Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀವು ತಿಳಿದಿರದ ಪ್ಲಾಸ್ಟಿಕ್ ಬಾಟಲಿನಲ್ಲಿರುವ ಸೀಕ್ರೆಟ್ ಸಂಗತಿ!
ಬಾವಿಯ ನೀರನ್ನೇ ಸೇದಿ ಕುಡಿಯುವ ಕಾಲ ಎಂದೋ ಹೋಗಿದೆ. ಇಂದು ನಮ್ಮ ಬಾವಿಯ ನೀರನ್ನು ಕುಡಿಯಲೂ ನೀರು ಶೋಧಕ ಸಂಸ್ಥೆ ಎಂಬ ದೊಣೆನಾಯಕನ ಅಪ್ಪಣೆ ಬೇಕು. ಹೆಚ್ಚಿನವರೆಲ್ಲಾ ಬಾಟಲಿ ನೀರಿಗೆ ಒಗ್ಗಿಕೊಂಡು ವರ್ಷಗಳೇ ಕಳೆದಿವೆ. ಕುಡಿಯುವ ನೀರಿನ ಬಾಟಲಯ ಲೇಬಲ್ ಗಮನಿಸಿದರೆ ತ್ರಿಕೋಣದೊಳಕೆ ಕೆಲವು ಅಂಕಿಗಳನ್ನು ಮುದ್ರಿಸಿರುತ್ತಾರೆ. ಇದರ ಬಗ್ಗೆ ಯಾರಿಗೆ ಕೇಳಿದರೂ 'ಗೊತ್ತಿಲ್ಲ' ಎಂಬ ಸಿದ್ಧ ಉತ್ತರ ಸಿಗುತ್ತದೆ. ಬಿಸ್ಲೇರಿ ನೀರಿಗಿಂತ ನಲ್ಲಿ ನೀರು ಸುರಕ್ಷಿತವೇ?
ಸಾಮಾನ್ಯ ಜನರಿರಲಿ, ನೀರಿನ ಬಾಟಲಿಗಳನ್ನು ಮಾರಾಟ, ವಿತರಣೆ ಮಾಡುವವರಿಗೇ ಗೊತ್ತಿಲ್ಲ! ವಾಸ್ತವವಾಗಿ ಈ ಅಂಕೆ ಮತ್ತು ತ್ರಿಕೋಣದ ಚಿಹ್ನೆ ಈ ಪ್ಲಾಸ್ಟಿಕ್ ಬಾಟಲಿಯನ್ನು ಎಷ್ಟು ಬಾರಿ ಮರುಬಳಕೆ ಮಾಡಿಕೊಳ್ಳಬಹುದು ಎಂಬ ಮಾಹಿತಿಯನ್ನು ನೀಡುತ್ತದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರಕುವ ನೀರು ಸುರಕ್ಷಿತವೇ?
ಅಲ್ಲದೇ ಬಾಟಲಿಯನ್ನು ಮರುಬಳಕೆ ಮಾಡುವ ಸಂಸ್ಥೆಗಳಿಗೆ ಯಾವ ರೀತಿಯ ಪ್ಲಾಸ್ಟಿಕ್ ಬಳಸಲಾಗಿದೆ, ಯಾವ ರೀತಿಯ ಕ್ರಮ ಅಳವಡಿಸಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಅಂಕೆಗಳು ನೀಡುತ್ತವೆ. ಸಾಮಾನ್ಯವಾಗಿ ಪ್ರತಿ ಬಾಟಲಿಯ ತಳದಲ್ಲಿ ಇದನ್ನು ಅಳಿಸಲಾಗದಂತೆ ಮುದ್ರಿಸಲಾಗಿರುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ....

ವರ್ಗ1) ಪ್ಲಾಸ್ಟಿಕ್ (PETE ಅಥವಾ PET)
ತ್ರಿಕೋಣದ ಒಳಗೆ 1 ಅಂಕೆಯನ್ನು ಬರೆದಿದ್ದರೆ ಇದು ಅಪ್ಪಟ PET-polyethylene terephthalate ಎಂಬ ಪ್ಲಾಸ್ಟಿಕ್ ಎಂದು ತಿಳಿಯಬೇಕು. ಸಾಮಾನ್ಯವಾಗಿ ಈ ಪ್ಲಾಸ್ಟಿಕ್ ಅನ್ನು ಲಘುಪಾನೀಯ, ನೀರು, ದಿನಬಳಕೆಯ ಪ್ಲಾಸ್ಟಿಕ್ ಉಪಕರಣಗಳು ಮೊದಲಾದವುಗಳ ನಿರ್ಮಾಣದಲ್ಲಿ ಬಳಸಲಾಗುತ್ತದೆ.

ವರ್ಗ1) ಪ್ಲಾಸ್ಟಿಕ್ (PETE ಅಥವಾ PET)
ಎಲ್ಲಿಯವರೆಗೆ ಇದನ್ನು ಬಿಸಿಲಿನಲ್ಲಿ ಇಡುವುದಿಲ್ಲವೋ ಅಲ್ಲಿಯವರೆಗೆ ಇದು ಸುರಕ್ಷಿತ ಎಂದು ಇದರ ಉತ್ಪಾದಕರು ತಿಳಿಸುತ್ತಾರೆ. ಆದರೆ ಬಿಸಿಲಿಗೆ ಒಡ್ಡಿದಷ್ಟೂ ಇದರಿಂದ ಕೆಲವು ಹಾನಿಕಾರಕ ಕಣಗಳು ನೀರಿನಲ್ಲಿ ಅಥವಾ ದ್ರವದಲ್ಲಿ ಬೆರೆದು ಆರೋಗ್ಯ ಕೆಡಿಸಬಹುದು. ಈ ಪ್ಲಾಸ್ಟಿಕ್ ಅನ್ನು ಸುಲಭವಾಗಿ ಕರಗಿಸಿ ಮರುಬಳಕೆ ಮಾಡಿಕೊಳ್ಳಬಹುದು.

ವರ್ಗ 2) ಪ್ಲಾಸ್ಟಿಕ್ (HDPE)
2 ಅಂಕೆ ಬರೆದಿರುವ ಪ್ಲಾಸ್ಟಿಕ್ ಕೊಂಚ ದಪ್ಪನಾಗಿದ್ದು ಹೆಚ್ಚಿನ ಭಾರ ಹೊರುವ ಸಾಮರ್ಥ್ಯ ಪಡೆದಿರುತ್ತದೆ. ಹಾಲಿನ ಜಗ್, ಡಿಟರ್ಜೆಂಟ್ ದ್ರವದಂತದ ಸ್ನಿಗ್ಧ ದ್ರಾವಣಗಳನ್ನು ಪ್ಯಾಕ್ ಮಾಡಲು, ಜ್ಯೂಸ್ ಬಾಟಲಿ, ಟಬ್ ಮೊದಲಾದವುಗಳನ್ನು ತಯಾರಿಸಲಾಗುತ್ತದೆ. HDPE ಅಂದರೆ high-density polyethylene, ಮೇಲಿನ ಸಾಮಾನ್ಯ ಪ್ಲಾಸ್ಟಿಕ್ ಅನ್ನೇ ಕೊಂಚ ಸಾಂದ್ರೀಕರಿಸಿರಲಾಗಿರುತ್ತದೆ ಅಷ್ಟೇ. ಈ ಪ್ಲಾಸ್ಟಿಕ್ ಅನ್ನೂ ಸುಲಭವಾಗಿ ಮರುಬಳಕೆ ಮಾಡಿಕೊಳ್ಳಬಹುದು.

ವರ್ಗ 3) ಪ್ಲಾಸ್ಟಿಕ್ (PVC )
3 ಅಂಕೆ ಬರೆದಿರುವ ಪ್ಲಾಸ್ಟಿಕ್ ಹೆಚ್ಚು ದೃಢವಾಗಿದ್ದು ಮುಖ್ಯವಾಗಿ ನಮ್ಮ ಮನೆಗಳಲ್ಲಿ ನೀರು ಸರಬರಾಜು ಮಾಡುವ ಪೈಪುಗಳಲ್ಲಿ ಬಳಸಲಾಗುತ್ತದೆ. poly vinyl chloride ಎಂಬ ಈ ಪ್ಲಾಸ್ಟಿಕ್ ಅನ್ನು ಅತ್ಯಂತ ತೆಳುವಾದ ಹಾಳೆಯಂತೆಯೂ, ಅತಿ ಸಾಂದ್ರತೆಯಲ್ಲಿಯೂ ನಿರ್ಮಿಸಬಹುದು.

ವರ್ಗ 3) ಪ್ಲಾಸ್ಟಿಕ್ (PVC )
ಇದೇ ಕಾರಣಕ್ಕೆ ಆಹಾರ ವಸ್ತುಗಳನ್ನು ಪ್ಯಾಕ್ ಮಾಡುವ ತೆಳುವಾದ ಕ್ಲಿಂಗ್ ಫಿಲ್ಮ್ ಅಥವಾ ಐದು ಲೀಟರ್‌ನಿಂದ ಇಪ್ಪತ್ತು ಲೀಟರ್ ವರೆಗಿನ ಅಡುಗೆ ಎಣ್ಣೆಯನ್ನು ಹೊರಬಲ್ಲಷ್ಟು ದೃಢವಾದ ಬಾಟಲಿಗಳನ್ನೂ ತಯಾರಿಸಬಹುದು. ಆದರೆ ಈ ಪ್ಲಾಸ್ಟಿಕ್ ಅಷ್ಟು ಸುಲಭವಾಗಿ ಕರಗದ ಕಾರಣ ಸುಲಭ ಮರುಬಳಕೆ ಸಾಧ್ಯವಿಲ್ಲ.

ವರ್ಗ 4) ಪ್ಲಾಸ್ಟಿಕ್ (LDPE)
4 ಅಂಕೆ ಬರೆದಿರುವ ಪ್ಲಾಸ್ಟಿಕ್ ಸಾಮಾನ್ಯವಾಗಿ ನಾವು ಕೈಯಲ್ಲಿ ಹಿಡಿದುಕೊಳ್ಳುವ ಶಾಪಿಂಗ್ ಕೈಚೀಲಗಳಿಗೆ ಬಳಸಲಾಗುತ್ತದೆ. low-density polyethylene ಎಂಬ ಪ್ಲಾಸ್ಟಿಕ್ ಸುಲಭವಾಗಿ ಮರುಬಳಕೆ ಮಾಡಬಹುದು. ಆದರೆ ಇದು ವಾತಾವರಣದಲ್ಲಿ ಕರಗದೇ ಇರುವ ಕಾರಣಕ್ಕೇ ನಿಷೇಧ ಪಡೆದಿದೆ. ಕೈಚೀಲಗಳ ಹೊರತಾಗಿ ಆಹಾರವಸ್ತುಗಳನ್ನು ಪ್ಯಾಕ್ ಮಾಡಲು, ನೀರಿನ ಬಾಟಲಿ, ಬ್ರೆಡ್ ಮೊದಲಾದವುಗಳನ್ನು ಪ್ಯಾಕ್ ಮಾಡಲು, ಬಟ್ಟೆ ಮತ್ತಿತರ ಸಾಧನಗಳನ್ನು ಪ್ಯಾಕ್ ಮಾಡಲು ಬಳಸಲಾಗುತ್ತದೆ.

ವರ್ಗ 5) ಪ್ಲಾಸ್ಟಿಕ್ (PP)
5 ಅಂಕೆ ಬರೆದಿರುವ ಪ್ಲಾಸ್ಟಿಕ್ polypropylene - ಔಷಧಿ ಮತ್ತು ಆಹಾರಗಳ ಮಟ್ಟಿಗೆ ಹೆಚ್ಚು ಸುರಕ್ಷಿತ ಎಂದು ಪ್ರಮಾಣಿಸಲ್ಪಟ್ಟ ಕಾರಣ ಔಷಧಿಗಳ ಬಾಟಲಿ, ಕೆಚಪ್, ಸಿರಪ್, ಪಾನೀಯ ಕುಡಿಯುವ ಸ್ಟ್ರಾ, ಮೊಸರಿನ ಕಪ್ ಮೊದಲಾದವುಗಳನ್ನು ತಯಾರಿಸಲಾಗುತ್ತದೆ.

ವರ್ಗ 5) ಪ್ಲಾಸ್ಟಿಕ್ (PP)
ದೊಡ್ಡ ಕುತ್ತಿಗೆಯ ಬಾಟಲಿಗಳನ್ನೂ, ವಸ್ತುಗಳನ್ನು ಸಂಗ್ರಹಿಸಿಡುವ ದೊಡ್ಡ ಡಬ್ಬಿಗಳನ್ನೂ ತಯಾರಿಸಬಹುದು. ಈ ಪ್ಲಾಸ್ಟಿಕ್ ಅನ್ನೂ ಮರುಬಳಕೆ ಮಾಡಿಕೊಳ್ಳಬಹುದಾದರೂ ಪೂರ್ಣ ಪ್ರಮಾಣದಲ್ಲಿ ಸಾಧ್ಯವಿಲ್ಲ. ಆದ್ದರಿಂದ ತಾಜಾ ಕಚ್ಚಾವಸ್ತುವಿನೊಂದಿಗೆ ಕೊಂಚ ಪ್ರಮಾಣದಲ್ಲಿ ಬೆರೆಸಿ ನವೀಕರಿಸಬಹುದು.

ವರ್ಗ 6) ಪ್ಲಾಸ್ಟಿಕ್ (PS)
5 ಅಂಕೆ ಬರೆದಿರುವ ಪ್ಲಾಸ್ಟಿಕ್ polystyrene ಅಥವಾ Styrofoam ಆಗಿದ್ದು ಒಮ್ಮೆ ಬಳಸಿ ಎಸೆಯುವ ಉಪಕರಣಗಳನ್ನು ತಯಾರಿಸಲಾಗುತ್ತದೆ. ಊಟದ ತಟ್ಟೆ ಲೋಟ, ಐಸ್ ಬಾಕ್ಸ್, ಎಲೆಕ್ಟ್ರಾನಿಕ್ ವಸ್ತುಗಳ ಪ್ಯಾಕಿಂಗ್ ಮೊದಲಾದವುಗಳಲ್ಲಿ ಇದನ್ನು ಬಳಸಲಾಗುತ್ತದೆ. ಆದರೆ ಅಪ್ಪಿತಪ್ಪಿಯೂ ಇದನ್ನು ಬೆಂಕಿಗೆ ಹಾಕಬಾರದು.

ವರ್ಗ 6) ಪ್ಲಾಸ್ಟಿಕ್ (PS)
ಏಕೆಂದರೆ ಬೆಂಕಿ ತಾಕಿದ ಬಳಿಕ ಇದರ ಹೊಗೆಯಿಂದ ಅತ್ಯಂತ ವಿಷಕಾರಿ ಅನಿಲಗಳು ಗಾಳಿಯಲ್ಲಿ ತುಂಬಿಕೊಳ್ಳುತ್ತವೆ. ಕಿಟಕಿ ಮುಚ್ಚಿ ಗಾಳಿ ಹೊರಹೋಗುವ ಸಂದರ್ಭ ಇಲ್ಲದ ಸ್ಥಳದಲ್ಲಿ ಈ ವಸ್ತುಗಳನ್ನು ಸುಟ್ಟು ಹೊಗೆ ಸೇವಿಸುವಂತಾದರೆ ಪ್ರಾಣಕ್ಕೇ ಅಪಾಯವಿದೆ. ಆದ್ದರಿಂದ ಈ ಸಾಮಾಗ್ರಿಗಳನ್ನು ಸರ್ವಥಾ ಮರುಬಳಕೆ ಮಾಡಕೂಡದು.



Click it and Unblock the Notifications











