂ ಆಕ್ರಮಿಸಿದ ಬಳಿಕವೂ ಈಕೆಯ ಸೇವೆಯನ್ನು ಮುಂದುವರೆಸುವಂತೆ ಬಲಾತ್ಕರಿಸಲಾಗುತ್ತಿತ್ತು.

ಈಕೆ ವಿಭಿನ್ನ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾಳೆ
ತನ್ನೊಂದಿಗೆ ಆದ ಎಲ್ಲಾ ತಪ್ಪುಗಳಿಗೂ ಪ್ರತೀಕಾರದ ರೂಪದಲ್ಲಿ ತನ್ನ ದೇಹವನ್ನು ಆವರಿಸುವ ಕಾಯಿಲೆಯನ್ನು ಸಾಧ್ಯವಾದಷ್ಟು ಪುರುಷರಿಗೆ ಹಬ್ಬಿಸುತ್ತಿದ್ದಾಳೆ. ತನಗೆ ಯಾವುದೇ ರೋಗ ಇಲ್ಲವೆಂಬ ನಕಲಿ ವೈದ್ಯಕೀಯ ದೃಢೀಕರಣ ಪತ್ರವನ್ನು ಪಡೆದು ರಾಜಾರೋಶವಾಗಿ ಈ ರೋಗವನ್ನು ಹಬ್ಬಿಸುತ್ತಿದ್ದಾಳೆ.



Click it and Unblock the Notifications
