ಮುಂಬೈ ನಗರದ ರಿಯಲ್ ಭೂತದ ಕಥೆಗಳು!-ಹೀಗೂ ಉಂಟೆ?

Posted By: manu
Subscribe to Boldsky

ಭೂತದ ಕಥೆಗಳಿರುವ ಊರೇ ಈ ಭಾರತದಲ್ಲಿಲ್ಲ. ಒಂದೊಂದು ಊರಿನ ಭೂತದ ಕಥೆಯೂ ಭಿನ್ನ ಹಾಗೂ ರೋಮಾಂಚಕಾರಿ. ಮುಂಬೈ ಎಂಬ ಮಹಾನಗರದಲ್ಲಿ ಇನ್ನೆಷ್ಟಿರಬೇಡ? ಇಲ್ಲಿಯೂ ಭಯಾನಕವಾದ, ಮೈನವಿರೇಳಿಸುವ ಹಾಗೂ ಪುರಾತನಕಾಲದ ಭೂತದ ಕಥೆಗಳು ಬೇಕಾದಷ್ಟಿವೆ.   ಮನುಷ್ಯರು ಸತ್ತ ನಂತರ ದೆವ್ವಗಳಾಗಿ ನಮ್ಮನ್ನು ಏಕೆ ಕಾಡುತ್ತಾರೆ?

ಕೆಲವು ಕಥೆಗಳಂತೂ ಅಮೂಲ್ಯ ಸ್ಥಳಗಳಲ್ಲಿ ಕಟ್ಟಡವನ್ನು ಖಾಲಿ ಮಾಡಿಸುವಷ್ಟಿವೆ. ಬಿಳಿಸೀರೆ ತೊಟ್ಟು ಕಾಡುವ ಮಹಿಳೆ, ಸಾಮೂಹಿಕ ಆತ್ಮಹತ್ಯೆ, ಪಾಳುಬಿದ್ದ ಬಂಗಲೆ, ನಿಗೂಢ ಸಾವುಗಳು ಇತ್ಯಾದಿಗಳು ನೂರಾರಿವೆ. ಆದರೆ ಮುಂಬೈಯಂತಹ ಮಹಾನಗರದಲ್ಲಿ ಆಧುನಿಕತೆ ಭರದಿಂದ ಸಾಗುತ್ತಿರುವಾಗ ಭೂತಪ್ರೇತದಂತಹ ವಿಷಯಗಳ ವಿಶ್ವಾಸಾರ್ಹತೆಯನ್ನು ನಂಬಲು ಇಂದಿನ ಜನರು ತಯಾರಿಲ್ಲ. ಇವರಲ್ಲಿ ಹೆಚ್ಚಿನವರು ಈ ಭೂತಗಳ ಭಯವನ್ನು ಮೀರಿ ಆ ಸ್ಥಳಗಳಲ್ಲಿ ವಾಸಿಸಲು ಮುಂದಗುತ್ತಾರೆ.   ಎಂತಹ ಧೈರ್ಯವಂತನ ಎದೆ ನಡುಗಿಸುವ ಭಯಂಕರ ಸ್ಥಳಗಳು!

ಆದರೆ ಜನರು ವಾಸಿಸಲು ಹೆದರುವ ಕೆಲವು ಸ್ಥಳಗಳು ಇಂದಿಗೂ ಮುಂಬೈಯಲ್ಲಿವೆ. ಟವರ್ ಆಫ್ ಸೈಲೆನ್ಸ್ ಅಥವಾ ಮುಕೇಶ್ ಮಿಲ್ಸ್ ಇದರಲ್ಲೊಂದು.  ಅಷ್ಟೇ ಅಲ್ಲ, ಭೂತಕ್ಕೋ, ಇನ್ಯಾವುದೋ ವಿವರಿಸಲಾಗದ ಕಾರಣದಿಂದ ಮುಂಬೈನ ಕೆಲವಾರು ಬಹುಮಹಡಿ ಕಟ್ಟಡಗಳಲ್ಲಿ 13ನೇ ಮಹಡಿಯನ್ನು ಉದ್ದೇಶಪೂರ್ವಕವಾಗಿ ನೀಡದೇ ಇರುವುದನ್ನು ನೋಡಬಹುದು. ಬನ್ನಿ, ಇಂತಹ ಕೆಲವು ರೋಚಕ ಕಥೆಗಳ ಬಗ್ಗೆ ಅರಿಯೋಣ....  

ಆತ್ಮಹತ್ಯಾ ಗೋಪುರ

ಆತ್ಮಹತ್ಯಾ ಗೋಪುರ

ಮುಂಬೈಯಲ್ಲಿರುವ ಗ್ರಾಂಡ್ ಪರಡಿ ಟವರ್ ಈಗ ಭೂತಗಳ ವಾಸಸ್ಥಾನವೆಂದೇ ಪರಿಚಿತ. ಕೆಂಪ್ಸ್ ಕಾರ್ನರ್‌ನಲ್ಲಿರುವ ಈ ಕಟ್ಟಡದ ಎಂಟನೆಯ ಮಹಡಿಯಲ್ಲಿ ಯಾರೇ ವಾಸಿಸಿದರೂ ಅಲ್ಲಿನ ಭೂತಗಳು ಆ ಜನರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತವೆ ಎಂಬ ವದಂತಿ ಇದೆ!

ಇಲ್ಲಿ ಇಪ್ಪತ್ತಕ್ಕೂ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ

ಇಲ್ಲಿ ಇಪ್ಪತ್ತಕ್ಕೂ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ

2004ರಲ್ಲಿ ವೃದ್ಧ ದಂಪತಿಗಳು ಈ ಮಹಡಿಯಿಂದ ಕೆಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಒಂದೇ ವರ್ಷದಲ್ಲಿ ಇವರ ಮಕ್ಕಳು ಹಾಗೂ ಮೊಮ್ಮಕ್ಕಳೂ ಇದೇ ಮಹಡಿಯಿಂದ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡರು. ಈ ಕಟ್ಟಡದಲ್ಲಿ ಇದುವರೆಗೆ ಸುಮಾರು ಇಪ್ಪತ್ತಕ್ಕೂ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ಪುಟ್ಟ ಮಕ್ಕಳೂ, ಇವರ ಮನೆಯ ಪರಿಚಾರಿಕೆಯರೂ ಸೇರಿದ್ದಾರೆ.

ಕುಪಿತ ಕಟ್ಟದ ವಾಸ್ತುಶಿಲ್ಪಿ!

ಕುಪಿತ ಕಟ್ಟದ ವಾಸ್ತುಶಿಲ್ಪಿ!

ಮುಂಬೈನ ಖ್ಯಾತ ತಾಜ್ ಹೋಟೆಲ್ ಸಹಾ ಭೂತದ ಕಥೆಯಿಂದ ಮುಕ್ತಿ ಪಡೆದಿಲ್ಲ. ಈ ಕಟ್ಟಡದ ವಾಸ್ತುಶಿಲ್ಪಿ ಡಬ್ಲ್ಯೂ ಎ. ಛೇಂಬರ್ಸ್ ರವರ ಭೂತ ಈ ಕಟ್ಟಡದ ಒಂದು ಭಾಗದಲ್ಲಿ ವಾಸವಾಗಿದೆ ಎಂಬ ಪ್ರಪೀತಿಯಿದೆ. ಈ ಖ್ಯಾತ ಹೋಟೆಲಿನ ವಿನ್ಯಾಸವನ್ನು ತನಗೆ ಅತ್ಯುತ್ತಮವೆಂಬಂತೆ ವಿನ್ಯಾಸಗೊಳಿಸಿದ ಫ್ರೆಂಚ್ ವಾಸ್ತುಶಿಲ್ಪಿ ವಿನ್ಯಾಸವನ್ನು ಕಟ್ಟಡ ಕಾಮಗಾರಿ ಮುಂದುವರೆಸಲು ನೀಡಿ ತಮ್ಮ ಸ್ವದೇಶಕ್ಕೆ ತೆರಳಿದ್ದರು.

ಕುಪಿತ ಕಟ್ಟದ ವಾಸ್ತುಶಿಲ್ಪಿ!

ಕುಪಿತ ಕಟ್ಟದ ವಾಸ್ತುಶಿಲ್ಪಿ!

ಆದರೆ ಅವರು ಬಳಿಕ ಹಿಂದಿರುಗಿದಾಗ ಈ ಕಟ್ಟಡದ ಮುಂಭಾಗವನ್ನು ಅವರ ವಿನ್ಯಾಸಕ್ಕೆ ತದ್ವಿರುದ್ಧವಾಗಿ ನಿಲ್ಲಿಸಲಾಗಿತ್ತು. ಈ ಬದಲಾವಣೆಯನ್ನು ಸಹಿಸದ ಅವರಿಗೆ ಮಾನಸಿಕ ಆಘಾತವಾಗಿ ಇದನ್ನು ತಡೆಯಲಾರದೇ ಆತ್ಮಹತ್ಯೆಗೆ ಶರಣಾದರು. ಇವರ ಆತ್ಮವನ್ನು ಆ ಸ್ಥಳದಲ್ಲಿ ಆತ್ಮದ ಇರುವಿಕೆಯನ್ನು ಗಮನಿಸಲಾಗಿದೆ. ಬಳಿಕ ಇವರು ಆತ್ಮಹತ್ಯೆ ಮಾಡಿಕೊಂಡ ಸ್ಥಳವನ್ನು ಇಂದಿಗೂ ಖಾಲಿಯಾಗಿರಿಸಲಾಗಿದೆ. ಆದರೆ ಇವರ ಆತ್ಮ ಯಾರಿಗೂ ತೊಂದರೆ ನೀಡಿಲ್ಲ ಅಥವಾ ಇದುವರೆಗೂ ಯಾವುದೇ ಅಹಿತಕರ ಘಟನೆಯೂ ನಡೆದಿಲ್ಲ.

ಬೆಂಕಿಯಿಂದ ಉರಿಯುತ್ತಿರುವ ಯುವತಿ!

ಬೆಂಕಿಯಿಂದ ಉರಿಯುತ್ತಿರುವ ಯುವತಿ!

1989ರಲ್ಲಿ ಇಪ್ಪತ್ತು ವರ್ಷದ ಸಲ್ಮಾ ಎಂಬ ಯುವತಿ ಜುಹು ಏರೋಡ್ರೋಂ ಬಳಿ ತನ್ನ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆತ್ಮಹತ್ಯೆಗೆ ಕಾರಣವೇನು ಎಂದು ಇದುವರೆಗೆ ಖಚಿತವಾಗಿ ತಿಳಿದುಬಂದಿಲ್ಲ.

ಬೆಂಕಿಯಿಂದ ಉರಿಯುತ್ತಿರುವ ಯುವತಿ!

ಬೆಂಕಿಯಿಂದ ಉರಿಯುತ್ತಿರುವ ಯುವತಿ!

ಆದರೆ ಈ ಸ್ಥಳದಲ್ಲಿ ಆಕೆಯ ಆತ್ಮದ ಇರುವಿಕೆಯನ್ನು ಕಂಡುಕೊಂಡ ಬಳಿಕ ಕ್ರೈಸ್ತ ಭಕ್ತರೊಬ್ಬರು ಇಲ್ಲಿನ ನಿವಾಸಿಗಳನ್ನು ಆತ್ಮದ ಪ್ರಭಾವದಿಂದ ರಕ್ಷಿಸುವ ಉದ್ದೇಶದಿಂದ ಈ ಸ್ಥಳದಲ್ಲಿ ಹುನಮ ಮಂದಿರವೊಂದನ್ನು ಕಟ್ಟಿಸಿದ್ದಾರೆ. ಆದರೂ ಕೆಲವು ವಿಶಿಷ್ಟ ದಿನಗಳಂದು ಈಕೆಯ ಆತ್ಮವನ್ನು ಆಕೆಯ ಬಟ್ಟೆಗಳು ಬೆಂಕಿಯಿಂದ ಉರಿಯುತ್ತಿರುವಂತೆ ಅಕ್ಕಪಕ್ಕದ ಗಿಡಮರಗಳ ಎಡೆಗಳಲ್ಲಿ ಕಂಡವರಿದ್ದಾರೆ.

 

 

For Quick Alerts
ALLOW NOTIFICATIONS
For Daily Alerts

    English summary

    Popular Ghost Stories In Mumbai

    Mumbai is a city rich with stories of mysterious haunting, local superstition and old folklore. The local folklore of Mumbai is enough to daunt anyone wishing to live in the city. There are numerous stories of scary women in white saris, mass suicides, haunted mansions and mysterious deaths.There are places in Mumbai nobody will venture out alone to like the Tower of Silence or Mukesh Mills.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more