For Quick Alerts
ALLOW NOTIFICATIONS  
For Daily Alerts

ಶುಭಸುದ್ದಿ! ಈಗ ಸಾಕುಪ್ರಾಣಿಗಳಿಗೂ ಕ್ಯಾನ್ಸರ್ ಆಸ್ಪತ್ರೆ ಲಭ್ಯವಿದೆ

By Arshad
|

ಕ್ಯಾನ್ಸರ್ ಆವರಿಸುವುದು ಕೇವಲ ಮನುಷ್ಯರಿಗೆ ಮಾತ್ರವಲ್ಲ, ಸಾಕುಪ್ರಾಣಿಗಳಿಗೂ ಆವರಿಸಬಹುದು. ಪ್ರಾಣಿಗಳನ್ನು ಪ್ರೀತಿಸುವ ವ್ಯಕ್ತಿಗಳಿಗೊಂದು ಒಳ್ಳೆಯ ಸುದ್ದಿ, ಕೇರಳದಲ್ಲಿರುವ ಪಶುಸಂಗೋಪನಾ ವಿಭಾಗ ಈಗ ಪ್ರಾಣಿಗಳಿಗೆ ಆವರಿಸುವ ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವ ಗ್ರಂಥಿ ವಿಜ್ಞಾನ ವಿಭಾಗ ಹಾಗೂ ಸಂಶೋಧನಾಲಯವನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಿದೆ.

ಈ ವಿಭಿನ್ನ ಕೇಂದ್ರವನ್ನು ಕೇರಳ ರಾಜ್ಯ ಸರ್ಕಾರವೇ ನಿರ್ವಹಿಸಲಿದ್ದು ಪಾಲೋಡ್ ನಲ್ಲಿರುವ Chief Disease Investigation Office (CDIO) ಕೇಂದ್ರ ಕಛೇರಿಯಲ್ಲಿ ಕಳೆದ ಒಂದು ವರ್ಷದಿಂದ ಹಲವಾರು ಪರೀಕ್ಷೆಗಳನ್ನು ನಡೆಸಿದ್ದು ನೂರಾರು ಸಾಕುಪ್ರಾಣಿಗಳಿಗೆ ಆವರಿಸಿರುವ ಮಾರಣಾಂತಿಕ ಕಾಯಿಲೆಗಳ ಬಗ್ಗೆ ವಿವರಗಳನ್ನು ಪ್ರಕಟಿಸಿದೆ. ಈ ಸಾಕುಪ್ರಾಣಿಗಳಲ್ಲಿ ಹಸು, ನಾಯಿ ಹಾಗೂ ಬೆಕ್ಕುಗಳು ಸೇರಿವೆ.

Cancer Clinic For Domestic Animals

Pathology Division of CDIO ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ವಿಭಾಗ ರಾಜ್ಯದ ವಿವಿಧ ಭಾಗಗಳಿಂದ ಪಶುವೈದ್ಯರು ಕಳುಹಿಸುವ ಕ್ಯಾನ್ಸರ್ ಪೀಡಿದ ಜೀವಕೋಶಗಳ ಮಾದರಿಯನ್ನು ವಿಶ್ಲೇಷಿಸುವ ಹಾಗೂ ಕಾರಣಗಳನ್ನು ಸಂಶೋಧಿಸುವ ಕಾರ್ಯಗಳನ್ನು ನಡೆಸಿದ ಬಳಿಕ ಈ ಕಾಯಿಲೆಗೆ ಸೂಕ್ತ ಚಿಕಿತ್ಸೆ ಹಾಗೂ ಔಷಧಿಗಳನ್ನೂ ಸಲಹೆ ಮಾಡಲಾಗುತ್ತದೆ.

ಪಾಥೋಲಜಿ ವಿಭಾಗದ ಮುಖ್ಯಸ್ಥರಾದ ಡಾ. ನಂದಕುಮಾರ್ ರವರು ಪಿಟಿಐ ಗೆ ತಿಳಿಸಿದ ಪ್ರಕಾರ ಮನುಷ್ಯರಂತೆಯೇ ಸಾಕುಪ್ರಾಣಿಗಳಲ್ಲಿಯೂ ಕ್ಯಾನ್ಸರ್ ಆವರಿಸುವ ಪ್ರಮಾಣ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇಂದಿನ ದಿನಗಳಲ್ಲಿ ರಾಜ್ಯದ ಹಲವೆಡೆಗಳಿಂದ ನಮಗೆ ಸಿಗುತ್ತಿರುವ ಪ್ರಾಣಿಗಳ ಜೀವಕೋಶಗಳ ಪರೀಕ್ಷೆಯಿಂದ ಹಲವು ಕ್ಯಾನ್ಸರ್‌ಗಳು ಇರುವುದು ಪತ್ತೆಯಾಗುತ್ತಿದೆ. ಇವುಗಳಲ್ಲಿ ಮಾರಕವಾದ ಸಸ್ತನಿ ಅಂಗಾಂಶದ ಗಡ್ಡೆ, ಕುಹರದ (ಸೈನಸ್) ಕ್ಯಾನ್ಸರ್ ಪ್ರಮುಖವಾಗಿ ಕಾಣಬರುತ್ತಿವೆ.

ಈ ಸಂಶೋಧನಾಲಯದಲ್ಲಿ ತಜ್ಞರು ಪ್ರಾಣಿಗಳಿಂದ ಸಂಗ್ರಹಿಸಿದ ಗಡ್ಡೆಗಳನ್ನು ಪರೀಕ್ಷಿಸಿ, ವಿಶ್ಲೇಷಿಸಿ ಇದು ಕ್ಯಾನ್ಸರ್ ಹೌದೋ ಅಲ್ಲವೋ ಎಂಬುದನ್ನು ಕಂಡುಕೊಳ್ಳುತ್ತಾರೆ. ಬಳಿಕ ಇದು ಯಾವ ಹಂತದ ಕ್ಯಾನ್ಸರ್ ಎಂಬ ಮಾಹಿತಿಯನ್ನು ಆಧರಿಸಿ ಖೀಮೋಥೆರಪಿ ಹಾಗೂ ಇತರ ಚಿಕಿತ್ಸೆಗಳನ್ನು ಕೈಗೊಳ್ಳಲಾಗುತ್ತದೆ. ಈ ಸಂಶೋಧನಾಲಯದಲ್ಲಿ ಆಧುನಿಕ ಸಲಕರಣೆ ಹಾಗೂ ಚಿಕಿತ್ಸಾ ಉಪಕರಣಗಳಿದ್ದು ಎಲ್ಲಾ ಬಗೆಯ ಕ್ಯಾನ್ಸರ್ ಅನ್ನು ಪತ್ತೆಹಚ್ಚಬಲ್ಲ ಸಾಮರ್ಥ್ಯ ಹೊಂದಿದೆ.

ಮನುಷ್ಯರಲ್ಲಿ ಕಂಡುಬರುವಂತೆಯೇ ಪ್ರಾಣಿಗಳಲ್ಲಿಯೂ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಸಮರ್ಥವಾದ ಕಾರಣಗಳನ್ನು ನೀಡಲು ಸಾಧ್ಯವಿಲ್ಲ. ನಾಯಿಗಳ ವಿಷಯಕ್ಕೆ ಬಂದರೆ ಲಾಬ್ರಡಾರ್ ಮತ್ತು ಆಲ್ಸೇಷಿಯನ್ ಜಾತಿಗಳಲ್ಲಿ ಈ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ ಅಚ್ಚರಿ ಎಂದರೆ ಸ್ಥಳೀಯ ತಳಿಗಳ ನಾಯಿಗಳಲ್ಲಿ ಇದು ಅತ್ಯಂತ ಕಡಿಮೆಯಾಗಿದೆ.

ಪಶುಸಂಗೋಪನಾ ವಿಭಾಗದ ನಿರ್ದೇಶಕರಾದ ಡಾ. ಎನ್.ಎನ್. ಸಸಿ ಯವರು ತಿಳಿಸುವಂತೆ ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು the Regional Cancer Centre (RCC) ವಿಭಾಗದ ಸಹಯೋಗದಲ್ಲಿ ಪ್ರಾರಂಭಿಸಲಾಗಿದೆ. "ಪ್ರಾಣಿಗಳಿಗೆ ಆವರಿಸಿರುವ ಕ್ಯಾನ್ಸರ್ ಸುತ್ತಮುತ್ತಲಲ್ಲಿ ವಾಸಿಸುವ ಅಥವಾ ಇವುಗಳ ಹತ್ತಿರದ ಒಡನಾಟದಲ್ಲಿರುವ ಮನುಷ್ಯರಿಗೆ ಹರಡುವ ಸಾಧ್ಯತೆ ಏನಾದರೂ ಇದೆಯೇ ಎಂಬ ವಿಷಯದ ಬಗ್ಗೆ ಸಂಶೋಧನೆಗಳನ್ನು ನಡೆಯುವ ಉದ್ದೇಶವಿದೆ".

ಪ್ರಾಣಿಗಳಿಗೆ ಹಾಗೂ ಮನುಷ್ಯರಿಗೆ ಮಾರಕವಾಗಬಹುದಾದ ಹಲವಾರು ಕಾಯಿಲೆಗಳ ಬಗ್ಗೆ ಉನ್ನತ ಮಟ್ಟದ ಸಂಶೋಧನೆ ನಡೆಸಲು ಹಾಗೂ ಮಾಹಿತಿಯನ್ನು ಹಂಚಿಕೊಳ್ಳಲು ಪಶುಸಂಗೋಪನೆ ಹಾಗೂ ಆರೋಗ್ಯ ವಿಭಾಗಗಳ ಸಹಯೋಗದೊಂದಿಗೆ ಪ್ರತ್ಯೇಕವಾದ ಸೋಂಕುಶಾಸ್ತ್ರ ವಿಭಾಗವನ್ನು ಪ್ರಾರಂಭಿಸಲು ಆಯೋಜಿಸಲಾಗಿದೆ. ಪ್ರಾಣಿಗಳಿಗೆಂದೇ ಪ್ರಾರಂಭಿಸಲಾಗಿರುವ CDIO ಪ್ರಯೋಗಾಲಯ ಪ್ರಾಣಿಗಳ ಕಾಯಿಲೆಗಳನ್ನು ಕಂಡುಕೊಳ್ಳಲು ಹಾಗೂ ಈ ಕಾಯಿಲೆಯನ್ನು ಹರಡದಂತೆ ತಡೆಯಲು ರಾಜ್ಯದಾಂದ್ಯತ ಪಶುಸಂಗೋಪನಾ ವಿಭಾಗಗಳ ಶಾಖೆಗಳನ್ನು ತೆರೆಯಲಿದೆ ಎಂದು ಅವರು ತಿಳಿಸಿದ್ದಾರೆ.

English summary

Good News! Cancer Clinic For Domestic Animals Is Here!

An alarming increase of cancer cases among domestic animals has prompted the Kerala Animal Husbandry Department to open a diagnostic oncology centre for its early detection and research.The research from the unique centre, functioning at the state-run Chief Disease Investigation Office (CDIO) in Palode for the past one year, has revealed that the deadly disease prevails among a majority of pet animals, including cattle, dogs and cats.
X
Desktop Bottom Promotion