Latest Updates
-
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ!
ಈತ 33 ದಿನಗಳಿಂದಲೂ, ಸ್ನಾನ ಮಾಡದೇ ಬಿಂದಾಸ್ ಆಗಿದ್ದನಂತೆ!
ಕಳೆದ 33 ದಿನಗಳಿಂದ ಸ್ನಾನ ಮಾಡದೆ ಇರುವ ವ್ಯಕ್ತಿಗೆ ರೆಡ್ಡಿಟ್‌ನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಆತ ಯಾವ ರೀತಿಯಿಂದ ಉತ್ತರಿಸಿದ್ದಾನೆಂದು ನೀವು ತಿಳಿದುಕೊಳ್ಳಿ.
ದೇಹವನ್ನು ಸ್ವಚ್ಛವಾಗಿಟ್ಟುಕೊಂಡರೆ ಹಲವಾರು ರೀತಿಯ ರೋಗಗಳು ದೂರ ಹೋಗುತ್ತದೆ. ಇದರಲ್ಲಿ ಪ್ರತಿದಿನ ಸ್ನಾನ ಮಾಡುವುದು ಕೂಡ ಸೇರಿದೆ. ದಿನಂಪ್ರತಿ ಸ್ನಾನ ಮಾಡಿದರೆ ಅದರಿಂದ ದೇಹದ ಕೊಳಕು ದೂರವಾಗುತ್ತದೆ. ಸಹಜವಾಗಿ ಹೆಚ್ಚಿನವರು ಪ್ರತೀ ದಿನ ಸ್ನಾನ ಮಾಡುತ್ತಾರೆ. ಆದರೆ ನಮ್ಮದೇ ರಾಜ್ಯದ ಆಸಾಮಿಯೊಬ್ಬ ಕಳೆದ 33 ದಿನಗಳಿಂದ ಸ್ನಾನವೇ ಮಾಡಿಲ್ಲವಂತೆ. ಇದನ್ನು ಕೇಳಿ ನಿಮ್ಮ ಕಿವಿ ನೆಟ್ಟಗಾಗಬಹುದು. ಯಾಕೆಂದರೆ ಇಂತಹ ಮನುಷ್ಯರು ಇದ್ದಾರೆಯಾ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇಂತಹ ಜನರೂ ಜಗತ್ತಿನಲ್ಲಿ ಇದ್ದಾರೆಯೇ? ಅಚ್ಚರಿಯಾಗುತ್ತಿದೆ!!
ಇದು ನಿಜ. ಕಳೆದ 33 ದಿನಗಳಿಂದ ಆತ ಸ್ನಾನ ಮಾಡದೆ ಇರಲು ಕಾರಣವೇನು ಮತ್ತು ಆತನಿಗೆ ಸ್ನಾನ ಮಾಡದೆ ಕುಳಿತುಕೊಳ್ಳಲು ಹೇಗೆ ಸಾಧ್ಯವಾಯಿತು ಎನ್ನುವ ಬಗ್ಗೆ ಹೊಸ ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಅನುಭವವನ್ನು ಕೇಳಲಾಗಿದೆ. ಕಳೆದ 33 ದಿನಗಳಿಂದ ಸ್ನಾನ ಮಾಡದೆ ಇರುವ ವ್ಯಕ್ತಿಗೆ ರೆಡ್ಡಿಟ್‌ನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಆತ ಯಾವ ರೀತಿಯಿಂದ ಉತ್ತರಿಸಿದ್ದಾನೆಂದು ನೀವು ತಿಳಿದುಕೊಳ್ಳಿ...

ರೆಡ್ಡಿಟ್ ಬಳಕೆದಾರ: ನೀವು ಹೀಗೆ ಯಾಕೆ ಮಾಡಿದ್ದೀರಿ?
ಉತ್ತರ: ನಾನು ತುಂಬಾ ಉದಾಸೀನದ ವ್ಯಕ್ತಿ ಮತ್ತು ಹಾಸ್ಟೆಲ್‌ನಲ್ಲಿ ವಾಸಿಸುವಾತ. ಸ್ನಾನ ಮಾಡುವುದು ನನಗೊಂದು ಚಿಲ್ಲರೆ ಕೆಲಸ. ನಲ್ಲಿಯಲ್ಲಿ ಕೇವಲ ತಣ್ಣೀರು ಮಾತ್ರ ಬರುವ ಕಾರಣದಿಂದ ಕೋಣೆಯ ಹೊರಗಿನಿಂದ ಬಿಸಿ ನೀರನ್ನು ತರಬೇಕಾಗುತ್ತದೆ. ಸ್ನಾನ ಮಾಡುವಾಗ ಕೆಲವೊಂದು ಬಟ್ಟೆಗಳನ್ನು ಕೂಡ ತೊಳೆಯಬೇಕು. ಇದು ತುಂಬಾ ಕಠಿಣ ಕೆಲಸ. ಈಗ ನಾನು ಲಾಂಡ್ರಿ ಹಣವನ್ನು ಉಳಿತಾಯ ಮಾಡಿದ್ದೇನೆ.

ರೆಡ್ಡಿಟ್ ಬಳಕೆದಾರ: ಕೇವಲ ಎರಡು ಒಳ ಉಡುಪಿನಿಂದ ಹೇಗೆ ನಿರ್ವಹಣೆ ಮಾಡುತ್ತಿದ್ದಿಯಾ?
ಉತ್ತರ: ಮೊದಮೊದಲು ನನ್ನಲ್ಲಿ ಐದು ಒಳ ಉಡುಪುಗಳು ಇದ್ದವು. ಅದರಲ್ಲಿ ಒಂದು ಕಳೆದುಹೋಯಿತು. ಮತ್ತೊಂದು ತೂತುಬಿದ್ದು ನನ್ನ ರೂಮ್ ನಲ್ಲಿ ಒಣಗಿಸಲು ಬೇಸರವಾಗುತ್ತಾ ಇತ್ತು. ಮತ್ತೊಂದರ ಇಲಾಸ್ಟಿಕ್ ಹೋಗಿದೆ. ಈಗ ನನ್ನ ಬಲಿ ಕೇವಲ ಎರಡು ಮಾತ್ರ ಇದೆ. ಇದನ್ನು ಒಂದು ವಾರ ತನಕ ಬಳಸುತ್ತೇನೆ. ಕಲೆ ಮೂಡಿದಾಗ ಅಥವಾ ಒದ್ದೆಯೆಂದು ಅನಿಸಿದಾಗ ಅದನ್ನು ತೆಗೆದು ಮತ್ತೊಂದನ್ನು ಒಂದು ವಾರ ತನಕ ಬಳಸುತ್ತೇನೆ.

ರೆಡ್ಡಿಟ್ ಬಳಕೆದಾರ: 33 ದಿನ ಸ್ನಾನ ಮಾಡದೆ ಇದ್ದರೆ ದುರ್ವಾಸನೆ ಬರಲು ಆರಂಭವಾಗುತ್ತದೆ. ಇದನ್ನು ಹೇಗೆ ನಿಭಾಯಿಸುತ್ತೀರಿ?
ಉತ್ತರ: 3-4 ದಿನಕ್ಕೊಮ್ಮೆ ಸೋಪ್ ಹಾಕಿಕೊಂಡು ಮುಖ ತೊಳೆಯುತ್ತೇನೆ. ಬೇಕಿಂಗ್ ಸೋಡಾ ಮತ್ತು ಸ್ಯಾನಿಟೈಜರ್ ವಾಸನೆಯನ್ನು ಕಡಿಮೆ ಮಾಡುವುದು. ಇದರಿಂದ 6-7 ಗಂಟೆಗಳ ಕಾಲ ವಾಸನೆಯಿಂದ ದೂರವಿರುತ್ತೇನೆ. ಕೆಲವೊಂದು ಡಿಯೋಡ್ರೆಂಟ್ ನಿಂದ ದಿನವಿಡಿ ವಾಸನೆಯಿಂದ ದೂರವಿರಬಹುದು.

ರೆಡ್ಡಿಟ್ ಬಳಕೆದಾರ: ಚರ್ಮದಲ್ಲಿ ನಿಮಗೆ ಕಿರಿಕಿರಿ ಅಥವಾ ತುರಿಕೆ ಉಂಟಾಗುತ್ತಾ ಇದೆಯಾ? ಎಣ್ಣೆಯಂಶವಿರುವ ಕೂದಲಿನ ಬಗ್ಗೆ?
ಉತ್ತರ: ಮಣಿಗಂಟು ಸೇರಿದಂತೆ ದೇಹದ ಕೆಲವೊಂದು ಭಾಗಗಳಲ್ಲಿ ತುರಿಕೆ ಉಂಟಾಗುತ್ತದೆ. ಎಣ್ಣೆ ಮತ್ತು ಕೊಳೆಯಿಂದಾಗಿ ತಿಕ್ಕಾಟವು ಹೆಚ್ಚಾಗಿದೆ. ಈಗ ಕೊಳೆಯ ಒಂದು ಪದರವೇ ನಿರ್ಮಾಣವಾಗಿದೆ. ಎಣ್ಣೆಯಿರುವ ಕೂದಲಿನ ಬಗ್ಗೆ ಹೇಳುವುದಾದರೆ 18 ದಿನ ಕೂದಲನ್ನು ತೊಳೆದಿದ್ದೆ. ತಲೆಯಲ್ಲಿ ಇರುವ ತಲೆಹೊಟ್ಟಿಗಾಗಿ ಪ್ರತೀ ದಿನ ಕೂದಲು ಬಾಚಿಕೊಳ್ಳುತ್ತೇನೆ.

ಕರ್ನಾಟಕದ ದಕ್ಷಿಣ ಕರಾವಳಿ ಭಾಗದಲ್ಲಿ ನೀವು ವಾಸವಾಗಿದ್ದೀರಿ. ಇಲ್ಲಿ ಸೆಕೆ ಹೆಚ್ಚಿರುವ ಕಾರಣದಿಂದ ಜನರು ದಿನದಲ್ಲಿ ಎರಡು ಸಲ ತಣ್ಣೀರಿನ ಸ್ನಾನ ಮಾಡುತ್ತಾರೆ
ಉತ್ತರ: ಇದರಿಂದಾಗಿ ನಾನು ತುಂಬಾ ವಿಶೇಷವಾಗಿದ್ದೇನೆ.

ರೆಡ್ಡಿಟ್ ಬಳಕೆದಾರ: 34ನೇ ದಿನ ಸ್ನಾನ ಮಾಡಬೇಕೆಂದು ನಿಮಗೆ ಪ್ರೇರಣೆ ಸಿಕ್ಕಿದ್ದು ಹೇಗೆ?
ಉತ್ತರ: ಹಾಸ್ಟೆಲ್‌ನಲ್ಲಿ ವಾಸಿಸುವ ನಾನು 34ನೇ ದಿನ ಮನೆಗೆ ತೆರಳಿದೆ.

ರೆಡ್ಡಿಟ್ ಬಳಕೆದಾರ: ಪೋಷಕರು ಈ ವಿಷಯ ಕೇಳಿ ಏನು ಹೇಳಿದರು?
ಉತ್ತರ:ಮನೆಗೆ ಹಿಂತಿರುಗಿದಾಗ ಸ್ನಾನ ಮಾಡಿ ಕೂದಲು ಕತ್ತರಿಸಿಕೊಳ್ಳುವ ತನಕ ನನ್ನ ತಾಯಿ ಮಾತನಾಡಲೇ ಇಲ್ಲ.

ರೆಡ್ಡಿಟ್ ಬಳಕೆದಾರ: 34ನೇ ದಿನದಂದು ಸ್ನಾನ ಮಾಡಿದಾಗ ನಿಮಗೆ ಯಾವ ರೀತಿಯ ಭಾವನೆಯಾಗಿದೆ?
ಉತ್ತರ: ಸ್ನಾನ ಮಾಡಿಕೊಂಡು ಹೊರಬಂದಾಗ ನನ್ನ ಚರ್ಮವು ಬಿಳಿಯಾದಂತೆ ಕಾಣಿಸುತ್ತಾ ಇತ್ತು. ಕೊಳೆ ತೆಗೆಯಲು ನನಗೆ ಉಜ್ಜುವ ಕಲ್ಲನ್ನು ಬಳಸಬೇಕಾಯಿತು. ದೇಹದ ಕೆಲವೊಂದು ಭಾಗದಲ್ಲಿ ಮಿಲಿ ಮೀಟರ್ ದಪ್ಪದ ಕೊಳೆಯಿತ್ತು. ಈಗ ನನಗೆ ಹಗುರವಾದ ಭಾವನೆಯಾಗುತ್ತಾ ಇದೆ. ಚರ್ಮವು ತುಂಬಾ ಸೂಕ್ಷ್ಮವಾಗಿರುವಂತದ್ದಾಗಿದೆ. ದೇಹವನ್ನು ಯಾವುದೇ ವಸ್ತುವು ಮುಟ್ಟಿದಾಗ ಅದು ತುಂಬಾ ಬಲಿಷ್ಠವಾಗಿದೆ ಎಂದೆನಿಸುತ್ತದೆ. ಏನೇ ಕಾರಣಗಳಿರಲಿ. ಆದರೆ ಇಷ್ಟು ದಿನ ಕಾಲ ಸ್ನಾನ ಮಾಡದೆ ಕುಳಿತುಕೊಳ್ಳಲು ಹೇಗೆ ಸಾಧ್ಯ ಎನ್ನವುದೇ ದೊಡ್ಡ ಪ್ರಶ್ನೆಯಾಗಿದೆ.



Click it and Unblock the Notifications