Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
25-11-2017 ಶನಿವಾರದ ದಿನ ಭವಿಷ್ಯ

ಪ್ರತಿಯೊಬ್ಬರ ಜೀವನದಲ್ಲೂ ಸಮಸ್ಯೆ ಎನ್ನುವುದು ಇದ್ದೇ ಇರುತ್ತದೆ. ಉದ್ಯೋಗದಲ್ಲಿ ಒತ್ತಡ, ವ್ಯಾಪಾರದಲ್ಲಿ ನಷ್ಟ, ವ್ಯವಸಾಯದಲ್ಲಿ ಕಷ್ಟ, ಸಂಸಾರದಲ್ಲಿ ನೋವು ಹೀಗೆ ಪ್ರತಿಯೊಂದು ವಿಚಾರದಲ್ಲೂ ಕಷ್ಟ-ನಷ್ಟ ಎನ್ನುವುದು ಇದ್ದೇ ಇರುತ್ತದೆ. ಅವೆಲ್ಲವನ್ನು ಎದುರಿಸಿ ನಡೆಯುವುದೇ ಜೀವನ. ಒಮ್ಮೆ ಜೀವನದಲ್ಲಿ ಕಷ್ಟ ಬಂದರೆ ನಂತರ ಸುಖ ಎನ್ನುವುದು ಬಂದೇ ಬರುತ್ತದೆ. ಕಷ್ಟ ಸುಖ ಎನ್ನುವುದು ರಾತ್ರಿ ಹಗಲು ಇದ್ದಂತೆ. ಕತ್ತಲು ಕಳೆಯುತ್ತಿದ್ದಂತೆ ಬೆಳಗಾಗಲೇ ಬೇಕು. ಹಾಗೆಯೇ ಜೀವನ. ಕಷ್ಟಗಳು ಮುಗಿದಮೇಲೆ ಸುಖ ಎನ್ನುವುದು ಬರಲೇ ಬೇಕು.
ಶನಿವಾರವಾದ ಇಂದು ನಿಮ್ಮ ಭವಿಷ್ಯದಲ್ಲಿ ಶನಿ ದೇವ ಯಾವೆಲ್ಲಾ ಬದಲಾವಣೆಯನ್ನು ನೀಡುತ್ತಾನೆ? ಅದರಿಂದ ಉಂಟಾಗುವ ಪರಿಣಾಮ ಏನು? ಎನ್ನುವ ಸಂಗತಿಗಳನ್ನು ಒಮ್ಮೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಬೋಲ್ಡ್ ಸ್ಕೈ ಸಂಕ್ಷಿಪ್ತವಾಗಿ ವಿವರಿಸಿರುವ ರಾಶಿ ಭವಿಷ್ಯವನ್ನು ವೀಕ್ಷಿಸಿ....

ಮೇಷ
ನೀವು ಕೈಗೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಹಿಂದೆ ತೆಗೆದುಕೊಳ್ಳದಿರಿ. ಸಮಾಧಾನದ ಬದುಕು ನಿಮ್ಮದಾಗಲಿದೆ. ಲಾಭಾಂಶಗಳ ಸುರಿಮಳೆ ನಿಮ್ಮದಾಗುವುದು. ಕಬ್ಬಿಣದ ವ್ಯಾಪಾರಿಗಳಿಗೂ ಲಾಭ ಉಂಟಾಗುವುದು. ಮಕ್ಕಳಿಂದ ಶುಭವಾರ್ತೆ ಕೇಳಿ ಬರುವುದು. ಬೇಸರದ ಸಂಗತಿಗಳು ದೂರವಾಗಿರುವುದಕ್ಕೆ ಮನಸ್ಸು ಹಿಗ್ಗುವುದು. ಮಕ್ಕಳ ವಿವಾಹದ ಕುರಿತು ಸ್ನೇಹಿತರೊಂದಿಗೆ ಚರ್ಚೆ ನಡೆಸುವಿರಿ. ಇನ್ನಷ್ಟು ಉತ್ತಮ ಭವಿಷ್ಯಕ್ಕಾಗಿ ಆಂಜನೇಯನ ಸ್ಮರಣೆ ಹಾಗೂ ಕುಲದೇವರ ಆರಾಧನೆ ಮಾಡಿ.

ವೃಷಭ
ಕೆಲಸದಲ್ಲಿ ಯಶಸ್ಸು ಕಾಣುವಿರಿ. ನಿರ್ದಿಷ್ಟ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ಮಾಡುತ್ತಿರುವ ಕೆಲಸವನ್ನು ಮುಂದುವರಿಸಿ. ನಿರ್ಧಾರಯುತ ಕೆಲವು ಸಂಗತಿಗಳನ್ನು ಇತರರೊಂದಿಗೆ ಚರ್ಚಿಸದಿರಿ. ಸ್ಥಿರಾಸ್ತಿ ಖರೀದಿಸುವ ವಿಚಾರವಾಗಿ ಮಿತ್ರರಲ್ಲಿ ಚರ್ಚೆ. ಮಕ್ಕಳಿಂದ ಶುಭ ಸುದ್ದಿ ದೊರೆಯುವುದು. ಇನ್ನಷ್ಟು ಉತ್ತಮ ಭವಿಷ್ಯಕ್ಕಾಗಿ ಗಣೇಶನ ಆರಾಧನೆ ಮಾಡಿ.

ಮಿಥುನ
ಮನೆಯಲ್ಲಿ ಸಂತಸದ ವಾತಾವರಣ ಹಾಗೂ ಮನಸ್ಸಿಗೆ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಪ್ರಗತಿ ಕಾಣುವ ನಿಮ್ಮ ಸುಂದರ ಕನಸು ನನಸಾಗಲಿದೆ. ನೀವು ಮಾಡುತ್ತಿರುವ ಕೆಲಸದಲ್ಲಿ ಪ್ರಶಂಸೆ ಹಾಗೂ ಬಡ್ತಿ ಸಿಗುವ ಸಾಧ್ಯತೆ ಇದೆ. ಇನ್ನಷ್ಟು ಉತ್ತಮ ಬದುಕಿಗಾಗಿ ದೇವಿ ಮತ್ತು ಆಂಜನೇಯನ ಆರಾಧನೆ ಮಾಡಿ.

ಕರ್ಕ
ಮೂರು ವರ್ಷಗಳಿಂದ ಕಷ್ಟವನ್ನು ಅನುಭವಿಸುತ್ತಾ ಬಂದಿರುವ ನಿಮಗೆ ಇದೀಗ ನೆಮ್ಮದಿ ಸಿಗುವಂತಹ ಸಮಯವಾಗಲಿದೆ. ನಿಮ್ಮ ಎಲ್ಲಾ ಕೆಲಸದಲ್ಲೂ ಲಾಭ ಹಾಗೂ ಕಲಾವಿದರಿಗೆ ಅನುಕೂಲ ಉಂಟಾಗುವುದು. ವ್ಯಾಪಾರ ವಹಿವಾಟುಗಳಲ್ಲಿ ಸಮೃದ್ಧಿ ಉಂಟಾಗುವುದು. ಶುಭ ವಾರ್ತೆಯನ್ನು ಕೇಳಲಿದ್ದೀರಿ. ಸಿಹಿ ಭೋಜನವನ್ನು ಸವಿಯುವಿರಿ. ಇನ್ನಷ್ಟು ಸುಖಕರ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಸಿಂಹ
ಇಂದು ಸ್ವಲ್ಪ ಕಷ್ಟಕರ ದಿನವಾಗಲಿದೆ. ಆಘಾತ ಮತ್ತು ಅಪಘಾತ ಉಂಟಾಗುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿ ಕಷ್ಟಕರವಾಗುವುದು. ಬಂಧು ಮಿತ್ರರಿಂದ ಅಪಮಾನ ಉಂಟಾಗುವ ಸಾಧ್ಯತೆಗಳಿವೆ. ಉದ್ಯೋಗ ಕ್ಷೇತ್ರದಲ್ಲೂ ಏರು ಪೇರು ಉಂಟಾಗುವ ಸಾಧ್ಯತೆ ಇದೆ. ಜೀವನದ ಕಷ್ಟಗಳ ನಿವಾರಣೆಗೆ ವಿನಾಯಕನ ಆರಾಧನೆ ಶಿವನ ಆರಾಧನೆ ಮತ್ತು ಆಂಜನೇಯನ ಉಪಾಸನೆ ಮಾಡಿ. ಆಂಜನೇಯನಿಗೆ ತೈಲಾಭಿಷೇಕ ಮಾಡಿಸುವುದರಿಂದ ನಿಮ್ಮ ಕಷ್ಟಗಳು ನಿವಾರಣೆ ಹೊಂದುವುದು.

ಕನ್ಯಾ
ನಿಮಗೆ ಇಂದು ಸಾಮಾನ್ಯವಾದಂತಹ ದಿನ. ಮಾಡುತ್ತಿರು ಕೆಲಸದಲ್ಲಿ ನಿರ್ದಿಷ್ಟವಾದ ಗುರಿಯಿರಬೇಕು. ಅನೇಕ ದಿನಗಳಿಂದ ತೀರ್ಮಾನಿಸಿರುವ ವಿಚಾರದಲ್ಲಿ ಯಶಸ್ಸು ಕಾಣುವಿರಿ. ಮನೆಯಲ್ಲಿ ನೆಮ್ಮದಿ ನೆಲೆಸುವುದು. ಸಹೋದರರಿಗಾಗಿ ಹಣವನ್ನು ವ್ಯಯಿಸುವ ಸಂದರ್ಭ ಉಂಟಾಗುವುದು. ಹಿರಿಯರ ಮಾತನ್ನು ದಿಕ್ಕರಿಸದಿರಿ. ಉತ್ತಮ ಭವಿಷ್ಯಕ್ಕಾಗಿ ಆಂಜನೇಯ ಮತ್ತು ಶಿವನ ಆರಾಧನೆ ಮಾಡಿ.

ತುಲಾ
ಇಂದು ನಿಮಗೆ ಸುಂದರವಾದ ದಿನ. ವಿದೇಶಯಾನದ ಕನಸು ನನಸಾಗುವುದು. ಬಟ್ಟೆ ಮತ್ತು ತೈಲೋದ್ಯಮ ವ್ಯಾಪಾರದಲ್ಲಿ ಅಭಿವೃದ್ಧಿ ಹಾಗು ಲಾಭ ಲಭಿಸುವುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವುದು. ಸ್ತ್ರೀಯರಿಂದ ಲಾಭ ಉಂಟಾಗುವುದು. ಉತ್ತಮ ಬದುಕಿಗಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ವೃಶ್ಚಿಕ
ಶನಿ ಪೂರ್ಣ ಪ್ರಮಾಣದಲ್ಲಿ ನಿಮ್ಮನ್ನು ಬಿಟ್ಟಿಲ್ಲದೇ ಇರುವುದರಿಂದ ಅಷ್ಟು ಅನುಕೂಲಕರವಾದ ದಿನವಲ್ಲ ಎಂದೇ ಹೇಳಬಹುದು. ಜಂಟಿ ವ್ಯವಹಾರದಲ್ಲಿ ಪಾಲ್ಗೊಳ್ಳದಿರಿ. ಮೋಸದ ಬಲೆಗೆ ಬೀಳುವ ಸಾಧ್ಯತೆ ಇದೆ. ತೈಲ ಮತ್ತು ಕಬ್ಬಿಣ ವ್ಯಾಪಾರದಲ್ಲಿ ನಷ್ಟ ಉಂಟಾಗುವುದು. ಸಮಾಧಾನದ ಬದುಕಿಗಾಗಿ ಶಿವನ ಆರಾಧನೆ ಮಾಡಿ. ಸಂಕಷ್ಟಗಳು ದೂರವಾಗುವುದು.

ಧನು
ಬಂಧು ಮಿತ್ರರು ನಿಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಬಹುದು. ಉದ್ಯೋಗ ಕ್ಷೇತ್ರದಲ್ಲಿ ಮೋಸ ಉಂಟಾಗುವುದು. ಹತ್ತಿರದವರು ಎಂದುಕೊಂಡವರೇ ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅವಮಾನ ಉಂಟಾಗುವ ಸಾಧ್ಯತೆ ಇದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದು. ಕಷ್ಟಗಳ ನಿವಾರಣೆಗೆ ಬಿಲ್ವಾರ್ಚನೆ ಮಾಡುವುದರ ಮೂಲಕ ಶಿವನ ಆರಾಧನೆ ಮಾಡಿ.

ಮಕರ
ಸಮಾಧಾನದ ಬದುಕನ್ನು ಕಾಣಲಿದ್ದೀರಿ. ಮನೆಯಲ್ಲೂ ಸಮಾಧಾನದ ವಾತಾವರಣ ಇರುವುದು. ಬಂಧು ಮಿತ್ರರ ನಡುವೆ ಕಿರಿಕಿರಿಯಾದ ವಾತಾವರಣ ಸೃಷ್ಟಿಯಾಗುವುದು. ನೀವು ಮಾಡದ ತಪ್ಪಿಗೆ ಶಿಕ್ಷೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಮೇಲಾಧಿಕಾರಿಗಳಿಂದ ಕಿರಿಕಿರಿ ಉಂಟಾಗುವುದು. ಇನ್ನಷ್ಟು ಸಮಾಧಾನ ಹಾಗೂ ಯಶಸ್ವಿ ಬದುಕಿಗಾಗಿ ಶಿವನ ಆರಾಧನೆ ಹಾಗೂ ಶಿವನ ಸ್ತುತಿಯನ್ನು ಮಾಡಿ.

ಕುಂಬ
ನಿಮಗೆ ಇಂದು ಉತ್ತಮವಾದ ದಿನ. ಸ್ತ್ರೀಯರು ಲಾಭವನ್ನು ಪಡೆದುಕೊಳ್ಳುವರು. ತಂತ್ರಜ್ಞರಿಗೆ ಅನುಕೂಲ ಹಾಗೂ ಕಲಾವಿದರಿಗೆ ಲಾಭ ಉಂಟಾಗುವುದು. ಆರ್ಥಿಕವಾಗಿ ಲಾಭ ಉಂಟಾಗುವುದು. ಕೈಗೊಂಡ ಕೆಲಸ ಹಾಗೂ ಕಾರ್ಯದಲ್ಲಿ ಯಶಸ್ಸನ್ನು ಪಡೆಯುವಿರಿ. ಇನ್ನಷ್ಟು ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮೀನ
ನಿರ್ದಿಷ್ಟ ಗುರಿಯನ್ನು ತಲುಪುವಿರಿ. ವಿದೇಶದಲ್ಲಿ ಕೆಲಸದ ಅವಕಾಶ ಹಾಗೂ ವಿದೇಶ ಪ್ರಯಾಣದ ಅವಕಾಶಗಳು ಕೈಗೂಡಿ ಬರುವುದು. ಆರ್ಥಿಕವಾಗಿ ಲಾಭ ಉಂಟಾಗುವುದು. ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆಗಳಿವೆ. ಮಹಿಳೆಯರಿಗೆ ಬೆನ್ನುನೋವು ಮತ್ತು ಕಾಲು ನೋವು ಉಂಟಾಗುವ ಸಾಧ್ಯತೆಗಳಿವೆ. ಇನ್ನಷ್ಟು ಒಳಿತಿಗಾಗಿ ಶಿವ ಮತ್ತು ಗಣೇಶನ ಆರಾಧನೆ ಮಾಡಿ.



Click it and Unblock the Notifications
