400 ಮಕ್ಕಳ ಪ್ರಾಣ ರಕ್ಷಿಸಲು, 1 ಕಿ.ಮೀ ಬಾಂಬ್ ಹಿಡಿದು ಓಡಿದ ಧೀರ ಪೋಲೀಸ್!

By: Arshad
Subscribe to Boldsky

ಮಧ್ಯಪ್ರದೇಶದ ಪೋಲೀಸ್ ಅಧಿಕಾರಿಯೊಬ್ಬರು ತಮ್ಮ ಗ್ರಾಮದ ಹೀರೋ ಅನ್ನಿಸಿಕೊಂಡಿದ್ದಾರೆ. ಕಷ್ಟಕರವಾದ ಕ್ಷಣದಲ್ಲಿ ಉಪಯೋಗಿಸಿದ ಸಾಮಾನ್ಯ ಜ್ಞಾನದ ಕಾರಣ ಇವರು ನಾನೂರು ಶಾಲಾ ಮಕ್ಕಳನ್ನು ರಕ್ಷಿಸಲು ಕಾರಣವಾಗಿದ್ದೇ ಈ ಪಟ್ಟ ದೊರಕಲು ಸಾಧ್ಯವಾಗಿದೆ. ಇದು ಯಾವುದೋ ಒಂದು ಹಿಂದಿ ಚಲನಚಿತ್ರದ ದೃಶ್ಯವಿರಬಹುದೆಂದು ನೀವು ಎಣಿಸಿದ್ದರೆ ಇದು ತಪ್ಪು, ಈ ಘಟನೆ ನಿಜವಾಗಿಯೂ ಇತ್ತೀಚೆಗೆ ನಡೆದಿದೆ.

ಈ ಧೀಮಂತ ಪೋಲೀಸ್ ಅಧಿಕಾರಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಇಂದು ನೀಡಲಾಗಿದ್ದು ಲೇಖನದ ನಡುವೆ ಇರುವ ವಿಡಿಯೋ ಮೂಲಕ ದಿಕ್ಕಾಪಾಲಾಗಿ ಓಡುತ್ತಿರುವ ಜನರಿಗೆ ವಿರುದ್ಧವಾಗಿ ಓಡುತ್ತಾ ಧೈರ್ಯದಿಂದ ಸನ್ನಿವೇಶವನ್ನು ಎದುರಿಸಿದ ಬಗೆಯನ್ನು ನೋಡಿ....

ಈ ಎಲ್ಲವೂ ಒಂದು ವಿಡಿಯೋ ಕಾಲ್‌ನಿಂದ ಪ್ರಾರಂಭವಾಯಿತು

ಈ ಎಲ್ಲವೂ ಒಂದು ವಿಡಿಯೋ ಕಾಲ್‌ನಿಂದ ಪ್ರಾರಂಭವಾಯಿತು

ವರದಿಗಳ ಪ್ರಕಾರ ಮಧ್ಯಪ್ರದೇಶದ ಚಿತೋರಾ ಎಂಬ ಗ್ರಾಮದಲ್ಲಿ ಪೋಲೀಸರಿಗೊಂದು ಅನಾಮಧೇಯ ಕರೆ ಬಂದಿತ್ತು. ಈ ಕರೆಯಲ್ಲಿ ನೀಡಿದ ವಿವರದ ಪ್ರಕಾರ ಗ್ರಾಮದ ಶಾಲೆಯಲ್ಲಿ ಹತ್ತು ಕೇಜಿಯಷ್ಟು ದೊಡ್ಡಗಾತ್ರದ ಪ್ರಬಲ ಬಾಂಬೊಂದನ್ನು ಇರಿಸಲಾಗಿದೆ! ತಕ್ಷಣವೇ ಈ ಕರೆಯನ್ನು ಗಂಭೀರವಾಗಿ ಪರಿಗಣಿಸಿದ ಪೋಲೀಸ್ ಇಲಾಖೆ ಶೀಘ್ರವೇ ಕರೆಯಲ್ಲಿ ವಿವರಿಸಿದಲ್ಲಿ ಬಾಂಬ್ ನಿಜವಾಗಿಯೂ ಇದ್ದುದನ್ನು ಗಮನಿಸಿ ತಕ್ಷಣವೇ ಶಾಲೆಯನ್ನು ಮುಚ್ಚಲು ಆದೇಶ ನೀಡಿದರು.

ಶಾಲಾ ಮಕ್ಕಳಿಗೆ ಅಪಾಯವಾಗುವ ಸಂಭವ

ಶಾಲಾ ಮಕ್ಕಳಿಗೆ ಅಪಾಯವಾಗುವ ಸಂಭವ

ಆ ಹೊತ್ತಿನಲ್ಲಿ ಸುಮಾರು ನಾನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿ ಉಪಸ್ಥಿತರಿದ್ದು ಜೀವಕ್ಕೇ ಅಪಾಯವಾಗುವ ಸಂಭವವಿತ್ತು. ಬಾಂಬ್ ಯಾವಾಗ ಸಿಡಿಯುತ್ತದೆ ಎಂದು ಗೊತ್ತಿಲ್ಲ. ತಕ್ಷಣವೇ ಬಾಂಬನ್ನು ಅಲ್ಲಿಂದ ನಿವಾರಿಸದಿದ್ದರೆ ನಾನೂರು ಮಕ್ಕಳ ಜೀವಕ್ಕೆ ಕುತ್ತು! ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾರೇ ಆದರೂ ಧೃತಿಗೆಡುತ್ತಿದ್ದುದ್ದು ಸಹಜ. ಆದರೆ ಹೆಡ್ ಕಾನ್ಸ್ ಟಬಲ್ ಅಭಿಶೇಕ್ ಪಟೇಲ್ ಎಂಬ ಅಧಿಕಾರಿ ತಕ್ಷಣವೇ ತನ್ನ ಜೀವದ ಹಂಗನ್ನು ತೊರೆದು ಹತ್ತು ಕೇಜಿ ಬಾಂಬ್ ಅನ್ನು ಎತ್ತಿ ಶಾಲೆಗೆ ವಿರುದ್ದ ದಿಕ್ಕಿನತ್ತ ಓಡತೊಡಗಿದರು.

ಇವರು ಓಡಿದ್ದು ಸುಮಾರು ಒಂದು ಕಿಮೀ ಯಷ್ಟು ದೂರ

ಇವರು ಓಡಿದ್ದು ಸುಮಾರು ಒಂದು ಕಿಮೀ ಯಷ್ಟು ದೂರ

ಈ ಧೀಮಂತ ಅಧಿಕಾರಿ ಬಾಂಬ್ ಎತ್ತಿಕೊಂಡು ಒಂದೇ ಉಸಿರಿನಿಂದ ಸುಮಾರು ಒಂದು ಕಿ.ಮೀ ಗೂ ಹೆಚ್ಚಿನ ದೂರವನ್ನು ಓಡಿ ಸುರಕ್ಷಿತ ಸ್ಥಳದಲ್ಲಿಟ್ಟು ಅಲ್ಲಿಂದ ದೂರವಾದರು. ಏಕೆ ಈ ಯೋಚನೆ ಬಂತು ಎಂದು ಕೇಳಿದರೆ ಇತ್ತೀಚೆಗೆ ಭಾರವನ್ನು ಎತ್ತಿ ಓಡುವ ಕವಾಯತನ್ನು ಮಾಡಿದ್ದು ಆ ಕವಾಯತಿನಲ್ಲಿ ಭಾರವನ್ನು ಹೊತ್ತು ಓಡಿದ್ದ ಅನುಭವಿದ್ದುದರಿಂದ ಹೀಗೆ ಮಾಡಿದೆ ಎಂದು ತಿಳಿಸಿದ್ದಾರೆ.

 ಇವರ ಹೆದರಿಕೆ

ಇವರ ಹೆದರಿಕೆ

ಇವರ ವಿವರಣೆಯ ಪ್ರಕಾರ ಒಂದು ವೇಳೆ ಬಾಂಬು ಸಿಡಿದರೆ ಸುಮಾರು ಅರ್ಧ ಕಿಮೀ ತ್ರಿಜ್ಯದ ವಿಸ್ತಾರದಲ್ಲಿ ಘೋರ ಅನಾಹುತ ಸಂಭವಿಸುತ್ತದೆ. ಆದ್ದರಿಂದ ಮಕ್ಕಳು ಸುರಕ್ಷಿತವಾಗಿರಲು ಕನಿಷ್ಠ ಐನೂರು ಮೀಟರ್‌ಗಿಂತ ಹೊರಗೆ ಹೋಗಬೇಕು, ಆ ಬಳಿಕ ಬಾಂಬ್ ಸ್ಫೋಟಗೊಂಡು ತಾನು ಮರಣಹೊಂದಿದರೂ ತೊಂದರೆ ಇಲ್ಲ ಎಂದು ಇವರು ಯೋಚಿಸಿದ್ದರು.

ಈ ವಿಡಿಯೋ ವೈರಲ್ ಆಗಿದೆ

ಬಾಂಬ್ ಎತ್ತಿಕೊಂಡು ಬೆಟ್ಟದತ್ತ ಓಡುತ್ತಿರುವ ದೃಶ್ಯವನ್ನು ಕೆಲವರು ಸೆರೆಹಿಡಿದಿದ್ದು ಅಡ್ದಬಂದ ಪೊದೆ, ಕಲ್ಲುಗಳನ್ನು ಲೆಕ್ಕಿಸದೇ ಒಲಿಂಪಿಕ್ ಆಟಗಾರನಂತೆ ಒಂದೇ ಸಮನೆ ಊರಿನಿಂದ ಹೊರಗೆ ಓಡುತ್ತಿರುವ ದೃಶ್ಯ ಎಂತಹವರಿಗಾದರೂ ಎದೆ ಝಲ್ಲೆನಿಸುತ್ತದೆ. "ಆ ಹೊತ್ತಿನಲ್ಲಿ ನನಗೆ ಮಕ್ಕಳ ಪ್ರಾಣ ಉಳಿಸುವುದೊಂದೇ ಗುರಿಯಾಗಿತ್ತೇ ವಿನಃ ಬೇರೇನೂ ತೋಚುತ್ತಿರಲಿಲ್ಲ" ಎಂದು ವಿವರಿಸಿದ ಅಭಿಶೇಕ್ ಗೆ ಇಡಿಯ ಭಾರತ ಸಲಾಂ ಹೇಳುತ್ತಿದೆ.ಈ ವಿಡಿಯೋ ನೋಡಿ. ನಮ್ಮ ನಡುವೆ ಇಂತಹ ಧೈರ್ಯವಂತ ಹಾಗೂ ನಿಷ್ಠಾವಂತ ಅಧಿಕಾರಿಗಳು ಇರಬೇಕು ಎಂದು ಅನ್ನಿಸುವುದಿಲ್ಲವೇ?

English summary

Fearless Cop Who Ran For 1 Km Non-Stop To Save 400 School Kids

A cop from Madhya Pradesh has become the hero of his village after he saved the lives of about 400 children with his fearlessness and presence of mind. Though this may seem like a story straight from a Hindi movie, it did happen recently, where a police inspector from Madhya Pradesh saved the lives of over 400 school children. Check out this brave officer's story and do not forget to check the video of him running away from the crowd.
Subscribe Newsletter