ಮಧ್ಯ ರಾತ್ರಿ ತಕ್ಷಣ ಎಚ್ಚರವಾದಾಗ ದೇಹದಲ್ಲಿ ಯಾಕೆ ಹೀಗೆಲ್ಲಾ ಆಗುವುದು?

By: Arshad
Subscribe to Boldsky

ನಿದ್ದೆಯ ವಿಷಯ ಬಂದಾಗ ನಮ್ಮೆಲ್ಲರಲ್ಲಿಯೂ ಕೊಂಚ ರೀತಿಯ ವ್ಯತ್ಯಾಸ ಹಾಗೂ ನಿದ್ರೆಯ ಮಾದರಿಗಳಲ್ಲಿ ಬದಲಾವಣೆಯನ್ನು ಕಾಣಬಹುದು. ಆದರೆ ಇದರ ಕಾರಣಗಳನ್ನು ಹುಡುಕುವ ಬಗ್ಗೆ ನಡೆದ ಅಧ್ಯಯನಗಳು ತೀರಾ ಕಡಿಮೆ ಎನ್ನಬಹುದು. ಕೆಲವರಿಗೆ ನಡುರಾತ್ರಿಯಲ್ಲಿ ಥಟ್ಟನೇ ಎಚ್ಚರಾಗುತ್ತದೆ.

ಕಣ್ಣಿನಿಂದ ಗ್ರಹಿಕೆ ಸಾಧ್ಯವಾದರೂ ಕೈಕಾಲುಗಳು ಮರಗಟ್ಟಿದಂತಿದ್ದು ಅಲುಗಾಡಿಸಲೇ ಸಾಧ್ಯವಿಲ್ಲದಂತಿರುತ್ತದೆ. ಅಷ್ಟೇ ಅಲ್ಲ, ಬಾಯಿಯೂ ಮರಗಟ್ಟಿದ್ದು ಯಾರನ್ನೂ ಕರೆಯಲೂ ಸಾಧ್ಯವಾಗದಂತಿರುತ್ತದೆ. ಮತ್ತೆ ನಿದ್ದೆಗೆ ಜಾರಿ ಮರುದಿನ ಬೆಳಿಗ್ಗೆದ್ದಾಗ ಎಲ್ಲಾ ಸಾಮಾನ್ಯವಾಗಿಯೇ ತೋರುವ ಕಾರಣ ಹೆಚ್ಚಿನವರು ಈ ಸ್ಥಿತಿಯನ್ನು ಅಲಕ್ಷಿಸುತ್ತಾರೆ.

ಅಚ್ಚರಿ ಜಗತ್ತು: ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನರ್ಥ ಗೊತ್ತೇ?

ನಡುರಾತ್ರಿಯಲ್ಲಿ ಶರೀರ ಮರಗಟ್ಟಿದ್ದರೂ ಮೆದುಳು ಎಚ್ಚರಾವಸ್ಥೆಗೆ ತಲುಪಿದ್ದಾದರೂ ಹೇಗೆ? ಈ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ನಿದ್ರಾ ಪಾರ್ಶ್ವವಾಯು ಅಥವಾ sleep paralysis ಎಂದು ಕರೆಯುತ್ತಾರೆ. ಬನ್ನಿ, ಈ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದು ಅರಿಯೋಣ....  

ಅಷ್ಟಕ್ಕೂ ಈ ಸ್ಥಿತಿಯಲ್ಲಿ ನಿಜವಾಗಿ ಏನಾಗುತ್ತದೆ?

ಅಷ್ಟಕ್ಕೂ ಈ ಸ್ಥಿತಿಯಲ್ಲಿ ನಿಜವಾಗಿ ಏನಾಗುತ್ತದೆ?

ಒಂದು ವರದಿಯ ಪ್ರಕಾರ ವಿಶ್ವದ ಒಟ್ಟಾರೆ ಸಾಮಾನ್ಯ ಜನಸಂಖ್ಯೆಯ 7.6% ರಷ್ಟು ಜನರಿಗೆ ಈ ತೊಂದರೆ ಇದೆ. ಈ ಜನರ ನಿದ್ರಾ ಮಾದರಿಗಳು ಏಕಕ್ರಮದಲ್ಲಿರದೇ ನಡುನಡುವೆ ತುಂಡು ತುಂಡಾಗಿರುತ್ತದೆ. ಅಂದರೆ ಇವರಿಗೆ ಗಾಢವಾದ ನಿದ್ದೆ ಹೆಚ್ಚಿನ ಕಾಲ ಆವರಿಸದೇ ನಡುನಡುವೆ ಎಚ್ಚರಾಗುತ್ತಾ ಇರುತ್ತದೆ. ಮಾನಸಿಕ ತೊಂದರೆಗಳಿಂದ ಬಳಲುವವರಲ್ಲಿಯೂ ಇದು ಕಾಣಿಸಿಕೊಳ್ಳುತ್ತದೆ. ದಿನದ ಹೊತ್ತಿನಲ್ಲಿ ವ್ಯಕ್ತಿ ಎದುರಿಸುವ ಒತ್ತಡ, ಉದ್ವೇಗ, ಖಿನ್ನತೆ ಮೊದಲಾದವೂ ಈ ಸ್ಥಿತಿಗೆ ಕಾರಣ ಎಂದು ವರದಿ ತಿಳಿಸುತ್ತದೆ.

ಈ ಸ್ಥಿತಿಯಲ್ಲಿ ಮೆದುಳು ಎಚ್ಚರಾಗಿದ್ದು ದೇಹವೇಕೆ ಮರಗಟ್ಟುತ್ತದೆ?

ಈ ಸ್ಥಿತಿಯಲ್ಲಿ ಮೆದುಳು ಎಚ್ಚರಾಗಿದ್ದು ದೇಹವೇಕೆ ಮರಗಟ್ಟುತ್ತದೆ?

ಈ ಸ್ಥಿತಿಯನ್ನು ಅಧ್ಯಯನ ಮಾಡಿದ ಸಂಶೋಧಕರ ಪ್ರಕಾರ ನಿದ್ದೆಯಲ್ಲಿ ಮೂರರಿಂದ ನಾಲ್ಕು ಪ್ರಕಾರದ non-REM ಅಥವಾ (non Random Eye movement) ಅಂದರೆ ನಿದ್ರಾವಸ್ಥೆಯಲ್ಲಿ ಕಣ್ಣುಗುಡ್ಡೆಗಳು ಅತ್ತಿತ್ತ ಚಲಿಸದೇ ಇರುವ ಸ್ಥಿತಿಗಳಿರುತ್ತವೆ. REM ಚಲನೆಗೆ ಮೆದುಳು ಕಾಣುತ್ತಿರುವ ಕನಸುಗಳೇ ಕಾರಣ. ಅಂದರೆ ಕನಸು ಕಾಣುತ್ತಿರುವ ಹೊತ್ತಿನಲ್ಲಿ ಈ ಚಲನೆ ಹೆಚ್ಚಿರುತ್ತದೆ ಹಾಗೂ ಈ ಕನಸುಗಳು ಎಚ್ಚರಾದ ಬಳಿಕವೂ ನೆನಪಿರುತ್ತವೆ.

ಮಹಿಳೆಯ ಕನಸು ಬಿದ್ದರೆ-ಕನಸಲ್ಲಿ ಅರೆರೆರೇ! ಭವಿಷ್ಯ ಅಯ್ಯಯ್ಯಯ್ಯೋ..!

REM Antonia ಬಗ್ಗೆ ಕೇಳಿದ್ದೀರಾ

REM Antonia ಬಗ್ಗೆ ಕೇಳಿದ್ದೀರಾ

ಸಂಶೋಧಕರ ಪ್ರಕಾರ ಕನಸು ಕಾಣುತ್ತಿರುವ ಹೊತ್ತಿನಲ್ಲಿ (REM Antonia) ಮೆದುಳು ಹೆಚ್ಚು ಸಕ್ರಿಯವಾಗಿರುತ್ತದೆ. ಇದೇ ಕಾರಣದಿಂದ ಮೆದುಳು ದೇಹಕ್ಕೆ ನೀಡಬೇಕಾದ ಐಚ್ಛಿಕ ಸೂಚನೆಗಳನ್ನು ನೀಡುವುದೇ ಇಲ್ಲ. ದೇಹದಲ್ಲಿ ಕೇವಲ ಅನೈಚ್ಛಿಕ ಕಾರ್ಯಗಳು ನಡೆಯುತ್ತಿರುತ್ತವೆ. ಇದೇ ಕಾರಣಕ್ಕೆ ಮೆದುಳಿನ ಬಳಿ ಇರುವ ಕಣ್ಣುಗಳು ಮಾತ್ರವೇ ಮೆದುಳಿನೊಂದಿಗೆ ಸಂಪರ್ಕ ಹೊಂದಿರುವ ಕಾರಣ ದೇಹ ಮರಗಟ್ಟಿದಂತಿರುತ್ತದೆ.

 ಈ ಸ್ಥಿತಿಯಲ್ಲಿ ಜನರಿಗೆ ಬಳಿ ಯಾರೋ ಇದ್ದಂತೆ ಅನ್ನಿಸುತ್ತದೆ

ಈ ಸ್ಥಿತಿಯಲ್ಲಿ ಜನರಿಗೆ ಬಳಿ ಯಾರೋ ಇದ್ದಂತೆ ಅನ್ನಿಸುತ್ತದೆ

ಈ ಸ್ಥಿತಿಯನ್ನು ಅನುಭವಿಸಿದ ಜನರಲ್ಲಿ ಹೆಚ್ಚಿನವರಿಗೆ ಆಗ ಯಾರೋ ತಮ್ಮ ಬಳಿ ಇದ್ದಂತಹ ಅನುಭವವಾಗುತ್ತದೆ. ಸಂಶೋಧಕರ ಪ್ರಕಾರ ಖಿನ್ನತೆ ಅಥವಾ ದುಃಖದಲ್ಲಿರುವ ವ್ಯಕ್ತಿಗಳಿಗೆ ಈ ಅನುಭವವಾಗುತ್ತದೆ.

ಈ ಮರಗಟ್ಟುವಿಕೆಯಲ್ಲಿಯೂ ವಿಧಗಳಿವೆ

ಈ ಮರಗಟ್ಟುವಿಕೆಯಲ್ಲಿಯೂ ವಿಧಗಳಿವೆ

ಸಂಶೋಧಕರ ಪ್ರಕಾರ ಒಟ್ಟು ಮೂರು ರೀತಿಯ ಸ್ಥಿತಿಗಳನ್ನು ಗುರುತಿಸಬಹುದು. ಈ ಮೂರೂ ಸ್ಥಿತಿಗಳನ್ನು ವೈದ್ಯಕೀಯ ಭಾಷೆಯಲ್ಲಿ "incubus", "intruder" ಹಾಗೂ "unusual bodily experiences" ಎಂದು ಕರೆಯುತ್ತಾರೆ.

ಇನ್ಕುಂಬಸ್ ವಿಧ

ಇನ್ಕುಂಬಸ್ ವಿಧ

ಈ ಬಗೆಯ ಅನುಭವ ಪಡೆದವರಿಗೆ ಎದೆಯ ಮೇಲೆ ಹೆಚ್ಚಿನ ಭಾರವೊಂದು ಬಿದ್ದಂತೆ, ಈ ಕಾರಣದಿಂದಾಗಿ ಉಸಿರಾಡಲೇ ಸಾಧ್ಯವಿಲ್ಲವೆಂದೆನ್ನಿಸುತ್ತದೆ. ಇದಕ್ಕೆ ಭಯವೇ ಕಾರಣವಾಗಿದೆ. ಭೂತವನ್ನು ನಂಬುವ ಜನರು ತಮ್ಮ ಎದೆಯ ಮೇಲೆ ಭೂತ ಕೂತಿತ್ತು ಎಂದು ದೂರುತ್ತಾರೆ.

ಇಂಟ್ರೂಡರ್ ವಿಧ

ಇಂಟ್ರೂಡರ್ ವಿಧ

ಈ ಬಗೆಯ ಅನುಭವ ಪಡೆದವರಿಗೆ ಯಾವುದೋ ಭಯ ಆವರಿಸುತ್ತದೆ. ಇವರಿಗೆ ತಮ್ಮ ಅಕ್ಕಪಕ್ಕದಲ್ಲಿ ಯಾರೋ ಇದ್ದಂತೆ ಕಾಣುವ, ಯಾರದ್ದೋ ಮಾತುಗಳೋ, ಚಲನವಲನದ ಸದ್ದು ಆಲಿಸುವ ಅನುಭವವಾಗುತ್ತದೆ. ಮನಃಶಾಸ್ತ್ರಜ್ಞರು ಈ ಸ್ಥಿತಿಯನ್ನು ಮಿಥ್ಯಾದರ್ಶನ ಎಂದು ಕರೆಯುತ್ತಾರೆ.

The Unusual Body Experience (ಅಸಾಮಾನ್ಯ ದೈಹಿಕ ಅನುಭವ) ವಿಧ

The Unusual Body Experience (ಅಸಾಮಾನ್ಯ ದೈಹಿಕ ಅನುಭವ) ವಿಧ

ಈ ಸ್ಥಿತಿಯನ್ನು ಅನುಭವಿಸಿದ ಜನರು ಕೋಣೆಯೊಳಗೇ ತಾವು ಗಾಳಿಯಲ್ಲಿ ತೇಲುತ್ತಾ ಇದ್ದ ಅನುಭವ ಪಡೆಯುತ್ತಾರೆ. ಈ ಸ್ಥಿತಿಯಲ್ಲಿ ಮೆದುಳು ಪೂರ್ಣವಾಗಿ ಎಚ್ಚಾರವಸ್ಥೆಯಲ್ಲಿದ್ದರೂ ದೇಹ ಅರೆನಿದ್ರಾವಸ್ಥೆಯಲ್ಲಿರುತ್ತದೆ.

ಹತ್ತು ಸಾಮಾನ್ಯ ಕನಸುಗಳು ಮತ್ತು ಅವುಗಳ ಅರ್ಥ

English summary

Reasons Why You Cannot Move Your Body When You Wake Up

Many people experience the problem of suddenly waking up in the middle of sleep and realise that they are unable to do anything; however, they choose to ignore this condition when they are in a fully awake state. Here, we are about to explain about this condition, which is known as sleep paralysis. This is a condition in which the person wakes up in his mid-sleep and realises that he is unable to move.
Subscribe Newsletter