For Quick Alerts
ALLOW NOTIFICATIONS  
For Daily Alerts

ಒಮ್ಮೆ ಸೋತ ಮಾತ್ರಕ್ಕೆ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ..

ಆತ್ಮವಿಶ್ವಾಸವೇ ಕಳೆದುಹೋದಾಗ ನಮ್ಮ ಸುತ್ತಲಿನ ಪ್ರತಿಯೊಬ್ಬರು ದೂಷಿಸುತ್ತಾರೆ, ಇದು ಸಹಜ. ಗೆಲ್ಲುವ ವ್ಯಕ್ತಿಯನ್ನು ಪ್ರತಿಯೊಬ್ಬರು ಗುರುತಿಸುತ್ತಾರೆಯೇ ಹೊರತು ಸೋಲುವ ವ್ಯಕ್ತಿಯನ್ನಲ್ಲ. ಇದೇ ಜಗತ್ತಿನ ನೀತಿ...

By Hemanth
|

ಜೀವನದಲ್ಲಿ ಸೋತಾಗ ಆತ್ಮವಿಶ್ವಾಸ ಕುಸಿದಾಗ ಏನೂ ಬೇಡ ಎನ್ನುವ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ. ಯಾಕೆಂದರೆ ಆತ್ಮವಿಶ್ವಾಸವೇ ಕಳೆದುಹೋದಾಗ ನಮ್ಮ ಸುತ್ತಲಿನ ಪ್ರತಿಯೊಬ್ಬರು ದೂಷಿಸುತ್ತಾರೆ, ಇದು ಸಹಜ. ಗೆಲ್ಲುವ ವ್ಯಕ್ತಿಯನ್ನು ಪ್ರತಿಯೊಬ್ಬರು ಗುರುತಿಸುತ್ತಾರೆಯೇ ಹೊರತು ಸೋಲುವ ವ್ಯಕ್ತಿಯನ್ನಲ್ಲ. ಇದೇ ಜಗತ್ತಿನ ನೀತಿ. ಧನಾತ್ಮಕ ಚಿಂತನೆ ಮಾಡುವುದು ಹೇಗೆ?

ಆದರೆ ಒಮ್ಮೆ ಸೋತ ಮಾತ್ರಕ್ಕೆ ಎಲ್ಲವೂ ಕಳೆದು ಹೋಯಿತೆಂದಲ್ಲ. ಸೋಲಿನಿಂದ ಎದ್ದ ಎಷ್ಟೋ ಮಂದಿ ಯಶಸ್ಸನ್ನು ಪಡೆದ ಉದಾಹರಣೆಗಳು ಇವೆ. ನಿಮ್ಮಲ್ಲಿ ಪ್ರೇರಣೆ ಕಡಿಮೆಯಾದಾಗ ಯಾವ ರೀತಿ ಇರಬೇಕೆಂಬ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಇದನ್ನು ಓದಿಕೊಂಡು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ.

ನೀವು ಅದ್ಭುತವೆಂದು ಭಾವಿಸುವವರೊಬ್ಬರು ಇರುತ್ತಾರೆ!

ನೀವು ಅದ್ಭುತವೆಂದು ಭಾವಿಸುವವರೊಬ್ಬರು ಇರುತ್ತಾರೆ!

ನಿಮ್ಮನ್ನು ಕೆಲವೊಂದು ವಿಷಯಗಳು ತುಂಬಾ ಸೋಲಿಸಿದೆ ಮತ್ತು ಆತ್ಮವಿಶ್ವಾಸ ಕುಸಿದಿದೆ ಎಂದು ಯಾವತ್ತೂ ಭಾವಿಸಬೇಡಿ. ಧನಾತ್ಮಕವಾಗಿ ಚಿಂತಿಸುವ ವ್ಯಕ್ತಿ ಜತೆಗೆ ನೀವು ಇದ್ದರೆ ತುಂಬಾ ಒಳ್ಳೆಯದು. ನೀವು ಮಾಡುತ್ತಿರುವ ಪ್ರತಿಯೊಂದು ಕೆಲಸವು ಅದ್ಭುತವಾಗಿದೆ ಎಂದು ಭಾವಿಸುವ ವ್ಯಕ್ತಿಯೊಬ್ಬರು ಇದ್ದೇ ಇರುತ್ತಾರೆ.

ನಿಮ್ಮ ಬಗ್ಗೆ ಬೇರೆಯವರು ತೀರ್ಪು ನೀಡಲು ಬಿಡಬೇಡಿ

ನಿಮ್ಮ ಬಗ್ಗೆ ಬೇರೆಯವರು ತೀರ್ಪು ನೀಡಲು ಬಿಡಬೇಡಿ

ನಿಮ್ಮ ಬಗ್ಗೆ ಬೇರೆಯವರು ತೀರ್ಪು ನೀಡಲು ಬಿಡಬೇಡಿ. ಇದನ್ನು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಿ. ನಿಮ್ಮ ಪೋಷಕರು ಅಥವಾ ಸ್ನೇಹಿತರೇ ಆಗಿದ್ದರೂ ಇದು ಸರಿಯಲ್ಲ. ನಿಮ್ಮ ಶ್ರೇಷ್ಠತೆ ಬಗ್ಗೆ ತಿಳಿದಿರುವ ವ್ಯಕ್ತಿಗಳಿಗೆ ನಿಮ್ಮ ಕೆಟ್ಟ ವಿಷಯಗಳ ಬಗ್ಗೆ ಕೂಡ ತಿಳಿದಿರುತ್ತದೆ. ಇದನ್ನು ಅವರಿಗೆ ವಿವರಿಸುವ ಅಗತ್ಯವಿಲ್ಲ. ಇದರಿಂದ ಬೇರೆಯವರು ನಿಮ್ಮ ಬಗ್ಗೆ ತೀರ್ಪು ನೀಡುವುದು ಬೇಡ.

ಜನರ ಮಾತಿಗೆ ಮಹತ್ವ ನೀಡಬೇಡಿ

ಜನರ ಮಾತಿಗೆ ಮಹತ್ವ ನೀಡಬೇಡಿ

ಸೋತಾಗ ಜನರು ಹಲವಾರು ರೀತಿಯಲ್ಲಿ ಮಾತನಾಡಿಕೊಳ್ಳುತ್ತಾರೆ. ಏನೇ ಮಾಡಿದರೂ ಜನರು ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ಇದರಿಂದ ಜನರು ಏನು ಹೇಳುತ್ತಾರೆ ಎನ್ನುವ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ.

ಸಾಮಾಜಿಕ ಜಾಲತಾಣಗಳಲ್ಲಿರುವುದು ಪ್ರತಿಯೊಂದು ನಿಜವಲ್ಲ

ಸಾಮಾಜಿಕ ಜಾಲತಾಣಗಳಲ್ಲಿರುವುದು ಪ್ರತಿಯೊಂದು ನಿಜವಲ್ಲ

ಸಾಮಾಜಿಕ ಜಾಲತಾಣ ಎನ್ನುವುದು ಕೆಲಸವಿಲ್ಲದವರ ಹರಟೆ ಕಟ್ಟೆಯಾಗಿ ಹೋಗಿದೆ. ಅದರಲ್ಲಿ ಇರುವುದು ಪ್ರತಿಯೊಂದು ನಿಜವಲ್ಲ. ಜನರು ಭಾವನೆಗಳು ಕುಸಿದಿರುವಾಗ ಆತ ಅದನ್ನು ಯಾರೊಂದಿಗೂ ಹಂಚಿಕೊಳ್ಳಲು ಹೋಗುವುದಿಲ್ಲ. ಇದರಿಂದ ಜಗತ್ತು ಸರಿಯಾಗಿದೆ ಮತ್ತು ನೀವು ಬೇಡದವರಾಗಿದ್ದೀರಿ ಎನ್ನುವ ಭಾವನೆ ಬರುವುದು ಬೇಡ.

ಯಾವುದೇ ವಯಸ್ಸಿನಲ್ಲಿ ಯಶಸ್ಸು ಬರಬಹುದು

ಯಾವುದೇ ವಯಸ್ಸಿನಲ್ಲಿ ಯಶಸ್ಸು ಬರಬಹುದು

ಯಶಸ್ಸು ಬರಬೇಕಾದರೆ ಅದಕ್ಕೆ ಸಮಯವೆಂದಿಲ್ಲ. ಅದು ಯಾವುದೇ ವಯಸ್ಸಿನಲ್ಲೂ ಬರಬಹುದು. ಇದಕ್ಕೆ ಕಠಿಣ ಪರಿಶ್ರಮ ಮತ್ತು ಸ್ವಲ್ಪ ಅದೃಷ್ಟ ಬೇಕಾಗಿದೆ. ನಿಮ್ಮ ಸುತ್ತಲಿನವರು ಅಥವಾ ಸೋದರರು ಯಶಸ್ಸನ್ನು ಪಡೆಯುತ್ತಿರುವಾಗ ನೀವು ತೊಂದರೆಯಲ್ಲಿ ಇದ್ದೀರಿ. ಯಾವತ್ತೂ ನಿಮಗೆ ಯಶಸ್ಸು ಸಿಗುವುದಿಲ್ಲವೆಂದು ಭಾವಿಸಬೇಡಿ. ತಾಳ್ಮೆ ತುಂಬಾ ಮುಖ್ಯ. ನೀವು ಆತ್ಮವಿಶ್ವಾಸದಲ್ಲಿ ಕುಸಿದಿರುವಾಗ ಧನಾತ್ಮಕವಾಗಿ ಚಿಂತಿಸಿ ಮತ್ತು ನಕಾರಾತ್ಮಕ ಯೋಚನೆಗಳನ್ನು ದೂರವಿಡಿ. ನಿಮ್ಮ ಪ್ರತಿಭೆಯನ್ನು ಬಳಸಿಕೊಂಡು ಯಶಸ್ಸನ್ನು ಹೇಗೆ ಪಡೆಯಬಹುದು ಎಂದು ಯೋಜನೆ ರೂಪಿಸಿ.

English summary

Feeling Unwanted? Here Is What You Need To Remember!

Here, in this article, we are about to share some of the tips that you can follow if you are feeling unwanted or if you are running low on motivation. Find out how easy it is to bounce back and get back to being a confident person that you had been once upon a time.
Story first published: Saturday, April 1, 2017, 11:00 [IST]
X
Desktop Bottom Promotion