For Quick Alerts
ALLOW NOTIFICATIONS  
For Daily Alerts

ನಂಬುತ್ತೀರೋ ಬಿಡುತ್ತೀರೋ-ಮದುವೆಯ ದಿನದಂದು ಕೂಡ ಮೂಢನಂಬಿಕೆ ಇದೆಯಂತೆ!

By Jaya subramanya
|

ಮದುವೆ ಎನ್ನುವುದು ಏಳು ಜನ್ಮಗಳ ಅನುಬಂಧವೆಂದು ಹಿರಿಯರು ಹೇಳುತ್ತಾರೆ. ಮದುವೆ ಸಂಪೂರ್ಣ ಜೀವನವನ್ನೇ ಬದಲಾಯಿಸಬಲ್ಲದು. ಮದುವೆಯಿಂದ ಜವಾಬ್ದಾರಿ ಕೂಡ ಹೆಚ್ಚುವುದು. ಆದರೆ ಮದುವೆಯಾಗುವ ಇಂದಿನ ಯುವ ಜೋಡಿಗಳು ಕೇವಲ ನಾಲ್ಕು ಗೋಡೆಗಳ ನಡುವಿನ ಸುಖದ ಬಗ್ಗೆ ಮಾತ್ರ ಯೋಚಿಸುತ್ತಾರೆ.

ಆದರೆ ಮದುವೆಯೆನ್ನುವುದು ಕೇವಲ ನಾಲ್ಕು ಗೋಡೆಗಳ ನಡುವಿನ ಸಂಬಂಧ ಮಾತ್ರವಲ್ಲ. ಮದುವೆ ಬಳಿಕ ನೀವು ಹಿಂದೆ ಕಂಡಿರದ ಮತ್ತು ಅನುಭವಿಸದೆ ಇರುಂತಹ ಕೆಲವೊಂದು ಅನುಭವಗಳು ಹಾಗೂ ಜವಾಬ್ದಾರಿಗಳು ಬರುತ್ತದೆ. ಇದನ್ನು ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ.

ಮದುವೆಗೆ ಹುಡುಗಿ ನೋಡುವ ಮುನ್ನ, ಈ 7 ಸಂಗತಿಗಳನ್ನು ಪರೀಕ್ಷಿಸಿಕೊಳ್ಳಿ...

ವಿವಾಹವೆನ್ನುವುದು ವೈಭೋಗದ ಆಚರಣೆಯಾಗಿರಲಿ ಇಲ್ಲವೇ ಸರಳವಾಗಿರಲಿ ಇಲ್ಲಿ ಹೆಚ್ಚು ಮುಖ್ಯವಾಗಿರುವುದು ಹೆಣ್ಣು ಗಂಡು ಪತಿ ಪತ್ನಿಯಂತೆ ಜೀವನಪೂರ್ತಿ ಬಾಳುವ ಕ್ಷಣವಾಗಿದೆ. ನಮ್ಮಲ್ಲಿ ಮೂಢನಂಬಿಕೆಗಳು ಪ್ರತಿಯೊಂದು ವಿಭಾಗದಲ್ಲೂ ಇದ್ದೇ ಇದೆ. ವಿವಾಹದ ಈ ಅತ್ಯಮೂಲ್ಯ ಕ್ಷಣಗಳಲ್ಲೂ ಮೂಢನಂಬಿಕೆಗಳನ್ನು ಪಾಲಿಸುವವರು ಇದ್ದಾರೆ. ಇಂದಿನ ಲೇಖನದಲ್ಲಿ ಆ ಮೂಢನಂಬಿಕೆಗಳೇನು ಎಂಬುದನ್ನು ಅರಿತುಕೊಳ್ಳಲಿದ್ದೇವೆ....

ಮೆಹೆಂದಿಯ ಬಣ್ಣ

ಮೆಹೆಂದಿಯ ಬಣ್ಣ

ಹುಡುಗಿಯ ಕೈಯಲ್ಲಿ ನಳನಳಿಸುವ ಮೆಹೆಂದಿ ಬಣ್ಣವು ಗಾಢವಾಗಿದ್ದಷ್ಟು ಅವರ ವೈವಾಹಿಕ ಜೀವನ ಮಧುರವಾಗಿರುತ್ತದೆ ಎಂಬ ನಂಬಿಕೆ ಇದೆ. ಮೆಹೆಂದಿಯು ದೀರ್ಘ ಸಮಯದವರೆಗೆ ಹುಡಗಿಯ ಕೈಯಲ್ಲಿದ್ದಲ್ಲಿ ಆಕೆಯ ಅತ್ತೆ ಮಾವಂದಿರ ಪ್ರೀತಿ ಆಕೆಗೆ ಯಾವಾಗಲೂ ದೊರೆಯುತ್ತದೆಯಂತೆ!, ಅಷ್ಟೇ ಅಲ್ಲದೆ ಮೆಹೆಂದಿಯೊಂದಿಗೆ ತಳುಕು ಹಾಕಿಕೊಂಡಿರುವ ಇನ್ನೊಂದು ಮೂಢನಂಬಿಕೆ ಹೆಚ್ಚು ಆಸಕ್ತಿಕರವಾಗಿದೆ. ಮದುವೆಯಾಗುವ ಹುಡುಗಿಯು ಮಧುವಣಗಿತ್ತಿಯಿಂದ ಎಲೆಗಳನ್ನು ಉಜ್ಜಿಸಿಕೊಂಡರೆ ಆಕೆಗೆ ಸೂಕ್ತ ವರ ದೊರಕುತ್ತಾನಂತೆ!, ಹೀಗೆ ಮೆಹೆಂದಿಯ ಕುರಿತಾದ ಮೂಢನಂಬಿಕೆಗಳು ನಿತ್ಯಜೀವನದಲ್ಲಿ ಆಳವಾಗಿ ಅಚ್ಚೊತ್ತಿವೆ. ನಿಮಗೂ ಇಂತಹ ಸಂಗತಿಗಳು ಅರಿವಿದ್ದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

ನಂಬುತ್ತೀರೋ ಬಿಡುತ್ತೀರೋ 'ಮೆಹೆಂದಿಯ' ಹಿಂದೆಯೂ ಕಟ್ಟುಕಥೆ ಇದೆ!

ಮದುವೆಗೂ ಮುನ್ನ ಹುಡುಗ ಹುಡುಗಿ ಪರಸ್ಪರ ನೋಡುವಂತಿಲ್ಲ

ಮದುವೆಗೂ ಮುನ್ನ ಹುಡುಗ ಹುಡುಗಿ ಪರಸ್ಪರ ನೋಡುವಂತಿಲ್ಲ

ವಿವಾಹ ಸಂದರ್ಭದಲ್ಲಿ ಎಲ್ಲಾ ಕಡೆಯೂ ಅನುಸರಿಸುವ ಪದ್ಧತಿ ಇದಾಗಿದೆ. ವಿವಾಹಕ್ಕೂ ಮುನ್ನ ವಧು ವರರು ಒಬ್ಬರನ್ನೊಬ್ಬರು ನೋಡುವಂತಿಲ್ಲ. ಹೀಗೆ ನೋಡಿದಲ್ಲಿ ಅವರ ಮನಸ್ಸು ಬದಲಾಗಬಹುದು ಎಂಬ ಭೀತಿ ಇದೆ.

ಹಾಲು ಚೆಲ್ಲುವುದು

ಹಾಲು ಚೆಲ್ಲುವುದು

ಮದುವೆಗೂ ಮುನ್ನ ಅಥವಾ ನಂತರ ಹಾಲು ಚೆಲ್ಲುವುದು ದಂಪತಿಗಳ ಜೀವನದಲ್ಲಿ ಅಪಶಕುನವನ್ನು ಉಂಟುಮಾಡಲಿದೆ ಎಂಬುದಾಗಿ ನಂಬಲಾಗಿದೆ. ಈ ದಿನದಂದು ಹಾಲು ಚೆಲ್ಲದಂತೆ ಎರಡೂ ಮನೆಯವರು ನೋಡುತ್ತಾರೆ.

ಕಲೀರನ್ ಆಭರಣ ಬೀಳುವುದು

ಕಲೀರನ್ ಆಭರಣ ಬೀಳುವುದು

ಉತ್ತರ ಭಾರತದಲ್ಲಿ ಅನುಸರಿಸುವ ಸಂಪ್ರದಾಯ ಇದಾಗಿದೆ. ಹುಡುಗಿಯು ಚೂಡ (ಬಳೆಯನ್ನು) ಧರಿಸುತ್ತಾಳೆ. ಆಕೆಯ ಕುಟುಂಬ ಸದಸ್ಯರು ಮತ್ತು ಸ್ನೇಹಿತೆಯರು ಕಲೀರನ್ (ಕೆಂಪು ಮತ್ತು ಚಿನ್ನದ ಬಣ್ಣದ ಆಭರಣ) ವನ್ನು ಕಟ್ಟುತ್ತಾರೆ. ವಿವಾಹವಾಗದ ಹುಡುಗಿಯ ತಲೆಯ ಮೇಲೆ ವಧುವು ತನ್ನ ಕೈಗಳನ್ನು ಸಾಗಿಸಬೇಕು. ಎಲ್ಲಿಯಾದರೂ ಹುಡುಗಿಯ ತಲೆಯ ಮೇಲೆ ಕಲೀರನ್ ಬಿದ್ದಲ್ಲಿ ಆ ಹುಡುಗಿಯ ವಿವಾಹ ಶೀಘ್ರದಲ್ಲೇ ನೆರವೇರುತ್ತದೆ.

ವಧು ವರರ ಮೇಲೆ ಅಕ್ಕಿಯನ್ನು ಚೆಲ್ಲುವುದು

ವಧು ವರರ ಮೇಲೆ ಅಕ್ಕಿಯನ್ನು ಚೆಲ್ಲುವುದು

ಅಕ್ಕಿಯನ್ನು ವಧು ವರರ ಮೇಲೆ ಹಾಕಿ ಕುಟುಂಬದವರು ಮತ್ತು ಸ್ನೇಹಿತರು ಅವರನ್ನು ಆಶೀರ್ವದಿಸುತ್ತಾರೆ. ಇದು ಫಲವತ್ತತೆ ಮತ್ತು ಬಾಂಧವ್ಯದ ಸಂಕೇತವಾಗಿದೆ. ಕೆಲವು ಸಂಸ್ಕೃತಿಗಳಲ್ಲಿ ಈ ರೀತಿ ಅಕ್ಕಿಯನ್ನು ವಧು ವರರ ಮೇಲೆ ಚೆಲ್ಲುವುದರಿಂದ ಕೆಟ್ಟ ಶಕ್ತಿಗಳಿಂದ ಅವರಿಗೆ ರಕ್ಷಣೆ ದೊರೆಯುತ್ತದೆ ಎಂಬ

ನಂಬಿಕೆ ಇದೆ.

ಅಚ್ಚರಿ ಜಗತ್ತು: 'ಅಕ್ಷತೆಕಾಳು' ಶತಮಾನಗಳ ಇತಿಹಾಸವೇ ಹೊಂದಿದೆ!

ವಿವಾಹ ದಿನದಂದು ಅಳುವುದು

ವಿವಾಹ ದಿನದಂದು ಅಳುವುದು

ವಿವಾಹ ದಿನದಂದು ಹುಡುಗಿಯು ಅತ್ತಲ್ಲಿ ಅದನ್ನು ಅದೃಷ್ಟವೆಂದು ಕರೆಯಲಾಗಿದೆ. ಈ ದಿನದಂದೇ ಆಕೆ ಅತ್ತುಬಿಡಲಿ ವಿವಾಹದ ನಂತರ ಕಣ್ಣೀರು ಹಾಕುವ ಪ್ರಸಂಗವೇ ಆಕೆಗೆ ಇರುವುದಿಲ್ಲ ಎಂಬುದಾಗಿ ನಂಬಲಾಗಿದೆ.

ಬಲಗಾಲನ್ನು ಮೊದಲು ಬಳಸುವುದು

ಬಲಗಾಲನ್ನು ಮೊದಲು ಬಳಸುವುದು

ಹಿಂದಿನ ಆಚರಣೆಗಳ ಪ್ರಕಾರ ಕಲಶವನ್ನು ತನ್ನ ಬಲಗಾಲಿನಿಂದ ಒದ್ದು ವಧು ವರನ ಮನೆಯನ್ನು ಪ್ರವೇಶಿಸುತ್ತಾಳೆ. ಎಡಗಾಲನ್ನು ಇಟ್ಟಲ್ಲಿ ಅದನ್ನು ಅಪಶಕುನವೆಂದು ನಂಬಲಾಗುತ್ತದೆ.

ಪರದೆಯನ್ನು ಧರಿಸುವುದು

ಪರದೆಯನ್ನು ಧರಿಸುವುದು

ರೋಮ್‌ನಲ್ಲಿ ಜನರು ಆಚರಿಸುವ ಆಚರಣೆ ಇದಾಗಿದೆ. ವಧುವಿನ ಸಂತೋಷದ ಮೇಲೆ ದುಷ್ಟಶಕ್ತಿಗಳು ತಮ್ಮ ವಕ್ರದೃಷ್ಟಿಯನ್ನು ಬೀರಲಿವೆ ಎಂಬುದಾಗಿ ನಂಬಿ ವಧುವು ವಿವಾಹ ದಿನದಂದು ಪರದೆಯನ್ನು ತನ್ನ ಮುಖಕ್ಕೆ ಅಡ್ಡಲಾಗಿ ಧರಿಸುತ್ತಾರೆ.

ಗಾಜಿನ ಲೋಟ ಒಡೆಯುವುದು

ಗಾಜಿನ ಲೋಟ ಒಡೆಯುವುದು

ಇಟಲಿಯಲ್ಲಿ ನವ ವಧುವರರು ಗಾಜಿನ ಲೋಟವನ್ನು ಒಡೆಯುತ್ತಾರೆ. ಈ ಗಾಜಿನ ಲೋಟ ಎಷ್ಟು ತುಂಟುಗಳಾಗಿ ಬಿದ್ದಿದೆಯೋ ಅಷ್ಟು ವರ್ಷಗಳು ಅವರು ಸಂತೋಷವಾಗಿ ಬಾಳುತ್ತಾರೆ ಎಂದಾಗಿ ನಂಬಲಾಗಿದೆ.

 ಗಂಟೆ ಬಡಿಯುವುದು

ಗಂಟೆ ಬಡಿಯುವುದು

ಐರಿಶ್ ವಿವಾಹಗಳಲ್ಲಿ ಗಂಟೆ ಬಡಿಯುವುದು ಸಾಮಾನ್ಯ ಪದ್ಧತಿಯಾಗಿದೆ. ಕೆಟ್ಟ ಶಕ್ತಿಗಳನ್ನು ನಿವಾರಿಸಿ ಸಂತೋಷಕರ ದಾಂಪತ್ಯ ಜೀವನವನ್ನು ಒದಗಿಸುತ್ತದೆ ಎಂಬಂತಹ ನಿಟ್ಟಿನಲ್ಲಿ ಗಂಟೆಯನ್ನು ವಧು ವರರಿಗೆ ಉಡುಗೊರೆಯಾಗಿ ನೀಡುತ್ತಾರೆ.

English summary

Superstitions That People Follow In Indian Weddings

Here, in this article, we are sharing the list of superstitions that people believe in and ensure that they follow them in a wedding ceremony without fail. Check out the list and we bet, you have heard them all!
X
Desktop Bottom Promotion