For Quick Alerts
ALLOW NOTIFICATIONS  
For Daily Alerts

ಈ ಮಸಾಜ್ ಪಾರ್ಲರ್‌ನಲ್ಲಿ ಹಾವುಗಳೇ ಮಸಾಜ್ ಮಾಡುತ್ತವಂತೆ!

By Arshad
|

ಹಿತವಾದ ಒತ್ತಡದಿಂದ ದೇಹಕ್ಕೆ ನೀಡುವ ಮಸಾಜ್ ಅಥವಾ ಉಜ್ಜುವಿಕೆಯಿಂದ ಆ ಭಾಗದಲ್ಲಿ ರಕ್ತಸಂಚಾರ ಹೆಚ್ಚುತ್ತದೆ ಹಾಗೂ ಇದು ಹಲವಾರು ತೊಂದರೆಗಳಿಗೆ ಪರಿಹಾರ ನೀಡುತ್ತದೆ. ಇದರೊಂದಿಗೆ ಕೊಂಚ ಬಿಸಿ ಎಣ್ಣೆ ಬಳಸಿದರೆ ಮಸಾಜ್ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈ ವಿಧಾನವನ್ನು ಆಯುರ್ವೇದ ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದು ಹಲವಾರು ಅಭ್ಯಂಜನಗಳನ್ನು ಪರಿಚಯಿಸಿದೆ. ಮಸಾಜ್ ಮೂಲಕ ಸ್ನಾಯುಗಳು ಸಡಿಲಗೊಳ್ಳುವುದು ಮಾತ್ರವಲ್ಲ ಮನಸ್ಸು ಸಹಾ ನಿರಾಳವಾಗುತ್ತದೆ.

ಮಸಾಜ್‌ಗಳಲ್ಲಿ ಹಲವಾರು ವಿಧಗಳಿವೆ. ಸರಳವಾಗಿ ಕೈಗಳಿಂದ ಬಿಸಿಎಣ್ಣೆಯನ್ನು ಹಚ್ಚುವುದರಿಂದ ತೊಡಗಿ ಮೈಭಾರವನ್ನೇ ಬಳಸಿ ಪಾದಗಳಿಂದ ಮಸಾಜ್ ಮಾಡುವ ವಿಧಾನವೂ ಇದೆ. ಇತ್ತೀಚಿನ ದಿನಗಳಲ್ಲಿ ಚಿತ್ರ ವಿಚಿತ್ರ ವಿಧಾನಗಳನ್ನೂ ಪರಿಚಯಿಸಲಾಗುತ್ತಿದ್ದು ಕೆಲವು ಭಯಹುಟ್ಟಿಸುವಂತಿವೆ. ಇದರಲ್ಲಿ ಪ್ರಮುಖವಾದುದು ಹಾವುಗಳನ್ನು ಬಳಸಿ ಮಾಡುವ ಮಸಾಜ್!

ಅಚ್ಚರಿ ಜಗತ್ತು: ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಏನರ್ಥ ಗೊತ್ತೇ?

ಮೈಮೇಲೆ ಹಾವುಗಳು ಹರಿದಾಡುತ್ತಿದ್ದರೆ ಇವುಗಳು ಚಲನೆಗಾಗಿ ಬಳಸುವ ಚಿಕ್ಕ ಚಿಕ್ಕ ಒತ್ತಡಗಳೇ ಶರೀರಕ್ಕೆ ಅಹ್ಲಾದತೆ ನೀಡುತ್ತದೆ ಎಂದು ಇವುಗಳ ಸೇವೆ ಪಡೆದವರು ತಿಳಿಸುತ್ತಾರೆ. ಪರಿಣಾಮವಾಗಿ ಅತಿ ಹೆಚ್ಚು ನಿರಾಳತೆ ಲಭ್ಯವಾಗುತ್ತದಂತೆ. ಹಾವುಗಳನ್ನು ಮೈಮೇಲೆ ಓಡಾಡಿಸಿ ಹಣ ಮಾಡುತ್ತಿರುವ ಈ ಸ್ಪಾ ಗಳ ಬಗ್ಗೆ ಅರಿಯೋಣ...

ಮಸಾಜ್ ವಿಧಾನದಲ್ಲಿಯೇ ಇದು ಹೊಸತು

ಮಸಾಜ್ ವಿಧಾನದಲ್ಲಿಯೇ ಇದು ಹೊಸತು

ಇಂಡೋನೇಶಿಯಾ ಮತ್ತು ಥಾಯ್ಲೆಂಡ್ ದೇಶಗಳಲ್ಲಿ ಗ್ರಾಹಕರನ್ನು ಸೆಳೆಯಲು ಹಾಗೂ ಭಿನ್ನವಾದ ಮಸಾಜ್ ನೀಡಲು ಹಾವುಗಳನ್ನು ಬಳಸಲಾಗುತ್ತಿದೆ. ಈ ಹಾವುಗಳಲ್ಲಿ ಪುಟ್ಟ ಹಸಿರು ಹಾವಿನಿಂದ ತೊಡಗಿ ದೊಡ್ಡ ಹೆಬ್ಬಾವುಗಳನ್ನೂ ಬಳಸಲಾಗುತ್ತದೆ. ಇದು ತಮಾಷೆಯ ಸಂಗತಿಯಲ್ಲ, ನಿಜವಾಗಿಯೂ ಗ್ರಾಹಕರ ಶರೀರದ ಮೇಲೆ ಜೀವಂತ ಹಾವುಗಳು ಹರಿದಾಡುವಂತೆ ಮಾಡಲಾಗುತ್ತದೆ, ಇದಕ್ಕಾಗಿ ಈ ಸ್ಪಾ ಗಳು ಕಾನೂನುಬದ್ಧವಾದ ಲೈಸನ್ಸ್ ಸಹಾ ಪಡೆದುಕೊಂಡಿವೆ.

ಹಾವು ಕಚ್ಚಿದರೆ, ಕೂಡಲೇ ಈ ಟಿಪ್ಸ್ ಅನುಸರಿಸಿ ವ್ಯಕ್ತಿಯ ಪ್ರಾಣ ಉಳಿಸಿ

ಇದೊಂದು ಹುಚ್ಚುತನದ ಪರಮಾವಧಿಯೇ?

ಇದೊಂದು ಹುಚ್ಚುತನದ ಪರಮಾವಧಿಯೇ?

ನಮಗೆ ಇದು ಹುಚ್ಚುತನದ ಪರಮಾವಧಿ ಎಂದು ಅನ್ನಿಸಿದರೂ ಈ ದೇಶಗಳಲ್ಲಿ ಗ್ರಾಹಕರನ್ನು ಸೆಳೆಯುವ ಹೊಸ ಉಪಾಯವೇ ಆಗಿದೆ. ಗ್ರಾಹಕರ ಮೈ ಮೇಲೆ ಹಾವು ಹರಿದಾಡುತ್ತಾ ಹೋಗಬೇಕಾದರೆ ಹಾವಿನ ಶರೀರದ ಕೆಳಭಾಗ ಗ್ರಾಹಕರ ಚರ್ಮವನ್ನು ನಿಧಾನವಾಗಿ ಚಿವುಟಿದಂತೆ ಮಾಡಿ ಹಿಮ್ಮೆಟ್ಟಿಸುವ ಮೂಲಕ ಭಿನ್ನವಾದ ಪ್ರಕಾರದ ಮಸಾಜ್ ದೊರಕುತ್ತದಂತೆ. ಗ್ರಾಹಕರ ಶರೀರದ ಗಾತ್ರ ಹಾಗೂ ಅವರ ಬಯಕೆಗೆ ಅನುಗುಣವಾಗಿ ಬೇರೆ ಬೇರೆ ಜಾತಿಯ ಹಾವುಗಳನ್ನು ಇವರ ಮೈಮೇಲೆ ಓಡಿಸುತ್ತಾರೆ.

ಆದರೆ ಈ ಹಾವುಗಳು ವಿಷಕಾರಿಯಲ್ಲ

ಆದರೆ ಈ ಹಾವುಗಳು ವಿಷಕಾರಿಯಲ್ಲ

ಈ ಸೇವೆ ನೀಡಲು ಬಳಸಲಾಗುವ ಹಾವುಗಳು ವಿಷಕಾರಿಯಾಗಿರುವುದಿಲ್ಲ. ಒಂದು ವೇಳೆ ವಿಷಕಾರಿ ಹಾವನ್ನು ಬಳಸಲಾಗಿದ್ದರೂ ಇವುಗಳ ವಿಷವನ್ನು ಮೊದಲೇ ತೆಗೆದು ನಿರಪಾಯಕಾರಿಯಾಗಿಸಲಾಗುತ್ತದೆ. ಇವುಗಳನ್ನು ಸುಮ್ಮನೇ ಗ್ರಾಹಕರ ಮೈಮೇಲೆ ಓಡಿಸುವಂತೆ ಮಾಡಿದರೆ ಆಯಿತು. ಈ ವಿಧಾನದ ಬಗ್ಗೆ ಕುತೂಹಲಗೊಂಡ ಕೆಲವು ತಜ್ಞರು ಈ ವಿಧಾನದ ಬಗ್ಗೆ ಸಂಶೋಧನೆಯನ್ನೂ ನಡೆಸಿದ್ದು ಹಾವುಗಳ ಓಡಾಟದಿಂದ ನಿಜಕ್ಕೂ ದೇಹಕ್ಕೆ ಭಿನ್ನವಾದ ಮಸಾಜ್ ದೊರಕುತ್ತದೆ ಎಂದು ವಿವರಿಸಿದ್ದಾರೆ.

ಈ ವಿಧಾನ ನಿಜಕ್ಕೂ ಚೇತೋಹಾರಿ

ಈ ವಿಧಾನ ನಿಜಕ್ಕೂ ಚೇತೋಹಾರಿ

ಹಾವುಗಳು ಮೈಮೇಲೆ ಓಡಾಡಿದ ಕೆಲವೇ ನಿಮಿಷಗಳಲ್ಲಿ ತಮ್ಮ ದೇಹ ಚೇತೋಹಾರಿಯಾಗಿದೆ ಎಂದು ಈ ಸೇವೆ ಪಡೆದವರು ತಿಳಿಸಿದ್ದಾರೆ. ತಮ್ಮ ದೇಹದಲ್ಲಿರುವ ನೋವು ಸಹಾ ಮಾಯವಾಗಿದೆ, ಇಡಿಯ ದೇಹ ನಿರಾಳವಾಗಿ ಚೇತೋಹಾರಿಯಾಗುವುದರ ಜೊತೆಗೇ ಮನಸ್ಸು ಸಹಾ ಒತ್ತಡರಹತವಾಗಿದೆ ಎಂದು ತಿಳಿಸುತ್ತಾರೆ.

ಈ ಸ್ಪಾ ಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ

ಈ ಸ್ಪಾ ಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ

ದಿನೇ ದಿನೇ ಈ ಸ್ಪಾಗಳು ಇಂಡೋನೇಶಿಯಾ ಹಾಗೂ ಥಾಯ್ಲೆಂಡ್ ಗಳಲ್ಲಿ ಜನಪ್ರಿಯವಾಗುತ್ತಿದ್ದು ನಿಧಾನವಾಗಿ ವಿಶ್ವದ ಇತರ ಕಡೆಗಳಿಗೂ ಹರಡುತ್ತಿದೆ. ಈ ವಿಭಿನ್ನ ರೀತಿಯ ಮಸಾಜ್ ಪಡೆಯಲು ಹೆಚ್ಚಿನವರು ಉತ್ಸುಕರಾಗಿದ್ದು ಕೆಲವೇ ದಿನಗಳಲ್ಲಿ ಭಾರತಕ್ಕೂ ಬಂದರೂ ಆಶ್ಚರ್ಯವಿಲ್ಲ.

 ಫಿಲಿಪ್ಪೀನ್ಸ್ ನಲ್ಲಿರುವ ಪ್ರಾಣಿಸಂಗ್ರಹಾಲಯದಲ್ಲಿ ಈ ವಿಧಾನವನ್ನೂ ಅನುಸರಿಸಲಾಗುತ್ತಿದೆ

ಫಿಲಿಪ್ಪೀನ್ಸ್ ನಲ್ಲಿರುವ ಪ್ರಾಣಿಸಂಗ್ರಹಾಲಯದಲ್ಲಿ ಈ ವಿಧಾನವನ್ನೂ ಅನುಸರಿಸಲಾಗುತ್ತಿದೆ

ಫಿಲಿಪ್ಪೀನ್ಸ್ ದೇಶದಲಿರುವ ಸೆಬೂ ನಗರದ ಪ್ರಾಣಿಸಂಗ್ರಹಾಲಯದಲ್ಲಿ ಗ್ರಾಹಕರ ಮೈಮೇಲೆ ಹಾವುಗಳನ್ನು ಚಲಿಸುವಂತೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ.ವಾಸ್ತವವಾಗಿ ಪ್ರಾಣಿ ಸಂಗ್ರಹಾಲಯಕ್ಕೆ ಜನರನ್ನು ಹೆಚ್ಚು ಹೆಚ್ಚಾಗಿ ಕರೆತರಲೆಂದೇ ಈ ವಿಧಾನವನ್ನು ಪುಕ್ಕಟೆಯಾಗಿ ನೀಡಲಾಗುತ್ತಿದೆ. ಆದರೆ ಉಳಿದ ಕಡೆ ಈ ಸ್ಪಾಗಳ ಸೇವೆ ಪಡೆಯಲು ದುಬಾರಿ ವೆಚ್ಚ ನೀಡಬೇಕಾಗುತ್ತದೆ.

ಈ ಸ್ಪಾದಲ್ಲಿ ಯಾವ ರೀತಿಯ ಸೇವೆ ನೀಡಲಾಗುತ್ತದೆ?

ಈ ಸ್ಪಾದಲ್ಲಿ ಯಾವ ರೀತಿಯ ಸೇವೆ ನೀಡಲಾಗುತ್ತದೆ?

ಈ ಸ್ಪಾದಲಿ ಮೊದಲು ಬಿದಿರಿನ ಮಂಚದ ಮೇಲೆ ಗ್ರಾಹಕ ಅಂಗಾತನೆ ಮಲಗಿಕೊಳ್ಳುವಂತೆ ಸೂಚಿಸಲಾಗುತ್ತದೆ. ಇವರ ಬೆನ್ನಿನ ಮೇಲೆ ಹೆಬ್ಬಾರು ಅಥವಾ ಬೇರೆ ಹಾವುಗಳನ್ನು ಅವುಗಳ ಪಂಜರದಿಂದ ಹೊರತೆಗೆದು ಗ್ರಾಹಕರ ಮೈಮೇಲೆ ಹರಿಯುವಂತೆ ಮಾಡಲಾಗುತ್ತದೆ. ಪ್ರತಿಬಾರಿ ಒಂದು ಅಥವಾ ಹೆಚ್ಚು ಹಾವುಗಳನ್ನೂ ಬಳಸಬಹುದು. ಈ ಹಾವುಗಳ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಹಾವುಗಳ ಚಲನೆಯನ್ನು ಗ್ರಾಹಕರ ಮೈಮೇಲೆ ಬರುವಂತೆ ನಿಯಂತ್ರಿಸಲಾಗುತ್ತದೆ.

ಕೆಲವು ಹೆಬ್ಬಾವುಗಳು 250 ಕೇಜಿಗೂ ಹೆಚ್ಚು ತೂಕ ಇವೆ

ಕೆಲವು ಹೆಬ್ಬಾವುಗಳು 250 ಕೇಜಿಗೂ ಹೆಚ್ಚು ತೂಕ ಇವೆ

ಕೆಲವು ಹೆಬ್ಬಾವುಗಳು ಎರಡೂವರೆ ಕ್ವಿಂಟಾಲಿಗೂ ಹೆಚ್ಚು ತೂಕ ಹೊಂದಿದ್ದು ಒಮ್ಮೆ ಇವುಗಳು ಗ್ರಾಹಕರ ಮೈಮೇಲೆ ಕುಳಿತುಕೊಂಡ ಬಳಿಕ ಇವುಗಳಿಂದ ಮಸಾಜ್ ಪೂರ್ಣವಾಗುವವರೆಗೂ ಬಿಡುಗಡೆ ಇಲ್ಲ. ಈ ಭಾರೀ ತೂಕವನ್ನು ಹೊತ್ತ ಹೆಬ್ಬಾವು ನಿಧಾನವಾಗಿ ತೆವಳುವಾಗ ಇವುಗಳ ದೇಹದ ಕೆಳಭಾಗ ಚರ್ಮವನ್ನು ಹಿಂದಕ್ಕೊಂತ್ತುವ ಮೂಲಕ ಗ್ರಾಹಕರ ಶರೀರ ಹೆಚ್ಚಿನ ಮಸಾಜ್ ಪಡೆಯುತ್ತದೆ. ಇದರೊಂದಿಗೆ ಕಚಗುಳಿಯಾಗುವ ಸಂವೇದನೆಯಿಂದ ದೊರಕುವುದು ಮಾತ್ರ ಬೋನಸ್!

ಈ ವಿಧಾನ ದುರ್ಬಲಹೃದಯದವರಿಗಲ್ಲ!

ಈ ವಿಧಾನ ದುರ್ಬಲಹೃದಯದವರಿಗಲ್ಲ!

ಹಾವು ಎಂದರೆ ಸಾವು ಎಂದೇ ನಂಬಿರುವ ಹೆಚ್ಚಿನವರಿಗೆ ಈ ವಿಧಾನ ಪಡೆದುಕೊಳ್ಳುವುದು ಪ್ರಾರಂಭದಲ್ಲಿ ಭಾರೀ ಕಷ್ಟವಾಗಬಹುದು. ಏಕೆಂದರೆ ಹಾವು ಎದುರಿಗಿದ್ದರೇ ಸಾಕು ಇವರ ದೇಹದಲ್ಲಿ ಭಯದ ಅಲೆಗಳು ಹುಟ್ಟುತ್ತವೆ. ಚಿಕಿತ್ಸೆ ಪ್ರಾರಂಭವಾದ ಬಳಿಕ ಎಷ್ಟೇ ಭಯವಾದರೂ ಕೂಗಿಕೊಳ್ಳುವಂತಿಲ್ಲ, ಎದ್ದು ಓಡುವಂತಿಲ್ಲ, ಕೊಡಕುವಂತಿಲ್ಲ, ಇವೆಲ್ಲಾ ಈ ಸ್ಪಾ ಗಳ ನಿಯಮಗಳಾಗಿವೆ. ಏಕೆಂದರೆ ಯಾವಾಗ ಗ್ರಾಹಕ ಭಯದಿಂದ ಕಂಪಿಸಲು ತೊಡಗುತ್ತಾನೆಯೋ ಆಗ ಹಾವು ಗ್ರಾಹಕನನ್ನು ತನ್ನ ಆಹಾರವೆಂದು ಅಥವಾ ತನ್ನನ್ನು ಆಹಾರವಾಗಿ ಪರಿಗಣಿಸುವ ಶತ್ರುವೆಂದು ಪರಿಗಣಿಸುವ ಅಪಾಯವಿದೆ!

ಮನೆಯಂಗಳದಲ್ಲಿ ಹಾವುಗಳ ಕಾಟವೇ? ಈ ಗಿಡಗಳನ್ನು ನೆಡಿ, ಹಾವು ಬರುವುದಿಲ್ಲ

English summary

Heard About The Spa Where Snakes Give A Massage?

There are different massages and therapies that have come up as the latest trends. But amidst this, do you know that there have been people who have been using snakes for massages? This is something unique, as it is believed that snakes crawling over the body of the customer makes them feel highly relaxed. Check out more on these unique spas that offer massages with snakes.
X
Desktop Bottom Promotion