ಕಣ್ಣುಗುಡ್ಡೆಗಳ ಶೇವಿಂಗ್ ಚೀನಾದಲ್ಲಿದೆ ಈ ಅಪಾಯಕಾರಿ ಕ್ಷೌರ!

By: Arshad
Subscribe to Boldsky

ಕೇವಲ ಬ್ಲೇಡೊಂದನ್ನು ಬಳಸಿ ಗಡ್ಡ ಮೀಸೆಯನ್ನು, ಅಗತ್ಯಬಿದ್ದರೆ ತಲೆಯನ್ನೂ ಬೋಳಿಸುವ ನಾಪಿತ ಇದೇ ಉಪಕರಣಗಳಿಂದ ದೇಹದ ಅತ್ಯಂತ ಸೂಕ್ಷ್ಮವಾದ ಅಂಗವಾದ ಕಣ್ಣಿನ ಮೇಲೆ ತನ್ನ ಚಾಕಚಕ್ಯತೆ ತೋರಿಸಿದರೆ? ನಾವಾರೂ ಊಹಿಸದೇ ಇರುವ ಈ ಪರಿಯ ಕ್ಷೌರ ಚೀನಾದಲ್ಲಿ ನೂರಾರು ವರ್ಷಗಳಿಂದ ಪ್ರಚಲಿತದಲ್ಲಿದೆ.

ಆಡು ಮುಟ್ಟದ ಸೊಪ್ಪಿಲ್ಲ, ಚೀನೀಯರು ತಿನ್ನದ ಆಹಾರವಿಲ್ಲ!

ಚೀನಾದ ಹಳ್ಳಿಹಳ್ಳಿಗಳಲ್ಲಿ ಈ ನಾಪಿತರು ತಮ್ಮ ಉಪಕರಣಗಳೊಂದಿಗೆ ಹಳ್ಳಿಗರ ತಲೆಗೂದಲ ಜೊತೆಗೇ ಕಣ್ಣುಗಳ ಮೇಲೆ ಇರುವ ಕೊಳೆಯನ್ನೂ ನಿವಾರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಣ್ಣಿನ ಕ್ಷೌರದ ಒಂದು ವಿಡಿಯೋ ಸಾಮಾಜಿಕ ತಾಣದಲ್ಲಿ ಪ್ರಸಾರವಾಗಿದ್ದೇ ತಡ, ಈ ವಿದ್ಯಮಾನ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ....

ಈ ವಿಚಿತ್ರ ಸಂಪ್ರದಾಯದ ಉದ್ದೇಶವೇನು?

ಈ ವಿಚಿತ್ರ ಸಂಪ್ರದಾಯದ ಉದ್ದೇಶವೇನು?

ಚೀನೀಯರು ನಂಬಿಕೊಂಡು ಬಂದಿರುವ ಪ್ರಕಾರ ಕಣ್ಣುಗಳನ್ನು ಸ್ವಚ್ಛಗೊಳಿಸುವ ಮೂಲಕ ಈ ಸುಂದರ ಜಗತ್ತು ಹಾಗೂ ಜೀವನವನ್ನು ಇನ್ನಷ್ಟು ಚೆನ್ನಾಗಿ ಕಾಣಬಹುದು ಹಾಗೂ ಅರ್ಥಪೂರ್ಣವಾಗಿಸಬಹುದು. ಈ ಜಗತ್ತಿನಲ್ಲಿರುವ ಯಾವುದೇ ಸುಂದರ ವಸ್ತುಗಳಿಂದ ತಾವು ವಂಚಿತರಾಗಬಾರದು ಎಂದೇ ಜನರೇ ಸ್ವತಃ ತಮ್ಮ ಕಣ್ಣುಗಳನ್ನು ಈ ನಾಪಿತರ ಸುಪರ್ದಿಗೆ ಒದಗಿಸುತ್ತಾರೆ.

ಈ ವಿಧಾನದ ಹೆಸರು : “knife-blade Eye Cleaning”

ಈ ವಿಧಾನದ ಹೆಸರು : “knife-blade Eye Cleaning”

ಹರಿತವಾದ ಕತ್ತಿಯ ಅಲುಗನ್ನು ಕಣ್ಣುಗುಡ್ಡೆಗಳಿಗೆ ಹೆಚ್ಚಿನ ಒತ್ತಡ ಬೀಳದಂತೆ, ಆದರೆ ಅತಿ ಸೂಕ್ಷ್ಮವಾಗಿ ನವಿರಾಗಿ ಸವರುವಂತೆ ಒರೆಸುವ ಮೂಲಕ ಕಣ್ಣುಗುಡ್ಡೆಗಳ ಮೇಲೆ ಇರುವ ಕೊಳೆ ಹಾಗೂ ಪೊರೆಯನ್ನು ನಿವಾರಿಸಲಾಗುತ್ತದೆ ಎಂದು ಈ ನಾಪಿತರು ತಿಳಿಸುತ್ತಾರೆ. ಈ ಕ್ರಿಯೆಗೆ ಬಳಸಲಾಗುವ ಕತ್ತಿ ಅತ್ಯಂತ ಹರಿತವಾಗಿರುವುದು ಅಗತ್ಯ ಎಂದೂ ಅವರು ತಿಳಿಸುತ್ತಾರೆ.

ಸಹೋದರರಿಬ್ಬರಿಂದ ಈ ಕ್ರಿಯೆಗೆ ಸಿಕ್ಕ ಪ್ರಚಾರ

ಸಹೋದರರಿಬ್ಬರಿಂದ ಈ ಕ್ರಿಯೆಗೆ ಸಿಕ್ಕ ಪ್ರಚಾರ

ಝೌ ಚೆಂಗ್ಫು ಹಾಗೂ ಝೌ ಚೆಂಗ್ಯಿನ್ ಎಂಬ ಇಬ್ಬರು ಸಹೋದರರು ಈ ವಿದ್ಯೆಯನ್ನು ತಮ್ಮ ತಂದೆಯಿಂದ ಕಲಿತು ಬಂದಿದ್ದು ಈ ವಿದ್ಯೆಯಲ್ಲಿ ಪರಿಣಿತಿ ಸಾಧಿಸಿದ್ದಾರೆ. ತಮ್ಮ ವಿದ್ಯೆಯಿಂದ ಇವರು ಶೀಘ್ರದಲ್ಲಿಯೇ ಹೆಚ್ಚಿನ ಗ್ರಾಹಕರನ್ನು ಪಡೆದಿದ್ದು ಅವಸಾನದಲ್ಲಿದ್ದ ಈ ವಿದ್ಯೆಗೆ ಹೆಚ್ಚಿನ ಪ್ರಚಾರ ಸಿಗುವಂತೆ ಮಾಡಿದ್ದಾರೆ. ಇವರು ಕಣ್ಣುಗಳನ್ನು ಮಾತ್ರವಲ್ಲ, ಕಿವಿ, ಕುತ್ತಿಗೆಯ ಮೇಲಿರುವ ಕೂದಲು-ಕೊಳೆಯನ್ನೂ ನಿವಾರಿಸಿ ಹೆಚ್ಚಿನ ಸೇವೆ ಒದಗಿಸುತ್ತಿದ್ದಾರೆ.

ಈ ವಿಧಾನ ಈಗ ಜನಜನಿತವಾಗಿದೆ

ಈ ವಿಧಾನ ಈಗ ಜನಜನಿತವಾಗಿದೆ

ಕಣ್ಣುಗುಡ್ಡೆಗಳನ್ನು ಹರಿತ ಕತ್ತಿಯಿಂದ ಹೆರೆಯುವ ಈ ವಿಚಿತ್ರ ವಿಧಾನದ ವಿಡಿಯೋ ಸಾಮಾಜಿಕ ತಾಣದಲ್ಲಿ ವಿಶ್ವದ ಜನರ ಗಮನ ಸೆಳೆದಿದೆ. ಅದರಲ್ಲೂ ಕೆಲವು ನಾಪಿತರು ತಮ್ಮ ಕೊಳಕು ಕೈಗಳಿಂದಲೇ ಸೂಕ್ಷ್ಮವಾದ ಕಣ್ಣುಗಳನ್ನು ತಮ್ಮ ಹಳೆಯ, ತೊಳೆದಿರದ ಉಪಕರಣವನ್ನು ಬಳಸಿ ಸೇವೆ ನೀಡುತ್ತಿರುವುದು ಅಸಹ್ಯ ಹುಟ್ಟಿಸುವುದಲ್ಲದೇ ಸೋಂಕು ಹರಡಲಾರದೇ ಎಂಬ ಪ್ರಶ್ನೆಯನ್ನೂ ವ್ಯಕ್ತಪಡಿಸುತ್ತಾರೆ. ಚಿತ್ರದಲ್ಲಿ ನೋಡಿದರೆ ಈ ನಾಪಿತ ಕಣ್ಣುಗುಡ್ಡೆಗಳನ್ನು ಹೆರೆಯುತ್ತಿರುವುದನ್ನು ಸ್ಪಷ್ಟವಾಗಿ ಕಾಣುತ್ತದೆ.

ಈ ನಾಪಿತರಿಗೆ ಈ ವಿದ್ಯೆ ಆದಾಯ ಗಳಿಕೆಗೆ ಮೂಲವಾಗಿದೆ

ಈ ನಾಪಿತರಿಗೆ ಈ ವಿದ್ಯೆ ಆದಾಯ ಗಳಿಕೆಗೆ ಮೂಲವಾಗಿದೆ

ಈ ಸೇವೆಗೆ ಅಲ್ಪಮಾತ್ರದ ಸಂಭಾವನೆಯನ್ನು ಪಡೆದರೂ ಹೆಚ್ಚು ಹೆಚ್ಚು ಜನರು ಈ ಸೇವೆ ಪಡೆಯಲು ಮುಂದೆ ಬರುತ್ತಿರುವ ಕಾರಣ ತಮ್ಮ ಆದಾಯ ಉತ್ತಮವೇ ಇದೆ ಎಂದು ಈ ನಾಪಿತರು ತಿಳಿಸುತ್ತಾರೆ. ಒಮ್ಮೆ ಸೇವೆ ಪಡೆದವರು ಪ್ರತಿ ತಿಂಗಳೂ ಈ ಸೇವೆ ಪಡೆಯಲು ಉತ್ಸುಕರಾಗಿರುವುದು ಮಾತ್ರವಲ್ಲದೇ ಇತರರಿಗೂ ತಿಳಿಸುವ ಮೂಲಕ ಹೊಸ ಹೊಸ ಗ್ರಾಹಕರು ಸಿಗುವಂತೆ ಮಾಡುತ್ತಿರುವ ಕಾರಣ ಈ ನಾಪಿತರ ಆದಾಯ ದಿನೇ ದಿನೇ ಹೆಚ್ಚುತ್ತಿದೆ.

ಇವರು ಕಣ್ಣುಗುಡ್ಡೆಗಳನ್ನು ಹೇಗೆ ಹೆರೆಯುತ್ತಾರೆ?

ಇವರು ಕಣ್ಣುಗುಡ್ಡೆಗಳನ್ನು ಹೇಗೆ ಹೆರೆಯುತ್ತಾರೆ?

ಒಂದು ವರದಿಯಲ್ಲಿ ಪ್ರಕಟವಾದ ಪ್ರಕಾರ ಈ ನಾಪಿತರು ಕಣ್ಣುಗುಡ್ಡೆಗಳಿಗೆ ಹರಿತವಾದ ಉಪಕರಣವನ್ನು ತಾಕಿಸುವ ಮುನ್ನ ನೀರಿನಲ್ಲಿ ಅದ್ದುತ್ತಾರೆ. ಬಳಿಕ ಎಡಗೈಯಿಂದ ಗ್ರಾಹಕನ ಕಣ್ಣನ್ನು ಅಗಲವಾಗಿ ತೆರೆದು ಕಣ್ಣುಗುಡ್ಡೆಯ ಮೇಲೆ ಮೇಲಿನಿಂದ ಕೆಳಕ್ಕೆ, ಅಡ್ಡಲಾಗಿ ಹಾಗೂ ಕಣ್ಣುರೆಪ್ಪೆಗಳ ಒಳಭಾಗದಲ್ಲಿಯೂ ಓಡಿಸುತ್ತಾರೆ. ಬಳಿಕ ಇದೇ ಕ್ರಮ ಇನ್ನೊಂದು ಕಣ್ಣಿಗೂ ಅನುಸರಿಸಲಾಗುತ್ತದೆ. ಗ್ರಾಹಕನಿಗಿಂತಲೂ ಓದುತ್ತಿರುವ ನಿಮಗೇ ಹೆಚ್ಚು ನೋವಾಗುತ್ತಿರುವಂತೆ ಅನ್ನಿಸುತ್ತಿದೆಯಲ್ಲವೇ?

ಈ ಸೇವೆ ಅಷ್ಟಕ್ಕೇ ಮುಗಿಯುವುದಿಲ್ಲ...

ಈ ಸೇವೆ ಅಷ್ಟಕ್ಕೇ ಮುಗಿಯುವುದಿಲ್ಲ...

ವರದಿಯಲ್ಲಿ ವಿವರಿಸಿರುವ ಪ್ರಕಾರ ನಾಪಿತ ಕಣ್ಣುಗಳನ್ನು ಹೆರೆದು ಆದ ಬಳಿಕ ಗ್ರಾಹಕನ ಮೇಲಿನ ಕಣ್ಣುರೆಪ್ಪೆಯನ್ನು ಹೊರಗೆಳೆದು ಇದರ ಅಡಿಯಲ್ಲಿ ಉಪಕರಣವನ್ನು ಕಾರಿನ ಗಾಜಿನ ಮೇಲಿನ ವೈಪರ್ ಒರೆಸುವಂತೆ ಓಡಾಡಿಸುತ್ತಾನೆ. ಬಳಿಕ ಕಣ್ಣಿನ ಕೆಳರೆಪ್ಪೆಗೂ ಇದೇ ರೀತಿಯ ಸೇವೆ ಸಿಗುತ್ತದೆ.

ಬಳಿಕ ಇನ್ನೊಂದು ಕಣ್ಣಿಗೂ ಇದೇ ಸೇವೆ ದೊರಕುತ್ತದೆ. ಒಟ್ಟಾರೆ ಎರಡೂ ಕಣ್ಣುಗಳ ಪೂರ್ಣ ಸ್ವಚ್ಛತೆಗೆ ಇವರು ತೆಗೆದುಕೊಳ್ಳುವುದು ಸರಿಸುಮಾರು ಐದು ನಿಮಿಷಗಳು ಮಾತ್ರ. ಅಷ್ಟು ಹೊತ್ತಿಗಾಗಲೇ ಗ್ರಾಹಕನ ಕಣ್ಣುಗಳು ಕಣ್ಣೀರಿನಿಂದ ತುಂಬಿದ್ದು ಕೆನ್ನೆಯ ಮೂಲಕ ಹರಿಯುತ್ತಿರುತ್ತದೆ. ವಿಚಿತ್ರ, ಅಪಾಯಕರ ವಿಧಾನ ಎಂಬೆಲ್ಲಾ ಯೋಚನೆಗಳು ನಿಮ್ಮಲ್ಲಿಯೂ ಮೂಡಿರಬಹುದಲ್ಲವೇ. ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸುವ ಮೂಲಕ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ.

All Images Source

English summary

Heard Of “Eyeball Shaving”? Know Why It Is A Trend In China

Can you imagine a barber, using a blade to shave your head and beard, can also use the same to shave your eyes? Sounds insane, right? But this is a weird age-old practice that is being followed in China. There are many Chinese barbers who offer 'eyeball shaving' and this practice is something that continues to shock the world today. Check out more on this bizarre practice, which got its fame after a video of a barber cleaning the eyeballs went viral!
Subscribe Newsletter