Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
29-11-2017 ಬುಧವಾರದ ದಿನ ಭವಿಷ್ಯ

ಮನಸ್ಸಿಟ್ಟು ಮಾಡಿದ ಕೆಲಸ, ಕಷ್ಟ ಪಟ್ಟು ದುಡಿದ ಹಣ, ಹಲವರೊಂದಿಗೆ ಹಂಚಿ ತಿನ್ನುವ ಗುಣ, ಭಕ್ತಿಯಿಂದ ಮಾಡುವ ದೇವರ ಆರಾಧನೆ ಎಂದಿಗೂ ನಮ್ಮ ಕೈ ಬಿಡುವುದಿಲ್ಲ. ಸದಾ ನಮ್ಮ ಒಳಿತಿಗಾಗಿ ಆಶೀರ್ವದಿಸುತ್ತದೆ. ನಮಗೆ ಬೇರೆಯವರಿಗೆ ಒಳ್ಳೆಯದನ್ನು ಮಾಡಲು ಆಗದಿದ್ದರೂ ಚಿಂತೆಯಿಲ್ಲ. ಕೆಟ್ಟದನ್ನು ಬಯಸುವುದು ಅಥವಾ ಕೆಟ್ಟದ್ದನ್ನು ಗೈಯುವ ಕೆಲಸಕ್ಕೆ ಹೋಗಬಾರದು. ಬೇರೆಯವರಿಗೆ ಕೆಟ್ಟದ್ದನ್ನು ಬಗೆದರೆ ಅದರ ಪರಿಣಾಮವಾಗಿ ನಮಗೆ ಕೆಟ್ಟದ್ದಾಗುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಬೇಕು.
ಬುಧವಾರವಾದ ಇಂದು ಯಾವೆಲ್ಲಾ ಬಗೆಯ ವ್ಯತ್ಯಾಸಗಳಿಗೆ ನೀವು ಭಾಗಿಯಾಗುವಿರಿ? ನಿಮ್ಮ ಅದೃಷ್ಟವು ನಿಮ್ಮ ಕೈ ಹಿಡಿಯುವುದೇ ಅಥವಾ ನೀವು ಮಾಡಿದ ಪುಣ್ಯ ಕೆಲಸಗಳು ನಿಮ್ಮನ್ನು ಮುಂದೆ ನಡೆಸುವುದೇ? ಎನ್ನುವುದನ್ನು ತಿಳಿಯಲು ಈ ಮುಂದಿರುವ ಇಂದಿನ ದಿನ ಭವಿಷ್ಯದ ವಿವರಣೆಯನ್ನು ಅರಿಯಿರಿ...

ಮೇಷ
ಇಂದು ನೀವು ಸಾಲದಿಂದ ಮುಕ್ತಿ ಹೊಂದುವಿರಿ. ಎಲ್ಲಾ ಸಾಲವನ್ನೂ ನೀವು ಮರುಪಾವತಿ ಮಾಡುವಿರಿ. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಸಂತೋಷ ಉಂಟಾಗುವುದು. ತಂದೆ ಮತ್ತು ಮಕ್ಕಳ ಸಹಕಾರದಿಂದ ಹೊಸ ಯೋಜನೆಯು ಚಾಲ್ತಿ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಅನುಕೂಲ ಹಾಗೂ ವಿದೇಶಯಾನ ಬಯಸುವವರ ಕನಸು ನೆರವೇರುವುದು. ಯಶಸ್ವಿ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ವೃಷಭ
ಸಮಾಧಾನದಲ್ಲಿ ನೀವು ಜೀವನನಡೆಸಬೇಕು. ಆತುರದ ನಿರ್ಧಾರವನ್ನು ಕೈಗೊಳ್ಳದಿರಿ. ಮಾನಸಿಕವಾಗಿ ಕಿರಿಕಿರಿ ಉಂಟಾಗುವ ಲಕ್ಷಣಗಳಿವೆ. ಹಣಕಾಸಿನ ಬಗ್ಗೆ ಆದಷ್ಟು ಜಾಗ್ರತರಾಗಿರಿ. ನೀವು ಮಾಡುತ್ತಿರುವ ಉದ್ಯೋಗದಲ್ಲಿ ಉಂಟಾಗುವ ಏರು ಪೇರುಗಳು ನಿಮ್ಮನ್ನು ಹೈರಾಣಗೊಳಿಸುವುದು. ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುವುದು. ಸ್ನೇಹಿತರೇ ದ್ರೋಹ ಮಾಡುವ ಸಾಧ್ಯತೆಗಳಿವೆ. ಹಣವನ್ನು ಪಡೆಯುವುದು ಅಥವಾ ಕೊಡುವ ಕೆಲಸಕ್ಕೆ ಕೈ ಹಾಕದಿರಿ. ಮೂರನೆ ವ್ಯಕ್ತಿಯ ಮಧ್ಯಸ್ಥಿಕೆಗೆ ಅವಕಾಶ ನೀಡದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಭವಿಷ್ಯಕ್ಕಾಗಿ ಗಣೇಶನ ಆರಾಧನೆ ಮಾಡಿ.

ಮಿಥುನ
ಮನೆಯಲ್ಲಿ ನೆಮ್ಮದಿ ಹಾಗೂ ಮನಸ್ಸಿಗೆ ಸಂತೋಷ ಉಂಟಾಗುವುದು. ಮಾಡುತ್ತಿರುವ ಕೆಲಸದಲ್ಲಿ ಶ್ರದ್ಧೆಯಿಂದ ಮುಂದುವರಿಯಿರಿ. ಕಬ್ಬಿಣ, ತೈಲೋದ್ಯಮಗಳಲ್ಲಿ ಲಾಭ ಉಂಟಾಗುವುದು. ಹೊಟೇಲ್ ಉದ್ಯಮಿಗಳಿಗೂ ಲಾಭ ದೊರೆಯುವುದು. ಸಂಗಾತಿ ಹೇಳುವ ಸಲಹೆಯನ್ನು ಸ್ವೀಕರಿಸಿ. ವಿದ್ಯಾರ್ಥಿಗಳಿಗೆ ಶುಭ ದಿನ. ಸ್ತ್ರೀಯರ ಮನ ನೋಯಿಸದಿರಿ. ಇನ್ನಷ್ಟು ಉತ್ತಮ ಬದುಕಿಗಾಗಿ ಕುಲದೇವರ ಆರಾಧನೆ ಹಾಗೂ ಇಷ್ಟ ದೇವರ ಸ್ಮರಣೆಯನ್ನು ಮಾಡಿ.

ಕರ್ಕ
ನೀವು ಅಂದುಕೊಂಡ ಕಾರ್ಯವು ನೆರವೇರುವುದು. ತಂದೆ ಮಕ್ಕಳ ನಡುವೆ ಇದ್ದ ಭಿನ್ನಾಭಿಪ್ರಾಯ ಉಪಶಮನವಾಗುವುದು. ಬಂಧು ಮಿತ್ರರಿಂದ ಸಹಕಾರ ಹಾಗೂ ಮನೆಯಲ್ಲಿ ನೆಮ್ಮದಿ ನೆಲೆಸುವುದು. ದೂರದ ಸಂಬಂಧಿಗಳು ಅಗಲಿದ ಸುದ್ದಿಯನ್ನು ಕೇಳಬೇಕಾಗುವುದು. ಎಲ್ಲಾ ತರಹದ ವ್ಯಾಪಾರ ವಹಿವಾಟು ಸುಗಮವಾಗಿ ಸಾಗುವುದು. ಆರ್ಥಿಕವಾಗಿ ಉತ್ತಮ ಸ್ಥಿತಿಯನ್ನು ಹೊಂದುವಿರಿ. ವಿದ್ಯಾರ್ಥಿಗಳಿಗೆ ಶುಭ ದಿನ. ಸಮಸ್ಯೆಗಳ ನಿವಾರಣೆಗೆ ಗಣೇಶ ಹಾಗೂ ವಿಷ್ಣುವಿನ ಆರಾಧನೆ ಮಾಡಿ.

ಸಿಂಹ
ನಿಮಗೆ ಪಂಚಮಶನಿ ಇರುವುದರಿಂದ ವಿಪರೀತ ಆಯಾಸ, ಇಲ್ಲಸಲ್ಲದ ಆರೋಪಗಳು ನಿಮ್ಮ ಬೆನ್ನೇರುವುದು. ತಾಂತ್ರಿಕ ವರ್ಗದವರಿಗೆ ಹಾಗೂ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಹಿನ್ನಡೆ ಉಂಟಾಗುವುದು. ಅನೇಕ ಸಮಸ್ಯೆಗಳು ಒಂದೊಂದಾಗಿಯೇ ತಲೆದೂರುವುದು. ನಿಮ್ಮ ಸಮಸ್ಯೆಗಳ ನಿವಾರಣೆಗೆ ವಿಷ್ಣುವಿನ ಆರಾಧನೆ ಮಾಡಿ.

ಕನ್ಯಾ
ಇಲ್ಲ ಸಲ್ಲದ ಆರೋಪಗಳಿಗೆ ನೀವು ತುತ್ತಾಗಬೇಕಾಗುವುದು. ಇದರಿಂದ ಮಾನಸಿಕ ಕಿರಿಕಿರಿ ಉಯಂಟಾಗುವುದು. ಬಂಧು ಮಿತ್ರರಿಂದ ಸಹಕಾರ ದೊರೆಯದು. ಮಾಡುತ್ತಿರುವ ಉದ್ಯೋಗವನ್ನೇ ಮುಂದುವರಿಸಿ. ಕೆಲಸವನ್ನು ಬಿಡುವುದು ಅಥವಾ ಬದಲಾವಣೆಯ ಕೆಲಸಕ್ಕೆ ಮುಂದಾಗದಿರಿ. ಇನ್ನಷ್ಟು ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ತುಲಾ
ನಿಮ್ಮ ಸುಂದರ ಬದುಕಿಗೆ ಭಗವಂತನ ಆಶೀರ್ವಾದ ಲಭಿಸುವುದು. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಉಪಶಮನ ಕಾಣುವುದು. ಮನೆಯಲ್ಲಿ ನೆಮ್ಮದಿ ಸಿಗುವುದು. ಸಹೋದರರಿಂದ ನಿರೀಕ್ಷಿತ ಮಟ್ಟದ ಸಹಕಾರ ದೊರೆಯುವುದು. ಅನೇಕದಿನದಿಂದ ನಿಂತಿರುವ ಕೆಲಸ ಇದೀಗ ಚಾಲನೆ ಕಾಣುವುದು. ಆರ್ಥಿಕವಾಗಿ ಉತ್ತಮ ಲಾಭ ಪಡೆಯುವಿರಿ. ಸಮಾಧಾನದ ಬದುಕಿಗೆ ವಿಷ್ಣುವಿನ ಸ್ಮರಣೆ ಮಾಡಿ.

ವೃಶ್ಚಿಕ
ಇಂದು ನಿಮಗೆ ಅಷ್ಟು ಅನುಕೂಲಕರವಲ್ಲದ ದಿನ. ಮಾನಸಿಕ ಕಿರಿಕಿರಿ ನಿಮ್ಮನ್ನು ಹೈರಾಣಗೊಳಿಸುವುದು. ತಂದೆ ಮಕ್ಕಳ ನಡುವೆ ವೈಮನಸ್ಸು ಉಂಟಾಗುವುದು. ಹಿತಶತ್ರುಗಳ ಕಾಟ ಉಂಟಾಗುವುದು. ಶನಿಯ ಪ್ರಭಾವಕ್ಕೆ ನೀವು ಒಳಗಾಗಿದ್ದೀರಿ. ಆಸ್ತಿಯನ್ನು ಪಡೆಯಲು ಕಿತ್ತಾಟ ನಡೆಸದಿರಿ. ನ್ಯಾಯಾಂಗದಲ್ಲಿ ಅಪಜಯ ಉಂಟಾಗುವುದು. ಉತ್ತಮ ಭವಿಷ್ಯಕ್ಕಾಗಿ ವಿಷ್ಣುವಿನ ಆರಾಧನೆ ಹಾಗೂ ಆಂಜನೇಯನ ಸ್ಮರಣೆ ಮಾಡಿ.

ಧನು
ಆರ್ಥಿಕ ಸ್ಥಿತಿಯಲ್ಲಿ ಉಂಟಾಗುವ ಏರುಪೇರು ನಿಮ್ಮನ್ನು ಹೈರಾಣಗೊಳಿಸುವುದು. ಬಂಧು ಮಿತ್ರರ ಕಿರಿಕಿರಿ ಉಂಟಾಗುವುದು. ಸ್ಥಿರಾಸ್ತಿಯಿಂದ ನಷ್ಟ ಉಂಟಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ ಅಪಜಯ ಉಂಟಾಗುವುದು. ಸ್ತ್ರೀಯರಿಗೆ ತವರು ಮನೆಯಿಂದ ಅವಮಾನ ಉಂಟಾಗುವುದು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಉತ್ತಮ ಬದುಕಿಗಾಗಿ ಹಾಗೂ ಸಮಸ್ಯೆಗಳ ನಿವಾರಣೆಗೆ ವಿಷ್ಣುವಿನ ಆರಾಧನೆ ಮಾಡಿ.

ಮಕರ
ನೀವು ಮಾಡುತ್ತಿರುವ ಕೆಲಸವನ್ನು ಮುಂದುವರಿಸಿ. ಬಂಧು ಮಿತ್ರರಿಂದ ಸಹಕಾರ ಸಿಗುವುದು. ಮನೆಯಲ್ಲಿ ನೆಮ್ಮದಿ. ಬೇರೆಯವರ ಮಾತಿಗೆ ಕಿವಿಕೊಡದಿರಿ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ತೋರಿ. ಹಣವನ್ನು ಕೊಡುವುದು ಅಥವಾ ತೆಗೆದುಕೊಳ್ಳುವ ಕೆಲಸಕ್ಕೆ ಮುಂದಾಗದಿರಿ. ಪ್ರಗತಿಯುತ ಜೀವನಕ್ಕೆ ವಿಷ್ಣುವಿನ ಆರಾಧನೆ ಮಾಡಿ.

ಕುಂಬ
ಸಮಾಧಾನದ ಬದುಕು ನಿಮ್ಮನ್ನು ಅರಸಿ ಬರುವುದು. ಸ್ತ್ರೀಯರಿಗೆ ಉತ್ತಮ ಫಲಿತಾಂಶ ದೊರೆಯುವುದು. ಉದ್ಯೋಗ ಕ್ಷೇತ್ರದಲ್ಲಿ ಗೌರವ ಹಾಗೂ ಭಡ್ತಿ ದೊರೆಯಲಿದೆ. ಇನ್ನಷ್ಟು ಸಂತೋಷದ ಬದುಕಿಗೆ ವಿಷ್ಣು ಮತ್ತು ಗಣೇಶನ ಆರಾಧನೆ ಮಾಡಿ.

ಮೀನ
ಇಂದು ನಿಮಗೆ ಅದೃಷ್ಟದ ದಿನ. ನೀವು ಮಾಡುವ ಕೆಲಸಕ್ಕೆ ಯಾವುದೇ ಹಿಂಜರಿಕೆ ತೋರದೆ ಮುನ್ನಡೆಯಿರಿ. ಕಲಾವಿದರಿಗೆ ಅನುಕೂಲಕರವಾದ ದಿನ. ಆರ್ಥಿಕವಾಗಿ ಲಾಭ ಹಾಗೂ ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಇನ್ನಷ್ಟು ಉತ್ತಮ ಬದುಕಿಗಾಗಿ ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.



Click it and Unblock the Notifications