For Quick Alerts
ALLOW NOTIFICATIONS  
For Daily Alerts

  ರಾಶಿಯ ಆಧಾರದ ಮೇಲೆ-ನಿಮ್ಮ ಯಶಸ್ಸಿನ ರಹಸ್ಯ ಅರಿಯಿರಿ

  By Deepak M
  |

  ರಾಶಿಯು ಮನುಷ್ಯನ ಜೀವನದ ಕುರಿತಾಗಿ ಹಲವಾರು ಪರಿಣಾಮಗಳನ್ನು ಮಾಡುವ ಅಂಶವಾಗಿರುತ್ತದೆ. ಆದ್ದರಿಂದ ರಾಶಿಗೆ ನಾವು ಹೆಚ್ಚಿನ ಮಹತ್ವವನ್ನು ನೀಡುತ್ತೇವೆ. ರಾಶಿ ನೋಡಿ ಭವಿಷ್ಯ ಹೇಳುವುದನ್ನು ನೀವು ತಿಳಿದಿರಬಹುದು.

  ಆದರೆ ರಾಶಿಯ ಪ್ರಕಾರ ನಿಮ್ಮ ಯಶಸ್ಸಿಗೆ ಸೂತ್ರವನ್ನು ತಿಳಿಯಬಹುದು ಎಂಬುದನ್ನು ನೀವು ಓದಿದರೆ ಖಂಡಿತ ಅಚ್ಚರಿಪಡುತ್ತೀರಿ. ಬನ್ನಿ ನಿಮಗಾಗಿ ಇಂದು ರಾಶಿ ಪ್ರಕಾರ ಯಶಸ್ಸಿನ ಸೂತ್ರಗಳನ್ನು ನಾವು ತಿಳಿಸುತ್ತೇವೆ. ಮುಂದೆ ಓದಿ... 

  ಮೇಷ

  ಮೇಷ

  ಇವರು ಸವಾಲುಗಳನ್ನು ಎದುರಿಸುತ್ತಾರೆ ಮತ್ತು ಅದನ್ನು ಮೆಟ್ಟಿ ನಿಲ್ಲುತ್ತಾರೆ. ಅವರು ಜುಗುಪ್ಸೆಯನ್ನು ತಾಳುವ ಅಗತ್ಯವಿರುವುದಿಲ್ಲ. ಇತರರ ದೌರ್ಬಲ್ಯವನ್ನು ಇವರು ತಿಳಿದುಕೊಳ್ಳದೆ ಇರುವುದು ಒಳ್ಳೆಯದು. ಏಕೆಂದರೆ ಇದೇ ಮೇಷ ರಾಶಿಯವರನ್ನು ಅಪಾಯಕ್ಕೆ ತಳ್ಳುತ್ತದೆ.

  ರಾಶಿ ಭವಿಷ್ಯ: ರಾಶಿಗೆ ತಕ್ಕಂತೆ ವೃತ್ತಿ-ಯಶಸ್ಸು ಕಟ್ಟಿಟ್ಟ ಬುತ್ತಿ...

  ವೃಷಭ ರಾಶಿ

  ವೃಷಭ ರಾಶಿ

  ಇವರು ತಮ್ಮ ಕಂಫರ್ಟ್ ಜೋನ್‌ನಿಂದ ಹೊರಬರುವುದು ಒಳ್ಳೆಯದು. ಇವರು ಆರಾಮವಾಗಿದ್ದಾಗ ಅದರಲ್ಲಿಯೇ ಸುಖವನ್ನು ಕಾಣುತ್ತಾರೆ. ಆದರೆ ಕಷ್ಟ ಬಂದಾಗ ನರಳಿ ಬಿಡುತ್ತಾರೆ. ಯಶಸ್ಸು ಬೇಕಾದರೆ ಮೈಮುರಿದು ಕೆಲಸ ಮಾಡಬೇಕು ಆಗಲೇ ಪ್ರಗತಿ ಸಾಧ್ಯ.

  ಮಿಥುನ

  ಮಿಥುನ

  ಇವರು ಹೊಸ ಹೊಸ ವಿಚಾರವನ್ನು ಕಲಿಯುತ್ತಾ ಇರುತ್ತಾರೆ. ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಿರುತ್ತಾರೆ ಮತ್ತು ಹೊಸಬರನ್ನು ಭೇಟಿ ಮಾಡುತ್ತಿರುತ್ತಾರೆ ಆ ಮೂಲಕ ಯಶಸ್ಸನ್ನು ಗಳಿಸುತ್ತಾರೆ.

  ಕಟಕ ರಾಶಿ

  ಕಟಕ ರಾಶಿ

  ಇವರು ಹೊಸ ಹೊಸ ಯೋಜನೆ ಕೈಗೊಳ್ಳುವ ಮೊದಲು ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಒಳ್ಳೆಯದು. ನಿಮ್ಮ ಲುಕ್ ಬದಲಾದರೆ ಲಕ್ ಸಹ ಬದಲಾಗುತ್ತದೆ. ಯಶಸ್ಸು ಸಹ ಸಿಕ್ಕುತ್ತದೆ ಎಂದು ಹೇಳುತ್ತದೆ ರಾಶಿ ಭವಿಷ್ಯ.

  ಸಿಂಹ

  ಸಿಂಹ

  ಸೃಜನಶೀಲತೆಯನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಸಹ ಜನಪ್ರಿಯತೆಯನ್ನು ಗಳಿಸಬಹುದು. ಜನರ ನಡುವೆ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಿಕೆ ಇವರಿಗೆ ಜನ್ಮಜಾತವಾಗಿ ಬಂದಿರುತ್ತದೆ. ಇದನ್ನು ಬಳಸಿಕೊಂಡರೆ ಸಾಕು ಇವರು ಯಶಸ್ಸು ಗಳಿಸಬಹುದು.

  ರಾಶಿ ಭವಿಷ್ಯ: ನಿಮ್ಮ ವ್ಯಕ್ತಿತ್ವವನ್ನು ಬಿಚ್ಚಿಡುವ 'ಸಂಖ್ಯೆಗಳು'

  ಕನ್ಯಾ

  ಕನ್ಯಾ

  ಇವರು ಕಠಿಣತೆಯನ್ನೇ ಮೈಗೂಡಿಸಿಕೊಂಡಿರುತ್ತಾರೆ. ಯಾವುದಕ್ಕೂ ರಾಜಿಯಾಗುವುದಿಲ್ಲ. ಎಲ್ಲದರ ಮೇಲೆ ನಿಯಂತ್ರಣ ಸಾಧಿಸುವುದನ್ನು ಇವರು ಬಿಡಬೇಕು. ಸ್ವಲ್ಪ ರಿಲ್ಯಾಕ್ಸ್ ಆಗಿದ್ದಲ್ಲಿ ಇವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.

  ತುಲಾ

  ತುಲಾ

  ಇವರು ಕೆಲಸದ ಮೇಲೆ ನಿಗಾವಹಿಸಬೇಕು ಮತ್ತು ಕೆಲಸದ ನಡುವೆ ವಿಶ್ರಾಂತಿಯನ್ನು ಸಹ ಪಡೆಯಬೇಕಾಗುತ್ತದೆ. ವಿಶ್ರಾಂತಿಗಳು ಇವರ ಗಮನವನ್ನು ಗುರಿಯೆಡೆಗೆ ಕೇಂದ್ರೀಕರಿಸಲು ನೆರವಾಗುತ್ತದೆ ಮತ್ತು ಯಶಸ್ಸನ್ನು ಸಹ ನೀಡುತ್ತದೆ. ಒತ್ತಡ ರಹಿತವಾಗಿ ಕೆಲಸ ಮಾಡಿ ಯಶಸ್ಸು ಪಡೆಯಿರಿ.

  ಅಪ್ರಾಮಾಣಿಕ ಜನರ, ರಾಶಿ ಭವಿಷ್ಯದಲ್ಲೂ ಮೋಸದ ಗುಣವಿದೆ!

  ವೃಶ್ಚಿಕ

  ವೃಶ್ಚಿಕ

  ಇವರು ತಮ್ಮ ಮೇಲಿರುವ ಜವಾಬ್ದಾರಿಗಳನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಸ್ವಲ್ಪ ಮಟ್ಟಿಗೆ ದಡ್ಡರಾಗಿರುವುದು ಸಹ ಒಳ್ಳೆಯದು. ವಿನೋದ ಸ್ವಭಾವವನ್ನು ಬೆಳೆಸಿಕೊಂಡರೆ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ಜನರ ನಡುವೆ ನಿಮ್ಮ ಜನಪ್ರಿಯತೆ ಬೆಳೆಯುವುದು!

  ಧನುರ್ ರಾಶಿ

  ಧನುರ್ ರಾಶಿ

  ಇವರು ಜೀವನದಲ್ಲಿ ತುಂಬಾ ಆಶಾವಾದಿಗಳಾಗಿರುತ್ತಾರೆ ಮತ್ತು ನಿಷ್ಕಪಟ ಮನಸ್ಸಿನವರಾಗಿರುತ್ತಾರೆ. ಇವರು ಜೀವನದಲ್ಲಿ ವಾಸ್ತವ ಗುರಿಗಳನ್ನು ಇರಿಸಿಕೊಂಡು ಅದರತ್ತ ಗಮನಹರಿಸುವುದು ಒಳ್ಳೆಯದು. ಇದರಿಂದ ಮುಂದೆ ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಳ್ಳಬಹುದು. ಜೊತೆಗೆ ಇದರಿಂದ ಇವರ ಧನಾತ್ಮಕ ಮನೋಭಾವ ಮತ್ತು ಶಕ್ತಿ ಸಹ ಉಳಿತಾಯವಾಗುತ್ತದೆ.

  ಮಕರ

  ಮಕರ

  ಇವರು ಜನ್ಮತಃ ನಾಯಕರಾಗಿರುತ್ತಾರೆ ಆದರೆ ಇವರು ಯಾವಾಗಲೂ ಇತರರಿಗೆ ಉದಾಹರಣೆಯನ್ನು ನೀಡಲು ಹೋಗಿ ಸಮಯ ವ್ಯರ್ಥ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಸ್ವಲ್ಪ ಹಿಂದೆ ನಿಂತು ನೋಡುವುದು ಒಳ್ಳೆಯದು. ಯಾವಾಗಲೂ ಮುನ್ನುಗ್ಗಬೇಡಿ. ತಾಳ್ಮೆ ಇರಲಿ.

  ಕುಂಭ

  ಕುಂಭ

  ಇವರು ಯಾವಾಗಲು ಪ್ರವಾಸ ಮಾಡುತ್ತಿರುತ್ತಾರೆ. ಇದರಿಂದ ಹಲವಾರು ಜನರನ್ನು ಭೇಟಿ ಮಾಡುತ್ತಾರೆ ಮತ್ತು ದೇಶ ಸುತ್ತಿ ಕಲಿಯುತ್ತಾರೆ. ಇವರ ಪ್ರವಾಸಗಳು ಇವರ ವೃತ್ತಿಗೆ ಸಹಾಯವನ್ನು ಮಾಡುತ್ತದೆ. ಜೊತೆಗೆ ಸೃಜನಶೀಲತೆಯನ್ನು ಸಹ ಹೆಚ್ಚಿಸುತ್ತದೆ ಹಾಗು ಯಶಸ್ಸನ್ನು ನೀಡುತ್ತದೆ.

  ಮೀನ

  ಮೀನ

  ಒಬ್ಬ ಸ್ವಯಂಸೇವಕರಾಗಿ ಜನರಿಗೆ ಸಹಾಯ ಮಾಡುವುದರ ಮೂಲಕ ಇವರ ವ್ಯಕ್ತಿತ್ವ ಪ್ರಕಾಶಮಯವಾಗುತ್ತದೆ. ಹಾಗೆಂದು ಸ್ವಂತ ವಿಚಾರಗಳನ್ನು ಮರೆಯಬೇಡಿ ಎಂದು ನಾವು ಹೇಳುತ್ತಿಲ್ಲ. ಸ್ವಂತ ವಿಚಾರ ಮತ್ತು ಸಮಾಜ ಎರಡನ್ನೂ ಸಮತೋಲನದಿಂದ ನಿಭಾಯಿಸಿದರೆ ಇವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.

  ನಿಮ್ಮ ರಾಶಿಯ ಮೇಲೆ ಶನಿಯ ಪ್ರಭಾವ ಹೀಗಿದೆ ನೋಡಿ....

  English summary

  Easy Tips To Become Successful In Life, According To Zodiac

  These signs can help predict a lot of things in life, be it success or sorrow. It is important for us to know as to what is really necessary in our lives, according to what the zodiac signs predict. These tricks surely help a person to become successful over a short period of time. In short, these tricks work wonders, so check out on what would get you fame according to your zodiac sign!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more