ಆಪರೇಷನ್ ರೂಮ್‌ನಲ್ಲಿ ವೈದ್ಯರ ಗಲಾಟೆ!! ಕೊನೆಗೆ ಆಗಬಾರದೇ ನಡೆದು ಹೋಯಿತು!!

Posted By: Arshad
Subscribe to Boldsky

ವೈದ್ಯೋ ನಾರಾಯಣ ಹರಿಃ ಎಂಬ ನಾಣ್ಣುಡಿಯಂತೆ ಜೀವ ಉಳಿಸುವ ವೈದ್ಯರು ದೇವರಿಗೆ ಸಮನಾಗಿದ್ದಾರೆ. ಇಂದಿನ ದಿನಗಳಲ್ಲಿ ವೈದ್ಯವೃತ್ತಿ ಎಂದರೆ ಸೇವೆಯ ಬದಲಿಗೆ 'ಶೇವು' ಅಥವಾ ಸುಲಿಗೆಯೇ ಮುಖ್ಯ ಉದ್ದೇಶವಾಗಿರುವಂತೆ ತೋರುತ್ತದೆ.

ಇತ್ತೀಚಿನ ದಿನದಲ್ಲಿ ಜೀವನ ಮರಣದ ನಡುವೆ ಉಯ್ಯಾಲೆಯಾಡುತ್ತಿದ್ದ ರೋಗಿಯೊಬ್ಬರಿಗೆ ಶಸ್ತ್ರಕ್ರಿಯೆ ಮಾಡುತ್ತಿದ್ದ ಸಮಯದಲ್ಲಿಯೇ ಜೀವ ಉಳಿಸಬೇಕಾದ ವೈದ್ಯರು ಪರಸ್ಪರ ಕ್ಷುಲ್ಲುಕ ಜಗಳದಲ್ಲಿ ತೊಡಗಿರುವುದನ್ನು ವೀಡಿಯೋ ರೆಕಾರ್ಡಿಂಗ್ ನಲ್ಲಿ ನೋಡಿದಾಗ ಮಾತ್ರ ಎಂಥಹವರಿಗಾದರೂ ರಕ್ತ ಕುದಿಯುತ್ತದೆ. ವೀಡಿಯೋ ನೋಡಿದ ನಮಗೇ ಹೀಗಾದರೆ ಆ ರೋಗಿಯ ಬಂಧುಗಳಿಗೆ ಹೇಗಾಗಬಾರದು?

ಇದು ನಡೆದದ್ದೆಲ್ಲಿ?

ಇದು ನಡೆದದ್ದೆಲ್ಲಿ?

ರಾಜಸ್ಥಾನದ ಜೋಧಪುರದ ಆಸ್ಪತ್ರೆಗೆ ಗರ್ಭಿಣಿ ಮಹಿಳೆಯೊಬ್ಬರನ್ನು ಕರೆತರಲಾಗಿತ್ತು (ಹೆಸರನ್ನು ಗೋಪ್ಯವಾಡಲಾಗಿದೆ). ಈಕೆ ಹೆರಿಗೆ ಬೇನೆಯಿಂದ ಬಳಲುತ್ತಿದ್ದು ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿತ್ತು. ಈಕೆಗೆ ತಕ್ಷಣವೇ ಸಿ-ಸೆಕ್ಷನ್ ಶಸ್ತ್ರಕ್ರಿಯೆ ನಡೆಸುವುದು ಅಗತ್ಯವಾಗಿತ್ತು. ಆದರೆ ಈ ಶಸ್ತ್ರಕ್ರಿಯೆಯ ಸಂದರ್ಭದಲ್ಲಿ ರೋಗಿಯ ಆರೋಗ್ಯದ ಕಡೆಗೆ ಅತಿ ಹೆಚ್ಚಿನ ಕಾಳಜಿ ವಹಿಸಬೇಕಾದ ಇಬ್ಬರು ಜವಾಬ್ದಾರಿಯುತ ಹಾಗೂ ಉನ್ನತ ಹುದ್ದೆಯ ವೈದ್ಯರು ಪರಸ್ಪರ ಕೆಸರಾಟದಲ್ಲಿ ಮಗ್ನರಾಗಿದ್ದುದು ಹಾಗೂ ಈ ಸಂದರ್ಭದಲ್ಲಿ ವೈದ್ಯರು ಕಡ್ಡಯವಾಗಿ ತೊಡಲೇಬೇಕಾದ ಮುಖಗವಸನ್ನು ತೆಗೆದು ದೊಡ್ಡ ದನಿಯಲ್ಲಿ ಬೈಗಳನ್ನು ನೀಡುವ ಮೂಲಕ ಬಾಯಿಯಿಂದ ಹೊರಹೊಮ್ಮುವ ಕ್ರಿಮಿಗಳು ಶಸ್ತ್ರಕ್ರಿಯೆಯಲ್ಲಿ ತೆರೆದಿರುವ ಭಾಗಗಳಿಗೆ ಸೋಂಕು ಉಂಟುಮಾಡುವ ಸಾಧ್ಯತೆಯನ್ನು ಹೆಚ್ಚಿಸುವುದು ಎಲ್ಲರ ಎದೆ ಝಲ್ಲೆನಿಸಿದೆ.

ದುರದೃಷ್ಟವಶಾತ್, ಮಗುವನ್ನು ಉಳಿಸಲಾಗಿಲ್ಲ

ದುರದೃಷ್ಟವಶಾತ್, ಮಗುವನ್ನು ಉಳಿಸಲಾಗಿಲ್ಲ

ಈ ಸಮಯದಲ್ಲಿ ಮಗುವಿನ ಪ್ರಾಣ ಅತ್ಯಂತ ಸೂಕ್ಷ್ಮ ಹಂತದಲ್ಲಿದ್ದು ಉಳಿಸಬೇಕಾದ ವೈದ್ಯರು ಜಗಳದಲ್ಲಿ ತೊಡಗಿದ್ದರಿಂದಲೋ ಏನೋ, ಮಗು ಹುಟ್ಟಿದ ತಕ್ಷಣವೇ ಪ್ರಾಣ ಬಿಟ್ಟಿದೆ.

ಅರ್ಧ ಗಂಟೆ ಕಾಲ ಜಗಳ ಮಾಡಿಕೊಂಡ ವೈದ್ಯರು!

ಅರ್ಧ ಗಂಟೆ ಕಾಲ ಜಗಳ ಮಾಡಿಕೊಂಡ ವೈದ್ಯರು!

ಈ ಇಬ್ಬರೂ ವೈದ್ಯರು ಸುಮಾರು ಅರ್ಧ ಗಂಟೆ ಕಾಲ ಜಗಳದಲ್ಲಿ ತೊಡಗಿದ್ದು ಅಷ್ಟೂ ಹೊತ್ತು ರೋಗಿಯ ತೆರೆದಿದ್ದ ಹೊಟ್ಟೆಯ ಭಾಗ ಹಾಗೇ ಇದೆ. ಇವರ ಜೊತೆಗಿದ್ದ ಉಳಿದ ನರ್ಸ್ ಹಾಗೂ ಇತರ ಸಿಬ್ಬಂದಿ ಮೇಲಧಿಕಾರಿಗಳ ಧೋರಣೆಯನ್ನು ವಿರೋಧಿಸಲು ಸಾಧ್ಯವಾಗದೇ ದಿಗ್ಮೂಢರಾಗಿ ನಿಂತಿದ್ದಾರೆ.

ಪರಸ್ಪರ ಬೈಗುಳದ ಎರಚಾಟ

ಪರಸ್ಪರ ಬೈಗುಳದ ಎರಚಾಟ

ಇಬ್ಬರು ಕುಡುಕರು ಒಬ್ಬರನ್ನೊಬ್ಬರು ಬೈಯುವಂತೆ ಈ ಇಬ್ಬರು ಜವಾಬ್ದಾರಿಯುತ ಹಾಗೂ ಅತ್ಯಂತ ಸೂಕ್ಷ್ಮ ಸನ್ನಿವೇಶದಲ್ಲಿ ಬೈಗಳುಗಳನ್ನು ರವಾನಿಸುತ್ತಿದ್ದುದು ಅರ್ಧ ಘಂಟೆ ಮೀರಿದ ಕಾರಣ ಮಗುವನ್ನು ಉಳಿಸಲು ಸಾಧ್ಯವಾಗಿಲ್ಲ. ಆದರೆ ಇವರ ನಿಷ್ಕಾಳಜಿಯನ್ನು ಮಗುವಿನ ಸಾವಿಗೆ ಕಾರಣವೆಂದು ತೋರಿಸದೇ ಮಗುವಿನ ಸಾವಿಗೆ ಇನ್ನೇನು ಕಾರಣ ಎಂದು ಪರಿಶೀಲಿಸಲು ವಿಚಾರಣೆಯನ್ನು ಇನ್ನೂ ಮಾಡಲಾಗುತ್ತಿದೆ.

ಈ ಘಟನೆ ವಿಡಿಯೋದಲ್ಲಿ ದಾಖಲಾಗಿದೆ

ಈ ಘಟನೆ ವಿಡಿಯೋದಲ್ಲಿ ದಾಖಲಾಗಿದೆ

ಈ ಪ್ರಸಂಗವನ್ನು ಆ ಕೊಠಡಿಯಲ್ಲಿದ್ದ ಸೇವಾನಿರತ ನರ್ಸ್ ಒಬ್ಬರು ತಮ್ಮ ಮೊಬೈಲಿನಿಂದ ಯಾರಿಗೂ ಗೊತ್ತಾಗದಂತೆ ವಿಡಿಯೋ ಚಿತ್ರೀಕರಿಸಿಕೊಂಡಿದ್ದು ಇಬ್ಬರು ವೈದ್ಯರ ಬೈಗಳುಗಳನ್ನು ಬಹಿರಂಗಗೊಳಿಸಿದೆ. ಇವರಲ್ಲೊಬ್ಬರು ಹೆರಿಗೆ ಶಾಸ್ತ್ರ ಹಾಗೂ ಸ್ತ್ರೀರೋಗ ವಿಭಾಗದ ಸಹಾರ್ಯಕ ಪ್ರೊಫೆಸರ್ ಆಗಿದ್ದರೆ ಇನ್ನೊಬ್ಬರು ಅರವಳಿಕೆಯ ಪ್ರೊಫೆಸರ್ ಆಗಿದ್ದಾರೆ!

ಈ ವಿಡಿಯೋ ಗಮನಿಸಿ

ವೈದ್ಯರು ಹೇಗೆ ಜಗಳವಾಡುತ್ತಿದ್ದಾರೆ ಎಂಬುದನ್ನು ಈ ವೀಡಿಯೋ ಮೂಲಕ ನೀವೇ ನೋಡಿ ಪರಾಮರ್ಶಿಸಿ. ಇದನ್ನು ನೋಡುತ್ತಿದ್ದರೆ ವೈದ್ಯರ ನಡವಳಿಕೆಯ ಬಗ್ಗೆ ಕೋಪ, ಜುಗುಪ್ಸೆ ಮೊದಲಾದ ಭಾವನೆ ಮೂಡಿ ಮುಂದಿನ ಬಾರಿ ವೈದ್ಯರ ಬಳಿ ನೆರವಿಗೆ ಧಾವಿಸುವುದಕ್ಕಿಂತಲೂ ಸಾಂಪ್ರಾದಾಯಿಕ ವಿಧಾನವನ್ನೇ ಅನುಸರಿಸುವುದು ಮೇಲು ಎಂಬ ತೀರ್ಮಾನಕ್ಕೆ ಬರಲೂ ಸಾಕು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ.

For Quick Alerts
ALLOW NOTIFICATIONS
For Daily Alerts

    English summary

    doctors-fighting-during-pregnant-woman-surgery

    Doctors are considered to be the life-savers and in a layman's term, they are Gods! But being a doctor these days is nothing less than making a business! A recent incident of doctors fighting in an operation theatre sure made our blood boil with anger, as their argument did a permanent damage of killing the newborn! Check out more on this unfortunate incident that hampered the lives of the innocent family members...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more