Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕಳೆದ 22 ವರ್ಷಗಳಿಂದ ಈ ದಂಪತಿ ಒಳಚರಂಡಿಯಲ್ಲಿ ವಾಸಿಸುತ್ತಿದ್ದಾರೆ!
ಇವರು ಹೊರಜೀವನದ ಐಷಾರಾಮಗಳಿಗೆ ತಮ್ಮನ್ನು ತಾವು ಹೋಲಿಸಿಕೊಳ್ಳದೇ ಒಳಚರಂಡಿಯೊಂದರಲ್ಲಿ ಕಳೆದ ಇಪ್ಪತ್ತೆರಡು ವರ್ಷಗಳಿಂದ ಸುಖಜೀವನ ಸಾಗಿಸುತ್ತಾ ಬಂದಿದ್ದಾರೆ. ಬನ್ನಿ, ಈ ದಂಪತಿಯ ಮನೆಗೊಮ್ಮೆ ಭೇಟಿ ನೀಡಿ ಬರೋಣ!
ಮಾನವನಾಸೆಗೆ ಮಿತಿಯಿಲ್ಲ. ನಮಗೆ ಎಷ್ಟಿದ್ದರೂ ಸಾಲದು, ಇನ್ನೂ ಕೊಂಚ ಬೇಕು, ಇತರರಿಗಿಂತ ಕೊಂಚ ಮೇಲಿರಬೇಕು ಎಂಬುದೇ ನಮ್ಮೆಲ್ಲರ ಹಂಬಲವಾಗಿದೆ. ವಾಸ್ತವದಲ್ಲಿ ಈ ಹಂಬಲದಿಂದಲೇ ನಾಗರೀಕತೆ ಬೆಳೆದಿರುವುದು ಮಾತ್ರ ಸುಳ್ಳಲ್ಲ. ಹಿಂದಿನ ದಿನಗಳಲ್ಲಿ ಪಾಂಡಿತ್ಯಕ್ಕೆ ಹೆಚ್ಚು ಬೆಲೆ ನೀಡಲಾಗುತ್ತಿತ್ತು. ಇಂದು ಮನುಷ್ಯ ಹೊಂದಿರುವ ಹಣ ಮತ್ತು ಸವಲತ್ತುಗಳೇ ಬೆಲೆಬಾಳುತ್ತಿವೆ. ಈತನಿಗೆ ಎರಡೂ ಕೈಗಳಿಲ್ಲ, ಆದರೆ ತಾಯಿಯನ್ನು ಮಗುವಿನಂತೆ ಸಾಕುತ್ತಿದ್ದಾನೆ!
ಒಂದು ಖ್ಯಾತ ನಾಣ್ಣುಡಿಯಂತೆ ನಮಗೆ ನಮ್ಮ ತಟ್ಟೆಯಲ್ಲಿದ್ದುದಕ್ಕಿಂತ ಪಕ್ಕದವರ ತಟ್ಟೆಯಲ್ಲಿರುವ ಆಹಾರವೇ ಹೆಚ್ಚು ರುಚಿಕರ! ಇದೇ ರೀತಿ ನಮ್ಮ ಬಯಕೆಗಳು ಹಾಗೂ ಅಗತ್ಯತೆಗಳು ಕೂಡಾ. ನಾವೇಕೆ ಈ ಪರಿಯ ವೈಚಾರಿಕತೆಯ ಮಾತನಾಡುತ್ತಿದ್ದೇವೆ ಎಂದು ನೀವು ಅಚ್ಚರಿ ಪಡುತ್ತಿರಬಹುದು. ಇಂತಹ ಜನರೂ ಜಗತ್ತಿನಲ್ಲಿ ಇದ್ದಾರೆಯೇ? ಅಚ್ಚರಿಯಾಗುತ್ತಿದೆ!!
ಈ ವಿಚಾರವನ್ನು ಪೀಠಿಕೆಯಾಗಿ ಏಕೆ ಬಳಸಲಾಯಿತೆಂದರೆ ನಮ್ಮ ನಡುವೆ ಒಂದು ದಂಪತಿ ಹೊರಜೀವನದ ಐಷಾರಾಮಗಳಿಗೆ ತಮ್ಮನ್ನು ತಾವು ಹೋಲಿಸಿಕೊಳ್ಳದೇ ಒಳಚರಂಡಿಯೊಂದರಲ್ಲಿ ಕಳೆದ ಇಪ್ಪತ್ತೆರಡು ವರ್ಷಗಳಿಂದ ಸುಖಜೀವನ ಸಾಗಿಸುತ್ತಾ ಬಂದಿದ್ದಾರೆ. ಬನ್ನಿ, ಈ ದಂಪತಿಯ ಮನೆಗೊಮ್ಮೆ ಭೇಟಿ ನೀಡಿ ಬರೋಣ....

ಯಾರಿವರು?
ಕೊಲಂಬಿಯಾ ದೇಶದ ಮೆಡಿಲಿನ್ ಎಂಬ ನಗರ ವಾಸಿಗಳಾಗಿರುವ ಮಾರಿಯಾ ಗಾರ್ಸಿಯಾ ಮತ್ತು ಅವರ ಪತಿ ಮಿಗ್ಯುಯೆಲ್ ರೆಸ್ಟ್ರೆಪೋ ರವರೇ ಈ ದಂಪತಿಗಳಾಗಿದ್ದು ಇವರ ಸಮಾನ ಅಭಿರುಚಿ ಎಂದರೆ ಮಾದಕ ದ್ರವ್ಯ. ಮದುವೆಗೂ ಮುನ್ನ ಮಾದಕ ದ್ರವ್ಯ ಸೇವನೆಯ ಸಮಯದಲ್ಲಿಯೇ ಇವರಿಬ್ಬರೂ ಭೇಟಿಯಾಗಿ ಪರಸ್ಪರ ಪ್ರೀತಿಸಿ ಜೀವನಸಂಗಾತಿಗಳಾಗಲು ನಿರ್ಧರಿಸಿದರು.

ಆದರೆ ಈ ಜಗತ್ತು ಕ್ರೂರವಾಗಿದೆ
ಪ್ರೀತಿಸಿ ಜೀವನಸಂಗಾತಿಗಳಾಗುವ ನಿರ್ಧಾರ ಪಡೆದದ್ದೇನೋ ಸರಿ, ಆದರೆ ಮುಂದಿನ ಜೀವನ ನಡೆಯುವುದು ಹೇಗೆ? ಇಬ್ಬರೂ ಮಾದಕ ದ್ರವ್ಯ ವ್ಯಸನಿಗಳು. ಈ ನಿಟ್ಟಿನಲ್ಲಿ ಇಬ್ಬರೂ ತೆಗೆದುಕೊಂಡ ನಿರ್ಧಾರವೆಂದರೆ ಮಾದಕ ವಸ್ತುಗಳ ಸೇವನೆಯನ್ನು ತ್ಯಜಿಸುವುದು. ಆದರೆ ಇವರ ವಿವಾಹಕ್ಕೆ ಇಬ್ಬರ ಮನೆಯವರಿಂದಲೂ ಭಾರೀ ವಿರೋಧ ವ್ಯಕ್ತವಾಗಿ ಇಬ್ಬರೂ ತಮ್ಮ ತಮ್ಮ ಕುಟುಂಬಗಳನ್ನು ತ್ಯಜಿಸಿ ಹೊರಬಂದರು.

ಆದಾಯವಿಲ್ಲದೆ ಮನೆಯೆಲ್ಲಿ?
ನಗರದ ಯಾವುದೇ ಮೂಲೆಗೆ ಹೋದರೂ ಹಣವಿಲ್ಲದೇ ಮನೆ ಸಿಗುವ ಮಾತೇ ಇಲ್ಲ. ಹಣವಿಲ್ಲದ ಈ ದಂಪತಿ ತಮ್ಮ ತಮ್ಮ ಮನೆಗಳಿಂದ ಪರಿತ್ಯಕ್ತರಾಗಿ ಅಲೆಯುತ್ತಿದ್ದಾಗ ಅವರಿಗೆ ತಾತ್ಕಾಲಿಕವಾಗಿಯಾದರೂ ಆಶ್ರಯ ಪಡೆದುಕೊಳ್ಳಲು ಸೂಕ್ತ ಎಂದು ಅನ್ನಿಸಿದ್ದು ನಗರದ ಒಳಚರಂಡಿಯ ಭಾಗ. ಈ ಭಾಗ ಕೊಂಚ ಒಣದಾಗಿದ್ದು ಇಬ್ಬರಿಗೂ ಸಾಕಷ್ಟು ಸ್ಥಳಾವಕಾಶವಿತ್ತು. ಅಂದಿನಿಂದ ಅವರಿಗೆ ಆಶ್ರಯ ಕೊಟ್ಟ ಈ ಒಳಚರಂಡಿ ಇಂದಿನವರೆಗೂ ಶಾಶ್ವತವಾದ ಮನೆಯೇ ಆಗಿಬಿಟ್ಟಿದೆ. ಈ ಮನೆಯ ಪ್ರಮುಖ ದ್ವಾರವಿರುವುದು ಎಲ್ಲಿ ಅಂದರೆ ಸೂರಿನಲ್ಲಿ, ನೇರವಾಗಿ ತಲೆಯ ಮೇಲೆ.

ಈ ಮನೆಯಲ್ಲಿ ಹಲವು ಸವಲತ್ತುಗಳಿವೆ!!
ಮನೆ ಎಂದ ಬಳಿಕ ಮನೆಯ ಒಡತಿಗೆ ಮನೆಯ ಹಲವು ಸವಲತ್ತುಗಳು ಬೇಕೇ ಬೇಕು. ಮುಖ್ಯವಾಗಿ ಅಡುಗೆ ಮನೆ. ಈ ಮನೆಯಲ್ಲಿಯೂ ಅವೆಲ್ಲವೂ ಇದೆ. ಪುಟ್ಟ ಅಡುಗೆ ಕೋಣೆ, ವಿದ್ಯುತ್ ಸಂಪರ್ಕ, ನೇತುಹಾಕಿದ ಟೀವಿ, ನೀರಿನ ಸಂಪರ್ಕ, ಒಟ್ಟಾರೆ ಒಂದು ಮನೆಯಲ್ಲಿ ಏನಿರಬೇಕೋ ಅವೆಲ್ಲಾ. ಅದರೆ ಕಿಟಕಿ ಮಾತ್ರ ಇಲ್ಲ.

ಇವರಿಗೊಂದು ಸಾಕುನಾಯಿಯೂ ಇದೆ
ಇವರ ಪ್ರೀತಿಪಾತ್ರ ನಾಯಿ 'ಬ್ಲಾಕೀ' ಸಹಾ ಇವರೊಂದಿಗೆ ಈ ಮನೆಯಲ್ಲಿಯೇ ಆಶ್ರಯ ಪಡೆದಿದ್ದು ಇಬ್ಬರೂ ಮನೆಯಲ್ಲಿ ಇಲ್ಲದ ಸಮಯದಲ್ಲಿ ಯಾರೂ ಮನೆಯ ಬಳಿ ಸುಳಿಯದಂತೆ ಕಾವಲು ಕಾಯುತ್ತದೆ.

ಈ ಮನೆ ಪ್ರಶಾಂತ ವಾತಾವರಣದಲ್ಲಿದೆ
ನಗರದ ಗಡಿಬಿಡಿ ಸ್ಥಳದಿಂದ ಈ ಮನೆ ಕೊಂಚ ದೂರದಲ್ಲಿರುವ ಕಾರಣ ಇವರ ಮನೆಯಲ್ಲಿ ಸದಾ ಶಾಂತಿ ಇದ್ದು ನೆಮ್ಮದಿ ತುಳುಕಾಡುತ್ತಿದೆ. ಅಷ್ಟೇ ಅಲ್ಲ, ಪ್ರತಿ ಹಬ್ಬಗಳಂದು ಇವರು ತಮ್ಮ ಮನೆಯನ್ನು ಒಳಗಿನಿಂದ ಸುಂದರವಾಗಿ ಸಿಂಗರಿಸುತ್ತಾರೆ ಸಹಾ.

ಈ ಮನೆಯನ್ನು ಬಿಡಲು ಅವರಿಗೆ ಇಷ್ಟವೇ ಇಲ್ಲ
ಇವರ ಇರುವಿಕೆಯನ್ನು ಕಂಡುಕೊಂಡ ಕೆಲವು ಸಹೃದಯಿಗಳು ಬೇರೆ ಮನೆ ಮಾಡಿಕೊಳ್ಳಲು ಸಲಹೆ ನೀಡಿದರೆ ಈ ಮನೆಯನ್ನು ಬಿಡಲೊಪ್ಪದ ಅವರು ತಮ್ಮ ನೆಮ್ಮದಿಯನ್ನು ಈ ಮನೆಯಲ್ಲಿಯೇ ಕಂಡುಕೊಂಡಿದ್ದು ನಾವಿಲ್ಲಿ ಸುಖವಾಗಿದ್ದೇವೆ. ಇದಕ್ಕಿಂತಲೂ ಹೆಚ್ಚಿನ ಸುಖ ಬೇರೆ ಮನೆಯಲ್ಲಿ ಸಿಗುತ್ತದೆ ಎಂದು ನಾವು ಭಾವಿಸುವುದಿಲ್ಲ ಎಂದು ನೇರವಾಗಿ ಈ ದಂಪತಿ ಹೇಳಿ ಬೆರಗು ಮೂಡಿಸುತ್ತಾರೆ. ನಿಮಗೆ ಮನೆಯನ್ನು ಪುಕ್ಕಟೆಯಾಗಿ ನೀಡುತ್ತೇವೆ ಬನ್ನಿ ಎಂದು ಕರೆದರೂ ಇವರು ಇಲ್ಲಿಂದ ಗುಳೆಹೋಗಲು ಒಪ್ಪಿಲ್ಲ. ಏನೇ ಆಗಲಿ, ಎಲ್ಲಿ ನೆಮ್ಮದಿ ಇದೆಯೋ ನಿಜವಾಗಿಯೂ ಅದೇ ನಿಮ್ಮ ಮನೆ.



Click it and Unblock the Notifications











