Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಸಾಧು,ಸಂತರು ಕಾವಿ ಬಟ್ಟೆಯೇ ಧರಿಸುತ್ತಾರೆ, ಇದಕ್ಕೇ ಬೇರೆಯೇ ಕಾರಣವಿದೆ!!
ಸಾವಿರಾರು ವರ್ಷಗಳಿಂದಲೂ ಸಾಧುಸಂತರುಗಳು ಕೇಸರಿ ಬಣ್ಣದ ಬಟ್ಟೆ ಧರಿಸುತ್ತಾರೆ ಎನ್ನುವುದು ನಮಗೆ ತಿಳಿದಿದೆ. ಕೇವಲ ಭಾರತದಲ್ಲಿ ಹಿಂದೂ ಧರ್ಮದವರು ಮಾತ್ರವಲ್ಲದೆ ಬೌದ್ಧ ಧರ್ಮದವರೂ ಕಾವಿ ಧರಿಸುತ್ತಾರೆ. ಕೇಸರಿ ಬಣ್ಣವು ಅಗ್ನಿಯ ಸೂಚಕವಾದರೂ ಇದು ಒಳ್ಳೆಯದನ್ನು ಸೂಚಿಸುತ್ತದೆ.
ಕೇಸರಿ ಬಣ್ಣವು ಹಿಂದೂ ಧರ್ಮದ ಸಂಕೇತವೆಂದೇ ಹೆಚ್ಚಿನವರು ಭಾವಿಸಿದ್ದಾರೆ. ಕೇಸರಿ ಬಣ್ಣವು ನಮ್ಮ ರಾಷ್ಟ್ರ ಧ್ವಜದಲ್ಲೂ ಇದೆ. ಕೇಸರಿ ಬಣ್ಣದ ಬಟ್ಟೆ ಹಾಗೂ ಸಾಧು, ಸಂತರು ಇಂತಹ ಬಟ್ಟೆ ಧರಿಸಲು ಹಲವಾರು ಕಾರಣಗಳು ಇವೆ... ಮುಂದೆ ಓದಿ...

ಕೇವಲ ಹಿಂದೂಗಳು ಮಾತ್ರವಲ್ಲ
ಕೇವಲ ಹಿಂದೂಗಳು ಮಾತ್ರವಲ್ಲದೆ ಸಿಕ್ಖ್ ಧರ್ಮದವರು ಮತ್ತು ಬೌದ್ಧ ಧರ್ಮದವರು ಕೇಸರಿಯನ್ನು ತುಂಬಾ ಪವಿತ್ರ ಬಣ್ಣವೆಂದು ಭಾವಿಸುತ್ತಾರೆ. ಕೇಸರಿ ಬಣ್ಣವು ಸಾಧು ಹಾಗೂ ಸಂತರಿಗೆ ಹೊಂದಿಕೊಳ್ಳಲು ವೈಜ್ಞಾನಿಕ ಕಾರಣಗಳು ಏನು ಎನ್ನುವುದನ್ನು ಬೋಲ್ಡ್ ಸ್ಕೈ ಈ ಲೇಖನ ಮೂಲಕ ನಿಮಗೆ ತಿಳಿಸಿಕೊಡಲಿದೆ. ಋಗ್ ವೇದದ ಮೊದಲ ಪದ್ಯ ಹೀಗೆ ಹೇಳುತ್ತದೆ: ಅಗ್ನಿಮಿಲೆ ಪುರೋಹಿತಮ್ ಯಜ್ಞಾಸಯ ದೇವಂ ರಾತ್ವಿಜಮ್, ಹಾತರಾಮ್ ರತ್ನಾ ಧಾತಮಂ ಅಗ್ನಿಯೇ ದೇವರು, ಬಲಿಯ ಪೂಜಕ, ಜ್ಞಾನದ ನಿಧಿಯನ್ನೇ ನೀಡುವಂತಹ ಅಗ್ನಿ ದೇವರನ್ನು ನಾನು ಪೂಜಿಸುತ್ತೇನೆ ಎನ್ನುವುದು ಇದರರ್ಥ.

ವೈಜ್ಞಾನಿಕ ಕಾರಣ
ಈ ಬಣ್ಣವು ತ್ರಿಕಾಸ್ತಿ ಮತ್ತು ಮೂಲ ಚಕ್ರದ ಶಕ್ತಿಯನ್ನು ಸಮತೋಲನದಲ್ಲಿಡುತ್ತದೆ. ಲೈಂಗಿಕ ಕ್ರಿಯೆಯು ಸಾಧು ಹಾಗೂ ಸಂತರಲ್ಲಿ ಕಡಿಮೆಯಿರುವ ಕಾರಣ ಈ ಎರಡು ಚಕ್ರಗಳಲ್ಲಿ ಶಕ್ತಿಯು ಹೆಚ್ಚು ಬೆಳವಣಿಗೆಯಾಗಿರುವುದಿಲ್ಲ. ಮೂಲ ಹಾಗೂ ತ್ರಿಕಾಸ್ತಿಯ ಬಣ್ಣವು ಕ್ರಮವಾಗಿ ಕೆಂಪು ಹಾಗೂ ಕೇಸರಿಯಾಗಿರುವುದು.

ವೈಜ್ಞಾನಿಕ ಕಾರಣ
ಈ ಬಣ್ಣವನ್ನು ಧರಿಸುವುದರಿಂದ ಹೃದಯ ಹಾಗೂ ಶಿರೋಚಕ್ರದ ಶಕ್ತಿಯ ಸಮತೋಲನ ಕಾಪಾಡಬಹುದು. ಆಧ್ಯಾತ್ಮಿಕ ವ್ಯಕ್ತಿಗಳಲ್ಲಿ ಈ ಚಕ್ರಗಳು ಹೆಚ್ಚು ಬೆಳೆದಿರುವುದು. ಇದರಿಂದಾಗಿ ಅವರು ಎಲ್ಲಾ ಭಾವನೆಗಳನ್ನು ತ್ಯಜಿಸಿರುತ್ತಾರೆ.

ಬೌದ್ಧ ಧರ್ಮದಲ್ಲಿ ಕೇಸರಿ ಬಣ್ಣವು ತ್ಯಾಗ ಮತ್ತು ಬೆಳಕಿನ ಬಣ್ಣವಾಗಿದೆ
ಸಿಕ್ಖರ ಧಾರ್ಮಿಕ ಧ್ವಜವು ಕೇಸರಿ ಬಣ್ಣದ್ದಾಗಿದೆ. ಇದು ಸಂತೋಷ ಮತ್ತು ಪರಮಸುಖವನ್ನು ಪ್ರತಿಬಿಂಬಿಸುವುದು. ಸಿಕ್ಖರು ಧರಿಸುವಂತಹ ಪಂಚ ಪಯರೆ(ಯುದ್ಧ ಧಿರಿಸು) ಕೂಡ ಇದೇ ಬಣ್ಣದ್ದಾಗಿರುವುದು. ಈ ಬಣ್ಣವು ಆಘಾತ ಮತ್ತು ಕೆಟ್ಟ ಅನುಭವನ್ನು ಹೀರಿಕೊಳ್ಳುತ್ತದೆ ಎನ್ನುವುದು ಇದರ ಸಂಕೇತವಾಗಿದೆ.



Click it and Unblock the Notifications