ಇಂತಹ ಹೇಯ ಕೃತ್ಯ ಎಸಗಿದ ಈ ಕಾಮುಕ ಶಿಕ್ಷಕನಿಗೆ ಶಿಕ್ಷೆಯಾಗಲಿ...

By: manu
Subscribe to Boldsky

ಶಿಕ್ಷಕನೆಂದರೆ ಗುರು. ಎಲ್ಲಾ ಧರ್ಮ ಹಾಗೂ ಜಾತಿಗಳಲ್ಲೂ ಗುರುವಿಗೆ ವಿಶೇಷವಾದ ಪೂಜ್ಯನೀಯ ಸ್ಥಾನವನ್ನು ನೀಡುತ್ತಾರೆ. ಏಕೆಂದರೆ ಎಲ್ಲಾ ಬಲ್ಲವನು ಗುರು. ಜೀವನದ ಸದ್ಮಾರ್ಗದಲ್ಲಿ ಚಲಿಸುವಂತೆ ಸೂಕ್ತ ದಾರಿಯನ್ನು ತೋರಿಸಿಕೊಡುತ್ತಾನೆ, ಜೀವನದಲ್ಲಿ ಬರುವ ಕಷ್ಟ-ಸುಖವನ್ನು ಹೇಗೆ ಸಮನಾಗಿ ಸ್ವೀಕರಿಸುವುದು? ಎನ್ನುವ ಜ್ಞಾನ ಬೆಳೆಸುತ್ತಾನೆ ಎಂದು.

ಹೌದು, ನಮ್ಮ ಬಾಳಿನ ಸದ್ಗತಿಗೆ ಕಾರಣನಾಗಿ, ಬಾಳನ್ನು ಬೆಳಗುವವನು ಗುರು ಎಂದರೆ ತಪ್ಪಾಗಲಾರದು. ಇಂತಹ ಪವಿತ್ರ ಸ್ಥಾನದಲ್ಲಿ ಕೂತು, ಮಗಳ ವಯಸ್ಸಿನ ಹುಡುಗಿಯೊಂದಿಗೆ ಅಶ್ಲೀಲವಾಗಿ ವರ್ತಿಸುವುದು ಎಂದರೆ ಅದೆಷ್ಟು ಹೇಯ ಕೃತ್ಯ ಅಲ್ವಾ? ನಿಜ, ಇಂತಹ ಹೊಲಸು ಕೆಲಸ ಮಾಡಿರುವ ಒಬ್ಬ ಶಿಕ್ಷಕ ಇಲ್ಲಿದ್ದಾನೆ.

ತಾನು ಮಾಡಿದ ತಪ್ಪು ಕೆಲಸಗಳ ಭಾವ ಚಿತ್ರವನ್ನು ಬಹಳ ಸಂತೋಷವಾಗಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದಾನೆ. ತನ್ನ ವಿದ್ಯಾರ್ಥಿಗಳೊಂದಿಗೆ ಅಶ್ಲೀಲವಾಗಿ ವರ್ತಿಸಿ, ಅವುಗಳನ್ನು ಚಿತ್ರೀಕರಣ ಮಾಡಿದ್ದಾನೆ. ಇದರ ಪರಿಣಾಮ ಯಾವ ತಿರುವು ಪಡೆಯಬಹುದು ಎನ್ನುವ ಅಂದಾಜು ಈ ಮೂರ್ಖ ಶಿಕ್ಷಕನಿಗೆ ತಿಳಿದಿರಲಿಕ್ಕಿಲ್ಲ. ಬನ್ನಿ ಈ ಹೊಲಸು ವ್ಯಕ್ತಿ ಎಲ್ಲಿದ್ದಾನೆ? ಅವನ ಕೃತ್ಯಗಳು ಎಂಥದ್ದು ಎನ್ನುವುದನ್ನು ನಾವಿಲ್ಲಿ ಬಿಚ್ಚಿಡುತ್ತಿದ್ದೇವೆ...

ಇದೆಲ್ಲಿ ನಡೆದಿದ್ದು?

ಇದೆಲ್ಲಿ ನಡೆದಿದ್ದು?

ಅಸ್ಸಾಂನ ಸಣ್ಣ ಪಟ್ಟಣ ಕ್ಯಾಟ್ಲಿಶೆರಾ. ಇಲ್ಲಿರುವ ಮಾಡೆಲ್ ಎನ್ನುವ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ. ಈತ ತನ್ನ ವಿದ್ಯಾರ್ಥಿನಿಯರೊಂದಿಗೆ ಅಶ್ಲೀಲವಾಗಿ ವರ್ತಿಸಿ, ಅವುಗಳ ಭಾವ ಚಿತ್ರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದು ಬಿಟ್ಟಿದ್ದಾನೆ.

ಎಲ್ಲೆಡೆ ಹರಿದಾಡುತ್ತಿದೆ

ಎಲ್ಲೆಡೆ ಹರಿದಾಡುತ್ತಿದೆ

ಈ ವ್ಯಕ್ತಿ ಬೇರೆ ಬೇರೆ ವಿದ್ಯಾರ್ಥಿನಿಯರೊಂದಿಗೆ ಅಪ್ಪಿಕೊಂಡಿರುವುದು, ಚುಂಬಿಸುತ್ತಿರುವ ಚಿತ್ರಗಳು ಇದೀಗ ಎಲ್ಲೆಡೆ ಹರಡುತ್ತಿದೆ. ಈಗಾಗಲೇ ಈ ವಿಚಾರದ ಬಗ್ಗೆ ಟೀಕೆ ವ್ಯಕ್ತವಾಗುತ್ತಿದ್ದು ಸರಿಯಾದ ಕ್ರಮ ಕೈಗೊಳ್ಳಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ.

ಅಪರಾಧಿ

ಅಪರಾಧಿ

ಈತ ಈ ಮೊದಲು ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅದರಿಂದ ಸರಿಯಾಗಿ ಪಾಠ ಕಲಿಸಲು ಈತನ ಕೈ ಬೆರಳುಗಳನ್ನು ಕತ್ತರಿಸಲಾಗಿತ್ತು. ಅದಾದ ಬಳಿಕ ಶಾಲೆಯಲ್ಲಿ ಶಿಕ್ಷಕನಾಗಿ ಸೇರಿಕೊಂಡಿದ್ದ ಎನ್ನಲಾಗುತ್ತಿದೆ.

ವ್ಯವಸ್ಥೆ ಎಲ್ಲಿಗೆ ಹೋಗುತ್ತಿದೆ?

ವ್ಯವಸ್ಥೆ ಎಲ್ಲಿಗೆ ಹೋಗುತ್ತಿದೆ?

ಈ ಅಸಹ್ಯಕರ ಘಟನೆಯು ಶಾಲಾ ಮೇಲಧಿಕಾರಿಗಳ ಬಗ್ಗೆ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಸರಿಯಾದ ಹಿನ್ನೆಲೆ ಇಲ್ಲದಿರುವ ವ್ಯಕ್ತಿಗಳನ್ನು ಶಿಕ್ಷಕ ಎನ್ನುವ ಪವಿತ್ರ ಸ್ಥಾನಕ್ಕೇಕೆ ಆಯ್ಕೆ ಮಾಡಿಕೊಂಡಿದೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಶಾಲಾ ಅಧಿಕಾರಿಗಳು ಉತ್ತರ ನೀಡಬೇಕು. ಶಿಕ್ಷಕರು ಮಕ್ಕಳ ಜೀವನವನ್ನು ರೂಪಿಸಲು ಸಹಾಯ ಮಾಡುತ್ತಾರೆ. ಆದರೆ ಈ ದುರುಳ ವ್ಯಕ್ತಿ ವಿದ್ಯಾರ್ಥಿಗಳ ಬದುಕನ್ನು ಹಾಳು ಮಾಡಲು ಹೊರಟಿದ್ದಾನೆ. ಹಾಗಾದರೆ ನಮ್ಮ ಸಾಮಾಜಿಕ ವ್ಯವಸ್ಥೆ ಎತ್ತ ಸಾಗುತ್ತಿದೆ ಎನ್ನುವುದನ್ನು ಆಶ್ಚರ್ಯಕರ ರೀತಿಯಲ್ಲಿ ಕಾಡುವ ಪ್ರಶ್ನೆಯಾಗಿದೆ.

ಘಟನೆಯ ಪರಿಣಾಮ

ಘಟನೆಯ ಪರಿಣಾಮ

ಅಲ್ಪ ಸಂಖ್ಯಾತ ವಿದ್ಯಾರ್ಥಿಯ ಮೇಲೆ ಲೈಂಗಿಕ ಕಿರುಕುಳ ನಡೆಸಿದ ಶಾಲಾ ಶಿಕ್ಷಕನ ವಿರುದ್ಧ ಅಸ್ಸಾಂ ಮಕ್ಕಳ ಅಭಿವೃದ್ಧಿ ಇಲಾಖೆಯ ಕಮಿಷನರ್ (ಎಎಸ್‍ಸಿಪಿಸಿಆರ್) ವಿನಂತಿಸಿಕೊಳ್ಳುತ್ತಿರುವುದೇನೆಂದರೆ...

1. ಲೈಂಗಿಕ ಅಪರಾಧಗಳ ಆಕ್ಟ್ 2012ರ ಪ್ರಕಾರ ಅಪರಾಧ ಗೈದ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

2. ಸಾಮಾಜಿಕ ಜಾಲ ತಾಣಗಳಲ್ಲಿ ಮಗುವಿನ ಮುಖಕ್ಕೆ ಮುಸುಕು ಹಾಕಿರುವುದು, ಮುಖ ಕಾಣದಂತೆ ಮಾಡಿರುವುದಕ್ಕೆ ಸೆಕ್ಷನ್ 23 ಮತ್ತು ಸೆಕ್ಷನ್ 74 (ಜೆಜೆ ಆಕ್ಟ್)ರ ಪ್ರಕಾರ ಅಪರಾಧಿ ನಿಜೀರ್ ಮಹಮ್ಮದ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೇಜವಾಬ್ದಾರಿ ವರ್ತನೆಯಿಂದ ಮಗುವಿನ ಘನತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಸಮಯದಲ್ಲಿ...

ಈ ಸಮಯದಲ್ಲಿ...

ಈ ವಿಚಾರದ ಕುರಿತು ಈಗಾಗಲೇ ಜನರೆಲ್ಲರೂ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಶಿಕ್ಷಕನಿಗೆ ಶಿಕ್ಷೆ ನೀಡಬೇಕು ಎನ್ನುವ ವಿಚಾರವನ್ನು ಮುಂದಿಟ್ಟಿದ್ದಾರೆ. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕಾಮೆಂಟ್‍ಗಳ ವಿಭಾಗದಲ್ಲಿ ಹಂಚಿಕೊಳ್ಳಿ.

English summary

Teacher Takes Intimate Pictures With Student & Posts Them Online!

Most of the cases of sexual abuse these days are either live-streamed or even shared on people's social networking sites.With everybody being active on social networking sites, people are unaware of the consequences of the things that they post online. Check out the disgusting case of the Indian teacher who has shared intimate pictures of himself with his students!
Subscribe Newsletter