ಅಚ್ಚರಿಯ ಜಗತ್ತು: ಆ ದೇವರ ಆಟ ಬಲ್ಲವರು ಯಾರು?

By Arshad
Subscribe to Boldsky

ಮಹಿಳೆಯೊಬ್ಬಳು ಗರ್ಭವತಿಯಾದ ಬಳಿಕ ಮನೆಯವರೆಲ್ಲರೂ ಗಂಡಾಗಲಿ, ಹೆಣ್ಣಾಗಲಿ, ಆರೋಗ್ಯವಂತ ಮಗುವೊಂದು ಬಂದರೆ ಸಾಕು ಎಂದೇ ಪ್ರಾರ್ಥಿಸುತ್ತಾರೆ. ಆದರೆ ಎಲ್ಲೋ ಲಕ್ಷಕ್ಕೊಂದೋ ಎರಡೋ ಪ್ರಕರಣಗಳಲ್ಲಿ ಗರ್ಭಾವಸ್ಥೆಯಲ್ಲಿ ಯಾವುದೋ ತೊಂದರೆಯಿಂದ ಹುಟ್ಟುವಾಗಲೇ ಅಥವಾ ಹುಟ್ಟಿದ ಬಳಿಕ ಕೆಲವೊಂದು ವೈಕಲ್ಯಕ್ಕೆ ತುತ್ತಾಗುತ್ತಾರೆ.  ಈ ಮಹಿಳೆ ಹೃದಯ ವೈಶಾಲ್ಯತೆಗೆ ನಮ್ಮದೊಂದು ಸಲಾಂ!

ಆದರೆ ಈ ವೈಕಲ್ಯವನ್ನು ಮೆಟ್ಟಿ ನಿಂತು ಯಶಸ್ಸು ಪಡೆದ ಹಲವು ವ್ಯಕ್ತಿಗಳಿದ್ದಾರೆ. ಕೆಲವು ಕಡೆಗಳಲ್ಲಿ ಈ ವೈಕಲ್ಯವನ್ನು ಸ್ವೀಕರಿಸದ ಪಾಲಕರು ಮಕ್ಕಳನ್ನು ತ್ಯಜಿಸುವುದೂ ಇದೆ. ಏನೇ ಆದರೂ ತಾಯಿಯ ಮಮತೆ ತನ್ನ ಮಗುವಿನ ವೈಕಲ್ಯವನ್ನೂ ಸ್ವೀಕರಿಸಿ ಇದಕ್ಕಾಗಿ ಏನನ್ನೂ ಮಾಡುವ ಆಲೋಚನೆಗೆ ಒಳಪಡಿಸುತ್ತದೆ. ಈಕೆಯ ವಯಸ್ಸು ಕೇವಲ ಹದಿನಾರು, ಆದರೆ ಇವಳು ಮಾಡಿದ್ದೇನು ಗೊತ್ತೇ?

ಇಂದಿನ ಲೇಖನದಲ್ಲಿ ಇಂತಹ ಕೆಲವು ವಿಶೇಷ ಆದ್ಯತೆಯ ಮಕ್ಕಳ ತಾಯಂದಿರು ತಮ್ಮ ಮಗುವಿಗಾಗಿ ಕೈಗೊಂಡ ಕ್ರಮವನ್ನೂ, ಇದರ ಪರಿಣಾಮವಾಗಿ ಇಂದು ಆ ಮಕ್ಕಳು ನಡೆಸುತ್ತಿರುವ ಜೀವನ ಹೇಗಿದೆ ಎಂಬುದನ್ನು ನೋಡೋಣ....  

ಅಶರ್ ನ್ಯಾಶ್

ಅಶರ್ ನ್ಯಾಶ್

ಜಾರ್ಜಿಯಾ ದೇಶದಲ್ಲಿ 2015ರ ಜೂನ್ ತಿಂಗಳಲ್ಲಿ ಹುಟ್ಟಿದ ಈ ಸುಂದರ ಬಾಲಕ ಹುಟ್ಟುವಾಗಲೇ ಡೌನ್ ಸಿಂಡ್ರೋಮ್ ಎಂಬ ವ್ಯಾಧಿಯೊಂದಿಗೇ ಹುಟ್ಟಿದ್ದ. ಜೀವಕೋಶಗಳಲ್ಲಿ ಒಂದು ಜೊತೆ ಹೆಚ್ಚಿನ ಕ್ರೋಮೋಸೋಮುಗಳಿರುವ ಈ ತೊಂದರೆಯಿಂದ ಬೆಳವಣಿಗೆ ಸ್ವಾಭಾವಿಕವಾಗಿರುವುದಿಲ್ಲ. ಆದರೆ ಈತನ ತಾಯಿ ತನ್ನ ಮಮತೆಯಲ್ಲಿ ಯಾವುದೇ ಕೊರತೆ ತೋರದೇ ಸಮಾಜ ಈ ಕಾಯಿಲೆ ಇರುವ ವ್ಯಕ್ತಿಗಳ ಬಗ್ಗೆ ಇರುವ ತಾತ್ಸಾರಭಾವನೆಯನ್ನು ದಿಟ್ಟವಾಗಿ ಎದುರಿಸಿ ತನ್ನ ಮಗುವನ್ನು ಜಗತ್ತಿಗೆ ಪರಿಚಯಿಸಿದರು. ಒಂದು ಜಾಹೀರಾತು ಸಂಸ್ಥೆಯಂತೂ ನಮಗೆ ಅಂಗವಿಕಲ ಮಕ್ಕಳ ಅಗತ್ಯವಿಲ್ಲ ಎಂದು ಖಾರವಾಗಿಯೇ ತಿಳಿಸಿತು. ಆದರೆ 'ದ ಮೈಟಿ' ಎಂಬ ಸಂಸ್ಥೆ ಈತನನ್ನು ಉತ್ಪನ್ನವೊಂದರ ಜಾಹೀರಾತಿನಲ್ಲಿ ಪರಿಚಯಿಸಿದ್ದೇ ತಡ ಈತ ಜಗತ್ತಿನ ಆಕರ್ಷಣೆಯ ಕೇಂದ್ರವಾಗಿದ್ದಾನೆ. ಅಷ್ಟೇ ಅಲ್ಲ, 2017ರಲ್ಲಿಯೂ ಈತನ ಜಾಹೀರಾತಿಗಾಗಿ ದಿನಗಳು ಈಗಾಗಲೇ ಬುಕ್ ಆಗಿ ಹೋಗಿವೆ.

Image source

ಬೊಯಾಜಿದ್ ಹೊಸೈನ್

ಬೊಯಾಜಿದ್ ಹೊಸೈನ್

ದಕ್ಷಿಣ ಬಾಂಗ್ಲಾದೇಶದ ಈ ಬಾಲಕ ಹುಟ್ಟುವಾಗ ಸಾಮಾನ್ಯ ಮಕ್ಕಳಂತೆಯೇ ಇದ್ದರೂ ಈತನ ವಯಸ್ಸು ಮಾತ್ರ ಭಾರೀ ವೇಗದಲ್ಲಿ ಮುಂದುವರೆದಿತ್ತು. ಅಂದರೆ ಕೇವಲ ನಾಲ್ಕು ವರ್ಷದ ಈ ಬಾಲಕ ಈಗ ವಯೋವೃದ್ಧನಂತೆ ತೋರುತ್ತಾರೆ. ಪ್ರೊಜೀರಿಯಾ ಎಂಬ ಅಪರೂಪದ ಕಾಯಿಲೆಯ ಪರಿಣಾಮವಾಗಿ ಊದಿದ ಮುಖ, ಜೋಲುಬಿದ್ದ ಕೆನ್ನೆ, ಹುಬ್ಬು ಮೊದಲಾದವು ಈತನ ರೂಪವನ್ನು ಬದಲಿಸಿವೆ. ಈ ರೂಪದ ಕಾರಣ ಈತ ಶಾಲೆಗೂ ಹೋಗಲಾರ. ಆದರೆ ಮಾನಸಿಕವಾಗಿ ಈತ ಸಕ್ರಿಯನಾಗಿದ್ದು ತನ್ನ ನಿಜವಯಸ್ಸಿಗನುಗುಣವಾದ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸುತ್ತಾನೆ.

Image source

ಟೆಸ್ಸಾ ಇವಾನ್ಸ್

ಟೆಸ್ಸಾ ಇವಾನ್ಸ್

ಐರ್ಲೆಂಡಿನ ಮೇಘಾರ ಎಂಬ ಪಟ್ಟಣದ ದಂಪತಿಗಳಿಗೆ ಹುಟ್ಟಿದ ಈ ಹೆಣ್ಣುಮಗುವಿಗೆ ಹುಟ್ಟಿದಾಗ ಮೂಗೇ ಇರಲಿಲ್ಲ. "complete congenital arhinia" ಎಂಬ ಅತ್ಯಪರೂಪದ ಈ ಖಾಯಿಲೆ ಇದುವರೆಗೆ ಜಗತ್ತಿನಲ್ಲಿ ಕೇವಲ ನಲವತ್ತು ಜನರಿಗೆ ಬಂದಿದೆಯಂತೆ. ಆದರೆ ಈಕೆಗೆ ಜನ್ಮ ನೀಡಿದ ತಂದೆ ತಾಯಿಯರಾದ ಗ್ರೇಯ್ನ್ ಮತ್ತು ನೇಥನ್ ಇವಾನ್ಸ್ ರಿಗೆ ತಮ್ಮ ಮಗು ಹೀಗೇ ಜೀವನ ಕಳೆಯುವುದು ಬೇಕಾಗಿರಲಿಲ್ಲ. ಎರಡು ವರ್ಷ ಕಳೆಯುತ್ತಿದ್ದಂತೆಯೇ ಅತ್ಯುತ್ತಮ ವೈದ್ಯರಿಂದ ಈಕೆಗೆ ಪ್ಲಾಸ್ಟಿಕ್ ಸರ್ಜರಿ ಮೂಲಕ ಮೂಗೊಂದನ್ನು ಕಸಿ ಮಾಡಿದ ಪರಿಣಾಮವಾಗಿ ಈಗ ಈಕೆ ಅತ್ಯಂತ ಚೆಲುವನ್ನು ಪಡೆದಿದ್ದಾಳೆ.

source

ಶಿಲೋ ಪೆಪಿನ್

ಶಿಲೋ ಪೆಪಿನ್

ದೇಹದ ಕೆಳಭಾಗ ಪ್ರತ್ಯೇಕವಾಗಿ ಬೆಳೆಯದೇ ಒಂದುಗೂಡಿ ಪುಟ್ಟ ಒಂದೇ ಕಾಲಿನಂತೆ ಬೆಳೆಯುವ, ತನ್ಮೂಲಕ ಮೀನಿನ ಬಾಲದಂತೆ ಕಾಣುವ ಹಾಗೂ ಜನಪದ ಕಥೆಗಳಲ್ಲಿ ವಿವರಿಸಿರುವ ಮರ್ಮೇಡ್ ಎಂಬ ಅರ್ಧ ನಾರಿ, ಅರ್ಧ ಮೀನಿನ ಆಕೃತಿಯನ್ನು ಪಡೆಯುವ ಮರ್ಮೇಡ್ ಸಿಂಡ್ರೋಮ್ ಅಥವಾ "Sirenomelia" ಎಂಬ ಕಾಯಿಲೆ ಅತ್ಯಪರೂಪದ್ದಾಗಿದ್ದು ಈ ವೈಕಲ್ಯದಿಂದ ಹುಟ್ಟಿದ ಮಕ್ಕಳು ಕೆಲವೇ ದಿನ ಬದುಕಿರುತ್ತವೆ. ಏಕೆಂದರೆ ಈ ಮಕ್ಕಳಿಗೆ ಮೂತ್ರಕೋಶ, ಗರ್ಭಕೋಶ, ಗುದದ್ವಾರ, ಯೋನಿ ಏನೂ ಇಲ್ಲದೇ ಇರುವ ಕಾರಣ ನೈಸರ್ಗಿಕ ಕ್ರಿಯೆಗಳು ನಡೆಯದೇ ಸಾವು ಅನಿವಾರ್ಯವಾಗುತ್ತದೆ. ಆದರೆ 1999 ರಲ್ಲಿ ಈ ವೈಕಲ್ಯದೊಂದಿಗೆ ಹುಟ್ಟಿದ ಶಿಲೋ ಪೆಪಿನ್ ಎಂಬ ಬಾಲಕಿ ಈ ವೈಕಲ್ಯವನ್ನುಎದುರಿಸಿ ಹತ್ತು ವರ್ಷಗಳವರೆಗೆ ಬದುಕಿ

2009ರಲ್ಲಿ ವಿಧಿವಶಳಾದಳು.

Image source

ಪ್ಯಾನ್ ಕ್ಸಿಯಾನ್ಹಾಂಗ್

ಪ್ಯಾನ್ ಕ್ಸಿಯಾನ್ಹಾಂಗ್

ಚರ್ಮದ ಮೇಲೆ ಹುರುಪೆಗಳಂತಹ ಒರಟು ಭಾಗ ಬೆಳೆದು ಮೀನಿನ ಹುರುಪೆಯಂತೆ ತೋರುವ Ichthyosis ಎಂಬ ಈ ಕಾಯಿಲೆ ಅತ್ಯಪರೂಪವಾಗಿದ್ದು ಈ ಕಾಯಿಲೆಯೊಂದಿಗೆ ಹುಟ್ಟಿದ ಪ್ಯಾನ್ ಕ್ಸಿಯಾನ್ಹಾಂಗ್ ಎಂಬ ಬಾಲಕ ಈ ಕಾಯಿಲೆಯ ಕಾರಣಕ್ಕೇ ಸರಾಗವಾಗಿ ಚಲಿಸಲು ಸಾಧ್ಯವಾಗುತ್ತಿಲ್ಲ. ಹುರುಪೆಗಳು ಮುಖ, ತಲೆ, ಕಣ್ಣು, ಒಟ್ಟಾರೆ ಇಡಿಯ ದೇಹವನ್ನು ಆವರಿಸಿದ್ದು ಇದೇ ಕಾರಣಕ್ಕೆ ಈ ಹುಡುಗನಿಗೆ "ಮೀನು ಹುಡುಗ" ಎಂಬ ಅನ್ವರ್ಥನಾಮವೂ ದೊರಕಿದೆ.

Image source

 
For Quick Alerts
ALLOW NOTIFICATIONS
For Daily Alerts

    English summary

    Kids Who Are Special & Live An Extraordinary Life

    When a woman is pregnant, all pray that everything goes well; and if something goes wrong during the pregnancy or if the child is a special child, things go unplanned, as there are people who abandon their kids and there are even those who love their child unconditionally. This article is all about some of the special kids who are living an extraordinary life and have turned famous due to their special abilities.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more