ಈ ಮೂರು ರಾಶಿಯವರ ಮೇಲೆ ಮಂಗಳನ ಪರಿವರ್ತನೆ ಗಾಢವಾಗಿದೆ

By Divya Pandith
Subscribe to Boldsky

ಪ್ರತಿಯೊಬ್ಬ ವ್ಯಕ್ತಿ ಹುಟ್ಟಿದ ಗಳಿಗೆಗೆ ಅನುಗುಣವಾಗಿ ನಕ್ಷತ್ರ, ರಾಶಿ, ದೆಸೆ ಹಾಗೂ ಗ್ರಹಗಳ ಸಂಚಾರವಿರುತ್ತದೆ. ಪ್ರತಿಯೊಂದು ಗ್ರಹಗಳೂ ಒಂದೊಂದು ಮನೆಯ ಪ್ರವೇಶ ಮಾಡಿದಾಗ, ಒಂದೊಂದು ಬಗೆಯ ಲಾಭ-ನಷ್ಟಗಳು ಉಂಟಾಗುತ್ತವೆ. ನಮ್ಮ ಅದೃಷ್ಟಗಳ ಬದಲಾವಣೆ ಉಂಟಾಗುವುದು. ವಿದ್ಯೆ, ವೃತ್ತಿ, ಕುಟುಂಬ, ಆರೋಗ್ಯ, ಜೀವನ, ಮಕ್ಕಳು ಹೀಗೆ ಎಲ್ಲಾ ಬಗೆಯ ಬದಲಾವಣೆಗಳು ಮತ್ತು ಆಗುಹೋಗುಗಳು ನಮ್ಮ ಗ್ರಹಗತಿಗಳನ್ನು ಅವಲಂಭಿಸಿರುತ್ತದೆ.

ರಾಶಿ ಭವಿಷ್ಯ: ನಿಮ್ಮ ವ್ಯಕ್ತಿತ್ವವನ್ನು ಬಿಚ್ಚಿಡುವ 'ಸಂಖ್ಯೆಗಳು'

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇತ್ತೀಚೆಗೆ ಮಂಗಳ ಗ್ರಹದ ಪರಿವರ್ತನೆ ಉಂಟಾಗಿದೆ. ಇದು ತನ್ನ ಮನೆಯನ್ನು ಬದಲಾಯಿಸಿರುವುದರ ಅಂಗವಾಗಿ ಕೆಲವು ರಾಶಿ ಚಕ್ರದ ಮೇಲೆ ಪರಿಣಾಮಕಾರಿ ಪ್ರಭಾವವನ್ನು ಬೀರಿದೆ. ಪ್ರಮುಖವಾಗಿ 3 ರಾಶಿ ಚಕ್ರದ ಮೇಲೆ ಪರಿವರ್ತನೆ ಆಗುವುದನ್ನು ಕಾಣಬಹುದು. ಮುಂದಿನ 48 ಗಂಟೆಯಲ್ಲಿ ಕೆಲವು ಬದಲಾವಣೆ ಉಂಟಾಗಬಹುದು. ಹಾಗಾದರೆ ಅದು ಯಾವ ರಾಶಿಗಳು ಎನ್ನುವ ವಿವರಣೆಯನ್ನು ತಿಳಿಯಲು ಮುಂದೆ ಓದಿ...  

ಮೇಷ

ಮೇಷ

ಈ ರಾಶಿಯವರಿಗೆ ಒಳ್ಳೆಯ ಸಮಯ ಬಾಗಿಲು ತೆರೆದಿದೆ ಎಂದು ಹೇಳಬಹುದು. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ನಿಮ್ಮನ್ನು ಗುರುತಿಸಲಾಗುವುದು. ಮೇಲಾಧಿಕಾರಿಗಳು ಹಾಗೂ ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಗುರುತಿಸುವರು. ನೀವು ಯಶಸ್ಸಿನ ಎತ್ತರವನ್ನು ತಲುಪುವಿರಿ. ನಿಮ್ಮ ಭವಿಷ್ಯದಲ್ಲಿ ಅದೃಷ್ಟವನ್ನು ಅನುಭವಿಸುವಿರಿ.

ಮಿಥುನ

ಮಿಥುನ

ಇವರು ತಮ್ಮ ಕೆಲಸವನ್ನು ಭದ್ರಪಡಿಸಿಕೊಳ್ಳಲು ಸಾಕಷ್ಟು ಶ್ರಮವನ್ನು ವಹಿಸಿರುತ್ತಾರೆ. ಮುಂಬರುವ ದಿನಗಳಲ್ಲಿ ನಿಮ್ಮ ಕನಸುಗಳೆಲ್ಲವೂ ಕೈಗೂಡಿ ಬರುವುದು. ನಿಮ್ಮ ಕೈಯಲ್ಲಿ ಅನೇಕ ಉತ್ತಮ ಕೆಲಸಗಳು ನಡೆಯುವುದು. ನಿರ್ವಹಣಾ ಕೌಶಲ್ಯವನ್ನು ತುಂಬಾ ಚೆನ್ನಾಗಿ ನಿರ್ವಹಿಸುವಿರಿ.

ವೃಶ್ಚಿಕ

ವೃಶ್ಚಿಕ

ಕೆಲವು ಸಿಹಿ ಸಮಯವು ನಿಮ್ಮ ಪರವಾಗಿ ಆಗದೆ ಕೆಲವು ತೊಡಕು ಉಂಟಾಗಿರಬಹುದು. ಸೂರ್ಯನ ಕಿರಣ ಕೇವಲ ಒಂದು ಮೂಲೆಯಲ್ಲಿದೆ ಎಂದು ಭಾವಿಸಿರುತ್ತೀರಿ. ಇದೀಗ ಒಳ್ಳೆಯ ಸಮಯ ನಿಮಗಾಗಿ ಬಂದಿದೆ. ಹೊಸ ಕೆಲಸವನ್ನು ಹುಡುಕುತ್ತಿದ್ದರೆ ಸ್ವಲ್ಪ ಸಮಯದಲ್ಲೇ ಅವಕಾಶದ ಅದೃಷ್ಟವನ್ನು ಪಡೆದುಕೊಳ್ಳುವಿರಿ.

ವೃಶ್ಚಿಕ

ವೃಶ್ಚಿಕ

ಆದರೆ ಅದು ನಿಮ್ಮ ಕಾರ್ಯ ಕ್ಷೇತ್ರಕ್ಕಿಂತ ಸ್ವಲ್ಪ ಭಿನ್ನವಾಗಿರಬಹುದು ಎನ್ನುವುದನ್ನು ಮರೆಯಬಾರದು. ನಿಮ್ಮ ಭವಿಷ್ಯದ ಮುಂದಿನ ಹಾದಿ ಸುಗಮವಾಗಿರುವುದು.

For Quick Alerts
ALLOW NOTIFICATIONS
For Daily Alerts

    English summary

    Auspicious Time For These Zodiac Signs Has Begun

    Each zodiac sign has its own trial of ups and downs, as the planets in our horoscope are making a move constantly. This increases or decreases the luck factor of each individual, as per astrology. According to the astrologers, the recent transition of Mars into the sign of Leo can drastically change things and affect a few other zodiac signs.
    Story first published: Friday, September 8, 2017, 23:19 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more