ಕ್ರಿಕೆಟ್‌ನಲ್ಲಿ ಭಾರತವೇ ಗೆಲ್ಲಲಿ ಎಂದು ಪ್ರಾರ್ಥಿಸುವ ಪಾಕಿಸ್ತಾನಿ ಅಭಿಮಾನಿ!

By: manu
Subscribe to Boldsky

ಮೂಲತಃ ಕ್ರಿಕೆಟ್ ಭಾರತದ ಅಲ್ಲದಿದ್ದರೂ, ಭಾರತೀಯರ ರಕ್ತವೇ ಆಗಿ ಹೋಗಿರುವ ಕ್ರಿಕೆಟ್ ಮ್ಯಾಚ್ ಜನಜೀವನವನ್ನೇ ಸ್ಥಗಿತಗೊಳಿಸುವಷ್ಟು ಜನಪ್ರಿಯವಾಗಿದೆ. ಅದರಲ್ಲೂ ಭಾರತ ಪಾಕಿಸ್ತಾನದ ನಡುವೆ ನಡೆಯುವ ಮ್ಯಾಚ್ ವೇಳೆ ಹೆಚ್ಚೂ ಕಡಿಮೆ ಇಡಿಯ ಭಾರತವೇ ಸ್ತಬ್ಧಗೊಳ್ಳುತ್ತದೆ. ಕ್ರಿಕೆಟ್ ಪ್ರೇಮಿಗಳು ಕಣ್ಣುರೆಪ್ಪೆ ಮುಚ್ಚದೇ ಟಿವಿ ಮುಂದೆಯೇ ಕುಳಿತು ಬಿಡುತ್ತಾರೆ.

ಸ್ವಾಭಾವಿಕವಾಗಿಯೇ ಭಾರತೀಯರೆಲ್ಲರೂ ಭಾರತದ ತಂಡವನ್ನು ಬೆಂಬಲಿಸಿದರೆ ಪಾಕಿಸ್ತಾನೀಯರು ಪಾಕಿಸ್ತಾನದ ತಂಡವನ್ನು ಬೆಂಬಲಿಸುತ್ತಾರೆ. ಆದರೆ ಪ್ರತಿ ಬಾರಿ ಭಾರತ ಪಾಕಿಸ್ತಾನ ನಡುವೆ ನಡೆಯುವ ಪಂದ್ಯವನ್ನು ನೋಡಲು ತಪ್ಪದೇ ಪಾಕಿಸ್ತಾನಿ ಕ್ರೀಡಾಪ್ರೇಮಿಯೊಬ್ಬರು ಆಗಮಿಸುತ್ತಾರೆ. ಪ್ರತಿ ಬಾರಿ ಬರುವುದನ್ನು ಗಮನಿಸಿದ ಬಳಿಕ ಇವರು ಆ ಮೂಲಕವೇ ಪ್ರಸಿದ್ಧಿಯನ್ನೂ ಪಡೆದಿದ್ದಾರೆ.     

ಮೈ ನವಿರೇಳಿಸುವಂತೆ ಮಾಡುವ ಕ್ರಿಕೆಟ್ ಜಗತ್ತಿನ ಅದ್ಭುತ ಸಂಗತಿ..!

ಆದರೆ 'ಚಾಚಾ ಚಿಕಾಗೋ' ಎಂಬ ಅನ್ವರ್ಥನಾಮವನ್ನು ಪಡೆದಿರುವ ಈ ವ್ಯಕ್ತಿ ಪ್ರಸಿದ್ಧಿ ಪಡೆದಿರುವುದು ಕೇವಲ ಈ ಒಂದು ಕಾರಣಕ್ಕಾಗಿ ಮಾತ್ರವಲ್ಲ, ಬದಲಿಗೆ ಈ ಕ್ರಿಕೆಟ್ ಪ್ರೇಮಿ ಬೆಂಬಲಿಸುವುದು ಭಾರತದ ತಂಡವನ್ನು! ಅಷ್ಟೇ ಅಲ್ಲ, ಭಾರತವೇ ಗೆಲ್ಲಲಿ ಎಂದು ಇವರು ಪ್ರಾರ್ಥಿಸುತ್ತಾರೆ ಸಹಾ! ಪಾಕಿಸ್ತಾನಿಯಾಗಿ ಭಾರತದ ತಂಡವನ್ನು ಹೀಗೆ ಬಹಿರಂಗವಾಗಿ ಬೆಂಬಲಿಸುವ ಈ ವಿಚಿತ್ರ ವಿದ್ಯಮಾನದ ಬಗ್ಗೆ ಕೆಲವು ಮಾಹಿತಿಗಳನ್ನು ನೋಡೋಣ.... 

ಭಾರತಕ್ಕಾಗಿ ಇವರು ತನ್ನ ಮಾತೃದೇಶವನ್ನೇ ತೊರೆದಿದ್ದರು

ಭಾರತಕ್ಕಾಗಿ ಇವರು ತನ್ನ ಮಾತೃದೇಶವನ್ನೇ ತೊರೆದಿದ್ದರು

ಚಾಚಾ ಶಿಕಾಗೋ ರವರ ನಿಜ ನಾಮಧೇಯ ಮುಹಮ್ಮದ್ ಬಶೀರ್ ಎಂದಾಗಿದೆ. ಮೊದಲು ಇವರು ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದರೂ ಈಗ ಇವರು ಭಾರತದ ತಂಡವನ್ನು ಬೆಂಬಲಿಸುತ್ತಿದ್ದಾರೆ.

ಇವರು ಧೋನಿಯ ಅಪ್ಪಟ ಅಭಿಮಾನಿ

ಇವರು ಧೋನಿಯ ಅಪ್ಪಟ ಅಭಿಮಾನಿ

ಭಾರತದ ಪೂರ್ವ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಇವರ ಅಚ್ಚುಮೆಚ್ಚಿನ ಆಟಗಾರನಾಗಿದ್ದು ಇವರು ಧೋನಿಯವರ ಆಟದ ಸಮಯದಲ್ಲಿ ಭಾರತೀಯರ ನಡುವೆ ಕುಳಿತು ಭಾರೀ ಕರತಾಡನದ ಮೂಲಕ ಧೋನಿಯವರನ್ನು ಬೆಂಬಲಿಸುವುದನ್ನು ಚತುರ ಕ್ಯಾಮೆರಾಮನ್‌ಗಳು ಕಂಡುಕೊಂಡಿದ್ದಾರೆ. ಹಲವು ವರ್ಷಗಳವರೆಗೆ ಇವರು ತಮ್ಮ ಸ್ವದೇಶದ ತಂಡವನ್ನು ಬೆಂಬಲಿಸಿದರೂ ಧೋನಿಯವರ ಆಟದ ವೈಖರಿಯನ್ನು ಮೆಚ್ಚದೇ ಇರಲು ಇವರಿಗೆ ಸಾಧ್ಯವೇ ಆಗಿರಲಿಲ್ಲ.

ಅಷ್ಟಕ್ಕೂ, ಇವರಿಗೆ ಭಾರತದ ತಂಡದ ಮೇಲೇಕೆ ಪ್ರೀತಿ?

ಅಷ್ಟಕ್ಕೂ, ಇವರಿಗೆ ಭಾರತದ ತಂಡದ ಮೇಲೇಕೆ ಪ್ರೀತಿ?

"ನಾನು ಪಾಕಿಸ್ತಾನವನ್ನು ಇಂದಿಗೂ ಪ್ರೀತಿಸುತ್ತೇನೆ. ಆದರೆ ಈಗ ಭಾರತವನ್ನು ಹೆಚ್ಚಾಗಿ ಪ್ರೀತಿಸುತ್ತೇನೆ. ಹಿಂದೆ ನನಗೆ ಪಾಕಿಸ್ತಾನದ ತಂಡ ಗೆಲ್ಲಬೇಕಿತ್ತು. ಆದರೆ ಈಗ ನನಗೆ ಭಾರತದ ತಂಡ ಗೆಲ್ಲಬೇಕಾಗಿದೆ. 2011 ರಲ್ಲಿ ಮೊಹಾಲಿಯಲ್ಲಿ ನಡೆದ ಕ್ರಿಕೆಟ್ ಮ್ಯಾಚ್ ಅನ್ನು ನೋಡಲು ಮೊದಲ ಬಾರಿ ಅಲ್ಲಿ ತೆರಳಿದ ಬಳಿಕ ನನ್ನ ಭಾವನೆ ಬದಲಾಗಿದೆ" ಎಂದು ಇವರು ತಿಳಿಸುತ್ತಾರೆ.

ಇವರು ಭಾರತ-ಪಾಕಿಸ್ತಾನದ ಒಂದೂ ಮ್ಯಾಚ್ ನೋಡದೇ ಬಿಟ್ಟಿಲ್ಲ

ಇವರು ಭಾರತ-ಪಾಕಿಸ್ತಾನದ ಒಂದೂ ಮ್ಯಾಚ್ ನೋಡದೇ ಬಿಟ್ಟಿಲ್ಲ

2011ರ ವಿಶ್ವಕಪ್ ಬಳಿಕ ಇದುವರೆಗೆ ಎಷ್ಟು ಪಂದ್ಯಗಳು ನಡೆದಿದ್ದರೂ ಇವರು ಒಂದೇ ಒಂದು ಪಂದ್ಯವನ್ನೂ ನೋಡದೇ ಬಿಡಲಿಲ್ಲ ಹಾಗೂ ಎಲ್ಲವನ್ನೂ ಇವರು ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದು ನೋಡಿದ್ದುದೇ ವಿಶೇಷವಾಗಿದೆ. "ವರ್ಷವಿಡೀ ನಡೆಯುವ ಕ್ರಿಕೆಟ್ ಪಂದ್ಯಗಳನ್ನು ನೋಡಲೆಂದು ನಾನು ಬರುತ್ತಲೇ ಇರುತ್ತೇನೆ ಹಾಗೂ ವರ್ಷದ ಹೆಚ್ಚಿನ ಸಮಯವನ್ನು ಭಾರತದಲ್ಲಿಯೇ ಕಳೆಯುತ್ತೇನೆ. ನನಗೆ ಭಾರತದಲ್ಲಿಯೇ ಹೆಚ್ಚಿನ ಭದ್ರತೆಯ ಅನುಭವವಾಗುತ್ತದೆ" ಎಂದು ತಿಳಿಸುತ್ತಾರೆ.

ಆದರೆ ಈ ವರ್ಷ ಇವರು ತಪ್ಪಿಸಿಕೊಂಡರು

ಆದರೆ ಈ ವರ್ಷ ಇವರು ತಪ್ಪಿಸಿಕೊಂಡರು

"ಈ ವರ್ಷ ಬರ್ಮಿಂಗ್ ಹ್ಯಾಂ ನಗರದಲ್ಲಿ ನಡೆಯಲಿರುವ ಒಂದು ಪಂದ್ಯವನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಇದು ನಮ್ಮ ಪವಿತ್ರ ಮಾಸವಾದ ರಂಜಾನ್ ನಲ್ಲಿ ಆಗಮಿಸಿದ್ದು ಈ ಅವಧಿಯಲ್ಲಿ ನಾವೆಲ್ಲರೂ ಕುಟುಂಬಸಹಿತ ಮಕ್ಕಾ ನಗರಕ್ಕೆ ಉಮ್ರಾ ನಿರ್ವಹಿಸಲು ಹೋಗುವವರಿದ್ದೇವೆ. ಕ್ರಿಕೆಟ್ ಗಿಂತಲೂ ಉಮ್ರಾ ಹೆಚ್ಚು ಪ್ರಮುಖವಾದುದರಿಂದ ಅನಿವಾರ್ಯವಾಗಿ ಈ ಪಂದ್ಯವನ್ನು ನೋಡಲಾಗದೇ ಹೋಗುತ್ತದೆ" ಎನ್ನುತ್ತಾರೆ.

ಈ ಕ್ರೀಡಾಪ್ರೇಮಿಯ ಪ್ರಕಾರ ಕ್ರಿಕೆಟ್

ಈ ಕ್ರೀಡಾಪ್ರೇಮಿಯ ಪ್ರಕಾರ ಕ್ರಿಕೆಟ್

ಕ್ರೀಡೆಯ ಅಪ್ಪಟ ಅಭಿಮಾನಿಯಾಗಿರುವ ಇವರ ಪ್ರಕಾರ ಭಾರತ ಮತ್ತು ಪಾಕಿಸ್ತಾನದ ನಡುವೆ ಸ್ಪರ್ಧೆಯೇ ಇಲ್ಲ. ಕ್ರಿಕೆಟ್ ಆಟದ ಸೂಕ್ಷ್ಮತೆಗಳನ್ನು ಪಾಕಿಸ್ತಾನಕ್ಕಿಂತಲೂ ಹೆಚ್ಚು ಚೆನ್ನಾಗಿ ಅರಿತು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತ ಹೆಚ್ಚಿನ ಸಾಧನೆಯನ್ನು ಸಾಧಿಸಲು ಸಾಧ್ಯವಾಗಿದೆ. ಏನೇ ಆಗಲಿ, ಈ ವ್ಯಕ್ತಿಯ ಅಪ್ಪಟ ಕ್ರೀಡಾಭಿಮಾನವನ್ನು ನಾವು ಅಭಿನಂದಿಸುತ್ತೇವೆ. ಚಾಚಾ ಶಿಕಾಗೋರವರೇ ನಿಮಗೆ ಧನ್ಯವಾದಗಳು.

English summary

A Pakistani Who Prays For India To Win The Matches

He is also known as 'Chacha Chicago' and has been in news for supporting India in open and he shares his love for this country for a reason and he even prays for India to win all the matches. Check out this interesting reason behind this Pakistani fan praying for Indian team's victory.
Subscribe Newsletter