ವಿವಾದಾತ್ಮಕ ಜಾಹೀರಾತು: ಗಣೇಶನಿಗೆ ಅಪಪ್ರಚಾರ ಮಾಡಿದ ದುಷ್ಟರು...

By: Deepu
Subscribe to Boldsky

ಈ ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳಿಗೂ ತಮ್ಮದೇ ಆದ ಕಟ್ಟುಪಾಡುಗಳಿದ್ದು ಇವುಗಳನ್ನು ಟೀಕಿಸುವುದು ಯಾರಿಗೂ ತರವಲ್ಲ. ಇಂದಿನ ದಿನಗಳಲ್ಲಿ ಒಂದು ಧರ್ಮದ ಯಾವುದೋ ಕಟ್ಟುಪಾಡನ್ನು ಇನ್ನೊಂದು ಧರ್ಮದಲ್ಲಿ ವಿರೋಧಿಸಿರುವುದನ್ನೇ ಕಾರಣವಾಗಿಸಿ ಕಾಲು ಕೆದಕಿ ಕಲಹವನ್ನು ಹುಟ್ಟು ಹಾಕುವುದು ಸಾಮಾನ್ಯವಾಗಿಬಿಟ್ಟಿದೆ. ಆಸ್ಟ್ರೇಲಿಯಾದ ಮಾಂಸದ ಉತ್ಪನ್ನಗಳ ಸಂಸ್ಥೆಯೊಂದು ಕುರಿಮಾಂಸದ ಸೇವನೆಯನ್ನು ಬೆಂಬಲಿಸಲು ಜಾಹೀರಾತೊಂದನ್ನು ಪ್ರಕಟಿಸಿದ್ದು ಇದರ ಮೂಲಕ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ಮೂಡಿಸಿದೆ.

ಈ ಜಾಹೀರಾತಿನಲ್ಲಿ ಸ್ಪಷ್ಟವಾಗಿ ಕಾಣುವಂತೆ ಭಗವಂತ ಗಣೇಶನನ್ನು ಕುರಿಮಾಂಸದ ಊಟದ ಮೇಜಿನಲ್ಲಿ ಎಲ್ಲರೊಡನೆ ಬಾಡೂಟವನ್ನು ಆಸ್ವಾದಿಸುತ್ತಿರುವುದನ್ನು ತೋರಿಸಲಾಗಿದೆ. ಅಷ್ಟೇ ಅಲ್ಲ, ಇದರೊಂದಿಗೆ ಮದ್ಯವನ್ನು ಗುಟುಕರಿಸುವುದನ್ನೂ ತೋರಿಸಲಾಗಿದೆ. ಹಿಂದೂಗಳಿಗೆ ಪವಿತ್ರವಾದ ಪುರಾಣಗಳಲ್ಲಿ ವಿವರಿಸಿರುವಂತೆ ಗಣೇಶ ಅಪ್ಪಟ ಸಸ್ಯಾಹಾರಿ ಹಾಗೂ ಎಂದಿಗೂ ಮದ್ಯ ಕುಡಿಯದವನಾಗಿದ್ದಾನೆ. ಬನ್ನಿ, ವಿವಾದ ಹುಟ್ಟು ಹಾಕಿದ ಈ ಜಾಹೀರಾತಿನ ಬಗ್ಗೆ ಕೆಲವು ಮಾಹಿತಿಗಳನ್ನು ಅರಿಯೋಣ....

ಈ ಜಾಹೀರಾತಿನಲ್ಲಿ ಏನಿದೆ?

ಈ ಜಾಹೀರಾತಿನಲ್ಲಿ ಏನಿದೆ?

ಊಟದ ಮೇಜಿನಲ್ಲಿ ಹಲವು ವ್ಯಕ್ತಿಗಳು ಊಟ ಮಾಡಲು ಆಗಮಿಸಿದ್ದಾರೆ. ಇವರಲ್ಲಿ ಅನ್ಯಗ್ರಹ ಜೀವಿ, ಬುದ್ದ ಹಾಗೂ ಇನ್ನೂ ಹಲವಾರು ಧರ್ಮಗಳ ದೇವ ದೇವತೆಗಳ ಜೊತೆಗೆ ಗಜಮುಖದ ಗಣೇಶನೂ ಭೂರಿ ಭೋಜನದ ಊಟ ಮಾಡುತ್ತಿರುವಂತೆ ಬಿಂಬಿಸಲಾಗಿದೆ.

ಈ ಜಾಹೀರಾತಿನಲ್ಲಿ ಏನಿದೆ?

ಈ ಜಾಹೀರಾತಿನಲ್ಲಿ ಏನಿದೆ?

ಈ ಜಾಹೀರಾತಿನಲ್ಲಿ ಬುದ್ದನು ಗಣೇಶನನ್ನು ಉದ್ದೇಶಿಸಿ "ನಾವು ಈ ಕೋಣೆಯಲ್ಲಿರುವ ಆನೆಯನ್ನು ಕರೆಯಬೇಕೇ"( "Should we address the elephant in the room?") ಎಂದು ಕೇಳುತ್ತಿರುವಂತೆ ಹೇಳಿಸಲಾಗಿದೆ. ಇದಕ್ಕುತ್ತರವಾಗಿ ಗಣೇಶನ ಮುಖವಾಡವನ್ನು ಧರಿಸಿದ ಹಾಗೂ ಹಲವು ಕೈಗಳಿರುವ ವ್ಯಕ್ತಿ "ಎರಡೂವರೆ ಸಾವಿರ ವರ್ಷಕ್ಕೂ ಹಿಂದೆಯೂ ಇದು ತಮಾಷೆಯ ವಿಷಯವಾಗಿರಲಿಲ್ಲ, ಇಂದಿಗೂ ಇಲ್ಲ" ("Not funny 2500 years ago, not funny now") ಎಂದು ಉತ್ತರಿಸುತ್ತಾನೆ.

ಈ ಜಾಹೀರಾತಿನಲ್ಲಿ ಏನಿದೆ?

ಈ ಜಾಹೀರಾತಿನಲ್ಲಿ ಏನಿದೆ?

ಬಳಿಕ ನಾಸ್ತಿಕನೊಬ್ಬ ಟೋಸ್ಟ್ ಒಂದನ್ನು ಮೇಲೆತ್ತಿ ಹೀಗೆನ್ನುತ್ತಾನೆ "ನಾವೆಲ್ಲಾ ಈಗ ಸೇವಿಸುತ್ತಿರುವ ಕುರಿಮಾಂಸದ ಬದಲಿಗೆ ಈ ಟೋಸ್ಟ್ ಏಕಾಗಬಾರದು?"ಎಂದು ಕೇಳುತ್ತಾನೆ.

ಧಾರ್ಮಿಕ ಭಾವನೆಯನ್ನು ಕೆದಕಿರುವ ಜಾಹೀರಾತು ಇದು...

ಧಾರ್ಮಿಕ ಭಾವನೆಯನ್ನು ಕೆದಕಿರುವ ಜಾಹೀರಾತು ಇದು...

ಧಾರ್ಮಿಕ ಭಾವನೆಯನ್ನು ಕೆದಕಿರುವ ಈ ಜಾಹೀರಾತು ಜಗತ್ತಿನಾದ್ಯಂತ ಹಿಂದೂ ಧರ್ಮೀಯರಿಗೆ ಆಘಾತವನ್ನುಂಟುಮಾಡಿದೆ. ಈ ಜಾಹೀರಾತನ್ನು ಶಾಶ್ವತವಾಗಿ ನಿಷೇಧಿಸಬೇಕೆಂದು ಇವರು ಆಗ್ರಹಿಸುತ್ತಿದ್ದಾರೆ.

ಧಾರ್ಮಿಕ ಭಾವನೆಯನ್ನು ಕೆದಕಿರುವ ಜಾಹೀರಾತು ಇದು...

ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.

English summary

All About The Ad Where Lord Ganesha Is Seen Eating Lamb

Every day becomes a controversial day when people tend to hurt others based on their religious sentiments. This is what the meat industry of Australia has done and a recent ad has hurt the sentiments of the Indians in Australia. In the ad, one can see Lord Ganesha enjoying lamb at the dining table and toasting a drink too. According to the Hindus around the world, this is humiliation of Lord Ganesha who is believed to be a vegetarian and teetotaler. Find out more about this controversial ad...
Subscribe Newsletter