For Quick Alerts
ALLOW NOTIFICATIONS  
For Daily Alerts

  ಈ ಮಹಿಳೆ ಹೃದಯ ವೈಶಾಲ್ಯತೆಗೆ ನಮ್ಮದೊಂದು ಸಲಾಂ!

  By Manu
  |

  ಈ ವಿಶ್ವದಲ್ಲಿ ಸಾವಿರಾರು ತಬ್ಬಲಿ ಮಕ್ಕಳಿದ್ದಾರೆ. ತಮ್ಮ ಊಟಕ್ಕೇ ತಾತ್ವಾರವಿದ್ದಾಗ ಅನಿವಾರ್ಯವಾಗಿ ತಂದೆತಾಯಿಯರಿಂದ ತ್ಯಜಿಸಲ್ಪಟ್ಟವರು, ಅನೈತಿಕ ಸಂಬಂಧದ ಫಲ ಮೊದಲಾದ ಕಾರಣಗಳಿಂದ ಯಾವುದೇ ಆಶ್ರಯವಿಲ್ಲದೇ ನಿಸರ್ಗದ ಮಡಿಲಿನ ಆಶ್ರಯ ಪಡೆದಿರುವ ಈ ಮಕ್ಕಳಲ್ಲಿ ಕೆಲವರು ಮಾತ್ರ ಅದೃಷ್ಟವಂತರಾಗಿದ್ದಾರೆ.

  ಇವರನ್ನು ಕಂಡ ಕೆಲವು ಸಹೃದಯಿ ವ್ಯಕ್ತಿಗಳು ಇವರ ಪಾಲನೆ ಪೋಷಣೆಯ ಹೊಣೆಯನ್ನು ಹೊತ್ತು ಸಾಕುವ ಮೂಲಕ ಈ ಮಕ್ಕಳಿಗೆ ಉತ್ತಮ ಜೀವನ ಒದಗಿಸುತ್ತಾರೆ. ಅಮೇರಿಕಾದ ಟೆನೆಸ್ಸೀ ಪ್ರಾಂತದ ನಿವಾಸಿ ಪ್ರಿಸಿಲ್ಲಾ ಮೋರ್ಸೆ ಎಂಬುವರು 2015ರಲ್ಲಿ ಅನಾಥಾಶ್ರಮದಲ್ಲಿದ್ದ ಪುಟ್ಟ ಗಂಡುಮಗುವಿನ ಚಿತ್ರವನ್ನು ನೋಡಿದರು.   ಮಗುವನ್ನು ದತ್ತು ಪಡೆಯಲು ಇರುವ ಹತ್ತು ಸುಂದರವಾದ ಕಾರಣಗಳು

  ಸರಿಯಾದ ಊಟವಿಲ್ಲದೇ ಸೊರಗಿದ್ದ, ಸ್ನಾನವಿಲ್ಲದೇ ತಲೆಗೂದಲೆಲ್ಲಾ ಮುಖದ ಮೇಲೆ ಹರಡಿದ್ದ ಈ ಬಾಲಕನನ್ನು ಕಂಡು ಅವರ ಮನ ಮರುಗಿತು. ಈ ಮಗುವನ್ನು ದತ್ತು ತೆಗೆದುಕೊಂಡು ಉತ್ತಮ ಜೀವನ ಒದಗಿಸಬೇಕೆಂದು ಅಂದೇ ಅವರು ಅಂದುಕೊಂಡರು.

  ಈ ನಿರ್ಧಾರಕ್ಕೆ ಅವರಿಗೆ ಕೆಲವೇ ನಿಮಿಷಗಳು ಸಾಕಾಯಿತು. ಪ್ರೀತಿಗೆ ಬೆಟ್ಟವನ್ನೇ ಅಲುಗಿಸುವ ಶಕ್ತಿ ಇದೆ ಎಂದು ಹೇಳುತ್ತಾರೆ. ಈ ಮಗುವಿನ ಭವಿಷ್ಯವಂತೂ ಬೆಟ್ಟ ಅಲುಗಿಸುವಷ್ಟೇನೂ ಕಷ್ಟವಲ್ಲವಲ್ಲ, ಪರಿಣಾಮವಾಗಿ ಇಂದು ಈ ಮಗು ಸಂಪೂರ್ಣವಾಗಿ ಬದಲಾಗಿ ಹೊಸ ರೂಪದಿಂದ ಕಂಗೊಳಿಸುತಿದ್ದಾನೆ.

  ಬನ್ನಿ, ಪ್ರೀತಿ ಏನನ್ನು ಸಾಧಿಸಬಲ್ಲುದು ಎಂಬುದನ್ನು ಇಂದಿನ ಲೇಖನದ ಮೂಲಕ ತಿಳಿಯೋಣ. ಈ ಮಹಿಳೆಯ ಪ್ರೀತಿಯನ್ನು ಒಪ್ಪಿಕೊಂಡ ಅವರ ಮನೆಯವರೂ ತಮ್ಮ ಪಾಲಿನ ಪ್ರೀತಿಯನ್ನು ಈ ಅನಾಥ ಮಗುವಿನ ಮೇಲೆ ಧಾರೆ ಎರೆದ ಪರಿಣಾಮ ನಿಜಕ್ಕೂ ಎಲ್ಲರಿಗೂ ಏನಾದರೂ ಒಳ್ಳೆಯದನ್ನು ಮಾಡಲು ಪ್ರೇರಣೆಯನ್ನು ನೀಡುವುದಂತೂ ಖಂಡಿತ......  

  ಈ ಬಾಲಕ ಆಗ ಕೇವಲ ಏಳು ವರ್ಷದವನಾಗಿದ್ದ

  ಈ ಬಾಲಕ ಆಗ ಕೇವಲ ಏಳು ವರ್ಷದವನಾಗಿದ್ದ

  ಈ ಚಿತ್ರವನ್ನು ಗಮನಿಸಿ. ಈತನಿಗೆ ಏಳು ವರ್ಷವಾಗಿತ್ತೆಂದು ಹೇಳಲು ಸಾಧ್ಯವೇ? ಆರೈಕೆ, ಪೋಷಕಾಂಶಗಳ ಕೊರತೆಯಿಂದಾಗಿ ಈತನ ಕೂದಲು ತೆಳ್ಳಗಾಗಿ ಬಿಳಿಚಿಕೊಂಡಿರುವುದು ಮಾತ್ರವಲ್ಲ, ಈತನ ಚರ್ಮ ಸಹಾ ಬಿಳಿಚಿಕೊಂಡಿದೆ.

  ಈ ಹುಡುಗನ ಹೆಸರು ರಯಾನ್ ಆಗಿತ್ತು

  ಈ ಹುಡುಗನ ಹೆಸರು ರಯಾನ್ ಆಗಿತ್ತು

  ಮೈಯಲ್ಲಿ ಮಾಂಸಖಂಡಗಳೇ ಇಲ್ಲದಂತಿದ್ದ ಈ ಹುಡುಗನ ಹೆಸರು ರಯಾನ್ ಆಗಿತ್ತು. ಈತನ್ನ ದತ್ತು ತೆಗೆದುಕೊಳ್ಳಲು ನಿರ್ಧರಿಸಿದ ಮಹಿಳೆಯ ನಿರ್ಧಾರವನ್ನು ಆಕೆಯ ಮನೆಯವರೂ ಅನುಮೋದಿಸಿದ ಬಳಿಕ ರಯಾನ್ ಈ ಕುಟುಂಬದ ನೂತನ ಸದಸ್ಯನಾಗಿ ಆಗಮಿಸಿದ.

  ಅಷ್ಟಕ್ಕೂ ಪ್ರಿಸಿಲ್ಲಾರಿಗೆ ಈತನ ಬಗ್ಗೆ ತಿಳಿದದ್ದು ಹೇಗೆ?

  ಅಷ್ಟಕ್ಕೂ ಪ್ರಿಸಿಲ್ಲಾರಿಗೆ ಈತನ ಬಗ್ಗೆ ತಿಳಿದದ್ದು ಹೇಗೆ?

  ರೀಸೀಸ್ ರೈನ್ ಬೋ ಎಂಬ ಕಾರ್ಯಕ್ರಮದ ಮೂಲಕ ಈ ಮಗುವಿನ ಬಗ್ಗೆ ಪ್ರಿಸಿಲ್ಲಾರವರು ತಿಳಿದುಕೊಂಡರು. ತಬ್ಬಲಿ ಮತ್ತು ಅಂಗವಿಕಲ ಮಕ್ಕಳ ಬಗ್ಗೆ ಅಸ್ಥೆ ವಹಿಸುವ ಸಂಸ್ಥೆಯಾದ ರೀಸೀಸ್ ರೈನ್ ಬೋ ಈ ಮಕ್ಕಳ ಪಾಲನೆ ಪೋಷಣೆಗೆ ಧನಸಹಾಯ ನೀಡುತ್ತಿದ್ದು ಈ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಕಾನೂನಿನ ನೆರವನ್ನೂ ನೀಡುತ್ತದೆ.

  ಪ್ರಿಸಿಲ್ಲಾರಿಗೆ ಇನ್ನೊಬ್ಬ ಹೆಣ್ಣುಮಗುವನ್ನೂ ದತ್ತು ಪಡೆದಿದ್ದಾರೆ

  ಪ್ರಿಸಿಲ್ಲಾರಿಗೆ ಇನ್ನೊಬ್ಬ ಹೆಣ್ಣುಮಗುವನ್ನೂ ದತ್ತು ಪಡೆದಿದ್ದಾರೆ

  ಪ್ರಿಸಿಲ್ಲಾರ ಹೃದಯ ವೈಶಾಲ್ಯತೆಯನ್ನು ಅಳೆಯಲು ಸಾಧ್ಯವೇ ಇಲ್ಲ. ಏಕೆಂದರೆ ಇವರು Down's syndrome ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮತ್ತು ಹೃದಯದ ತೊಂದರೆಯೂ ಇರುವ ಮೆಕೆಂಜ಼ೀ (McKenzie) ಎಂಬ ಹೆಸರಿನ ಹೆಣ್ಣು ಮಗುವನ್ನೂ ದತ್ತು ಪಡೆದಿದ್ದಾರೆ.

  ಬಲ್ಗೇರಿಯಾದಿಂದ ಟೆನಿಸ್ಸೀಗೆ ಆಗಮಿಸಿದ ರಯಾನ್

  ಬಲ್ಗೇರಿಯಾದಿಂದ ಟೆನಿಸ್ಸೀಗೆ ಆಗಮಿಸಿದ ರಯಾನ್

  ಈ ಬಾಲಕ ರಯಾನ್ ಬಲ್ಗೇರಿಯಾದವನಾಗಿದ್ದು ಈತನನ್ನು ಕಾನೂನು ರೀತ್ಯಾ ದತ್ತು ಪಡೆದ ಬಳಿಕ ಟೆನೆಸ್ಸೀ ಪ್ರಾಂತದಲ್ಲಿರುವ ಪ್ರಿಸಿಲ್ಲಾರವರ ಮನೆಗೆ ಈತ ದತ್ತುಪುತ್ರನಾಗಿ ಆಗಮಿಸಿದ.

  ಈತ ಕೇವಲ ಮೂಳೆಚಕ್ಕಳವಾಗಿದ್ದ

  ಈತ ಕೇವಲ ಮೂಳೆಚಕ್ಕಳವಾಗಿದ್ದ

  ಪೋಷಕಾಂಶಗಳ ಕೊರತೆಯಿಂದ ರಯಾನ್ ನ ಚರ್ಮ ಮತ್ತು ಕೂದಲು ಬಿಳಿಚಿದ್ದು ಮೂಳೆ ಚಕ್ಕಳದ ಭೂತದಂತಿದ್ದ ರಯಾನ್ ನನ್ನು ಮೊದಲು ವೈದ್ಯರ ಬಳಿ ಪರೀಕ್ಷೆಗೊಳಪಡಿಸಲಾಯಿತು. cerebral palsy, microcephaly, dwarfism, scoliosis, clubbed feet ಮತ್ತು re-feeding syndrome ಮೊದಲಾದ ತೊಂದರೆಗಳು ಇವೆಯೇ ಎಂದು ತಜ್ಞರು ಪರಿಶೀಲಿಸಿ ಅಗತ್ಯವಾದ ಚಿಕಿತ್ಸೆಯನ್ನು ನೀಡಿದರು. ಅಷ್ಟೇ ಅಲ್ಲ, ಪೋಷಕಾಂಶಗಳ ಕೊರತೆಯಿಂದ ಈತನ ಬೆನ್ನುಮೂಳೆಯೂ ಶಿಥಿಲವಾಗಿದ್ದು ಕಬ್ಬಿಣದ ಸರಳೊಂದನ್ನು ಶಸ್ತ್ರಕ್ರಿಯೆಯ ಮೂಲಕ ಅಳವಡಿಸಿ ಈತನ ಬೆನ್ನುಮೂಳೆಯನ್ನು ನೆಟ್ಟಗಾಗಿಸಲಾಯಿತು.

  ಆರೋಗ್ಯ ಸುಧಾರಣೆಯಾಗುವವರೆಗೂ ಪಕ್ಕದಲ್ಲಿಯೇ ಇದ್ದ ದಂಪತಿಗಳು

  ಆರೋಗ್ಯ ಸುಧಾರಣೆಯಾಗುವವರೆಗೂ ಪಕ್ಕದಲ್ಲಿಯೇ ಇದ್ದ ದಂಪತಿಗಳು

  ಪ್ರಿಸಿಲ್ಲಾ ದಂಪತಿಗಳು ಈ ಬಾಲಕನ ಬಗ್ಗೆ ಎಷ್ಟೊಂದು ಕಾಳಜಿ ವಹಿಸಿದ್ದರೆಂದರೆ ಈತನ ಆರೋಗ್ಯದ ತಪಾಸಣೆ, ಚಿಕಿತ್ಸೆ ಪೂರ್ಣಗೊಳ್ಳುವವರೆಗೂ ಈತನ ಪಕ್ಕದಲ್ಲಿಯೇ ಇದ್ದು ಅಗತ್ಯವಾದ ಎಲ್ಲಾ ನೆರವನ್ನು ನೀಡುತ್ತಿದ್ದರು. ಆತನ ಸ್ವಂತ ತಾಯಿ ತೋರಬಹುದಾದ ಅಕ್ಕರೆಯನ್ನು ತೋರಿ ಬಾಲಕ ಕಳೆದುಕೊಂಡಿದ್ದ ಪ್ರೀತಿಯನ್ನು ಧಾರೆ ಎರೆದರು. ಪರಿಣಾಮವಾಗಿ ಬಾಲಕ ಚಿಕಿತ್ಸೆಗೆ ಸ್ಪಂದಿಸುತ್ತಾ ಶೀಘ್ರವೇ ಆರೋಗ್ಯವಂತನಾಗುತ್ತಾ ಬಂದ.

  ಇಂದು ಈತ ಅತ್ಯಂತ ಸುಖಿ ಹಾಗೂ ಆರೋಗ್ಯವಂತ ಬಾಲಕ

  ಇಂದು ಈತ ಅತ್ಯಂತ ಸುಖಿ ಹಾಗೂ ಆರೋಗ್ಯವಂತ ಬಾಲಕ

  ಈತನ ಆರೋಗ್ಯ ಹಲವಾರು ಬಗೆಯಲ್ಲಿ ಏರುಪೇರಾಗಿದ್ದ ಕಾರಣ ವೈದ್ಯರಿಗೂ ಚಿಕಿತ್ಸೆ ನೀಡುವುದೂ ಒಂದು ಸವಾಲಾಗಿತ್ತು. ಆದರೆ ನೋವಿನಲ್ಲಿಯೂ ನಗುತ್ತಲೇ ಇದ್ದ ರಯಾನ್ ತನ್ನ ಸುತ್ತಮುತ್ತಲಿದ್ದವರ ಹಾಗೂ ತನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಸಿಬ್ಬಂದಿಯ ಹುಮ್ಮಸ್ಸನ್ನು ಹೆಚ್ಚಿಸುತ್ತಿದ್ದ. ಅಷ್ಟೇ ಅಲ್ಲ, ಚಿಕಿತ್ಸಾ ಸಮಯದಲ್ಲಿ ತಾನಾಗಿಯೇ ಸ್ವಪ್ರೇರಣೆಯಿಂದ ಓಡಾಡುತ್ತಾ ಗುಣಮುಖನಾಗುತ್ತಿದ್ದ.

  ಒಂದು ವರ್ಷದ ಬಳಿಕ ರಯಾನ್ ಹೀಗಾಗಿದ್ದಾನೆ

  ಒಂದು ವರ್ಷದ ಬಳಿಕ ರಯಾನ್ ಹೀಗಾಗಿದ್ದಾನೆ

  ಈ ಒಂದು ವರ್ಷದ ಅವಧಿಯಲ್ಲಿ ಈತನ ಆರೋಗ್ಯವನ್ನು ವಿಚಾರಿಸಲು ಪ್ರಿಸಿಲ್ಲಾರ ಕುಟುಂಬ ಪ್ರತಿದಿನವೂ ಆಸ್ಪತ್ರೆಗೆ ಧಾವಿಸುತ್ತಿತ್ತು. ತನಗಾಗಿ ತೋರುವ ಈ ಕಾಳಜಿಯನ್ನು ರಯಾನ್ ನ ಮನಸ್ಸು ಧನಾತ್ಮಕವಾಗಿ ಪಡೆದುಕೊಂಡ ಕಾರಣವೋ ಏನೋ, ವೈದ್ಯರು ಯೋಚಿಸಿದ್ದುದಕ್ಕಿಂತಲೂ ಶೀಘ್ರವಾಗಿ ಈತ ಚೇತರಿಸಿಕೊಂಡ. ಒಂದೇ ವರ್ಷದಲ್ಲಿ ತನ್ನ ಅನಾರೋಗ್ಯವನ್ನು ಮೆಟ್ಟಿ ನಿಂತ.

  ಅನಾಥನಾಗಿದ್ದ ಮಗುವಿನ ಹೊಸಜೀವನ ನೀಡಿದ ಈ ಕುಟುಂಬಕ್ಕೆ ಶುಭಾಶಯಗಳು

  ಅನಾಥನಾಗಿದ್ದ ಮಗುವಿನ ಹೊಸಜೀವನ ನೀಡಿದ ಈ ಕುಟುಂಬಕ್ಕೆ ಶುಭಾಶಯಗಳು

  ಈ ಮಗುವಿನ ಇಂದಿನ ಚಿತ್ರವನ್ನು ನೋಡಿ. ಯಾವುದೇ ಚಿತ್ರತಾರೆಗೂ ಕಡಿಮೆ ಇಲ್ಲದ ಈತನ ರೂಪ ನಿಮಗೂ ಆಕರ್ಷಕವಾಗಿ ಕಂಡಿತೇ? ರೂಪದಲ್ಲಿ ಮಾತ್ರವಲ್ಲ, ವ್ಯಾಸಂಗದಲ್ಲಿಯೂ ಉತ್ತಮ ಸಾಧನೆ ತೋರುತ್ತಿರುವ ಈ ಬಾಲಕ ಇಂದು ಅತ್ಯಂತ ಸಂತುಷ್ಟ ಬಾಲಕನಾಗಿದ್ದು ತನ್ನ ಹೊಸ ಕುಟುಂಬದೊಡನೆ ಸುಖಜೀವನ ನಡೆಸುತ್ತಿದ್ದಾನೆ. ಈ ಕುಟುಂಬ ಹೀಗೇ ನಗುನಗುತ್ತಾ ನೂರ್ಕಾಲ ಬಾಳಲಿ ಎಂದು ಹಾರೈಸೋಣ.

  All Image courtesy -Source

   

  English summary

  An Orphan Child Who Saved Looks Totally Different, Check It Out!

  This is the story of an orphan malnourished child who was adopted and saved by his adopted parents. Read along. Priscilla Morse of Tennessee saw a picture of a boy in an orphanage in the year 2015. The little champ was starving and was covered in hair due to undernourishment. This child looks totally unrecognizable after being adopted.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more