For Quick Alerts
ALLOW NOTIFICATIONS  
For Daily Alerts

  ಈಕೆಯ ವಯಸ್ಸು ಕೇವಲ ಹದಿನಾರು, ಆದರೆ ಇವಳು ಮಾಡಿದ್ದೇನು ಗೊತ್ತೇ?

  By Manu
  |

  ಇಂದು ಕ್ರೈಂ ಅಥವಾ ಅಪರಾಧ ಎಂಬ ಪದ ನಮಗೆ ಇಷ್ಟೊಂದು ಸಾಮಾನ್ಯವಾಗಿ ಹೋಗಿದೆ ಎಂದರೆ ನಿತ್ಯವೂ ವೃತ್ತಪತ್ರಿಕೆಗಳಲ್ಲಿ ಒಳ್ಳೆಯ ಸುದ್ದಿಗಳಿಗಿಂತಲೂ ಅಪರಾಧ ಸುದ್ದಿಗಳನ್ನೇ ಓದಿ, ಟೀವಿಯಲ್ಲಿ ಇಂತಹದ್ದೇ ಧಾರಾವಾಹಿಗಳನ್ನು ನೋಡಿ ಅಭ್ಯಾಸವಾಗಿಬಿಟ್ಟಿದೆ. ಅದರಲ್ಲೂ ಚಿಕ್ಕವಯಸ್ಸಿನ ಹೆಣ್ಣುಮಕ್ಕಳು ಗರ್ಭಿಣಿಯರಾಗುವುದು, ಮಾತ್ರೆ ತಿಂದು ಗರ್ಭಪಾತದ ಸಮಯದಲ್ಲಿ ಪ್ರಾಣ ಕಳೆದುಕೊಳ್ಳುವುದು ಇತ್ಯಾದಿ.  ಅನೈತಿಕ ಸಂಬಂಧ ಹಿಂದಿರುವ ಸತ್ಯಾಸತ್ಯತೆ...

  ಅದರಲ್ಲೂ ಪಾಶ್ಚಾತ್ಯ ದೇಶಗಳಲ್ಲಿ ಸುಲಭವಾಗಿ ಸಿಗುವ ಗರ್ಭನಿರೋಧಕ ಗುಳಿಗೆಗಳನ್ನು ನಂಬಿ ಮುಂದುವರೆಯುವ ಹದಿಹರೆಯದವರು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರೆ ದಿಗ್ಭ್ರಾಂತಿ ಮೂಡಿಸುವ ಇನ್ನೊಂದು ಸುದ್ದಿಯ ಪ್ರಕಾರ ಹದಿನಾರರ ಯುವತಿಯೊಬ್ಬಳು ಈಗತಾನೇ ಜನ್ಮ ನೀಡಿದ ಮಗುವನ್ನು ಎರಡನೆಯ ಮಹಡಿಯಿಂದ ಕೆಳಕ್ಕೆಸೆದು ಸುದ್ದಿ ಮಾಡಿದ್ದಾಳೆ.     ಇಲ್ಲಿನ ಜನರ ಕಥೆ ಕೇಳಿದರೆ, ಕರುಳು ಚುರ್‍ ಅನ್ನುತ್ತದೆ...

  ಲೈಂಗಿಕ ಜೀವನದ ಬಗ್ಗೆ ಅರಿವು ಮೂಡಿಸಲು ಆಗಿರುವ ಮಾಹಿತಿಯ ಕೊರತೆಯ ನೇರ ಪರಿಣಾಮ ಇದಾಗಿದ್ದು ಈ ನಿಟ್ಟಿನಲ್ಲಿ ಹೆಚ್ಚಿನ ಜನಜಾಗೃತಿಯ ಅಗತ್ಯವಿದೆ. ಅನಗತ್ಯ ಬಸುರಿನಿಂದ ಹುಟ್ಟಿದ ಮಗುವನ್ನು ಏನು ಮಾಡುವುದು ಎಂಬ ಯೋಚನೆಯಲ್ಲಿ ಚಿಂತಾಕ್ರಾಂತಳಾಗಿದ್ದ ಈ ಯುವತಿಗೆ ಹೀಗೆ ಮಾಡಲು ಏಕಾಗಿ ಹೊಳೆಯಿತು ಎಂಬುದನ್ನು ಈಗ ನೋಡೋಣ....

  ವಾಸ್ತವದಲ್ಲಿ ಏನಾಯಿತು?

  ವಾಸ್ತವದಲ್ಲಿ ಏನಾಯಿತು?

  ಈ ಬಗ್ಗೆ ಮಾಹಿತಿ ನೀಡಿದ ವರದಿಗಳ ಪ್ರಕಾರ ತನ್ನ ಮಗುವನ್ನು ನೋಡಿದ ತಕ್ಷಣ ಈಕೆಗೆ ಭಯಾನಕವಾದ ಶಾಕ್ ಅಥವಾ ಆಘಾತ ಹೊಡೆದಂತಾಗಿದೆ. ತಕ್ಷಣ ಏನು ಮಾಡಬೇಕೆಂದು ಅರಿಯದೇ ಈ ಮಗುವನ್ನು ನೇರವಾಗಿ ಕಿಟಕಿಯಿಂದ ಹೊರಗೆಸೆದಿದ್ದಾಳೆ.

  ಇದೊಂದು ಅಪಘಾತ ಎಂಬ ವಿವರಣೆ

  ಇದೊಂದು ಅಪಘಾತ ಎಂಬ ವಿವರಣೆ

  ಈ ಬಗ್ಗೆ ತನಿಖೆ ನಡೆಸಿದಾಗ ಈಗ ತಾನು ಬೇಕೆಂದು ಮಾಡಿದ್ದಲ್ಲವೆಂದೂ ಇದೊಂದು ಅಕಸ್ಮಿಕವಾಗಿ ನಡೆದ ಘಟನೆ ಎಂದೂ, ಈ ಘಟನೆ ನಡೆದಾಗ ತಾನು ಅತ್ಯಂತ ಆಘಾತದಲ್ಲಿದ್ದು ಏಕಾಗಿ ಹೀಗೆ ಮಾಡಿದೆ ಎಂದು ತಿಳಿಯುತ್ತಿಲ್ಲವೆಂದೂ ಆಕೆ ತಿಳಿಸಿದ್ದಾಳೆ.

  ಕೆಳಕ್ಕೆ ಬಿದ್ದ ಮಗುವಿಗೇನಾಯಿತು?

  ಕೆಳಕ್ಕೆ ಬಿದ್ದ ಮಗುವಿಗೇನಾಯಿತು?

  ಆರೋಗ್ಯವಂತರೇ ಎರಡನೇ ಮಹಡಿಯಿಂದ ಬಿದ್ದರೆ ಪ್ರಾಣಾಪಾಯವಿದೆ. ಅಂತಹದ್ದರಲ್ಲಿ ಇನ್ನೂ ಹುಟ್ಟಿದ ಎಳೆಯಕೂಸು ಆಘಾತವನ್ನು ಹೇಗೆ ತಡೆದೀತು? ವಿಪರೀತ ಗಾಯಗೊಂಡಿದ್ದ ಮಗು ಕೆಲವೇ ಹೊತ್ತು ಉಸಿರಾಡಿ ಬಳಿಕ ಜೀವನದ ಅಲ್ಪಯಾತ್ರೆಯನ್ನು ಮುಗಿಸಿತು.

  ಈಕೆಯ ತಾಯಿ ಮಗುವನ್ನು ಬದುಕಿಸಲು ಯತ್ನಿಸಿದ್ದರು

  ಈಕೆಯ ತಾಯಿ ಮಗುವನ್ನು ಬದುಕಿಸಲು ಯತ್ನಿಸಿದ್ದರು

  ಮಗುವನ್ನು ಕೆಳಕ್ಕೆಸೆದ ಬಳಿಕ ಎಚ್ಚೆತ್ತ ಈ ಯುವತಿ ತಕ್ಷಣ ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ತಕ್ಷಣವೇ ಕೆಳಕ್ಕೋಡಿದ ಈಕೆಯ ತಾಯಿ ಮಗುವನ್ನು ಎತ್ತಿಕೊಂಡು ಬದುಕಿಸಲು ತನ್ನಿಂದಾದ ಪ್ರಯತ್ನವನ್ನು ನಡೆಸಿದ್ದಾರೆ. ಆದರೆ ಮಗು ಕೊಂಚಕಾಲದ ಬಳಿಕ ತೀರಿಕೊಂಡಿದೆ.

  ಕೊನೆಗೂ ಈ ಯುವತಿಯನ್ನು ಆರೋಪಿ ಸ್ಥಾನದಲ್ಲಿರಿಸಲಾಯಿತು

  ಕೊನೆಗೂ ಈ ಯುವತಿಯನ್ನು ಆರೋಪಿ ಸ್ಥಾನದಲ್ಲಿರಿಸಲಾಯಿತು

  ಕಾರಣವೇನೇ ಇರಲಿ, ಒಂದು ಜೀವವನ್ನು ಬಲವಂತವಾಗಿ ಕೊನೆಗಾಣಿಸುವುದು ಕೊಲೆಯೇ ಎಂದು ಪರಿಗಣಿಸಿದ ಪೋಲೀಸರು ಈಕೆಯನ್ನು ಬಂಧಿಸಿ ಮಗುವಿನ ಕೊಲೆಯ ಆರೋಪವನ್ನು ಹೊರಿಸಿದ್ದಾರೆ. ನ್ಯಾಯಾಲಯದ ತೀರ್ಪು ಬರುವುದು ಇನ್ನೂ ಬಾಕಿ ಇದೆ.

   

  English summary

  Shocking!! 16-Year-Old Mother Threw Her Newborn From 2nd Floor!

  Every day we hear stories of young girls getting pregnant. From stories of many abortions to girls taking various pills that are easily available in the market, the teens do not get think twice before exploring their sexual life. Here, in this article, we are \about to share the story of a 16-year-old girl who threw her newborn after just giving birth to it!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more