ಅಚ್ಚರಿ!! ವ್ಯಕ್ತಿಯೊಬ್ಬರ ವ್ಯಕ್ತಿತ್ವವನ್ನು ಹೀಗೂ ತಿಳಿಯಬಹುದಂತೆ!

By Arshad
Subscribe to Boldsky

ಪ್ರತಿಯೊಬ್ಬರ ವ್ಯಕ್ತಿತ್ವವನ್ನು ಅವರ ಕೆಲವು ದೈಹಿಕ ಅಂಗಗಳು ಸಾದರಪಡಿಸುತ್ತವೆ ಎಂದು ಹೇಳಲಾಗಿದೆ. ಹಲ್ಲುಗಳ, ಉಗುರುಗಳ ಆಕಾರ, ಎತ್ತರ ಮೊದಲಾದವುಗಳನ್ನು ಕಂಡ ಪ್ರಥಮ ನೋಟದಲ್ಲಿಯೇ ಈ ವ್ಯಕ್ತಿ ಹೀಗೇ ಎಂಬ ಸ್ಥೂಲ ವಿವರಣೆಯನ್ನು ಪಡೆಯಬಹುದು.

ಅಂತೆಯೇ ಪ್ರಷ್ಠಭಾಗವೂ ವ್ಯಕ್ತಿತ್ವದ ಕನ್ನಡಿಯಂತಿರಬಾರದೇಕೆ? ಹೌದು, ಈ ಕಡೆಯಿಂದ ದೃಷ್ಟಿ ಹಾಯಿಸಿದರೂ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬಹುದು ಎಂದು ಇತ್ತೀಚಿನ ಅಧ್ಯಯನಗಳು ತಿಳಿಸುತ್ತಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ...

ಚೌಕಾಕಾರದ ಪ್ರಷ್ಠಭಾಗ

ಚೌಕಾಕಾರದ ಪ್ರಷ್ಠಭಾಗ

ಈ ವ್ಯಕ್ತಿಗಳು ಸಾಮಾನ್ಯವಾಗಿ ಸೋಮಾರಿಗಳಾಗಿರುತ್ತಾರೆ. ಚೌಕಾಕಾರ ಇನ್ನೂ ಹಲವು ವಿಷಯಗಳಿಗೆ ಮೂಲವಾಗಿದೆ. ಅಂದರೆ, ಈ ವ್ಯಕ್ತಿಗಳು ನಾಮಕಾವಾಸ್ತೆ ಕೊಂಚ ವ್ಯಾಯಾಮ ಮಾಡುತ್ತಿದ್ದರೂ ಇವರ ಆರೋಗ್ಯಕ್ಕೆ ಸಾಕಾಗುವಷ್ಟು ಖಂಡಿತಾ ಮಾಡುತ್ತಿಲ್ಲ. ಆದ್ದರಿಂದ ಈ ಆಕಾರದಿಂದ ಹೊರಬರಬೇಕಾದರೆ ಮೊದಲು ಇವರು ತಮ್ಮ ವ್ಯಾಯಾಮದ ಅವಧಿಯನ್ನು ಹೆಚ್ಚಿಸುವುದು ಅನಿವಾರ್ಯವಾಗಿರುತ್ತದೆ, ಹಾಗೂ ಜಡತ್ವದಿಂದ ಹೊರಬರಬೇಕಾಗುತ್ತದೆ. ಒಟ್ಟಾರೆ ಚೌಕಾಕಾರ ಎಂದರೆ ಆಲಸಿ ಎಂದು ಸ್ಥೂಲವಾಗಿ ಅರ್ಥೈಸಿಕೊಳ್ಳಬಹುದು.

ವೃತ್ತಾಕಾರದ ಪ್ರಷ್ಠಭಾಗ

ವೃತ್ತಾಕಾರದ ಪ್ರಷ್ಠಭಾಗ

ಈ ವ್ಯಕ್ತಿಗಳು ಉತ್ತಮ ಆರೋಗ್ಯ ಹೊಂದಿರುತ್ತಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಇವರಲ್ಲಿ ಹೆಚ್ಚಿನ ಧನಾತ್ಮಕ ಶಕ್ತಿ ಹರಿಯುತ್ತಿರುತ್ತದೆ ಹಾಗೂ ಇವರು ತಮ್ಮ ಸುತ್ತ ಮುತ್ತ ಸ್ನೇಹಮಯ ವಾತಾವರಣವನ್ನು ಹೊಂದಿರುತ್ತಾರೆ. ಇವರ ಇರುವಿಕೆಯಿಂದ ಸುತ್ತಮುತ್ತಲ ಹಾಗೂ ಸಂಬಂಧಿತ ವಿಷಯಗಳಿಗೆ ಹೆಚ್ಚಿನ ಮಹತ್ವ ಒದಗುತ್ತದೆ.

ಹೃದಯಾಕಾರದ ಪ್ರಷ್ಠಭಾಗ

ಹೃದಯಾಕಾರದ ಪ್ರಷ್ಠಭಾಗ

ಈ ಪರಿಯ ಆಕಾರ ಬೇಕು ಎಂಬುದೇ ಹೆಚ್ಚಿನವರ ಅಪೇಕ್ಷೆಯಾಗಿದ್ದು ಆತ್ಯುತ್ತಮವಾದ ಆಕಾರ ಎಂದು ಪರಿಗಣಿಸಲಾಗಿದೆ. ಈ ಆಕಾರ ಹೊಂದಿರುವ ವ್ಯಕ್ತಿಗಳು ಬುದ್ದಿವಂತರಾಗಿದ್ದು ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ಪ್ರಕಟಿಸಬಲ್ಲವರಾಗಿರುತ್ತಾರೆ. ಇವರು ಸಂದರ್ಭವನ್ನು ಧೈರ್ಯವಾಗಿ ಎದುರಿಸುವವರೂ ಹಾಗೂ ಸವಾಲುಗಳಿಗೆ ಎದೆಯೊಡ್ಡುವವರೂ ಆಗಿದ್ದಾರೆ.

 ವಿ-ಆಕಾರದ ಪ್ರಷ್ಠಭಾಗ

ವಿ-ಆಕಾರದ ಪ್ರಷ್ಠಭಾಗ

ಸಾಮಾನ್ಯವಾಗಿ ವೃದ್ದರಲ್ಲಿ ಈ ಆಕಾರ ಕಂಡುಬರುತ್ತದೆ. ವಯಸ್ಸಾಗುತ್ತಿದ್ದಂತೆಯೇ ಕುಗ್ಗುವ ಶರೀರ ಇದಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ಈ ವ್ಯಕ್ತಿಗಳು ಮಾನಸಿಕರಾಗಿ ಹೆಚ್ಚು ಸದೃಢರಾಗಿದ್ದು ಹಳೆಯ ಶರೀರದಲ್ಲಿ ತರುಣ ಮನಸ್ಸು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವವರೂ ಹಾಗೂ ಶಾಂತಿಯ ಪ್ರತಿಪಾದಕರೂ ಆಗಿದ್ದು ತಮ್ಮ ಸುತ್ತಮುತ್ತ ಸೌಹಾರ್ದತೆ, ಶಾಂತಿ ನೆಲೆಸಿರಲು ಶ್ರಮಿಸುತ್ತಾರೆ.

ಎ-ಆಕಾರದ ಪ್ರಷ್ಠಭಾಗ

ಎ-ಆಕಾರದ ಪ್ರಷ್ಠಭಾಗ

ಈ ವ್ಯಕ್ತಿಗಳು ತಮ್ಮ ನಿತ್ಯಜೀವನದ ಚಟುವಟಿಕೆಗಳಲ್ಲಿ ಹೆಚ್ಚು ಮಗ್ನರಾಗಿರುತ್ತಾರೆ. ಇವರಿಗೆ ತಮ್ಮ ಕುಟುಂಬವೇ ಸರ್ವಸ್ವವಾಗಿದ್ದು ತಮ್ಮ ಜೀವನದ ಗುರಿಯತ್ತ ಹೆಚ್ಚು ಗಮನ ಹರಿಸುತ್ತಾರೆ. ಇದೇ ಕಾರಣಕ್ಕೆ ಇವರು ಜೀವನದಲ್ಲಿ ಹೆಚ್ಚಿನ ಯಶಸ್ಸು ಸಾಧಿಸುತ್ತಾರೆ. ತಮಗೆ ಸಂಬಂಧಿಸಿದ ವಿಷಯಗಳಿಗೆ ಇವರು ತಲೆಹಾಕದೇ ತಮ್ಮ ಕೆಲಸಗಳಿಗೇ ಹೆಚ್ಚಿನ ಮಹತ್ವ ನೀಡುವವರಾಗಿರುತ್ತಾರೆ.

For Quick Alerts
ALLOW NOTIFICATIONS
For Daily Alerts

    English summary

    how-does-the-shape-of-your-butt-define-you

    From the shape of your nails to the shape of your teeth, one's personality can be defined by just having a look at these. So why forget the butt shape? This is why we are bringing to you some of the facts on how the shape of your butt can define your personality.These are the traits that help us understand a person by just looking at their physical or facial features. So, continue reading to know more on how the shape of a butt can reveal details of one's personality.
    Story first published: Tuesday, October 10, 2017, 23:50 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more