For Quick Alerts
ALLOW NOTIFICATIONS  
For Daily Alerts

ಶಾಲಾ ಪರೀಕ್ಷೆಯಲ್ಲಿ ನಪಾಸಾದರೂ ಜೀವನ ಪರೀಕ್ಷೆಯಲ್ಲಿ ಸೋಲದಿರಿ

By Jaya subramanya
|

ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಇಲ್ಲವೇ ನಾವು ಅಂದುಕೊಂಡಿದ್ದನ್ನು ಸಾಧಿಸದೇ ನಿರಾಶೆ ಭಾವನೆಯಲ್ಲಿ ದುಃಖಿತರಾಗಿದ್ದಾಗ ನಮ್ಮ ಮುಂದಿರುವ ದಾರಿ ಅಂತ್ಯಗೊಂಡಂತೆ ಕಾಣುತ್ತದೆ. ಜೀವನದಲ್ಲಿ ನಮಗೆ ಸೋಲು ಕಟ್ಟಿಟ್ಟ ಬುತ್ತಿ ಎಂದೆನಿಸುತ್ತದೆ. ಕೈಚೆಲ್ಲಿ ಬಿಡುತ್ತೇವೆ. ಆತ್ಮಹತ್ಯೆಯಂತಹ ಪಾಪದ ಕೆಲಸಕ್ಕೆ ಕೈಹಾಕಿ ಕ್ಷಣ ಮಾತ್ರದಲ್ಲಿ ನಿರ್ಧಾರವನ್ನು ತೆಗೆದುಕೊಂಡು ಬಿಡುತ್ತೇವೆ. ಆದರೆ ನಿರಾಶೆಯ ಕಹಿಯನ್ನು ಉಣ್ಣುವುದಕ್ಕೆ ಮುನ್ನ ಸ್ವಲ್ಪ ಯೋಚಿಸಿ.

ಇಂದು ಜೀವನದಲ್ಲಿ ಮಹತ್ವದ ಸಾಧನೆಯನ್ನು ಸಾಧಿಸಿದವರೆಲ್ಲಾ ಗೆಲುವಿನ ಮೆಟ್ಟಿಲನ್ನು ನೇರವಾಗಿ ಏರಿದವರಲ್ಲ. ಕಷ್ಟ, ಸೋಲುಗಳೆಂಬ ಸವಾಲುಗಳನ್ನು ಸ್ವೀಕರಿಸಿ ಮುನ್ನುಗ್ಗಿದವರು. ಅವರೂ ನಮ್ಮಂತೆ ಧೈರ್ಯಗುಂದುತ್ತಿದ್ದರೆ ಸೋಲಿಗೆ ತಲೆಬಾಗಿ ಕೈಚೆಲ್ಲಿ ಕುಳಿತಿದ್ದರೆ ಇಂದು ಅವರು ಇಷ್ಟು ಎತ್ತರಕ್ಕೆ ಏರಲು ಸಾಧ್ಯವಿರುತ್ತಿರಲಿಲ್ಲ.

ಅಂದು ಜೀವನ ನಡೆಸಲು ಪರದಾಟ, ಇಂದು ಕೋಟ್ಯಾಧಿಪತಿ...!

ವೃತ್ತಿಜೀವನದಲ್ಲಿ ಅಂತೆಯೇ ಶಿಕ್ಷಣ ರಂಗದಲ್ಲೂ ಸೋಲು ನಮ್ಮನ್ನು ಬೆನ್ನಟ್ಟುತ್ತಿದೆ ಎಂದಾದಲ್ಲಿ ಅದನ್ನು ಸವಾಲಾಗಿ ಸ್ವೀಕರಿಸಬೇಕು. ನಮ್ಮಿಂದ ಆಗದೇ ಇರುವಂತಹದ್ದು ಏನೂ ಇಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಪ್ರಯತ್ನಪಟ್ಟರೆ ನಾವು ಕೂಡ ಜೀವನದಲ್ಲಿ ಅತ್ಯುತ್ತಮವಾದುದನ್ನು ಸಾಧಿಸಬಹುದು ಎಂಬುದನ್ನು ಮನನ ಮಾಡಿಕೊಳ್ಳಬೇಕು. ಅದಕ್ಕಾಗಿಯೇ ಇಂದಿನ ಲೇಖನದಲ್ಲಿ ಶಿಕ್ಷಣದಲ್ಲಿ ಉತ್ತಮ ಸಾಧನೆಯನ್ನು ಮಾಡಿರದಿದ್ದರೂ ಸಮಾಜದಲ್ಲಿ ಒಂದು ಉತ್ತಮ ನೆಲೆಯನ್ನು ಕಂಡುಕೊಂಡು ಮತ್ತೊಬ್ಬರಿಗೆ ದಾರಿದೀಪವಾಗಿರುವ ವ್ಯಕ್ತಿಗಳ ಪರಿಚಯವನ್ನು ಇಲ್ಲಿ ಮಾಡುತ್ತಿದ್ದೇವೆ.....

ಪಿ.ಸಿ ಮುಸ್ತಫ

ಪಿ.ಸಿ ಮುಸ್ತಫ

ಅನಕ್ಷರಸ್ಥ ಕುಟುಂಬದಿಂದ ಬಂದಿರುವ ಮುಸ್ತಫ ಕೇರಳದ ಹಳ್ಳಿಯೊಂದರಿಂದ ಬಂದವರಾಗಿದ್ದಾರೆ. ಆರನೆಯ ತರಗತಿಯಲ್ಲಿ ಕಲಿಯುತ್ತಿದ್ದಾಗ ಓದಿಗೆ ತಿಲಾಂಜಲಿಯನ್ನಿಟ್ಟು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತದನಂತರ ಕ್ಯಾಲಿಕಟ್‌ನ ಅಂತರಾಷ್ಟ್ರೀಯ ತಾಂತ್ರಿಕ ವಿದ್ಯಾಲಯದಲ್ಲಿ ಕಷ್ಟಪಟ್ಟು ಓದಿ ಇದೀಗ 62 ಕೋಟಿ ವ್ಯವಹಾರದ ಪ್ಯಾಕೇಜ್ಡ್ ಆಹಾರ ಐಡಿ ಸ್ಪೆಷಲ್ ಫುಡ್ ಪ್ರೈವೈಟ್ ಲಿಮಿಟೆಡ್ ಅನ್ನು ನಡೆಸುತ್ತಿದ್ದಾರೆ.

Image Source

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಅಕ್ಷಯ್ ಕುಮಾರ್ ಬಾಲಿವುಡ್‌ನ ಹೆಚ್ಚು ಯಶಸ್ವಿ ನಟರು ಎಂಬ ಖ್ಯಾತಿಗೆ ಹೆಸರಾದವರು. ತಾವು ಸಣ್ಣವರಾಗಿದ್ದಾಗ ಶಾಲೆಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಾರೆ ಮತ್ತು ಪ್ರಗತಿ ಪತ್ರವನ್ನು ತಂದೆಗೆ ತೋರಿಸಲು ಭಯದಿಂದ ಹಿಂಜರಿದಿದ್ದರು. ಆದರೆ ತಾವು ಕೈಲಾಗದವರೆಂದು ಅವರು ಕುಗ್ಗಲಿಲ್ಲ ಸೋಲನ್ನೇ ಸವಾಲಾಗಿ ಸ್ವೀಕರಿಸಿ ಮುನ್ನಡೆದರು.

 ವೀರ್ ದಾಸ್

ವೀರ್ ದಾಸ್

ಭಾರತದಲ್ಲಿ ಇಂದು ಖ್ಯಾತ ಹಾಸ್ಯಕಲಾವಿದರಲ್ಲಿ ವೀರ್ ದಾಸ್ ಹೆಸರೂ ಕೂಡ ಪ್ರಸಿದ್ಧಿಯಲ್ಲಿದೆ. ತಮ್ಮ ಬೋರ್ಡ್ ಪರೀಕ್ಷೆಗಳಲ್ಲಿ ಅಲ್ಲಿಂದಲ್ಲಿಗೆ ಅಂಕಗಳನ್ನು ತೆಗೆಯುತ್ತಿದ್ದ ವೀರ್ ದಾಸ್ ಇಂದು ಲೋಕವೇ ಕೊಂಡಾಡುವ ಸರಸ್ವತಿ ಪುತ್ರರಾಗಿದ್ದಾರೆ. ಅವರ ಪ್ರಕಾರವಾಗಿ ಯಶಸ್ಸು ಎಂದರೆ "ನೀವು ಮಾಡಿರುವ ದಾಖಲೆಗಳು ಅದ್ಭುತವಾಗಿರದೇ ಇರಬಹುದು ಆದರೆ ಅದ್ಭುತವಾಗಿ ಇರಬೇಕಾಗಿರುವುದು ನಿಮ್ಮ ವ್ಯಕ್ತಿತ್ವವಾಗಿದೆ. ನಿಮ್ಮ ಜೀವನದ ಪ್ರತಿಯೊಂದು ಅಂತ್ಯದಲ್ಲೂ ನೀವು ಯಾರೆಂದು ಜನರು ಗುರುತಿಸುತ್ತಾರೆಯೇ ಹೊರತು ನಿಮ್ಮ ಕೆಲಸವನ್ನು ನೀವು ಹೇಗೆ ಮಾಡಿದ್ದೀರಿ ಎಂದಲ್ಲ".

ಸಂದೀಪ್ ಮಹೇಶ್ವರಿ

ಸಂದೀಪ್ ಮಹೇಶ್ವರಿ

ಭಾರತದಲ್ಲಿ ಅತಿಯಶಸ್ವಿ ಉದ್ಯಮಿಗಳಲ್ಲಿ ಸಂದೀಪ್ ಮಹೇಶ್ವರಿ ಕೂಡ ಒಬ್ಬರು. ಹದಿಹರೆಯದಲ್ಲಿ ಕಾಲೇಜ್‌ನಿಂದ ಇವರು ಡಿಬಾರ್ ಆಗಿದ್ದರು, ಆದರೆ ತಾವು ಏನಾದರೂ ಮಾಡಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದರು. ಭಾರತದ ಆನ್‌ಲೈನ್ ಸ್ಟಾಕ್ ಇಮೇಜ್‌ಗಳ ಅತಿದೊಡ್ಡ ಸಂಗ್ರಹವನ್ನೇ ಹೊಂದಿರುವ "ಇಮೇಜಸ್ ಬಾಜಾರ್" ನ ಸ್ಥಾಪಕರು ಇವರಾಗಿದ್ದಾರೆ.

ಬಿಸ್ವ ಕಲ್ಯಾಣ್ ರಾತ್

ಬಿಸ್ವ ಕಲ್ಯಾಣ್ ರಾತ್

ಯೂಟ್ಯೂಬ್‌ನಲ್ಲಿ ರಾರಾಜಿಸುತ್ತಿರುವ ಕೆಲವೊಂದು ವೈರಲ್ ವೀಡಿಯೊಗಳ ರಚನೆಕಾರರು ಇವರಾಗಿದ್ದಾರೆ. ಭಾರತದ ಪ್ರಸಿದ್ಧ ಹಾಸ್ಯಕಲಾವಿದರೂ ಆಗಿದ್ದಾರೆ. ಫೇಸ್‌ಬೇಕ್ ಪೋಸ್ಟ್ ಒಂದರಲ್ಲಿ ತಾವು ಸರಾಸರಿ ವಿದ್ಯಾರ್ಥಿ ಎಂದೇ ತಮ್ಮನ್ನು ಹೇಳಿಕೊಂಡಿದ್ದು, ಇದರಿಂದ ಖಿನ್ನತೆಯನ್ನು ಅನುಭವಿಸಿ 8 ಕೆಜಿ ತೂಕವನ್ನು ಅವರು ಇಳಿಸಿಕೊಂಡಿದ್ದರು. ಆದರೆ ಸೋಲಿನಿಂದ ಮೈಕೊಡವಿಕೊಂಡ ಅವರು ಇಂದು ಯಶಸ್ಸಿನ ತುತ್ತ ತುದಿಯಲ್ಲಿದ್ದಾರೆ.

 ಕೈಲಾಶ್ ಕಾತ್‌ಕರ್

ಕೈಲಾಶ್ ಕಾತ್‌ಕರ್

ಕೌಟುಂಬಿಕ ಕಾರಣಗಳಿಂದಾಗಿ ಹತ್ತನೆಯ ತರಗತಿಯನ್ನು ಪೂರ್ತಿಯಾಗಿಸದ ಇವರು ಸಣ್ಣ ರೇಡಿಯೊ ಮತ್ತು ಕ್ಯಾಲ್ಕುಲೇಟರ್ ರಿಪೇರಿಯಲ್ಲಿ ಕೆಲಸ ಮಾಡಿದರು. ಹೊಸ ತಂತ್ರಜ್ಞಾನವನ್ನು ಅರಿತುಕೊಳ್ಳುವ ಸಲುವಾಗಿ ಕಂಪ್ಯೂಟರ್ ಕೋರ್ಸ್ ಅನ್ನು ಪೂರೈಸಿದರು. ಕಂಪ್ಯೂಟರ್ ಸೇವಾ ವ್ಯವಹಾರವನ್ನು ಆರಂಭಿಸಿದ ಕೈಲಾಶ್ ಇಂದು 200 ಕೋಟಿಗಿಂತಲೂ ಅಧಿಕ ವ್ಯವಹಾರವನ್ನು ಮಾಡುತ್ತಿದ್ದಾರೆ. ಇವರ ಕಂಪೆನಿಯ ಹೆಸರು ಕ್ವಿಕ್ ಹೀಲ್ ಟೆಕ್ನಾಲಜೀಸ್ ಎಂದಾಗಿದ್ದು ಇದು ಆಂಟಿ ವೈರಸ್ ಸಾಫ್ಟ್‌ವೇರ್ ಅನ್ನು ಮಾರಾಟ ಮಾಡುತ್ತದೆ.

ಪ್ರೇಮ್ ಗಣಪತಿ

ಪ್ರೇಮ್ ಗಣಪತಿ

ಭಾರತದ ಯಶಸ್ವಿ ಉದ್ಯಮಿ ಇವರಾಗಿದ್ದಾರೆ. ದೋಸಾ ಪ್ಲಾಜಾ ಎಂಬ ರೆಸ್ಟೋರೆಂಟ್‌ನ ಮಾಲೀಕರು ಇವರಾಗಿದ್ದಾರೆ. ತಮ್ಮದೇ ಸ್ವಂತ ಉದ್ಯಮವನ್ನು ಆರಂಭಿಸಬೇಕೆಂಬ ಯೋಜನೆ ಇವರಲ್ಲಿ ಮೊಳಕೆಯೊಡೆದಾಗ ಇವರು ಹತ್ತನೆಯ ತರಗತಿಯನ್ನು ಪಾಸು ಮಾಡಿಕೊಂಡಿದ್ದರು. ನ್ಯೂಜಿಲೆಂಡ್, ಓಮನ್ ಮತ್ತು ಯುಎಇ ಯಲ್ಲಿ ಕೂಡ ದೋಸಾ ಪ್ಲಾಜಾ ತಲೆಎತ್ತಿದೆ.

English summary

Failure is the Stepping Stone to Success; Look at These Examples!

Failure is considered to be a stepping stone for success and this has been proven many times by various legends.One does not have to be academically brilliant to become successful. They can become successful by excelling in other fields of life as well! These are some of the successful Indians who have excelled in their respective fields, even though they were not academically great!
Story first published: Thursday, June 1, 2017, 9:46 [IST]
X
Desktop Bottom Promotion