ಮನೆಯ ಶಾಂತಿ ನೆಮ್ಮದಿಗೆ-ಒಂದು ಲೋಟ 'ಉಪ್ಪು' ನೀರಿನ ಪರೀಕ್ಷೆ!

By: Arshad
Subscribe to Boldsky

ಎಲ್ಲಿ ಋಣಾತ್ಮಕ ಶಕ್ತಿ ಇರುತ್ತದೆಯೋ ಅಲ್ಲಿ ದಾರಿದ್ರ ಬೀಡು ಬಿಡುತ್ತದೆ ಎಂದು ಹೇಳಲಾಗಿದೆ. ಋಣಾತ್ಮಕ ಶಕ್ತಿ ಮನೆಯನ್ನು ಆವರಿಸಿದಷ್ಟೂ ಹೆಚ್ಚು ಉದ್ವೇಗ, ಆತಂಕ, ದುಗುಡಗಳು ಆವರಿಸುತ್ತವೆ. ಈ ಋಣಾತ್ಮಕ ಶಕ್ತಿಗಳನ್ನು ಹೊರಹಾಕಲು ಹೆಚ್ಚು ಕಷ್ಟ ಪಡಬೇಕಾಗಿಲ್ಲ. ಸಾಮಾನ್ಯ ಉಪ್ಪನ್ನು ಬಳಸಿ ಈ ಋಣಾತ್ಮಕ ಶಕ್ತಿಗಳ ಪ್ರಭಾವವನ್ನು ಇಲ್ಲದಂತಾಗಿಸುವುದು ಮಾತ್ರವಲ್ಲ ಈ ಮೂಲಕ ಮನೆಯಿಂದ ದಾರಿದ್ರ್ಯವನ್ನೂ ಹೊರಹಾಕಲು ಸಾಧ್ಯ. ಉಪ್ಪನ್ನು ಈ ಕೆಲಸಕ್ಕೆ ಕೆಲವಾರು ವಿಧಗಳಲ್ಲಿ ಬಳಸಬಹುದು. 

ಇದೇ ಕಾರಣಕ್ಕೆ ಮನೆಯಲ್ಲಿ ಜಗಳ, ಅಶಾಂತಿ ಉಂಟಾಗುವುದು!

ಋಣಾತ್ಮಕ ಶಕ್ತಿಗಳಿಂದ ಮುಕ್ತಿ ಪಡೆಯಲು ಹಲವಾರು ಸಂಶೋಧಕರು ಉಪ್ಪನ್ನು ಹಲವು ವಿಧಗಳಲ್ಲಿ ಬಳಸಿದ್ದು ಒಂದಕ್ಕಿಂತ ಹೆಚ್ಚು ವಿಧಾನದ ಮೂಲಕ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಅತ್ಯಂತ ಪ್ರಬಲವಾದ ಕೆಲವು ವಿಧಾನಗಳನ್ನು ನಾವು ಸಂಗ್ರಹಿಸಿದ್ದು ಈ ಮೂಲಕ ನಿಮ್ಮ ಮನೆಯಿಂದಲೂ ಋಣಾತ್ಮಕ ಶಕ್ತಿ ಹಾಗೂ ದಾರಿದ್ರ್ಯವನ್ನು ಹೊರಹಾಕಲು ನೆರವಾಗಬಹುದು.....   

ಕಲ್ಲುಪ್ಪು ಬೆರೆಸಿದ ನೀರಿನಿಂದ ನೆಲ ಒರೆಸಿ...

ಕಲ್ಲುಪ್ಪು ಬೆರೆಸಿದ ನೀರಿನಿಂದ ನೆಲ ಒರೆಸಿ...

ಈ ವಿಧಾನವನ್ನು ಭಾನುವಾರದ ಹೊರತು ಇತರ ದಿನಗಳಲ್ಲಿ ಆಚರಿಸಬಹುದು. ಮೊದಲು ಕೊಂಚ ಕಲ್ಲುಪ್ಪನ್ನು ನೀರಿನಲ್ಲಿ ಬೆರೆಸಿ ಈ ನೀರನ್ನು ನೆಲ ಒರೆಸುವ ದ್ರಾವಣದಲ್ಲಿ ಮಿಶ್ರಣ ಮಾಡಿ ಇಡಿಯ ಮನೆಯ ನೆಲವನ್ನು ಒರೆಸಿ.

ಪ್ರತಿ ಕೋಣೆಯ ನೆಲದ ಒಂದಿಂಚನ್ನೂ ಬಿಡದಂತೆ ಒರೆಸಿ...

ಪ್ರತಿ ಕೋಣೆಯ ನೆಲದ ಒಂದಿಂಚನ್ನೂ ಬಿಡದಂತೆ ಒರೆಸಿ...

ಮನೆಯ ಹಿಂಭಾಗದಿಂದ ಪ್ರಾರಂಭಿಸಿ ಮನೆಯ ಒಳಗಣ ಪ್ರತಿ ಕೋಣೆಯ ನೆಲದ ಒಂದಿಂಚನ್ನೂ ಬಿಡದಂತೆ ಒರೆಸುತ್ತಾ ಮನೆಯ ಹೊಸ್ತಿಲಿನಲ್ಲಿ ಕೊನೆಯಾಗುವಂತೆ ಒರೆಸುವ ಮೂಲಕ ಋಣಾತ್ಮಕ ಶಕ್ತಿಯನ್ನು ಹೊರಹಾಕುವ ಮೂಲಕ ದಾರಿದ್ರ್ಯದ ಲಕ್ಷಣಗಳನ್ನೂ ನಿವಾರಿಸಬಹುದು.

ಒಂದು ಲೋಟ ನೀರಿಗೆ ಚಿಟಿಕೆಯಷ್ಟು ಉಪ್ಪು....

ಒಂದು ಲೋಟ ನೀರಿಗೆ ಚಿಟಿಕೆಯಷ್ಟು ಉಪ್ಪು....

ಒಂದು ಗಾಜಿನ ಲೋಟದಲ್ಲಿರುವ ನೀರಿಗೆ ಚಿಟಿಕೆಯಷ್ಟು ಕಲ್ಲುಪ್ಪು ಬೆರೆಸಿ ಕಲಕಿ. ಈ ಲೋಟವನ್ನು ನಿಮ್ಮ ಮನೆಯ ನೈಋತ್ಯ ಭಾಗದ ಮೂಲೆಯಲ್ಲಿರಿಸಿ. ಈ ಮೂಲಕ ಮನೆಯಲ್ಲಿದ್ದ ದಾರಿದ್ರ್ಯ ಹೊರಹೋಗಲು ಸಾಧ್ಯವಾಗುತ್ತದೆ.

ಒಂದು ಲೋಟ ನೀರಿಗೆ ಚಿಟಿಕೆಯಷ್ಟು ಉಪ್ಪು....

ಒಂದು ಲೋಟ ನೀರಿಗೆ ಚಿಟಿಕೆಯಷ್ಟು ಉಪ್ಪು....

ಆದರೆ ಇದರೊಂದಿಗೆ ಹೇಳಬೇಕಾದ ಗುಟ್ಟು ಏನೆಂದರೆ ಅತ್ಯುತ್ತಮ ಫಲಿತಾಂಶ ಪಡೆಯಲು ಈ ಲೋಟವಿರುವ ಸ್ಥಳದಲ್ಲಿ ಕೆಂಪು ಬಣ್ಣದ ದೀಪ ಬೆಳಗುತ್ತಿರುವಂತೆ ನೋಡಿಕೊಳ್ಳಬೇಕು ಹಾಗೂ ಈ ಲೋಟದಲ್ಲಿ ನೀರು ಒಣಗುತ್ತಿದ್ದಂತೆಯೇ ಮತ್ತೊಮ್ಮೆ ಉಪ್ಪು ಬೆರೆಸಿದ ನೀರನ್ನು ತುಂಬಿಸುತ್ತಾ ಇರಬೇಕು.

ಬೋಗುಣಿಯಲ್ಲಿ ಒಂದು ಮುಷ್ಟಿಯಷ್ಟು ಕಲ್ಲುಪ್ಪು...

ಬೋಗುಣಿಯಲ್ಲಿ ಒಂದು ಮುಷ್ಟಿಯಷ್ಟು ಕಲ್ಲುಪ್ಪು...

ಒಂದು ಬೋಗುಣಿಯಲ್ಲಿ ಒಂದು ಮುಷ್ಟಿಯಷ್ಟು ಕಲ್ಲುಪ್ಪನ್ನು ಹಾಕಿ ಈ ಬೋಗುಣಿಯನ್ನು ನಿಮ್ಮ ಮನೆಯ ಸ್ನಾನಗೃಹದ ನೀರು ಬೀಳದ ಮೂಲೆಯಲ್ಲಿರಿಸಬೇಕು. ಈ ಉಪ್ಪನ್ನು ನಿಯಮಿತವಾಗಿ ಬದಲಿಸುತ್ತಲೂ ಇರಬೇಕು. ಈ ವಿಧಾನದಿಂದ ನಿಮ್ಮ ಮನೆಯನ್ನು ಆವರಿಸಿಸಬಹುದಾಗಿದ್ದ ದಾರಿದ್ರ್ಯದಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ.

ಮನೆಯೊಳಗೆ ಸಮೃದ್ಧಿಗೆ ಹೀಗೆ ಮಾಡಿ...

ಮನೆಯೊಳಗೆ ಸಮೃದ್ಧಿಗೆ ಹೀಗೆ ಮಾಡಿ...

ಒಂದು ಚಿಕ್ಕ ಕೆಂಪು ಬಣ್ಣದ ಬಟ್ಟೆಯಲ್ಲಿ ಕೊಂಚ ಉಪ್ಪನ್ನು ಹಾಕಿ ಗಂಟುಕಟ್ಟಿ ಈ ಗಂಟನ್ನು ನಿಮ್ಮ ಮನೆಯ ಪ್ರಧಾನ ಬಾಗಿಲಿನ ಮೇಲೆ ನೇತುಹಾಕಿ. ಈ ಮೂಲಕ ನಿಮ್ಮ ಮನೆಗೆ ಪ್ರವೇಶಿಸುವ ಯಾವುದೇ ಋಣಾತ್ಮಕ ಶಕ್ತಿಯಿಂದ ರಕ್ಷಣೆ ಪಡೆದಂತಾಗುತ್ತದೆ ಹಾಗೂ ನಿಮ್ಮ ಮನೆಯೊಳಗೆ ಸಮೃದ್ಧಿ ಹಾಗೂ ಶುಭಶಕುನಗಳನ್ನು ಆಹ್ವಾನಿಸಲು ಸಾಧ್ಯವಾಗುತ್ತದೆ.

ಊಟದ ಮೇಜಿನ ಮೇಲೆ ಸದಾ ಉಪ್ಪಿನ ಚಿಕ್ಕ ಭರಣಿ ಇಟ್ಟಿರಿ...

ಊಟದ ಮೇಜಿನ ಮೇಲೆ ಸದಾ ಉಪ್ಪಿನ ಚಿಕ್ಕ ಭರಣಿ ಇಟ್ಟಿರಿ...

ನಿಮ್ಮ ಮನೆಯ ಊಟದ ಮೇಜಿನ ಮೇಲೆ ಸದಾ ಉಪ್ಪಿನ ಚಿಕ್ಕ ಭರಣಿಯನ್ನು ಇರಿಸಿರುವ ಮೂಲಕ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ ಹಾಗೂ ಮನೆಯಲ್ಲಿ ಎಂದಿಗೂ ಹಣಕಾಸಿನ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ. ಈ ಪುಟ್ಟ ಉಪ್ಪಿನ ಭರಣಿಗೆ ಇಷ್ಟು ಶಕ್ತಿ ಇದೆಯೆಂದು ಅಚ್ಚರಿಯಾಗುತ್ತದಲ್ಲವೇ?

ಸ್ನಾನ ಮಾಡುವ ಮುನ್ನ

ಸ್ನಾನ ಮಾಡುವ ಮುನ್ನ

ಸ್ನಾನ ಮಾಡುವ ಮುನ್ನ ಬಾತ್ ಟಬ್ ನಲ್ಲಿರುವ ನೀರಿಗೆ ಒಂದು ಕಪ್ ಅಥವಾ ಎರಡು ಕಪ್ ಕಲ್ಲುಪ್ಪನ್ನು ಸೇರಿಸಿ ಕಲಕಿ ಈ ನೀರಿನಿಂದ ಸ್ನಾನ ಮಾಡುವ ಮೂಲಕ ದೇಹದಿಂದ ವಿಷಕಾರಿ ವಸ್ತುಗಳು ನಿವಾರಣೆಯಾಗಿ ತಾಜಾತನ ದೊರಕುತ್ತದೆ.

ಸ್ನಾನ ಮಾಡುವ ಮುನ್ನ

ಸ್ನಾನ ಮಾಡುವ ಮುನ್ನ

ಈ ನೀರಿನಲ್ಲಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ದೇಹವನ್ನು ಮುಳುಗಿಸಿಡಬೇಕು. ಇದರಿಂದ ದೇಹವನ್ನು ಆವರಿಸಿದ್ದ ಋಣಾತ್ಮಕ ಶಕ್ತಿಗಳೆಲ್ಲ ನೀರಿನಲ್ಲಿ ಕರಗಿ ಹೊರಹೋಗುತ್ತವೆ.

ಮನೆಯಲ್ಲಿ ಸುಖ, ಶಾಂತಿ ನೆಮ್ಮದಿಗಾಗಿ 'ವಾಸ್ತು' ಸೂತ್ರಗಳು

English summary

Kick Poverty Out Of Your House Using Salt!

Nobody wishes to have negative energy around them. It only increases the tension around them. What if we reveal to you a little magical trick, with which you can avoid negative energy around you as well as avoid poverty too? This little trick is nothing but using salt in different ways! Well, many researchers have claimed that one can get rid of negative energy around them and poverty by using salt tricks.
Subscribe Newsletter