ಥೈಲ್ಯಾಂಡ್‌ನಲ್ಲಿ ಮೊಸಳೆಯ ಚರ್ಮಕ್ಕೆ ಭಾರೀ ಬೇಡಿಕೆಯಂತೆ! ಯಾಕೆ ಗೊತ್ತೇ?

By: Arshad
Subscribe to Boldsky

ಚರ್ಮೋದ್ಯಮ ಇಂದು ಜಗತ್ತಿನ ಒಂದು ದೊಡ್ಡ ಉದ್ಯಮವಾಗಿದ್ದು ಇದರಲ್ಲಿ ಲಕ್ಷಾಂತರ ಡಾಲರು ವ್ಯವಹಾರ ನಡೆಯುತ್ತದೆ. ಅಪ್ಪಟ ಚರ್ಮದ ಉತ್ಪನ್ನವೆಂದರೆ ಜನರೂ ದುಬಾರಿಯಾದರೂ ಸರಿ, ಕೊಳ್ಳಲು ಹಿಂದೇಟು ಹಾಕುವುದಿಲ್ಲ. ಈ ಉತ್ಪನ್ನಗಳು ಸುಂದರ, ಸುದೃಢ ಹಾಗೂ ಗಮನ ಸೆಳೆಯುವಂತಿರಬೇಕೆಂದು ವಿವಿಧ ಪ್ರಾಣಿಗಳ ಚರ್ಮ, ತುಪ್ಪಳ, ರೋಮ ಸಹಿತ ಚರ್ಮ ಮೊದಲಾದವುಗಳನ್ನು ಬಳಸಲಾಗುತ್ತದೆ. ಆದರೆ ಈ ಉತ್ಪನ್ನಗಳನ್ನು ತಯಾರಿಸಲು ಪ್ರಾಣಿಯೊಂದನ್ನು ಕೊಂದು ಚರ್ಮ ಪಡೆಯುವುದು ಅನಿವಾರ್ಯ.

ಅದೃಷ್ಟವಂತರಿಗೆ ಮಾತ್ರ ಈ 'ಸಸ್ಯಹಾರಿ ಮೊಸಳೆ'ಯ ದರ್ಶನ ಆಗುವುದು!

ಈ ಕೆಲಸವನ್ನು ವಧಾಗಾರದಲ್ಲಿ ನಡೆಸಲಾಗುತ್ತದೆ ಹಾಗೂ ಈ ದೃಶ್ಯ ಮನಕಲಕುತ್ತದೆ. ಮೊಸಳೆಯನ್ನು ಸಹಾ ಇದರ ಚರ್ಮಕ್ಕಾಗಿಯೇ ಸಾಕಿ ವಧಾಗಾರಗಳಲ್ಲಿ ಕೊಂದು ಚರ್ಮ ಪಡೆಯಲಾಗುತ್ತದೆ. ಈ ವಧಾಗಾರಗಳು ಹೊಂದಿರುವ ವ್ಯವಸ್ಥೆ ಹಾಗೂ ಈ ಉದ್ಯಮದ ಬಗ್ಗೆ ಕೆಲವು ಚಿತ್ರಗಳನ್ನು ಸಂಗ್ರಹಿಸಲಾಗಿದೆ, ಮುಂದೆ ಓದಿ....

ಜಗತ್ತಿನಲ್ಲಿ ಇದೊಂದೇ ಫಾರ್ಮ್ ಇರುವುದಲ್ಲ

ಜಗತ್ತಿನಲ್ಲಿ ಇದೊಂದೇ ಫಾರ್ಮ್ ಇರುವುದಲ್ಲ

ಮೊಸಳೆ ಚರ್ಮ ಥೈಲ್ಯಾಂಡ್‌ ದೇಶದ ಪ್ರಮುಖ ಉತ್ಪನ್ನವಾಗಿದ್ದು ಈ ದೇಶವೊಂದರಲ್ಲಿಯೇ ಸುಮಾರು ಸಾವಿರಕ್ಕೂ ಹೆಚ್ಚು ಫಾರ್ಮುಗಳಿವೆ ಹಾಗೂ ಇವುಗಳಲ್ಲಿ ಹನ್ನೆರಡು ಲಕ್ಷಕ್ಕೂ ಹೆಚ್ಚು ಮೊಸಳೆಗಳನ್ನು ಸಾಕಲಾಗುತ್ತಿದೆ. ಇವುಗಳಲ್ಲಿ ಹೆಚ್ಚಿನ ಫಾರ್ಮುಗಳಿಗೆ ಹೊಂದಿಕೊಂಡಂತೆಯೇ ವಧಾಗಾರಗಳೂ ಇವೆ ಹಾಗೂ ಎಲ್ಲವೂ ಲಾಭಕರವಾಗಿ ಹಾಗೂ ಯಶಸ್ವಿಯಾಗಿ ನಡೆಯುತ್ತಿವೆ.

ಶ್ರೀ ಆಯುಥಾಯ ಫಾರ್ಮ್‌ಗೆ ಒಂದು ಭೇಟಿ

ಶ್ರೀ ಆಯುಥಾಯ ಫಾರ್ಮ್‌ಗೆ ಒಂದು ಭೇಟಿ

ಥಾಯ್ಲೆಂಡಿನ ಪ್ರಮುಖ ಫಾರ್ಮ್ ಗಳಲ್ಲಿ ಒಂದಾದ ಶ್ರೀ ಆಯುಥಾಯ ಫಾರ್ಮ್‌ನ ಮಾಲಿಕರಾದ ವಿಶಿಯನ್ ರಿಯಾಂಗ್ನೆಟ್ ರವರು ಹೆಮ್ಮೆಯಿಂದ ಹೇಳುವ ಪ್ರಕಾರ ಇದು ಎಲ್ಲಾ ವ್ಯವಸ್ಥೆಗಳೂ ಒಂದೇ ಸೂರಿನಡಿ ಇರುವ ಸಂಸ್ಥೆಯಾಗಿದ್ದು ನೂರಾರು ಜನರಿಗೆ ಉದ್ಯೋಗ, ದೇಶಕ್ಕೆ ಅಮೂಲ್ಯ ಆದಾಯವನ್ನು ತರುತ್ತಿದ್ದು ಪ್ರಸ್ತುತ ಒಂದೂವರೆ ಲಕ್ಷಕ್ಕೂ ಹೆಚ್ಚು ಮೊಸಳೆಗಳನ್ನು ಸಾಕಲಾಗುತ್ತಿದೆ.

ಈ ಫಾರ್ಮುಗಳಲ್ಲಿ ಎಲ್ಲಾ ವ್ಯವಸ್ಥೆಗಳೂ ಇವೆ

ಈ ಫಾರ್ಮುಗಳಲ್ಲಿ ಎಲ್ಲಾ ವ್ಯವಸ್ಥೆಗಳೂ ಇವೆ

ಮೊಟ್ಟೆ ಮರಿಯಾಗುವುದರಿಂದ ತೊಡಗಿ ಚರ್ಮವನ್ನು ಸುಲಿದು ಸಂಸ್ಕರಿಸುವವರೆಗೆ ಎಲ್ಲಾ ವ್ಯವಸ್ಥೆಗಳು ಈ ಫಾರ್ಮುಗಳಲ್ಲಿದ್ದು ವಿದೇಶಕ್ಕೆ ರಫ್ತು ಮಾಡುವ ಗುಣಮಟ್ಟದ ಉತ್ಪನ್ನಗಳನ್ನೂ ಇಲ್ಲಿಯೇ ತಯಾರಿಸಲಾಗುತ್ತದೆ. ಈ ಚರ್ಮದಿಂದ ಹತ್ತು ಹಲವು ಬಗೆಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು ಹೆಚ್ಚಿನ ಬೇಡಿಕೆ ಹೊಂದಿದೆ. ವಿಶೇಷವಾಗಿ ಬಿರ್ಕಿನ್-ವಿನ್ಯಾಸದ ಹ್ಯಾಂಡ್ ಬ್ಯಾಗ್ ಅತ್ಯಂತ ದುಬಾರಿಯಾಗಿದೆ.

ಈ ಫಾರಮ್ಮುಗಳು ಕೊಲ್ಲುವ ಲೈಸನ್ಸ್ ಸಹಾ ಪಡೆದಿವೆ

ಈ ಫಾರಮ್ಮುಗಳು ಕೊಲ್ಲುವ ಲೈಸನ್ಸ್ ಸಹಾ ಪಡೆದಿವೆ

ಈ ದೇಶದ ಬಹುತೇಕ ಎಲ್ಲಾ ವಧಾಗಾರಗಳು ಈ ಕೆಲಸಕ್ಕೆ ಅರ್ಹ ಲೈಸನ್ಸ್ ಅಥವಾ ರಹದಾರಿ ಪಡೆದಿದೆ. ಅಳಿವಿನ ಅಂಚಿನಲ್ಲಿರುವ ಪ್ರಾಣಿ ಮತ್ತು ಸಸ್ಯ ಸಂಕುಲದ ಸಂರಕ್ಷಣೆಯ ಹೊಣೆ ಹೊತ್ತಿರುವ Convention on International Trade in Endangered Species of Wild Fauna and Flora (CITES) ಸಂಸ್ಥೆಯೇ ಈ ರಹದಾರಿಯನ್ನು ನೀಡಿದೆ. ಈ ರಹದಾರಿಯ ಪ್ರಕಾರ ಮೊಸಳೆಗಳನ್ನು ಕೊಂದು ಪಡೆಯುವ ಅಂಗಗಳಿಂದ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಹಾಗೂ ರಫ್ತು ಮಾಡುವ ಹಕ್ಕುಗಳನ್ನು ಈ ಸಂಸ್ಥೆಗಳನ್ನು ಪಡೆದಿವೆ. ಅದರಲ್ಲಿಯೂ ಅಳಿವಿನ ಅಂಚಿನಲ್ಲಿರುವ ಸಿಹಿನೀರಿನಲ್ಲಿ ಬದುಕುವ ಸಯಾಮೀಸ್ ಮೊಸಳೆಯ ಚರ್ಮವನ್ನೂ ಸಂಸ್ಕರಿಸಿ ಮಾರಾಟ ಮಾಡುವ ಹಕ್ಕನ್ನೂ ಪಡೆದಿವೆ. ಈ ಉತ್ಪನ್ನಗಳಿಗೆ ವಿಶ್ವದಾದ್ಯಂತ ಅಪಾರ ಬೇಡಿಕೆ ಇದ್ದು ಚೀನಾ ಅತಿ ದೊಡ್ಡ ಗ್ರಾಹಕನಾಗಿದೆ.

ಈ ಫಾರಮ್ಮುಗಳಿಗೆ ಪ್ರವಾಸಿಗರು ಭೇಟಿ ನೀಡಬಹುದು!

ಈ ಫಾರಮ್ಮುಗಳಿಗೆ ಪ್ರವಾಸಿಗರು ಭೇಟಿ ನೀಡಬಹುದು!

ಇಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದ್ದು ಈ ಫಾರಮ್ಮುಗಳನ್ನು ಜನರು ವೀಕ್ಷಿಸಬಹುದು. ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ವಿಶ್ವದ ನಾನಾಕಡೆಯಿಂದ ಆಗಮಿಸುವ ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ. ಈ ಪ್ರವಾಸಿಗರ ಮನರಂಜಿಸಿ ಕೊಂಚ ಹೆಚ್ಚಿನ ಹಣ ಮಾಡಿಕೊಳ್ಳಲೆಂದೇ ಇಲ್ಲಿನ ಕೆಲವು ಉದ್ಯೋಗಿಗಳು ಅಪಾಯಕರ ಕಸರತ್ತನ್ನೂ ಮಾಡುತ್ತಾರೆ. ಇದರಲ್ಲಿ ಮೊಸಳೆಗಳೊಂದಿಗೆ ಸರಸ, ತೆರೆದ ಮೊಸಳೆಯ ಬಾಯಿಯೊಳಗೆ ತಲೆ ಇಡುವುದು ಇತ್ಯಾದಿಗಳೂ ಸೇರಿವೆ. ಬಿಸಿಲು ಕಾಯಿಸುತ್ತಾ ಮಲಗಿರುವ ಮೊಸಳೆಗಳನ್ನು ಸಹಾ ವೀಕ್ಷಿಸಬಹುದು.

ಮೊಸಳೆಯ ಎಲ್ಲಾ ಅಂಗಗಳೂ ಮಾರಾಟವಾಗುತ್ತವೆ

ಮೊಸಳೆಯ ಎಲ್ಲಾ ಅಂಗಗಳೂ ಮಾರಾಟವಾಗುತ್ತವೆ

ಮೊಸಳೆಯನ್ನು ಕೇವಲ ಚರ್ಮಕ್ಕಾಗಿ ಮಾತ್ರ ಸಾಕಲಾಗುವುದಿಲ್ಲ, ಬದಲಿಗೆ ಇದರ ಮಾಂಸವೂ ದುಬಾರಿ ಬೆಲೆಗೆ ಮಾರಾಟವಾಗುತ್ತದೆ. ಅಂದರೆ ಕೇಜಿಗೆ ಸುಮಾರು ಮುನ್ನೂರು ಭಾತ್ (ಸುಮಾರು 568 ಭಾರತೀಯ ರೂಪಾಯಿಗಳು) ಬೆಲೆ ಇದೆ. ಅಷ್ಟೇ ಅಲ್ಲ, ಮೊಸಳೆಯ ಪಿತ್ತಕೋಶ, ರಕ್ತ ಮೊದಲಾದವನ್ನೂ ಔಷಧಿಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಔಷಧಿಗಳು ಆರೋಗ್ಯವನ್ನು ವೃದ್ಧಿಸುತ್ತವೆ ಎಂದು ನಂಬಲಾಗಿದೆ.

ಈ ಮೊಸಳೆಗಳಿಗೆ ಭರ್ಜರಿಯಾಗಿ ತಿನ್ನಿಸಲಾಗುತ್ತದೆ

ಈ ಮೊಸಳೆಗಳಿಗೆ ಭರ್ಜರಿಯಾಗಿ ತಿನ್ನಿಸಲಾಗುತ್ತದೆ

ಕುರಿ ಕೊಬ್ಬಿದಷ್ಟೂ ಕಟುಕನಿಗೆ ಲಾಭ ಎಂಬ ಗಾದೆಯಂತೆ ಲಾಭ ಹೆಚ್ಚಿಸಿಕೊಳ್ಳಲು ಮೊಸಳೆಯನ್ನು ಚೆನ್ನಾಗಿ ತಿನ್ನಿಸಿ ಕೊಬ್ಬಿಸಲಾಗುತ್ತದೆ. ಇದಕ್ಕಾಗಿ ತಾಜಾ ಕೋಳಿಮಾಂಸವನ್ನು ಒದಗಿಸಲಾಗುತ್ತದೆ. ಮೊಸಳೆಯ ಚರ್ಮ, ಉಗುರು, ರಕ್ತ, ಮಾಂಸ ಎಲ್ಲವನ್ನೂ ಹಣಕ್ಕೆ ಪರಿವರ್ತಿಸಲಾಗುತ್ತದೆ.

ಈಗತಾನೇ ಮೊಟ್ಟೆಯೊಡೆದು ಹೊರಬಂದ ಮರಿಗಳು

ಈಗತಾನೇ ಮೊಟ್ಟೆಯೊಡೆದು ಹೊರಬಂದ ಮರಿಗಳು

ಮೊಸಳೆಯ ಮೊಟ್ಟೆಗಳು ಮರಳಿನ ಶಾಖದಲ್ಲಿಯೇ ಒಡೆದು ಮರಿಯಾಗುತ್ತವೆ. ಈ ಕೆಲಸವನ್ನು ನಿರ್ವಹಿಸಲು ನುರಿತ ಕಾರ್ಮಿಕರಿದ್ದಾರೆ. ಇವರು ಸಂಗ್ರಹವಾದ ಮೊಟ್ಟೆಗಳನ್ನು ಜತನದಿಂದ ಮರಿಯಾಗಲು ಸೂಕ್ತವಾದ ವಾತಾವರಣವನ್ನು ಕಲ್ಪಿಸಿ ಹೆಚ್ಚಿನ ಸಂಖ್ಯೆಯ ಮರಿಗಳು ಉತ್ಪತ್ತಿಯಾಗುವಂತೆ ನೋಡಿಕೊಳ್ಳುತ್ತಾರೆ. ಏನೇ ಆಗಲಿ, ಅಂತಿಮವಾಗಿ ಮೊಸಳೆಗಳನ್ನು ಕೇವಲ ಹಣಕ್ಕಾಗಿಯೇ ಸಾಕುವುದು ಮನುಜರ ಸ್ವಾರ್ಥ ಮನೋಭಾವನೆಯ ಪರಮಾವಧಿಯಾಗಿದೆ.

 ಈ ಚರ್ಮದಿಂದ ಉತ್ಪತ್ತಿಯಾಗುವ ಉತ್ಪನ್ನಗಳು

ಈ ಚರ್ಮದಿಂದ ಉತ್ಪತ್ತಿಯಾಗುವ ಉತ್ಪನ್ನಗಳು

ಮೊಸಳೆಯ ಚರ್ಮವನ್ನು ಒಣಗಿಸಿ ತಯಾರಿಸಿದ ಉತ್ಪನ್ನಗಳು ಪ್ರವಾಸಿಗರ ಅಚ್ಚುಮೆಚ್ಚಿನ ವಸ್ತುಗಳಾಗಿವೆ. ಈ ಚರ್ಮಕ್ಕೆ ಬಣ್ಣ ಬಳಿದು ತಯಾರಿಸಿದ ಜಾಕೆಟ್, ಪರ್ಸು, ಹ್ಯಾಂಡ್ ಬ್ಯಾಗ್ ಮೊದಲಾದವು ಇಡಿಯ ವಿಶ್ವದಲ್ಲಿಯೇ ಹೆಚ್ಚಿನ ಬೇಡಿಕೆ ಪಡೆದಿವೆ

English summary

Pictures Of World's Biggest Crocodile Farms & Slaughter Houses!

The images of animal farms and slaughter houses are quite disturbing. It shows the pain the animals and reptiles go through when it comes to making of the leather. Here are some of the disturbing images of one of the world's biggest crocodile farm houses that is equipped with slaughter houses and more...
Subscribe Newsletter