ಅದೃಷ್ಟ ನಂಬರ್: ಇದಕ್ಕೆ ಹುಟ್ಟಿದ ದಿನಾಂಕ, ತಿಂಗಳು, ವರ್ಷ ಇದ್ದರೆ ಸಾಕು!

By: manu
Subscribe to Boldsky

ಸಂಖ್ಯಾಶಾಸ್ತ್ರವನ್ನು ಜನಪ್ರಿಯ ವ್ಯಕ್ತಿಗಳೇ ನಂಬುತ್ತಾರೆ. ಯಾಕೆಂದರೆ ಸಂಖ್ಯಾಶಾಸ್ತ್ರವು ಅವರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಅವರಿಗೆ ತಿಳಿದಿರುವುದು. ಇದರಿಂದಾಗಿ ಹಾಲಿವುಡ್ ನಿಂದ ಹಿಡಿದು ಬಾಲಿವುಡ್ ತನಕ ಮತ್ತು ಫುಟ್ಬಾಲ್ ನಿಂದ ಕ್ರಿಕೆಟ್ ತನಕ ಪ್ರತಿಯೊಬ್ಬರಿಗೂ ಸಂಖ್ಯಾಶಾಸ್ತ್ರದ ಬಗ್ಗೆ ನಂಬಿಕೆಯಿದೆ. ಕೆಲವೊಂದು ಆಟಗಾರರು ತಮಗೆ ಬೇಕಾದ ಸಂಖ್ಯಾಶಾಸ್ತ್ರದಂತೆ ಜರ್ಸಿ ಧರಿಸಿಕೊಳ್ಳುವರು. ಇದು ಅವರ ಆಟ ಹಾಗೂ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎನ್ನಲಾಗಿದೆ. 

ಸಂಖ್ಯಾಶಾಸ್ತ್ರ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ನಂಬರ್ 7'

ಆದರೆ ಸಂಖ್ಯಾಶಾಸ್ತ್ರವು ನಿಮ್ಮ ದೇಹದ ಮೇಲೂ ಪರಿಣಾಮ ಬೀರವುದು ಎಂದು ನಿಮಗೆ ತಿಳಿದಿದೆಯಾ? ಹೌದು, ನಿಮ್ಮ ತೂಕ ಹೆಚ್ಚಳ ಮತ್ತು ಸಪೂರ ದೇಹವು ಸಂಖ್ಯಾಶಾಸ್ತ್ರದ ಮೇಲೆ ಅವಲಂಬಿತವಾಗಿದೆ. ನೀವು ಹುಟ್ಟಿದ ದಿನಾಂಕ ಮತ್ತು ವರ್ಷದ ಅಂಕಿಗಳ ಆಧಾರದ ಮೇಲೆ ಇದನ್ನು ತಿಳಿಯಬಹುದು. ಇದನ್ನು ಲೆಕ್ಕಹಾಕುವುದು ಹೇಗೆಂದು ತಿಳಿಯಿರಿ. ನೀವು ಹುಟ್ಟಿದ ದಿನಾಂಕ, ಹುಟ್ಟಿದ ತಿಂಗಳು ಮತ್ತು ಹುಟ್ಟಿದ ವರ್ಷವನ್ನು ಕೂಡಿಸಿ ಅದರಿಂದ ಒಂದು ಅಂಕಿ ತೆಗೆಯಬೇಕು. ಉದಾಹರಣೆಗೆ: 16+10+1986=32=3+2=5 ಅಥವಾ (ಇದನ್ನು ಹೀಗೆ ಕೂಡಿಸಿ 1+6+1+0+1+9+8+6=32=3+2=5) ಈಗ ನಿಮ್ಮ ಅದೃಷ್ಟ ಸಂಖ್ಯೆಯು ಐದು...

ಅದೃಷ್ಟ ಸಂಖ್ಯೆ 1

ಅದೃಷ್ಟ ಸಂಖ್ಯೆ 1

ಈ ಸಂಖ್ಯೆಯನ್ನು ಪಡೆಯುವವರು ಯಾವುದೇ ರೀತಿಯ ಬೊಜ್ಜಿನ ಸಮಸ್ಯೆಗೆ ಗುರಿಯಾಗುವುದಿಲ್ಲ. ಇವರಲ್ಲಿನ ಚಯಾಪಚಾಯ ಕ್ರಿಯೆಯು ದೇಹವನ್ನು ಫಿಟ್ ಆಗಿ ಇಡಲು ನೆರವು ನೀಡುವುದು. ಇದರಿಂದ ಇಂತವರು ತಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳುವ ಬಗ್ಗೆ ಚಿಂತಿಸಬೇಕಿಲ್ಲ. ಯಾಕೆಂದರೆ ಅದೃಷ್ಟ ಸಂಖ್ಯೆಯು ಅವರ ಪರವಾಗಿದೆ.

ಅದೃಷ್ಟ ಸಂಖ್ಯೆ 2

ಅದೃಷ್ಟ ಸಂಖ್ಯೆ 2

ಎರಡನ್ನು ಅದೃಷ್ಟ ಸಂಖ್ಯೆಯಾಗಿ ಪಡೆಯುವಂತವರು ಯಾವಾಗಲೂ ಬೊಜ್ಜು ದೇಹ ಹೊಂದಿರುವರು ಮತ್ತು ಅವರು ಯಾವಾಗಲು ಆಹಾರ ಪಥ್ಯದಲ್ಲಿ ಇರುವರು. ಇದರಲ್ಲಿ ಹೆಚ್ಚಿನವರು ಆಹಾರ ತಿನ್ನದೆ ದೇಹದ ತೂಕ ಕಡಿಮೆ ಮಾಡಲು ಹೋಗುವರು. ಆದರೆ ಸರಿಯಾದ ಪಥ್ಯ ಕ್ರಮ ಪಾಲಿಸಬೇಕು. ಇವರು ಹಣ್ಣು ಮತ್ತು ತರಕಾರಿ ಸೇವನೆ ಕಡೆ ಗಮನಹರಿಸಬೇಕು ಮತ್ತು ದೈಹಿಕವಾಗಿ ಫಿಟ್ ಇರಲು ವ್ಯಾಯಾಮ ಮಾಡಬೇಕು.

ಅದೃಷ್ಟ ಸಂಖ್ಯೆ 3

ಅದೃಷ್ಟ ಸಂಖ್ಯೆ 3

ಮೂರು ಸಂಖ್ಯೆಯ ಅದೃಷ್ಟ ಸಂಖ್ಯೆ ಹೊಂದಿರುವಂತಹ ವ್ಯಕ್ತಿಗಳು ಯಾವಾಗಲೂ ನಾಕಾರಾತ್ಮಕತೆಯತ್ತ ವಾಲಿರುವರು. ವಿಶ್ವದಲ್ಲಿ ಇವರು ತುಂಬಾ ನಿರಾಶವಾದಿಗಳಾಗಿರುವರು. ಆಧ್ಯಾತ್ಮಿಕ ಭಾರವು ಅವರ ತೂಕದಲ್ಲಿ ಕಾಣಿಸಿಕೊಳ್ಳುವುದು. ಅವರು ಬಯಸದೆ ಇದ್ದರೂ ತೂಕ ಹೆಚ್ಚಳವಾಗುವುದು.

ಅದೃಷ್ಟ ಸಂಖ್ಯೆ 4

ಅದೃಷ್ಟ ಸಂಖ್ಯೆ 4

ನಾಲ್ಕು ಸಂಖ್ಯೆಯವರು ಆದಷ್ಟು ಮಟ್ಟಿಗೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸೂಚಿಸಲಾಗುತ್ತದೆ. ಯಾಕೆಂದರೆ ಅವರು ದೈಹಿಕ ಚಟುವಟಿಕೆಯಲ್ಲಿ ತೊಡಗದೆ ಇದ್ದರೆ ಹಸಿವು ಮತ್ತು ಬಯಕೆಗಳು ಹೆಚ್ಚುವುದು. ಇದರ ಪರಿಣಾಮ ದೇಹದಲ್ಲಿ ಕೊಬ್ಬು ಶೇಖರಣೆಯಾಗುವುದು.

ಅದೃಷ್ಟ ಸಂಖ್ಯೆ 5

ಅದೃಷ್ಟ ಸಂಖ್ಯೆ 5

ತಮ್ಮ ಹುಟ್ಟಿ ದಿನಾಂಕ, ತಿಂಗಳು ಹಾಗೂ ವರ್ಷದಿಂದ 5ನ್ನು ಅದೃಷ್ಟ ಸಂಖ್ಯೆಯಾಗಿ ಪಡೆಯುವಂತವರು ತುಂಬಾ ಭಾರವಾಗಿ ವಿಶ್ವವನ್ನು ನೋಡುವರು. ಇದರಿಂದ ಅವರ ದೇಹದ ಮೇಲೆ ಗಣನೀಯ ಪರಿಣಾಮವಾಗುವುದು. ಆಶಾವಾದಿಗಳು ಯಾವಾಗಲೂ ಸಪೂರವಾಗಿರುವರು. ಇದರಿಂದ ಅವರು ಜೀವನವನ್ನು ಆನಂದಿಸಿ, ಕೊಬ್ಬು ಜಮೆಯಾಗದಂತೆ ಮಾಡುವುದು. ಇದರಿಂದ ತೂಕ ಹೆಚ್ಚಳ ಮತ್ತು ಕಡಿಮೆಯಾಗುವುದು ನಡೆಯುತ್ತಾ ಇರುವುದು.

ಅದೃಷ್ಟ ಸಂಖ್ಯೆ 6

ಅದೃಷ್ಟ ಸಂಖ್ಯೆ 6

ಈ ಸಂಖ್ಯೆ ಹೊಂದಿರುವವರು ತುಂಬಾ ಅದೃಷ್ಟವಂತರೆಂದು ನಂಬಲಾಗಿದೆ. ಯಾಕೆಂದರೆ ಈ ಸಂಖ್ಯೆಯವರ ದೇಹವು ಯಾವಾಗಲೂ ಪ್ರಮಾಣಾನುಗುಣವಾಗಿರುವುದು. ಇವರ ಚಯಾಪಚಾಯ ಕ್ರಿಯೆಯನ್ನು ನೋಡಿ ಇತರರು ಖಂಡಿತವಾಗಿಯೂ ಅಸೂಯೆಪಡುವರು. ಇವರು ಮಿತವಾಗಿ ಆಹಾರ ಸೇವನೆ ಮಾಡುವ ಕಾರಣದಿಂದ ಅವರು ತಮ್ಮ ದೇಹವನ್ನು ಫಿಟ್ ಆಗಿಟ್ಟುಕೊಳ್ಳುವರು.

ಅದೃಷ್ಟ ಸಂಖ್ಯೆ 7

ಅದೃಷ್ಟ ಸಂಖ್ಯೆ 7

ಯಾವುದೇ ಭಾವನಾತ್ಮಕ ವಿಚಾರಗಳಿದ್ದರೆ ಮಾತ್ರ ಇಂತಹ ಸಂಖ್ಯೆಯವರು ತೂಕ ಹೆಚ್ಚಿಸಿಕೊಳ್ಳುವರು. ಸರಳ ವಾಕ್ಯದಲ್ಲಿ ಹೇಳುವುದಾದರೆ ಇವರು ತಮ್ಮ ಸಂಗಾತಿ ಜತೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳುವುದು ಅತೀ ಅಗತ್ಯ. ಇವರು ತಮ್ಮ ಆಹಾರ ಕ್ರಮದ ಬಗ್ಗೆಯೂ ಗಮನವಿಡಬೇಕು.

ಅದೃಷ್ಟ ಸಂಖ್ಯೆ 8

ಅದೃಷ್ಟ ಸಂಖ್ಯೆ 8

ಕ್ಷಮಿಸುವುದು ಹೇಗೆ ಎಂದು ಈ ಸಂಖ್ಯೆಯ ಜನರು ತಿಳಿದುಕೊಳ್ಳಬೇಕು. ಯಾಕೆಂದರೆ ಕೋಪದಿಂದ ಕೊಬ್ಬು ಮತ್ತು ತೂಕ ಹೆಚ್ಚುವುದು. ಭಾವನಾತ್ಮಕವಾಗಿ ಒತ್ತಡಕ್ಕೆ ಒಳಗಾಗುವುದರಿಂದ ತೂಕ ಹೆಚ್ಚಳವಾಗುವುದು. ಯಾವಾಗಲೂ ವ್ಯಸ್ತರಾಗಿದ್ದರೆ ಒತ್ತಡ ಮತ್ತು ಅನಗತ್ಯ ತೂಕ ಹೆಚ್ಚಳದಿಂದ ದೂರವಿರಬಹುದು.

ಅದೃಷ್ಟ ಸಂಖ್ಯೆ 9

ಅದೃಷ್ಟ ಸಂಖ್ಯೆ 9

ತಮ್ಮ ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷ ಕೂಡಿಸಿ 9 ಸಂಖ್ಯೆ ಪಡೆಯುವಂತವರು ಯಾವಾಗಲೂ ಬೊಜ್ಜು ಮತ್ತು ಕೊಬ್ಬು ಹೆಚ್ಚಿಸಿಕೊಳ್ಳುವರು. ಇವರ ತೂಕದಲ್ಲಿ ಅತಿಯಾದ ಹೆಚ್ಚಳವಾಗುವುದು ಅವರಿಗೆ ತುಂಬಾ ಕಷ್ಟವಾಗುವುದು. ಇವರು ಕೊಬ್ಬು ಜಮೆಯಾಗುವುದನ್ನು ತಪ್ಪಿಸಬೇಕು. ಇದು ಅತೀ ಅಗತ್ಯ ಮತ್ತು ಆಮ್ಲೀಯ ಗುಣವಿರುವ ಹಣ್ಣುಗಳನ್ನು ತಿನ್ನುವ ಮೂಲಕ ಕೊಬ್ಬು ನಿವಾರಣೆ ಮಾಡಬಹುದು.

English summary

month of birth can reveal body shape

Numerology plays a vital role in our lives, as we often connect numbers with luck and choose to use these lucky numbers to improve our lives, they have an influence in our lives. From turning lucky at a certain age to even gaining weight, these numbers play a vital role and here we bring to you the reason behind the mystery of why a person does not gain or lose weight, all this based on their lucky numbers!
Subscribe Newsletter