For Quick Alerts
ALLOW NOTIFICATIONS  
For Daily Alerts

ಹೌದು ಸ್ವಾಮಿ! ನಮ್ಮ ದೇಶದಲ್ಲಿ ಇಂತಹ ವಿಚಿತ್ರ ಮದುವೆಗಳೂ ನಡೆಯುತ್ತವೆ!

|

ಶ್ರೀಮಂತ ಹಾಗೂ ವಿಭಿನ್ನ ಸಂಸ್ಕೃತಿ ಹೊಂದಿರುವ ಒಂದು ದೇಶದಲ್ಲಿ ವಿವಿಧತೆಯಲ್ಲಿ ಏಕತೆ' ಎನ್ನುವುದು ಕೇವಲ ನುಡಿಗಟ್ಟಲ್ಲ, ಶ್ರೇಷ್ಠ ನಾಡಿನಲ್ಲಿ ಇದನ್ನು ಕಣ್ಣಾರೆ ನೋಡಬಹುದು. ದೇಶದ ನಿಜವಾದ ಶ್ರೇಷ್ಠತೆಯನ್ನು ಕೆಲವೇ ಪದಗಳಿಂದ ವರ್ಣಿಸಲು ಅಸಾಧ್ಯ. ಹಲವಾರು ರಾಜ್ಯಗಳು, ಭಾಷೆಗಳು, ಸಂಸ್ಕೃತಿ, ಆಹಾರ, ಸಂಪ್ರದಾಯ, ವೇಷಭೂಷಣ, ಇನ್ನು ಏನೇನಿಲ್ಲ? ಭಾರತವು ಅಕ್ಷರಶಃ ಪ್ರತಿಯೊಂದನ್ನು ಹೊಂದಿರುವ ರಾಷ್ಟ್ರ. ಪ್ರತಿಯೊಂದು ಎಂದರೆ ಕೆಲವೊಂದು ಮೂಢನಂಬಿಕೆ ಮತ್ತು ಅಸಾಮಾನ್ಯ ಆಚರಣೆಗಳು ರಾಷ್ಟ್ರದಲ್ಲಿದೆ. ಆಧುನಿಕ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತವು ಮತ್ತೊಂದು ಕಡೆಯಲ್ಲಿ ಮದುವೆ ಎನ್ನುವ ವಿಚಿತ್ರ ಆಚರಣೆಗಳಲ್ಲಿ ಅಗ್ರಸ್ಥಾನ ಪಡೆದಿದೆ.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಮದುವೆ ಎಂದರೆ ಒಂದು ಹಬ್ಬದ ಸಡಗರ, ಸಂಭ್ರಮದ ವಾತಾವರಣ. ಪ್ರತಿ ಧರ್ಮದಲ್ಲಿಯೂ ವಿವಾಹಗಳಿಗೆ ತಮ್ಮದೇ ಆದ ಶಾಸ್ತ್ರಗಳಿವೆ. ಆದರೆ ಕೆಲವು ಶಾಸ್ತ್ರಗಳು ಅ ಪಂಗಡದ ಹೊರಗಿನವರಿಗೆ ಅತಿ ವಿಚಿತ್ರ ಎನ್ನಿಸುತ್ತದೆ. ಈ ಚಿತ್ರವಿಚಿತ್ರ ಸಂಪ್ರದಾಯಗಳನ್ನು ಆಚರಿಸಿದ ಬಳಿಕವೇ ದಂಪತಿಗಳನ್ನು ಸಮಾಜ ಸ್ವಾಗತಿಸುತ್ತದೆ. ಉದಾಹರಣೆಗೆ ಭಾರತದ ಕೆಲವು ಕಡೆಗಳಲ್ಲಿ ಇಂದಿಗೂ ಮಹಿಳೆಯರನ್ನು ಮರಗಳಿಗೆ ಮತ್ತು ಪ್ರಾಣಿಗಳಿಗೆ ಮದುವೆ ಮಾಡಿಕೊಡುವ ವಿಚಿತ್ರ ಸಂಪ್ರದಾಯವಿದೆ. ಬಳಿಕವೇ ಅವರನ್ನು ಪುರುಷರಿಗೆ ವಿವಾಹ ಮಾಡಿಕೊಡಲಾಗುತ್ತದೆ.

ಮರಕ್ಕೆ ಮದುವೆ ಮಾಡಿಕೊಡುವ ಈ ಸಂಪ್ರದಾಯಕ್ಕೆ ಕುಂಭ ವಿವಾಹವೆಂದು ಕರೆಯುತ್ತಾರೆ. ಖ್ಯಾತ ತಾರೆ ಐಶ್ವರ್ಯಾ ರೈ ಸಹಾ ಅಭಿಶೇಕ್ ಬಚ್ಚನ್‪ ರೊಂದಿಗೆ ವಿವಾಹವಾಗುವ ಮೊದಲು ಅರಳಿ ಮರವನ್ನು ಮದುವೆಯಾಗಿದ್ದರು. ಇದರಿಂದ ಅವರು ಮಾಂಗಳಿಕ ದೋಷದಿಂದ ಮುಕ್ತರಾದರು ಎಂದು ಅವರಿಗೆ ಮದುವೆ ಮಾಡಿಸಿದ ಅರ್ಚಕರು ತಿಳಿಸುತ್ತಾರೆ.. ಅದು ಏನೇ ಇರಲಿ, ಆದರೆ ಕೆಲವೊಂದು ನಮ್ಮಲ್ಲಿ ನಡೆಯುವ ವಿಚಿತ್ರ ಮದುವೆ ಸಂಪ್ರದಾಯಗಳು ನಿಜಕ್ಕೂ ಅಚ್ಚರಿಯ ಕೂಪಕ್ಕೆ ತಳ್ಳುತ್ತದೆ...

ಕುಂಭವಿವಾಹ (ಮಾಂಗಲಿಕ ದೋಷವಿರುವ ಭಾರತೀಯ ವಧುವಿನ ವಿವಾಹ ಸಂಪ್ರದಾಯ)

ಕುಂಭವಿವಾಹ (ಮಾಂಗಲಿಕ ದೋಷವಿರುವ ಭಾರತೀಯ ವಧುವಿನ ವಿವಾಹ ಸಂಪ್ರದಾಯ)

ಹಿಂದೂ ಸಂಪ್ರದಾಯದಲ್ಲಿ ಜಾತಕವನ್ನು ಅತಿ ಜಾಗರೂಕತೆಯಿಂದ ಪರಿಶೀಲಿಸಿ ವಧೂವರರ ಗುಣಗಳನ್ನು ತಾಳೆ ಹಾಕಿದ ಬಳಿಕವೇ ವಿವಾಹಕ್ಕೆ ಅನುಮತಿ ನೀಡಲಾಗುತ್ತದೆ. ಒಂದು ವೇಳೆ ವರ ಅಥವಾ ವಧುವಿನ ಜಾತಕದಲ್ಲಿ ಮಾಂಗಳಿಕ ದೋಶವಿದ್ದರೆ ಈ ದೋಶವನ್ನು ನಿವಾರಿಸದ ಹೊರತು ವಿವಾಹವಾದರೆ ಅವರ ಸಂಗಾತಿಯಾಗುವವರಿಗೆ ಗಂಡಾಂತರ ಎದುರಾಗಬಹುದು ಎಂದು ನಂಬಲಾಗಿದೆ. ಇದನ್ನು ಸರಿಪಡಿಸಲು ವಿವಾಹಕ್ಕೂ ಮೊದಲು ದೋಶವಿರುವ ವ್ಯಕ್ತಿಯನ್ನು ಅರಳಿ ಅಥವಾ ಬಾಳೆಮರಕ್ಕೆ ಮದುವೆ ಮಾಡಿಕೊಡಲಾಗುತ್ತದೆ.

ಕುಂಭವಿವಾಹ (ಮಾಂಗಲಿಕ ದೋಷವಿರುವ ಭಾರತೀಯ ವಧುವಿನ ವಿವಾಹ ಸಂಪ್ರದಾಯ)

ಕುಂಭವಿವಾಹ (ಮಾಂಗಲಿಕ ದೋಷವಿರುವ ಭಾರತೀಯ ವಧುವಿನ ವಿವಾಹ ಸಂಪ್ರದಾಯ)

ಕೆಲವೆಡೆ ಕಾಲ್ಪನಿಕ ಸೊಸೆ ಅಥವಾ ಅಳಿಯನನ್ನು ಒಂದು ನೀರು ತುಂಬಿದ ಜಾಡಿಯ ರೂಪದಲ್ಲಿಯೂ ಕಂಡು ಮದುವೆ ಮಾಡಿಕೊಡಲಾಗುತ್ತದೆ. ಇದಕ್ಕೆ ಕುಂಭ ವಿವಾಹ ಎಂದು ಹೇಳುತ್ತಾರೆ. ಕುಂಭ ವಿವಾಹದ ಕೊಂಚ ಹೊತ್ತಿನ ಬಳಿಕ ಇದನ್ನು ಊರ್ಜಿತಗೊಳಿಸಿ ಮತ್ತೊಮ್ಮೆ ಸಂಪ್ರದಾಯದ ಅನುಸಾರ ನಿಗದಿತ ವಧೂವರರಿಗೆ ಮದುವೆ ಮಾಡಲಾಗುತ್ತದೆ. ಖ್ಯಾತ ತಾರೆ ಐಶ್ವರ್ಯಾ ರೈ ಸಹಾ ಇದೇ ರೀತಿಯ ವಿವಾಹಕ್ಕೆ ಒಳಗಾದರು. ಅಭಿಶೇಕ್ ರನ್ನು ಮದುವೆಯಾಗುವ ಮೊದಲು ವಾರಣಾಸಿಗೆ ತೆರಳಿ ಅಲ್ಲಿನ ಅರಳಿ ಮರಕ್ಕೆ ಮದುವೆಯಾಗಿದ್ದರು.

ಪ್ರಾಣಿಗಳೊಂದಿಗೆ ಮದುವೆ!

ಪ್ರಾಣಿಗಳೊಂದಿಗೆ ಮದುವೆ!

ಈ ಸಂಪ್ರದಾಯ ಭಾರತ ಅಲ್ಲದೇ ಬೇರೆ ದೇಶದಲ್ಲಿರುವ ಸಾಧ್ಯತೆ ಕಡಿಮೆ. ಕೆಲವು ಹಳ್ಳಿಗಳಲ್ಲಿ ಕುರೂಪವನ್ನು ಹುಟ್ಟಿನಿಂದಲೇ ಪಡೆದ ಹೆಣ್ಣುಮಕ್ಕಳು ಭೂತದ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಭಾವಿಸಿ ಅವರನ್ನು ಪ್ರಾಣಿಯೊಂದಕ್ಕೆ ಮದುವೆ ಮಾಡುವ ಮೂಲಕ ಭೂತದಿಂದ ಬಿಡಿಸುವ ಸಂಪ್ರದಾಯವಿದೆ. ಹುಟ್ಟಿದಾಗಲೇ ಹಲ್ಲು ಇರುವ, ಕುರೂಪದ ಅಥವಾ ಮುಖದಲ್ಲಿ ಯಾವುದೋ ವೈಪರೀತ್ಯವಿರುವ (ಸೀಳುತುಟಿ ಇತ್ಯಾದಿ) ಮಕ್ಕಳನ್ನು ನಾಯಿ ಅಥವಾ ಕುರಿಗೆ ಮದುವೆ ಮಾಡುತ್ತಾರೆ.

ಪ್ರಾಣಿಗಳೊಂದಿಗೆ ಮದುವೆ!

ಪ್ರಾಣಿಗಳೊಂದಿಗೆ ಮದುವೆ!

ಈ ವಿವಾಹದಲ್ಲಿಯೂ ಬೇರೆ ವಿವಾಹದಲ್ಲಿರುವಷ್ಟೇ ಜನರು ಸೇರಿ ಮದ್ಯಪಾನ ಮಾಡಿ ನರ್ತಿಸಿ ಸಂಭ್ರಮಿಸುತ್ತಾರೆ. ಆದರೆ ಹುಡುಗಿ ಆ ಪ್ರಾಣಿಯೊಂದಿಗೆ ಸಂಸಾರ ಮಾಡಬೇಕಿಲ್ಲ, ದಿನಗಳೆದಂತೆ ನಾಯಿ ಅಥವಾ ಕುರಿಯನ್ನು ಒದ್ದೋಡಿಸುವ ಮೂಲಕ ಭೂತವನ್ನೂ ಅಟ್ಟಿದ್ದೇವೆ ಎಂದು ಜನರು ನಂಬುತ್ತಾರೆ. ಪ್ರಾಪ್ತ ವಯಸ್ಸಿಗೆ ಆಕೆಗೆ ಮನುಷ್ಯನೊಂದಿಗೇ ಮದುವೆಯಾಗುತ್ತದೆ.

ರಾಜಸ್ಥಾನದ ಗರಾಸಿಯಾ ಜನಾಂಗಕ್ಕೆ ಸೇರಿದ ಜನರು

ರಾಜಸ್ಥಾನದ ಗರಾಸಿಯಾ ಜನಾಂಗಕ್ಕೆ ಸೇರಿದ ಜನರು

ತಮ್ಮ ವಿಶಿಷ್ಟ ಸಂಪ್ರದಾಯದಿಂದಲೇ ಭಾರತದ ಸಂಸ್ಕೃತಿಯ ವೈವಿಧ್ಯದಲ್ಲಿ ಸ್ಥಾನ ಪಡೆದಿರುವ ಈ ಜನಾಂಗದಲ್ಲಿ ಯುವಜನತೆಗೆ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವ ಸರ್ವ ಸ್ವಾತಂತ್ರ್ಯವನ್ನು ಒದಗಿಸಲಾಗಿದೆ. ಇವರು ವಿವಾಹ ಬಂಧನದ ಗೊಡವೆಯೇ ಇಲ್ಲದೇ ಜೊತೆಯಾಗಿರಬಹುದು, ಈ ಅವಧಿಯಲ್ಲಿ ಮಕ್ಕಳನ್ನೂ ಪಡೆಯಬಹುದು. ಈ ಸಮಾಜದಲ್ಲಿ ಮಹಿಳಾ ಪ್ರಾತಿನಿಧ್ಯವಿದ್ದು ಇವರಿಗೆ ಹೆಚ್ಚಿನ ಸ್ಥಾನಮಾನವನ್ನು ನೀಡಲಾಗುತ್ತದೆ. ಈ ಸಮಾಜದಲ್ಲಿ ಅತ್ಯಾಚಾರ ಅಥವಾ ವರದಕ್ಷಿಣೆಯ ಪ್ರಕರಣಗಳು ಇಲ್ಲವೇ ಇಲ್ಲವೆನ್ನಬಹುದು. ಕೃಷಿಯನ್ನೇ ಆಧರಿಸಿದ ಈ ಜನಾಂಗದಲ್ಲಿ ಮೊದಲ ಆದ್ಯತೆ ಈ ಜೋಡಿ ವಿವಾಹವಾಗಬೇಕಾದರೆ ಇವರು ಅವಲಂಬಿಸಿರುವ ಕೃಷಿ ಕುಟುಂಬ ನಿರ್ವಹಣೆಗೆ ಸಾಲುತ್ತದೆಯೇ ಎಂಬುದನ್ನೇ ಪ್ರಮುಖವಾಗಿ ಆಧರಿಸುತ್ತದೆ. ಅಂದರೆ ಕುಟುಂಬ ನಿರ್ವಹಣೆಗೆ ಸಾಕಷ್ಟು ಆದಾಯ ಜಮಾ ಆದ ಬಳಿಕವೇ ಮದುವೆಯ ವಿಚಾರ!!

ರಾಜಸ್ಥಾನದ ಈ ಗ್ರಾಮದಲ್ಲಿ, ಮೊದಲು ಮಕ್ಕಳು, ಆಮೇಲೆ ಮದುವೆ!!

ಇನ್ನೊಂದು ವಿಚಿತ್ರ ಸಂಪ್ರದಾಯ

ಇನ್ನೊಂದು ವಿಚಿತ್ರ ಸಂಪ್ರದಾಯ

ಈ ಜನಾಂಗದ ಇನ್ನೊಂದು ವಿಚಿತ್ರ ಸಂಪ್ರದಾಯವೆಂದರೆ ಇನ್ನೂ ಹದಿಹರೆಯದಲ್ಲಿರುವ ಹೆಣ್ಣು ಮಕ್ಕಳನ್ನು ತಮಗೆ ಇಷ್ಟವೆನಿಸಿದ ಹದಿಹರೆಯದ ಯುವಕರನ್ನು ಆಯ್ದುಕೊಳ್ಳಲು ಎರಡು ದಿನಗಳ ಮೇಳವೊಂದನ್ನು ಆಯೋಜಿಸಲಾಗುತ್ತದೆ. ರಾಜಸ್ಥಾನ ಮತ್ತು ಗುಜರಾತ್ ರಾಜ್ಯದ ಕೆಲವು ಆಯ್ದ ಸ್ಥಳಗಳಲ್ಲಿ ಈ ಮೇಳ ನಡೆಯುತ್ತದೆ. ಎರಡು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಈ ಜನಾಂಗಕ್ಕೆ ಸೇರಿದ ಎಲ್ಲಾ ಜನರು ತಮ್ಮ ತಮ್ಮ ಯುವ ಮಕ್ಕಳನ್ನು ಕರೆತರುತ್ತಾರೆ ಹಾಗೂ ಅಲ್ಲಿಯೇ ಬಿಟ್ಟು ಹಿರಿಯರೆಲ್ಲಾ ಹಿಂದಿರುಗುತ್ತಾರೆ. ಯುವಜನತೆ ತಮಗೆ ಇಷ್ಟವಾದ ವ್ಯಕ್ತಿಯನ್ನು ಆರಿಸಿಕೊಂಡು ತಮ್ಮ ಕುಟುಂಬಗಳಿಗೆ ಹಿಂದಿರುಗುತ್ತಾರೆ. ಬಳಿಕ ಈ ಜೋಡಿ ವಿವಾಹದ ಬಂಧನವಿಲ್ಲದೇ ಮುಂದಿನ ದಿನಗಳನ್ನು ಗಂಡಹೆಂಡಿರಂತೆಯೇ ಜೊತೆಯಾಗಿ ಕಳೆಯುತ್ತಾರೆ.

ರಾಜಸ್ಥಾನದ ಮಂಚೇರಾ ಎನ್ನುವ ಒಂದು ಪುಟ್ಟ ಹಳ್ಳಿ

ರಾಜಸ್ಥಾನದ ಮಂಚೇರಾ ಎನ್ನುವ ಒಂದು ಪುಟ್ಟ ಹಳ್ಳಿ

ಈ ಹಳ್ಳಿಯಲ್ಲಿ ಹೆಣ್ಣುಮಕ್ಕಳ ಸಂಖ್ಯೆ ತುಂಬಾನೇ ಕಡಿಮೆ. ಗಂಡಸರಿಗೆ ಹೋಲಿಸಿದರೆ ಮಹಿಳೆಯರ ಅನುಪಾತದಲ್ಲಿ ಬಹಳ ದೊಡ್ಡ ಅಂತರ ಇರುವುದೇ ಕಾರಣವಂತೆ. ಕುಟುಂಬಕ್ಕೆ ಸೇರಿದ ಆಸ್ತಿಯ ಪ್ರಮಾಣ ಕಡಿಮೆ ಇದ್ದು, ಕಿರಿದಾದ ಜಮೀನು ಇರುವವರು ಈ ಪದ್ಧತಿಯನ್ನು ಅನುಸರಿಸುದ್ದಿದ್ದಾರೆ.

ರಾಜಸ್ಥಾನದ ಮಂಚೇರಾ ಎನ್ನುವ ಒಂದು ಪುಟ್ಟ ಹಳ್ಳಿ

ರಾಜಸ್ಥಾನದ ಮಂಚೇರಾ ಎನ್ನುವ ಒಂದು ಪುಟ್ಟ ಹಳ್ಳಿ

ಅಂತಹ ಕುಟುಂಬದಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಸಹೋದರರಿದ್ದರೆ ವಿವಾಹದ ನಂತರ ಜಮೀನಿನ ಪಾಲು ಮಾಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಇರುವ ಜಮೀನು ಇನ್ನಷ್ಟು ಕಿರಿದಾಗುತ್ತದೆ ಎನ್ನುವ ಚಿಂತೆ. ಇಂತಹ ಕಿರಿದಾದ ಆಸ್ತಿಯನ್ನು ಹೊಂದಿರುವ ಸಂಸಾರದಲ್ಲಿ ಅಣ್ಣ ಮದುವೆಯಾದರೆ ತಮ್ಮ ತನ್ನ ವೈವಾಹಿಕ ಜೀವನವನ್ನು ತ್ಯಾಗ ಮಾಡುತ್ತಾನೆ. ಜೊತೆಗೆ ಅಣ್ಣನನ್ನು ವಿವಾಹವಾದ ಮಹಿಳೆಯನ್ನೇ ತಮ್ಮನು ಹಂಚಿಕೊಳ್ಳುತ್ತಾನೆ.

English summary

Extremely Strange Wedding Traditions in India

The one thing every human society has in common is marriage. It doesn’t matter how isolated or backwards it is, if you stick around long enough then you’ll find yourself at something at least resembling a wedding. That being said, it will almost certainly not be what you expect. In fact it is likely to be gross, confusing, terrifying, or any mixture of the three. But as you read this list of strange wedding traditions just think to yourself – who’s the weird one?
X
Desktop Bottom Promotion