For Quick Alerts
ALLOW NOTIFICATIONS  
For Daily Alerts

ದೇಹದ ಈ 8 ಸ್ಥಳಗಳಲ್ಲಿ ಮಚ್ಚೆ ಇದ್ದವರಿಗೆ, ಸ್ವಲ್ಪ ಹಣದ ಸಮಸ್ಯೆ ಕಾಡುತ್ತೆ!

ಸಾಮುದ್ರಿಕಾ ಶಾಸ್ತ್ರದಲ್ಲಿ ವಿವರಿಸುವ ಸಂಗತಿಗಳ ಪ್ರಕಾರ ವ್ಯಕ್ತಿಯ ದೇಹದ ಈ ಎಂಟು ಭಾಗಗಳಲ್ಲಿರುವ ಮಚ್ಚೆಗಳು ಆತನಲ್ಲಿ ಧನಸಂಗ್ರಹವಾಗದಿರಲು ಪ್ರಬಲ ಕಾರಣವಾಗಿರುತ್ತದೆ...ಆತ ಎಷ್ಟು ದುಡಿದರೂ ಹಣ ಮಾತ್ರ ಕೈಯಲ್ಲಿ ನಿಲ್ಲುವುದಿಲ್ಲ...

By Manu
|

ಕೆಲವು ವ್ಯಕ್ತಿಗಳು ಎಷ್ಟೇ ಕಷ್ಟಪಟ್ಟು ದುಡಿದರೂ ಅವರಲ್ಲಿ ಧನಸಂಗ್ರಹವಾಗುವುದು ಮರೀಚಿಕೆಯ ಮಾತು. ತಮ್ಮ ಖರ್ಚುಗಳನ್ನು ಎಷ್ಟು ನಿಯಂತ್ರಣದಲ್ಲಿರಿಸಿದರೂ ಯಾವುದೋ ಮಾಯೆಯಲ್ಲಿ ಊಹಿಸದೇ ಇದ್ದ ಖರ್ಚು ಪ್ರತಿಬಾರಿಯೂ ಧುತ್ತನೆ ಎದುರಾಗಿ ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗು ಮಾಡಿಬಿಡುತ್ತದೆ. ಇದನ್ನೇ ಹಿರಿಯರೆಲ್ಲಾ 'ಮುಟ್ಟಿದ್ದೆಲ್ಲಾ ಮಣ್ಣು' ಎಂದು ಸೂಚ್ಯವಾಗಿ ತಿಳಿಸುತ್ತಾರೆ. ಮಚ್ಚೆಯಲ್ಲಿ ಅಡಗಿದೆಯೇ ನಮ್ಮ ಭವಿಷ್ಯ?

ಈ ವಿಷಯ ಇತ್ತೀಚಿಗಲ್ಲ, ತುಂಬಾ ಹಿಂದಿನಿಂದಲೂ ಹಲವರ ತಲೆಕೆಡಿಸಿದೆ. ಈ ಬಗ್ಗೆ ಹಲವು ಸಂಶೋಧನೆಗಳನ್ನು ನಡೆಸಿದ ಪುರಾತನ ವಿದ್ವಾಂಸರು ವ್ಯಕ್ತಿಯ ಮೈಮೇಲಿನ ಕೆಲವು ವಿಶಿಷ್ಟ ಭಾಗಗಳಲ್ಲಿರುವ ಮಚ್ಚೆಗಳು ಪ್ರಭಾವ ಬೀರುತ್ತವೆ ಎಂದು ಕಂಡುಕೊಂಡರು. ಈ ಮಚ್ಚೆಗಳು ವ್ಯಕ್ತಿಯ ವಯಸ್ಸಿನೊಂದಿಗೇ ಬೆಳೆಯುತ್ತಾ ಆಕಾರದಲ್ಲಿ ಕೊಂಚ ಬದಲಾವಣೆಯನ್ನೂ ಪಡೆಯುತ್ತಿದ್ದಂತೆಯೇ ವ್ಯಕ್ತಿಯ ಭವಿಷ್ಯವನ್ನು ಬದಲಾಯಿಸುತ್ತಾ ಸಾಗುತ್ತವೆ. ಅಂಗೈಯ ಹುಟ್ಟು ಮಚ್ಚೆ-ವ್ಯಕ್ತಿಯ ವ್ಯಕ್ತಿತ್ವ ಹೇಳುವ ಭವಿಷ್ಯವಾಣಿ!

ಸಾಮುದ್ರಿಕಾ ಶಾಸ್ತ್ರದಲ್ಲಿ ವಿವರಿಸುವ ಸಂಗತಿಗಳ ಪ್ರಕಾರ ವ್ಯಕ್ತಿಯ ದೇಹದ ಈ ಎಂಟು ಭಾಗಗಳಲ್ಲಿರುವ ಮಚ್ಚೆಗಳು ಆತನಲ್ಲಿ ಧನಸಂಗ್ರಹವಾಗದಿರಲು ಪ್ರಬಲ ಕಾರಣವಾಗಿರುತ್ತದೆ. ಈ ವ್ಯಕ್ತಿಗಳು ಎಷ್ಟುಗಳಿಸಿದರೂ ವಿವರಿಸಲಾಗದ ಖರ್ಚುಗಳು ಆವರಿಸಿ ಗಳಿಕೆಯನ್ನಷ್ಟೂ ಕಬಳಿಸಿ ಬಿಡುವುದರಿಂದ ಉಳಿತಾಯ ಮರೀಚಿಕೆಯೇ ಆಗಿ ಹೋಗುತ್ತದೆ. ಈ ತೊಂದರೆಗಳಿಂದ ವ್ಯಕ್ತಿಗೆ ಬಿಡುಗಡೆಯೇ ಇಲ್ಲ ಎಂದೆನ್ನಿಸುತ್ತದೆ. ಬನ್ನಿ, ಈ ಎಂಟು ಅಂಗಗಳು ಯಾವುವು ಎಂಬುದನ್ನು ನೋಡೋಣ.....

ಎಡಗೆನ್ನೆಯ ಮೇಲಿನ ಮಚ್ಚೆ

ಎಡಗೆನ್ನೆಯ ಮೇಲಿನ ಮಚ್ಚೆ

ಎಡಗೆನ್ನೆಯ ಮೇಲೆ ಸ್ಪಷ್ಟವಾಗಿ ಕಾಣಿಸುವ ಮಚ್ಚೆ ಇರುವ ವ್ಯಕ್ತಿಗಳು ಅತಿ ಹೆಚ್ಚು ಆದಾಯ ಇರುವವರಾಗಿದ್ದರೂ ಇದಕ್ಕೆ ಸರಿಸಮನಾದ ಖರ್ಚುಗಳೂ ಇರುವ ಕಾರಣ ಉಳಿತಾಯ ಮಾಡಲು ಅಸಫಲರಾಗುತ್ತಾರೆ.

ತುಟಿಗಳ ಕೆಳಭಾಗದಲ್ಲಿರುವ ಮಚ್ಚೆ

ತುಟಿಗಳ ಕೆಳಭಾಗದಲ್ಲಿರುವ ಮಚ್ಚೆ

ಈ ಭಾಗದಲ್ಲಿ ಮಚ್ಚೆ ಇರುವವರು ಸಾಮಾನ್ಯವಾಗಿ ಸದಾ ಹಣದ ಮುಗ್ಗಟ್ಟಿನಲ್ಲಿಯೇ ಇರುತ್ತಾರೆ.

ಎಡ ಹಸ್ತದ ಮೇಲೆ ಇರುವ ಮಚ್ಚೆ

ಎಡ ಹಸ್ತದ ಮೇಲೆ ಇರುವ ಮಚ್ಚೆ

ಎಡಹಸ್ತದ ಮೇಲೆ ಮಚ್ಚೆ ಇದ್ದರೆ, ಅದರಲ್ಲೂ ವಿಶೇಷವಾಗಿ ಮುಷ್ಟಿಕಟ್ಟಿದ ಬಳಿಕವೂ ಮಚ್ಚೆ ಕಾಣುವಂತಿದ್ದರೆ, ಈ ವ್ಯಕ್ತಿಗಳು ಸದಾ ತೀವ್ರ ಹಣದ ಮುಗ್ಗಟ್ಟನ್ನು ಅನುಭವಿಸುತ್ತಿರುತ್ತಾರೆ. ಆದರೆ ಕಾಕತಾಳೀಯವೆಂಬಂತೆ ಈ ವ್ಯಕ್ತಿಗಳಿಗೆ ಹಣದ ಮುಗ್ಗಟ್ಟು ಎಷ್ಟು ಎದುರಾದರೂ ಹಣ ಸದಾ ಹೊಂದಿಕೆಯಾಗುತ್ತದೆ. ಈ ವ್ಯಕ್ತಿಗಳಿಗೆ ಖರ್ಚನ್ನು ಕಡಿಮೆ ಮಾಡುವುದೇ ಕಷ್ಟಕರವಾದ ವಿಷಯವಾಗಿರುತ್ತದೆ.

Image Source

ಎಡಗಾಲಿನ ಮೇಲಿನ ಮಚ್ಚೆ

ಎಡಗಾಲಿನ ಮೇಲಿನ ಮಚ್ಚೆ

ಎಡಗಾಲಿನ ಯಾವುದೇ ಭಾಗದ ಮೇಲೆ ಮಚ್ಚೆ ಇರುವ ವ್ಯಕ್ತಿಗಳಿಗೆ ಸದಾ ವಿವರಿಸಲಾಗದ ಖರ್ಚುಗಳು ಎದುರಾಗುತ್ತಾ ಇರುತ್ತವೆ. ಈ ಖರ್ಚನ್ನು ಕಡಿಮೆ ಮಾಡಲು, ಆದಾಯವನ್ನು ಉಳಿಸಲು ಎಷ್ಟು ಕಷ್ಟಪಟ್ಟರೂ ಕಡೆಯದಾಗಿ ಉಳಿತಾಯ ಹೆಚ್ಚೂಕಡಿಮೆ ಸೊನ್ನೆಯೇ ಆಗಿರುತ್ತದೆ.

ತೋರುಬೆರಳಿನ ಮೇಲೆ ಇರುವ ಮಚ್ಚೆ

ತೋರುಬೆರಳಿನ ಮೇಲೆ ಇರುವ ಮಚ್ಚೆ

ಒಂದು ವೇಳೆ ತೋರುಬೆರಳಿನ ಒಳಭಾಗದಲ್ಲಿ, ಅಂದರೆ ಮಡಚುವ ಭಾಗದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಹಣದ ಕುರಿತಾಗಿ ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಎಷ್ಟೂ ಸಂದರ್ಭಗಳಲ್ಲಿ ಇವರು ಒಪ್ಪೊತ್ತಿನ ಊಟಕ್ಕೂ ಹಣವಿಲ್ಲದ ಸ್ಥಿತಿಯನ್ನು ಎದುರಿಸುತ್ತಾರೆ.

ಎಡಗಣ್ಣಿನ ಹುಬ್ಬಿನ ಮೇಲಿನ ಮಚ್ಚೆ

ಎಡಗಣ್ಣಿನ ಹುಬ್ಬಿನ ಮೇಲಿನ ಮಚ್ಚೆ

ಒಂದು ವೇಳೆ ಎಡಗಣ್ಣಿನ ಹುಬ್ಬಿನ ಕೂದಲಡಿಯಲ್ಲಿ ಅಡಗಿರುವ ಮಚ್ಚೆ ಇದ್ದರೆ ಅಥವಾ ಕೊಂಚವೇ ಹೊರಭಾಗಕ್ಕೆ ಚಾಚಿಕೊಂಡಂತಿದ್ದರೆ ಈ ವ್ಯಕ್ತಿಗಳು ಹೆಚ್ಚು ಕಾಮಾಸಕ್ತರಾಗಿದ್ದು ಈ ಆಸಕ್ತಿಯನ್ನು ತಣಿಸಲು ಹೆಚ್ಚಿನ ಹಣವನ್ನು ಪೋಲು ಮಾಡುವವರಾಗಿರುತ್ತಾರೆ. ಇದೇ ಕಾರಣಕ್ಕೆ ಇವರ ಜೀವನದಲ್ಲಿ ಮುಖ್ಯ ಕಾರ್ಯಗಳಿಗೆ ಹಣವಿಲ್ಲದೇ ಆರ್ಥಿಕ ಮುಗ್ಗಟ್ಟನ್ನು ಎದುರಿಸುವಂತಾಗುತ್ತದೆ. ಆದರೂ ಈ ಆಸಕ್ತಿ ತಣಿಯುವ ಪ್ರಯತ್ನಗಳು ನಡೆಯದೇ ಇದ್ದರೆ ಶೀಘ್ರದಲ್ಲಿಯೇ ದಿವಾಳಿಯಾಗುವುದು ಖಚಿತ.

ಎಡಕಂಕುಳಲ್ಲಿರುವ ಮಚ್ಚೆ

ಎಡಕಂಕುಳಲ್ಲಿರುವ ಮಚ್ಚೆ

ಒಂದು ವೇಳೆ ಎಡಗೈ ಎತ್ತಿದಾಗ ಕಂಕುಳ ಅಥವಾ ಇದರ ಸುತ್ತಮುತ್ತ ಮಚ್ಚೆ ಇದ್ದರೆ ಈ ವ್ಯಕ್ತಿಗಳು ತಮ್ಮ ಗಳಿಕೆಯ ಬಗ್ಗೆ ಅತಿ ಹೆಚ್ಚು ಜಾಗರೂಕರಾಗಿರಬೇಕಗುತ್ತದೆ. ಏಕೆಂದರೆ ಈ ವ್ಯಕ್ತಿಗಳಿಗೆ ವೈದ್ಯಕೀಯ ವೆಚ್ಚ ಸದ ತೂಗುಕತ್ತಿಯಂತೆ ತೂಗುತ್ತಿದ್ದು ಯಾವಾಗ ಬೀಳುತ್ತದೆ ಎಂದು ಹೇಳಲಾಗುವುದಿಲ್ಲ. ಒಮ್ಮೆ ಬಿದ್ದಾಗ ಜೀವಮಾನದ ಗಳಿಕೆಯನ್ನೆಲ್ಲಾ ಕ್ಷಣದಲ್ಲಿ ಖಾಲಿ ಮಾಡುವಂತಿರುತ್ತದೆ.

ಮೂಗಿನ ಪಕ್ಕದಲ್ಲಿರುವ ಮಚ್ಚೆ

ಮೂಗಿನ ಪಕ್ಕದಲ್ಲಿರುವ ಮಚ್ಚೆ

ಮೂಗಿನ ಯಾವುದೇ ಪಕ್ಕದಲ್ಲಿ ಮಚ್ಚೆ ಇರುವ ವ್ಯಕ್ತಿಗಳಿಗೆ ಹಲವಾರು ಕಷ್ಟಗಳು ಎದುರಾಗುತ್ತವೆ. ಆದರೆ ಜೀವಮಾನವಿಡೀ ಈ ಕಷ್ಟಗಳು ಇರುತ್ತವೆ ಎಂದು ಈ ವ್ಯಕ್ತಿಗಳು ಕೊರಗಬೇಕಾಗಿಲ್ಲ. ಹೆಚ್ಚಿನ ಕಷ್ಟಗಳು ಈ ವ್ಯಕ್ತಿಗಳ ವಿವಾಹದ ಬಳಿಕ ಸುಗಮವಾಗುತ್ತವೆ ಹಾಗೂ ಮುಂದಿನ ಜೀವನ ಸುಖಕರವಾಗುತ್ತದೆ. ಆದರೆ ವಿವಾಹದವರೆಗೂ ಈ ವ್ಯಕ್ತಿಗಳು ಕೊಂಚ ಹೆಚ್ಚೇ ಕಷ್ಟಪಡಬೇಕಾಗುತ್ತದೆ.ಬೆರಳುಗಳ ಮೇಲಿನ ಮಚ್ಚೆ- ಜಾತಕವನ್ನೇ ಬಿಚ್ಚಿಡುತ್ತದೆ!

English summary

Moles in these 8 areas of body indicate severe Money-Crisis

According to the knowledge of Samudrika Shastra, presence of moles in these 8 areas of body indicate that the person will fail to accumulate desired wealth, as he/she would experience inescapable expenses. In short, money won’t stick around for them; they will constantly face money-related problems.
X
Desktop Bottom Promotion