ಸೋಮವಾರದ ದಿನ ಭವಿಷ್ಯ- ನಿಮ್ಮ ಇಂದಿನ ದಿನ ಹೇಗಿದೆ ನೋಡಿ...

Posted By: Divya Pandith
Subscribe to Boldsky
ದಿನ ಭವಿಷ್ಯ - Kannada Astrology 04-12-2017 - Your Day Today - Oneindia Kannada

ಜೀವನದಲ್ಲಿ ಅತಿಯಾದ ಆಸೆ ಇರಬಾರದು. ಸಿಕ್ಕಿರುವುದರಲ್ಲಿ ಸಂತೋಷವಾಗಿರಬೇಕು. ಆಗಲೇ ಜೀವನದಲ್ಲಿ ಸಮಾಧಾನ ಹಾಗೂ ಖುಷಿಯಿಂದ ಇರಲು ಸಾಧ್ಯ. ನಮ್ಮ ಮನಸ್ಸು ಅತಿಯಾದ ಬಯಕೆ ಅಥವಾ ನಮ್ಮ ಮಿತಿಯನ್ನು ಮೀರಿರುವ ಆಸೆಗೆ ಒಳಗಾಗುತ್ತದೆಯೋ ಆ ಕ್ಷಣದಿಂದಲೇ ದುಃಖವು ಆರಂಭವಾಗುತ್ತದೆ.

ನಮಗೆ ಸಿಕ್ಕಿರುವುದರಲ್ಲಿ ಸಂತೋಷಗೊಂಡು, ಇತರರಿಗೂ ಸಹಾಯ ಮಾಡುತ್ತಾ ಸಾಗಿದರೆ ಆ ಬದುಕು ಸಾರ್ಥಕ ಹಾಗೂ ಖುಷಿಯಿಂದ ಕೂಡಿರುತ್ತದೆ. ಸೋಮವಾರವಾದ ಇಂದು ನಿಮ್ಮ ಭವಿಷ್ಯದಲ್ಲಿ ಆ ಶಿವನು ಯಾವೆಲ್ಲಾ ಬದಲಾವಣೆ ತರಲು ಬಯಸುತ್ತಾನೆ? ಅದಕ್ಕೆ ಪೂರಕವಾಗಿ ನಿಮ್ಮ ಗ್ರಹಗತಿಗಳು ಹೇಗೆ ಹೊಂದಿಕೊಂಡು ಹೂಗುತ್ತವೆ? ಎನ್ನುವುದನ್ನು ತಿಳಿದುಕೊಳ್ಳಬೇಕೆಂದರೆ ಇಂದಿನ ರಾಶಿ ಭವಿಷ್ಯವನ್ನು ಅರಿಯಿರಿ... 

ಮೇಷ

ಮೇಷ

ನೀವು ಕಾಣುತ್ತಿರುವ ಸುಂದರ ಕನಸುಗಳಿಗೆ ಭಗವಂತನ ಕೃಪೆ ಲಭಿಸುವುದು. ನಿಮ್ಮ ಸಾಧನೆ ಹಾಗೂ ಕೀರ್ತಿಯು ಉತ್ತುಂಗಕ್ಕೆ ಏರುವ ಸಾಧ್ಯತೆಗಳಿವೆ. ಸಂಶೋಧನಾತ್ಮಕ ಕಾರ್ಯದಲ್ಲಿ ತೊಡಗಿರುವವರಿಗೆ ಉತ್ತಮವಾದ ದಿನ. ನಿಮ್ಮ ಜೀವನದಲ್ಲಿ ಪ್ರತಿಯನ್ನು ಸಾಧಿಸುವ ಸಮಯ ಇದು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ವಿದ್ಯಾರ್ಥಿಗಳು ಉತ್ತಮ ವ್ಯಾಸಂಗಕ್ಕೆ ಹವಣಿಸುತ್ತಿದ್ದರೆ ಅದನ್ನು ಪೂರ್ಣಗೊಳಿಸಿಕೊಳ್ಳಲು ಉತ್ತಮವಾದ ಸಮಯ. ಜೀವನದಲ್ಲಿ ಇನ್ನಷ್ಟು ಸಂತೋಷವನ್ನು ಪಡೆದುಕೊಳ್ಳಲು ಶಿವನ ಆರಾಧನೆ ಮಾಡಿ.

ವೃಷಭ

ವೃಷಭ

ನಿಮಗೆ ಇಂದು ಉತ್ತಮವಾದ ದಿನ. ಅಂದುಕೊಂಡ ಕಾರ್ಯವು ಯಶಸ್ಸನ್ನು ಪಡೆದುಕೊಳ್ಳಬೇಕೆಂದರೆ ಅವಿರತವಾದ ಶ್ರಮ ವಹಿಸಬೇಕಾಗುವುದು. ಮನೆಯಲ್ಲಿ ನೆಮ್ಮದಿ ಉಂಟಾಗುವುದು. ಸಹೋದರರ ಸಹಕಾರ ದೊರೆಯುವುದು. ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವವರು ಲಾಭಾಂಶ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಉದ್ಯೋಗ ಕ್ಷೇತ್ರದಲ್ಲೂ ಉತ್ತಮ ಲಾಭ ಹಾಗೂ ಸಹಕಾರ ದೊರೆಯುವುದು. ಇನ್ನಷ್ಟು ಯಶಸ್ಸು ಹಾಗೂ ಸಂತೋಷಕರ ವಾದ ಜೀವನಕ್ಕಾಗಿ ಗಣೇಶ ಮತ್ತು ಶಿವನ ಆರಾಧನೆ ಮಾಡಿ.

ಮಿಥುನ

ಮಿಥುನ

ಇಂದು ನಿಮಗೆ ಶುಭ ದಿನ. ಹೆಣ್ಣುಮಕ್ಕಳಿಗೆ ಇದ್ದ ವಿವಾಹ ಅಡೆತಡೆಗಳು ದೂರ ಆಗುವುದು. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅನುಕೂಲ, ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ನೆಮ್ಮದಿ, ವ್ಯಾಪಾರಿಗಳಿಗೆ ಲಾಭ ಉಂಟಾಗುವುದು. ಆರ್ಥಿಕವಾಗಿ ಲಾಭವನ್ನು ಗಳಿಸುವಿರಿ. ವಿದ್ಯಾರ್ಥಿಗಳು ಜಯವನ್ನು ಗಳಿಸಬಹುದು. ಜೀವನದಲ್ಲಿ ಇನ್ನಷ್ಟು ಸುಧಾರಣೆ ಹಾಗೂ ಯಶಸ್ಸಿಗೆ ಶಕ್ತಿ ಮತ್ತು ಶಿವನ ಆರಾಧನೆ ಮಾಡಿ.

ಕರ್ಕ

ಕರ್ಕ

ಇಂದು ನಿಮಗೆ ಶುಭಕರವಾದ ದಿನ. ಫ್ಯಾಷನ್ ಡಿಸೈನರ್ ಉದ್ಯೋಗದಲ್ಲಿರುವವರಿಗೆ ಉತ್ತಮ ಲಾಭ ಉಂಟಾಗುವುದು. ಕೈಗಾರಿಕೆ ಹಾಗೂ ಕಾರ್ಖಾನೆಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೂ ಉತ್ತಮವಾದ ಲಾಭ ಉಂಟಾಗುವುದು. ಚಿಕ್ಕ ಪುಟ್ಟ ಉದ್ಯೋಗದಿಂದ ಹಿಡಿದು ದೊಡ್ಡ ದೊಡ್ಡ ವ್ಯಾಪಾರ ವಹಿವಾಟು ನಡೆಸುವವರಿಗೂ ಉತ್ತಮವಾದ ಲಾಭ ಲಭಿಸುವುದು. ಮನದಾಳದಲ್ಲಿರುವ ವಿಚಾರಗಳು ನೆರವೇರುವುದು. ಉತ್ತಮವಾದ ಜೀವನ ನಿಮ್ಮದಾಗಲಿದೆ. ನಿರ್ದಿಷ್ಟ ಗುರಿಯನ್ನು ತಲುಪಲು ಶಿವನ ಆರಾಧನೆ ಮಾಡಿ.

ಸಿಂಹ

ಸಿಂಹ

ಆರ್ಥಿಕವಾಗಿ ಕುಗ್ಗುವಿರಿ. ನಿಮ್ಮ ಅನಾರೋಗ್ಯದ ಸಮಸ್ಯೆಯು ನಿಮ್ಮನ್ನು ಇನ್ನಷ್ಟು ದುಃಖಿತರನ್ನಾಗಿಸುವುದು. ಮಕ್ಕಳಿಂದ ಅಶುಭ ವಾರ್ತೆ ಕೇಳುವ ಸಾಧ್ಯತೆಗಳಿವೆ. ವಿಪರೀತವಾದ ಸಾಲದಿಂದ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ರಾಜಕೀಯ ಕ್ಷೇತ್ರದಲ್ಲೂ ಹಿನ್ನೆಡೆ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಬದುಕಿಗೆ ಶಿವನ ಆರಾಧನೆ ಮಾಡಿ.

ಕನ್ಯಾ

ಕನ್ಯಾ

ಇಂದು ನಿಮಗೆ ನೆಮ್ಮದಿಯ ದಿನ. ಮಾನಸಿಕವಾಗಿ ಸಂತೋಷಗೊಳ್ಳುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದು. ಪತ್ರಕರ್ತರಿಗೆ ಅನುಕೂಲಕರವಾದ ದಿನ, ವೈಜ್ಞಾನಿಕ ಕ್ಷೇತ್ರದಲ್ಲಿ ಮುನ್ನಡೆ, ಧಾರ್ಮಿಕ ಚಿಂತಕರಿಗೆ ಅನುಕೂಲವುಂಟಾಗುವ ದಿನ. ವಿದ್ಯರ್ಥಿಗಳಿಗೂ ಶುಭ ಉಂಟಾಗುವುದು. ಸಮಸ್ಯೆಗಳ ನಿವೃಣೆ ಹಾಗೂ ಸಂತೋಷಕರವಾದ ಜೀವನಕ್ಕೆ ಶಿವನ ಆರಾಧನೆ ಹಾಗೂ ಓ ನಮಃ ಶಿವಾಯ ಎನ್ನುವ ಪಂಚಾಕ್ಷರಿಯನ್ನು ಪಠಣೆ ಮಾಡಿ.

ತುಲಾ

ತುಲಾ

ಇಂದು ನಿಮಗೆ ಲಾಭಾಂಶದ ಸುರಿಮಳೆ ಉಂಟಾಗುವುದು. ಸಂತೋಷಕರವಾದ ಜೀವನಕ್ಕೆ ನಾಂದಿಯಾಗುವುದು. ಪ್ರವಾಸೋದ್ಯಮ ಕ್ಷೇತ್ರ ಹಾಗೂ ಸಾರಿಗೆ ಕ್ಷೇತ್ರದಲ್ಲಿ ದುಡಿಯುವವರಿಗೆ ಲಾಭ ಉಂಟಾಗುವುದು. ಮನಸ್ಸಿನಲ್ಲಿರುವ ಅನೇಕ ಬಯಕೆಗಳು ಈಡೇರುತ್ತವೆ. ಮನೆಯಲ್ಲಿ ನೆಮ್ಮದಿ ಸಿಗುವುದು. ಇನ್ನಷ್ಟು ಸಂತೋಷಕರವಾದ ಬದುಕಿಗೆ ಶಿವನ ಆರಾಧನೆ ಮಾಡಿ.

ವೃಶ್ಚಿಕ

ವೃಶ್ಚಿಕ

ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ. ಉಪನ್ಯಾಸ ಕೆಲಸದಲ್ಲಿರುವವರು ಅವಮಾನ ಅಥವಾ ಆರೋಪಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಸ್ಥಿರಾಸ್ತಿಯನ್ನು ಮಾರುವಾಗ ಕಾಳಜಿ ಇರಲಿ. ಅದನ್ನು ಪಡೆಯುವವರಿಂದಲೇ ಒಂದಿಷ್ಟು ಸಂಚಕಾರ ಉಂಟಾಗಬಹುದು. ಸಾಲವನ್ನು ಕೊಡುವುದು, ಜಾಮೀನು ಸಹಿ ಅಥವಾ ಸಾಲ ಪಡೆಯುವ ಕಾರ್ಯಕ್ಕೆ ಮುಂದಾಗದಿರಿ. ವಿದ್ಯಾರ್ಥಿಗಳಿಗೆ ಹುನ್ನೆಡೆ ಉಂಟಾಗುವುದು. ಸಮಸ್ಯೆಗಳ ನಿವಾರಣೆಗೆ ಶಕ್ತಿ ಉಪಾಸನೆ ಹಾಗೂ ಶಿವನ ಆರಾಧನೆ ಮಾಡಿ.

ಧನು

ಧನು

ಮಾನಸಿಕ ಕಿರಿಕಿರಿ ಮುಂದುವರಿಯಲಿದೆ. ಮಾನಸಿಕ ಆರೋಗ್ಯ ಹದಗೆಡುವುದು. ರಕ್ತದೊತ್ತಡದ ಸಮಸ್ಯೆ ಉಲ್ಭಣಗೊಳ್ಳುವುದು. ಅನಿರೀಕ್ಷಿತ ಅಪಜಯ ಹಾಗೂ ಆಘಾತ ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಬಹುದು. ದೂರದ ಬಂಧುಗಳಿಂದ ಅಶುಭ ಸುದ್ದಿ ಕೇಳಬೇಕಾಗುವುದು. ಜಲ ಕಂಟಕ ಇರುವುದರಿಂದ ನೀರಿನ ವಿಚಾರದಲ್ಲಿ ಆದಷ್ಟು ಜಾಗರೂಕರಾಗಿರಿ. ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

ಮಕರ

ಮಕರ

ಸಮಾಧಾನದ ಬದುಕು ಲಭಿಸದು. ಮಾನಸಿಕ ಕಿರಿಕಿರಿ ಕಾಡುವುದು. ಸ್ತ್ರೀಯರಿಂದ ಅವಮಾನ ಸೇರಿದಂತೆ ಅನೇಕ ಸಮಸ್ಯೆಗಳು ನಿಮ್ಮನ್ನು ಒಮ್ಮೆಲೇ ಕಾಡುವುದು. ಉನ್ನತ ವ್ಯಾಸಂಗದಲ್ಲಿ ವಿಫಲತೆ ಉಂಟಾಗುವುದು. ತಂದೆ ತಾಯಿಗಳ ಆರೋಗ್ಯದಲ್ಲಿ ಏರುಪೇರು ಉಂಟಾಗುವುದು. ಹದಗೆಟ್ಟ ಆರೋಗ್ಯ ಸಮಸ್ಯೆಯ ನಿವಾರಣೆಗೆ ಸ್ನೇಹಿತರಲ್ಲಿ ಸಾಲ ಕೇಳಬೇಕಾಗುವುದು. ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಮಾಡಿ.

ಕುಂಬ

ಕುಂಬ

ಸುಂದರವಾದ ಜೀವನವನ್ನು ನೀವು ಕಾಣಲಿದ್ದೀರಿ. ಬಂಧು ಮಿತ್ರರ ಸಹಕಾರವನ್ನು ನೀವು ಬಯಸಿದರೆ ಲಭ್ಯವಾಗುವುದು. ನೀವು ತೀರ್ಮಾನಿಸಿಕೊಂಡಿರುವ ಕೆಲಸದಲ್ಲಿ ಜಯ ಲಭಿಸುವುದು. ಸ್ತ್ರೀಯರಿಗೆ ಕೆಲವು ವಿಚಾರದಲ್ಲಿ ಸಮಾಧಾನವನ್ನು ಕಾಣಲು ಅಸಾಧ್ಯವಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಜೀವನಕ್ಕೆ ಶಿವನ ಆರಾಧನೆ ಮಾಡಿ.

ಮೀನ

ಮೀನ

ಇಂದು ನಿಮಗೆ ಶುಭಕರವಾದ ದಿನ. ಹೆಚ್ಚು ಲಾಭವನ್ನು ಪಡೆದುಕೊಳ್ಳುವಿರಿ. ಹೋಟೆಲ್ ಉದ್ಯಮದಲ್ಲಿ ಲಾಭ ಉಂಟಾಗುವುದು. ಮಕ್ಕಳ ಉತ್ತಮ ವಿದ್ಯಾಭ್ಯಾಸದ ಪರಿಯಿಂದ ಸಂತೋಷ ಪಡೆದುಕೊಳ್ಳುವಿರಿ. ದೂರದ ಬಂಧುಗಳಿಂದ ಶುಭ ಸುದ್ದಿಯನ್ನು ಕೇಳುವಿರಿ. ಸ್ಥಿರಾಸ್ತಿಯಿಂದ ಲಾಭ ಉಂಟಾಗುವುದು. ರಾಜಕಾರಣಿಗಳಿಗೆ ಒಳ್ಳೆಯದಾಗುವುದು. ಇನ್ನಷ್ಟು ಶುಭಕರವಾದ ಫಲವನ್ನು ಪಡೆದುಕೊಳ್ಳಲು ಶಿವನ ಆರಾಧನೆ ಮಾಡಿ.

English summary

rashi-bhavishya-December-4th

Know what astrology and the planets have in store for you today. Choose your zodiac sign and read the details...