ಏನೂ ಮಾಡಿದರು ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಈ ಟಿಪ್ಸ್ ಅನುಸರಿಸಿ

By: Deepu
Subscribe to Boldsky

ಹಣ ಯಾರಿಗೆ ಬೇಡ? ಅದರಲ್ಲೂ ಹೆಚ್ಚಿನ ಹಣ ಎಲ್ಲರಿಗೂ ಬೇಕು. ಜೀವನಕ್ಕೆ ಸೌಲಭ್ಯಗಳು ಅಗತ್ಯ. ಈ ಸೌಲಭ್ಯಗಳನ್ನು ಪಡೆಯಲು ಹಣವನ್ನು ಖರ್ಚು ಮಾಡಲೇಬೇಕು. ಹಣ ಹೆಚ್ಚಿದ್ದಷ್ಟೂ ಸೌಲಭ್ಯಗಳು ಹೆಚ್ಚುತ್ತವೆ ಹಾಗೂ ಉತ್ತಮ ಆಹಾರ ಮತ್ತು ಸವಲತ್ತುಗಳು ಐಷಾರಾಮಗಳೂ ಲಭ್ಯವಾಗುತ್ತವೆ..

ನಮಗೆಲ್ಲರಿಗೂ ಗೊತ್ತಿರುವ ವಿಷಯವೆಂದರೆ ಜೀವನದಲ್ಲಿ ಎಲ್ಲರೂ ಬಯಸುವುದು ಐಶ್ವರ್ಯವೆಂದರೆ ಧನ. ಪುರಾಣಕಾಲದಲ್ಲಿ ಧನಕ್ಕಿಂತಲೂ ಮನಸ್ಸಿನ ಗುಣಕ್ಕೇ ಹೆಚ್ಚಿನ ಪ್ರಾಧಾನ್ಯತ ನೀಡಲಾಗುತ್ತಿತ್ತು. ಪುರಾಣಗಳಲ್ಲಿ ಕುಬೇರನಿಗೆ ಯಾವ ಅರ್ಹತೆಯೂ ಇಲ್ಲದ ಕಾರಣ ಧನವಾದರೂ ಇರಲಿ ಎಂದೇ ಅಪಾರ ಧನವನ್ನು ಭಗವಂತ ನೀಡಿದ ಎಂದೇ ತಿಳಿಸಲಾಗಿದೆ. ಆದರೆ ಇಂದು ಹೆಚ್ಚಿನವರು ಯಾವುದೇ ಅರ್ಹತೆಯನ್ನು ಬಯಸದೇ ಕೇವಲ ಕುಬೇರರಾಗಲು ಹವಣಿಸುತ್ತಿರುವುದನ್ನು ಸ್ಪಷ್ಟವಾಗಿಯೇ ಗಮನಿಸಬಹುದು! ಮನೆಯ 'ಪ್ರಧಾನ ಬಾಗಿಲ' ವಾಸ್ತು ಟಿಪ್ಸ್- ಅದೃಷ್ಟವೇ ಬದಲಾಗಬಹುದು!

ಆದರೆ ಕೆಲವೊಮ್ಮೆ ಉತ್ತಮ ಕೈತುಂಬಾ ಸಂಬಳ ಕೊಡುವ ಉದ್ಯೋಗ ಅಥವಾ ವಾಣಿಜ್ಯ ವಹಿವಾಟು ಇದ್ದರೂ ಮನೆಯಲ್ಲಿ ಹಣ ಉಳಿಯಲಾರದು. ಏಕೆಂದರೆ ಹಣ ಎಷ್ಟು ಮನೆಗೆ ಬರುತ್ತದೆಯೋ ಹೆಚ್ಚೂ ಕಡಿಮೆ ಅಷ್ಟೇ ಖರ್ಚೂ ಆಗಿ ಹೋಗುತ್ತದೆ. ಪರಿಣಾಮವಾಗಿ ಹಿಂದಿನ ದಿನಕ್ಕೂ ಇಂದಿಗೂ ಯಾವುದೇ ವ್ಯತ್ಯಾಸ ತೋರದಂತಾಗುತ್ತದೆ. ಇದಕ್ಕೆ ಮನೆಯ ವಾಸ್ತುಗಳು ಕೂಡ ಪ್ರಮುಖ ಕಾರಣವಾಗಿರಬಹುದು.   ವಾಸ್ತು ಶಾಸ್ತ್ರ-ನೆನಪಿನಲ್ಲಿಟ್ಟು ಕೊಳ್ಳಬೇಕಾದ ಸಂಗತಿಗಳು

ಹಾಗಾಗಿ ಮನೆಯ ವಸ್ತುಗಳನ್ನು ಇರಿಸುವ ಸ್ಥಳಗಳನ್ನು ಕೊಂಚ ಬದಲಿಸುವ ಮೂಲಕ ಮನೆಯ ವಾಸ್ತುವನ್ನು ಬದಲಿಸಿ ನಿಮ್ಮ ಗಳಿಕೆಯ ಬಹಳಷ್ಟು ಮನೆಯಲ್ಲಿಯೇ ಉಳಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದ್ದು ನಿಮ್ಮ ಮನೆಯಲ್ಲಿಯೂ ಹಣ ಮತ್ತು ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ....  

ಗೋಡೆಯಲ್ಲಿ ಲಕ್ಷ್ಮಿ ಕುಬೇರರ ಪಟ ಇರಿಸಿ...

ಗೋಡೆಯಲ್ಲಿ ಲಕ್ಷ್ಮಿ ಕುಬೇರರ ಪಟ ಇರಿಸಿ...

ಮನೆಯ ಹೊಸ್ತಿಲು ದಾಟಿ ಒಳಗೆ ಕಾಲಿಡುತ್ತಿದ್ದಂತೆ ಮೊದಲು ಕಾಣುವಂತೆ ಗೋಡೆಯಲ್ಲಿ ಲಕ್ಷ್ಮಿ ಕುಬೇರರು ಒಂದೇ ಪಟದಲ್ಲಿರುವ ಅಥವಾ ಪ್ರತ್ಯೇಕವಾದ ಎರಡು ಪಟಗಳನ್ನು ಇರಿಸಿ..

ಸ್ವಸ್ತಿಕ್ ಚಿಹ್ನೆ

ಸ್ವಸ್ತಿಕ್ ಚಿಹ್ನೆ

ಇದರೊಂದಿಗೆ ಸ್ವಸ್ತಿಕ್ ಚಿಹ್ನೆಯ ಇನ್ನೊಂದು ಪಟವನ್ನಿರಿಸಿದರೆ ಇನ್ನೂ ಉತ್ತಮ. ಇದರಿಂದ ಮನೆಗೆ ಧನಾಗಮನ ಹೆಚ್ಚುತ್ತದೆ ಹಾಗೂ ಉಳಿಯಲು ಸಾಧ್ಯವಾಗುತ್ತದೆ.

ಹನುಮಂತನ ವಿಗ್ರಹ

ಹನುಮಂತನ ವಿಗ್ರಹ

ಮನೆಯ ನೈಋತ್ಯ ದಿಕ್ಕಿನಲ್ಲಿ ಪಂಚರೂಪಿ ಹನುಮಂತನ ವಿಗ್ರಹವನ್ನು ಇರಿಸಿ ನಿತ್ಯವೂ ಪೂಜಿಸಿ. ಈ ವಿಗ್ರಹ ನಿಮ್ಮ ಮನೆಗೆ ಆಗಮಿಸುವ ಧನಾತ್ಮಕ ಶಕ್ತಿಗಳನ್ನು ಹೆಚ್ಚಿಸುತ್ತದೆ. ಅಲ್ಲದೇ ನಿಮ್ಮ ಮನೆಗೆ ಹಣ ಬರಲು ಇರುವ ಅಡ್ಡಿಗಳನ್ನು ನಿವಾರಿಸಿ ದಾರಿಯನ್ನು ಸುಗಮವಾಗಿಸುತ್ತದೆ.

ದೇವರ ಕೋಣೆ

ದೇವರ ಕೋಣೆ

ನಿಮಗೆ ಸಣ್ಣ ಪ್ರಾರ್ಥನಾ ಅಥವಾ ದೇವರ ಕೋಣೆ ಬೇಕು ಎಂದಾದಲ್ಲಿ, ದೇವತೆಗಳು ನೆಲೆಸಿರುವ ದಿಕ್ಕು ಎಂದು ಹೇಳಲಾದ ವಾಯುವ್ಯ ದಿಕ್ಕು ಇದಕ್ಕೆ ಸೂಕ್ತವಾದುದಾಗಿದೆ.

ಮನೆಯ ಸ್ವಚ್ಛತೆಗೆ ಬಳಸುವ ಪೊರಕೆ

ಮನೆಯ ಸ್ವಚ್ಛತೆಗೆ ಬಳಸುವ ಪೊರಕೆ

ನಿಮ್ಮ ಮನೆಯ ಸ್ವಚ್ಛತೆಗೆ ಬಳಸುವ ಪೊರಕೆ, ಪಾದರಕ್ಷೆ ಮೊದಲಾದವುಗಳನ್ನು ಮೆಟ್ಟಿಲ ಕೆಳಗೆ ಸಂಗ್ರಹಿಸಬೇಡಿ. ಮೆಟ್ಟಿಲ ಕೆಳಗೆ ಯಾವುದೇ ವಸ್ತುಗಳನ್ನು ಚಲನೆಗೆ ಅಡ್ಡಿಯಾಗುವಂತಿಡುವುದು ವಾಸ್ತುವಿಗೆ ವಿರುದ್ದವಾಗಿದ್ದು ಮನೆಯಲ್ಲಿ ದಾರಿದ್ರ್ಯ ಆವರಿಸಲು ಕಾರಣವಾಗುತ್ತದೆ.

ಗ್ಯಾಸ್ ಒಲೆ

ಗ್ಯಾಸ್ ಒಲೆ

ಗ್ಯಾಸ್ ಒಲೆಯನ್ನು ಮನೆಯ ಉತ್ತರ ಭಾಗದಲ್ಲಿ ಇಡಕೂಡದು. ಇದರಿಂದ ಮನೆಗೆ ಆಗಮಿಸುವ ಧನ ಮತ್ತು ಧನಾತ್ಮಕ ಶಕ್ತಿಯನ್ನು ಬೆಂಕಿ ದಹಿಸಿ ಬಿಡುತ್ತದೆ.

ಮನೆಯ ನಲ್ಲಿಗಳು ತೊಟ್ಟಿಕ್ಕಬಾರದು

ಮನೆಯ ನಲ್ಲಿಗಳು ತೊಟ್ಟಿಕ್ಕಬಾರದು

ಮನೆಯಲ್ಲಿ ಅಥವಾ ವಾಣಿಜ್ಯ ಸ್ಥಳಗಳಲ್ಲಿರುವ ಯಾವುದೇ ನಲ್ಲಿಯಿಂದ ನೀರು ತೊಟ್ಟಿಕ್ಕದಂತೆ ನೋಡಿಕೊಳ್ಳುವುದು ಅಗತ್ಯ. ಯಾವಾಗ ತೊಟ್ಟಿಕ್ಕುವುದು ಕಂಡುಬಂದಿತೋ ತಕ್ಷಣವೇ ಇದನ್ನು ರಿಪೇರಿ ಮಾಡಿಸಬೇಕು. ನೀರು ಪೋಲಾಗುವುದು ಹಣ ಪೋಲಾದಂತೆ ಎಂದು ವಾಸ್ತು ತಿಳಿಸುತ್ತದೆ.

ಒಣಗಿದ ಹೂವುಗಳು ಮನೆಮಯಲ್ಲಿರುವುದು ತರವಲ್ಲ

ಒಣಗಿದ ಹೂವುಗಳು ಮನೆಮಯಲ್ಲಿರುವುದು ತರವಲ್ಲ

ವಾಸ್ತುಶಾಸ್ತ್ರದ ಪ್ರಕಾರ ಒಂದು ದಿನದ ಬಳಿಕ ಬಾಡಿದ ಮತ್ತು ಒಣಗಿದ ಹೂವುಗಳಲ್ಲಿ ಧನಾತ್ಮ ಶಕ್ತಿ ಖಾಲಿಯಾಗಿ ಉಳಿದಿದ್ದ ಸ್ಥಳದಲ್ಲಿ ಹೊರಗಿನ ಋಣಾತ್ಮಕ ಶಕ್ತಿ ಆಗಮಿಸುವುದರಿಂದ ಮನೆಯಲ್ಲಿ ಋಣಾತ್ಮಕ ಪರಿಣಾಮಗಳನ್ನು ಕಾಣಬಹುದು. ಈಗಾಗಲೇ ಇರುವ ತೊಂದರೆಗಳು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಬಹುದು. ಒಂದು ವೇಳೆ ಒಣ ಹೂವುಗಳಿಂದ ಅಲಂಕರಿಸುವ ಹವ್ಯಾಸವಿದ್ದರೆ ಪ್ರತಿ ಪಕಳೆಯನ್ನೂ ಬಣ್ಣದ ನೀರಿನಲ್ಲಿ ಮುಳುಗಿಸಿ ಒಣಗಿಸಿಯೇ ಉಪಯೋಗಿಸಬಹುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಮಣ್ಣಿನ ಮಡಕೆ

ಮಣ್ಣಿನ ಮಡಕೆ

ಮನೆಯ ಉತ್ತರ ಭಾಗದಲ್ಲಿ ಒಂದು ಮಣ್ಣಿನ ಮಡಕೆ ಅಥವಾ ಸುರಾಹಿಯನ್ನು ಇರಿಸಿ. ಇದು ಅಪ್ಪಟ ಮಣ್ಣಿನಿಂದ ಮಾಡಿರಬೇಕು, ಯಾವುದೇ ಮಿಶ್ರಣ ಇರಬಾರದು. ಇದರಿಂದ ಮನೆಗೆ ಆಗಮಿಸಿದ ಧನ ಮನೆಯಲ್ಲಿಯೇ ಉಳಿದುಕೊಳ್ಳಲು ಸಾಧ್ಯವಾಗುತ್ತದೆ.

ಲಾಕರ್ ಸದಾ ಉತ್ತರ ದಿಕ್ಕಿನತ್ತ ಮುಖ ಮಾಡಿರುವಂತೆ ಇರಿಸಿ

ಲಾಕರ್ ಸದಾ ಉತ್ತರ ದಿಕ್ಕಿನತ್ತ ಮುಖ ಮಾಡಿರುವಂತೆ ಇರಿಸಿ

ನಿಮ್ಮ ಅಂಗಡಿ ಅಥವಾ ವಾಣಿಜ್ಯ ಮಳಿಗೆಗಳಲ್ಲಿ ಇಟ್ಟಿರುವ ಲಾಕರ್ ಸದಾ ಉತ್ತರ ದಿಕ್ಕಿನತ್ತ ಮುಖ ಮಾಡಿರುವಂತೆ ಇರಿಸುವುದು ಅಗತ್ಯ. ಇದರಿಂದ ವಹಿವಾಟಿನ ಲಾಭ ಹೆಚ್ಚು ಹೆಚ್ಚಾಗಿ ತಿಜೋರಿಯಲ್ಲಿ ಸಂಗ್ರಹವಾಗಲು ಸಾಧ್ಯವಾಗುತ್ತದೆ.

ಲಕ್ಷ್ಮಿ ದೇವಿಯ ಪಟ

ಲಕ್ಷ್ಮಿ ದೇವಿಯ ಪಟ

ಅಂತಿಮವಾಗಿ ಮನೆಯಲ್ಲಿ ಧನ ಮತ್ತು ಸಂಪತ್ತು ನೆಲೆಸಿರಲು ಲಕ್ಷ್ಮೀದೇವಿಯ ಪಟವೊಂದನ್ನು ನಿಮ್ಮ ಮನೆಯ ಪೂಜಾಗೃಹದಲ್ಲಿ ಸದಾ ಇರುವಂತೆ ನೋಡಿಕೊಳ್ಳಿ ಹಾಗೂ ನಿತ್ಯದ ಪೂಜೆಯಲ್ಲಿ ಲಕ್ಷ್ಮಿ ದೇವಿಗೂ ಪೂಜೆ ಸಲ್ಲಿಸಿ. ಇದರಿಂದ ಮನೆಯಲ್ಲಿ ಸಮೃದ್ಧತೆ ತುಂಬಿ ಸದಸ್ಯರಲ್ಲಿ ಸಾಮರಸ್ಯ ಹಾಗೂ ಪ್ರೀತಿ ತುಂಬಿ ತುಂಬಿರುತ್ತದೆ.

ಲಕ್ಷ್ಮಿದೇವಿಗೆ ದಿನ ಪೂಜೆ ಸಲ್ಲಿಸಿ

ಲಕ್ಷ್ಮಿದೇವಿಗೆ ದಿನ ಪೂಜೆ ಸಲ್ಲಿಸಿ

ಲಕ್ಷ್ಮಿದೇವಿಯ ವಿಗ್ರಹ ಮನೆಗೆ ಬಂದ ಧನ ಉಳಿಸಿಕೊಳ್ಳುವುದು ಮತ್ತು ಇನ್ನೂ ಹೆಚ್ಚು ಹೆಚ್ಚಾಗಿ ಧನ ಆಗಮಿಸುವಂತೆ ನೋಡಿಕೊಳ್ಳಲು ಮನೆಯಲ್ಲಿ ಲಕ್ಷ್ಮಿದೇವಿಯ ವಿಗ್ರಹ ಅಥವಾ ಪಟ ನಿಮ್ಮ ಪೂಜಾಗೃಹದಲ್ಲಿದ್ದು ನಿತ್ಯವೂ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತಿರಬೇಕು. ಇದರಿಂದ ಮನೆಗೆ ಧನ ಹೆಚ್ಚು ಆಗಮಿಸುತ್ತದೆ ಹಾಗೂ ಮನೆಯಲ್ಲಿ ನೆಮ್ಮದಿ ಸದಾ ಇರುವಂತಾಗುತ್ತದೆ.

 
English summary

Simple Steps To Make Sure You Never Run Out of Money

Money is probably the most important thing that is needed for survival, along with food. However, can you get rich just by hard work?Here is a list of things you should keep in your house to attract good vastu and increase the inflow of money in your house.
Subscribe Newsletter